ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಬ್ಲಿಕೇಷನ್ಸ್ ವಿಭಾಗವು 1957ರಿಂದ ಅಭಿವೃದ್ಧಿ ಮಾಸಿಕ ಯೋಜನೆಯ ಪ್ರಕಟಿತ ಕೃತಿಗಳ ವಿಶೇಷ ಸಂಗ್ರಹವಾದ ‘ಯೋಜನಾ ಕ್ಲಾಸಿಕ್ಸ್" ಹೊರತಂದಿದೆ.
Posted On:
01 AUG 2023 6:09PM by PIB Bengaluru
ಭಾರತ ಸರ್ಕಾರದ ಪ್ರಧಾನ ಪ್ರಕಾಶನ ಸಂಸ್ಥೆ ಪಬ್ಲಿಕೇಷನ್ಸ್ ವಿಭಾಗವು "ಯೋಜನಾ ಕ್ಲಾಸಿಕ್ಸ್" ಹೊರತಂದಿದೆ. ವಿವಿಧ ವಿಷಯಾಧಾರಿತ ಕ್ಷೇತ್ರಗಳ ಸಂಗ್ರಹಯೋಗ್ಯ ಸರಣಿ, ಯೋಜನಾದಲ್ಲಿ 1957 ರಿಂದ ಪ್ರಕಟವಾದ ಆಯ್ದ ಕೃತಿಗಳು ಇವೆ. ಇದು ಪಬ್ಲಿಕೇಷನ್ಸ್ ವಿಭಾಗವು ಪ್ರಕಟಿಸುವ ಜನಪ್ರಿಯ ಅಭಿವೃದ್ಧಿ ಮಾಸಿಕವಾಗಿದೆ. ಈ ಜರ್ನಲ್ ನಲ್ಲಿ ಪ್ರಕಟವಾದ ವಿಷಯ ಸಮ್ಮೋಹನಗೊಳಿಸುವ ಶ್ರೀಮಂತಿಕೆ ಮತ್ತು ಅಗಾಧತೆಯನ್ನು, ಅದರ ಆರಂಭಿಕ ಆವೃತ್ತಿಗಳನ್ನು ನಿಖರವಾಗಿ ಸಂಗ್ರಹಿಸಲಾಗಿದೆ. ಪುಸ್ತಕವು ಓದುಗರನ್ನು ಕಲೆ, ಸಂಸ್ಕೃತಿ ಮತ್ತು ಭಾರತದ ಪರಂಪರೆಯ ಶ್ರೀಮಂತ ಪಯಣಕ್ಕೆ ಕರೆದೊಯ್ಯುತ್ತದೆ. ವಿದ್ಯಾರ್ಥಿಗಳಿಗೆ, ಕಲೆ ಮತ್ತು ಸಂಸ್ಕೃತಿಯ ಆಸಕ್ತರಿಗೆ, ಶಿಕ್ಷಣತಜ್ಞರಿಗೆ ಮತ್ತು ಕಲೆಯನ್ನು ಪದಗಳ ಮೂಲಕ ವ್ಯಕ್ತಪಡಿಸಿದಾಗ ಆಗುವ ಮಾಂತ್ರಿಕತೆಯ ಬಗ್ಗೆ ಕಣ್ಣಿಟ್ಟಿರುವ ಯಾರಿಗಾದರೂ ಇದು ಒಂದು ಸರ್ವೋತ್ಕೃಷ್ಟ ಸಂಗ್ರಹವಾಗಿದೆ. ಪುಸ್ತಕವು ಮುದ್ರಣ ವಿಭಾಗದ ಬುಕ್ ಗ್ಯಾಲರಿ, ಸೂಚನಾ ಭವನ ಮತ್ತು ವೆಬ್ಸೈಟ್ www.publicationsdivision.nic.in ನಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಇಂದು ದೆಹಲಿಯ ಪುಸ್ತಕ ಮೇಳ 2023ರಲ್ಲಿ ಪ್ರಕಾಶನ ವಿಭಾಗದ ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಪಬ್ಲಿಕೇಷನ್ಸ್ ವಿಭಾಗದ ಮಹಾನಿರ್ದೇಶಕರಾದ ಶ್ರೀಮತಿ ಅನುಪಮಾ ಭಟ್ನಾಗರ್ ಮತ್ತು ಇಲಾಖೆಯ ಅಧಿಕಾರಿಗಳು, ಇತರ ಹಿರಿಯರು ಇದ್ದರು.
I&B ಕಾರ್ಯದರ್ಶಿ ಪಬ್ಲಿಕೇಷನ್ಸ್ ವಿಭಾಗದ ಮಳಿಗೆಗಳನ್ನು ಪರಿಶೀಲಿಸಿದರು. ಮತ್ತು ವಿಭಾಗವು ಹೊರತಂದಿರುವ ಪುಸ್ತಕಗಳ ಸಮೃದ್ಧ ಸಂಗ್ರಹದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಇದು ಭಾರತದ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪ, ವೈಭವದ ಇತಿಹಾಸ ಮತ್ತು ರಾಷ್ಟ್ರೀಯ ನಾಯಕರ ಗಮನಾರ್ಹ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ದೆಹಲಿ ಪುಸ್ತಕ ಮೇಳದ 27 ನೇ ಆವೃತ್ತಿಯನ್ನು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್ (FIP) ಸಹಯೋಗದೊಂದಿಗೆ 29 ಜುಲೈ 2023 ರಿಂದ 2 ಆಗಸ್ಟ್, 2023 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು ಪ್ರಗತಿ ಮೈದಾನದ ಸ್ಟಾಲ್ ಸಂಖ್ಯೆ 12, ಹಾಲ್ ಸಂಖ್ಯೆ 11 ರಲ್ಲಿ ತನ್ನ ಪುಸ್ತಕಗಳು ಮತ್ತು ಜರ್ನಲ್ ಗಳನ್ನು ಪ್ರದರ್ಶಿಸುತ್ತಿದೆ.
ಸಂದರ್ಶಕರು ಮಳಿಗೆಗಳಲ್ಲಿ ರಾಷ್ಟ್ರ ನಿರ್ಮಾಣ, ಇತಿಹಾಸ ಮತ್ತು ಪರಂಪರೆಯಿಂದ ಹಿಡಿದು ಜೀವನ ಚರಿತ್ರೆಗಳು, ಉಲ್ಲೇಖ ಪುಸ್ತಕಗಳು ಮತ್ತು ಮಕ್ಕಳ ಸಾಹಿತ್ಯದವರೆಗಿನ ವಿವಿಧ ವಿಷಯಗಳ ಪುಸ್ತಕಗಳ ಸೊಗಸಾದ ಸಂಗ್ರಹವನ್ನು ಕಾಣಬಹುದು. ಪುಸ್ತಕ ಪ್ರೇಮಿಗಳು ರಾಷ್ಟ್ರಪತಿ ಭವನದ ಪ್ರೀಮಿಯಂ ಪುಸ್ತಕಗಳನ್ನು ಮತ್ತು ಪಬ್ಲಿಕೇಷನ್ಸ್ ವಿಭಾಗದಿಂದ ಪ್ರತ್ಯೇಕವಾಗಿ ಪ್ರಕಟಿಸಲಾದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ ಆಯ್ದ ಭಾಷಣಗಳ ಸಂಗ್ರಹವನ್ನು ಪಡೆಯಬಹುದು.
ಪುಸ್ತಕಗಳಲ್ಲದೆ, ಪಬ್ಲಿಕೇಷನ್ಸ್ ವಿಭಾಗದ ಜನಪ್ರಿಯ ಮತ್ತು ವ್ಯಾಪಕವಾಗಿ ಪ್ರಸಾರವಾದ ನಿಯತಕಾಲಿಕೆಗಳಾದ ಯೋಜನೆ, ಕುರುಕ್ಷೇತ್ರ, ಆಜ್ಕಲ್ ಮತ್ತು ಬಾಲ್ ಭಾರತಿ ಸಹ ಮಳಿಗೆಗಳಲ್ಲಿ ಲಭ್ಯವಿದೆ. ಸಂದರ್ಶಕರು ಜರ್ನಲ್ ಗಳ ವಾರ್ಷಿಕ ಚಂದಾದಾರಿಕೆಗಳನ್ನು ಮತ್ತು ವಿಭಾಗದಿಂದ ಪ್ರಕಟವಾದ ಉದ್ಯೋಗ ಸುದ್ದಿ / ರೋಜ್ಗರ್ ಸಮಾಚಾರ್ ಅನ್ನು ಸಹ ಖರೀದಿಸಬಹುದು.
****
(Release ID: 1944901)
Visitor Counter : 149