ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯ ಭಾರತ ಮಂಟಪದಲ್ಲಿಂದು (ಜುಲೈ 29) ಅಖಿಲ ಭಾರತೀಯ ಶಿಕ್ಷಾ ಸಮಾಗಮ ಉದ್ಘಾಟಿಸಲಿರುವ ಪ್ರಧಾನ ಮಂತ್ರಿ
ಎನ್‌ಇಪಿ 2020 ಪ್ರಾರಂಭಿಸಿದ 3ನೇ ವಾರ್ಷಿಕೋತ್ಸವ ಸಂದರ್ಭದಲ್ಲೇ 2 ದಿನಗಳ ಸಮಾಗಮ ನಡೆಯುತ್ತಿದೆ
ಪಿಎಂ ಶ್ರೀ ಯೋಜನೆಯಡಿ ಮೊದಲ ಕಂತಿನ ನಿಧಿಯ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ
12 ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿರುವ ಶಿಕ್ಷಣ ಮತ್ತು ಕೌಶಲ್ಯ ಪಠ್ಯಕ್ರಮ ಪುಸ್ತಕಗಳನ್ನು ಬಿಡುಗಡೆ ಮಾಡಲಿರುವ ಪ್ರಧಾನ ಮಂತ್ರಿ
Posted On:
28 JUL 2023 6:45PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2023 ರ ಜುಲೈ 29 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿಂದು(ಜುಲೈ 29) ಬೆಳಗ್ಗೆ 10 ಗಂಟೆಗೆ ಅಖಿ ಲಭಾರತೀಯ ಶಿಕ್ಷಾ ಸಮಾಗಮ ಉದ್ಘಾಟಿಸಲಿದ್ದಾರೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ 2020ರ 3ನೇ ವಾರ್ಷಿಕೋತ್ಸವ ಸಂದರ್ಭದಲ್ಲೇ ನಡೆಯುತ್ತಿದೆ.
ಪ್ರಧಾನ ಮಂತ್ರಿ ಅವರು ಕಾರ್ಯಕ್ರಮದಲ್ಲಿ ಪಿಎಂಶ್ರೀ ಯೋಜನೆಯ ಮೊದಲ ಕಂತಿನ ನಿಧಿ ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2020ರಲ್ಲಿ ರೂಪಿಸಿರುವಂತೆ, ಪಿಎಂಶ್ರೀ ಶಾಲೆಗಳು ಸಮನಾದ, ಎಲ್ಲರನ್ನೂ ಒಳಗೊಂಡ ಮತ್ತು ಬಹುವರ್ಗಗಳ ಏಳ್ಗೆಯ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳನ್ನು ರೂಪಿಸುತ್ತದೆ. 12 ಭಾರತೀಯ ಭಾಷೆಗಳಿಗೆ ಅನುವಾದ ಮಾಡಿರುವ ಶಿಕ್ಷಣ ಮತ್ತು ಕೌಶಲ್ಯ ಪಠ್ಯಕ್ರಮ ಪುಸ್ತಕಗಳನ್ನು ಸಹ ಪ್ರಧಾನ ಮಂತ್ರಿ ಬಿಡುಗಡೆ ಮಾಡುತ್ತಾರೆ.
ಪ್ರಧಾನ ಮಂತ್ರಿ ಅವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಎನ್‌ಇಪಿ 2020 ನೀತಿಯು ಯುವಕರನ್ನು ಅರಳಿಸುವ ಮತ್ತು ಅಮೃತ ಕಾಲದಲ್ಲಿ ದೇಶವನ್ನು ಮುನ್ನಡೆಸಲು ಅವರನ್ನು ಸಿದ್ಧಪಡಿಸುವ ಉದ್ದೇಶದಿಂದ ಆರಂಭವಾಯಿತು. ಭವಿಷ್ಯದ ಸವಾಲುಗಳನ್ನು ಎದುರಿಸಲು ಯುವ ಸಮುದಾಯವನ್ನು ಸಿದ್ಧಪಡಿಸುವ ಉದ್ದೇಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಅದರ ಅನುಷ್ಠಾನದ 3 ವರ್ಷಗಳಲ್ಲಿ ಹೊಸ ನೀತಿಯು ಶಾಲೆ, ಉನ್ನತ ಮತ್ತು ಕೌಶಲ್ಯ ಶಿಕ್ಷಣ ಕ್ಷೇತ್ರಗಳಲ್ಲಿ ಆಮೂಲಾಗ್ರ ರೂಪಾಂತರ ತಂದಿದೆ. ಜುಲೈ 29 ಮತ್ತು 30ರಂದು ನಡೆಯುತ್ತಿರುವ 2 ದಿನಗಳ ಕಾರ್ಯಕ್ರಮವು ಶಿಕ್ಷಣ ತಜ್ಞರು, ವಲಯದ ತಜ್ಞರು, ನೀತಿ ನಿರೂಪಕರು, ಉದ್ಯಮ ಪ್ರತಿನಿಧಿಗಳು, ಶಿಕ್ಷಕರು ಮತ್ತು ಶಾಲೆಗಳ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಸಂಸ್ಥೆಗಳಿಗೆ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಒದಗಿಸುತ್ತದೆ. ಎನ್ಇಪಿ-2020 ಅನುಷ್ಠಾನಗೊಳಿಸಲು ಇರುವ ಯಶೋಗಾಥೆಗಳು, ಉತ್ತಮ ಅಭ್ಯಾಸಗಳು ಮತ್ತು ಅದನ್ನು ಮತ್ತಷ್ಟು ಮುಂದೆ ತೆಗೆದುಕೊಳ್ಳಲು ಇರುವ ಕಾರ್ಯ ತಂತ್ರಗಳು ಇತ್ಯಾದಿ ಚರ್ಚೆಗೆ ಬರಲಿವೆ.
ಅಖಿಲ ಭಾರತೀಯ ಶಿಕ್ಷಾ ಸಮಾಗಮವು 16 ಕಲಾಪಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆಡಳಿತಕ್ಕೆ ಪ್ರವೇಶ, ಸಮನಾದ ಮತ್ತು ಎಲ್ಲರನ್ನೂ ಒಳಗೊಂಡ ಶಿಕ್ಷಣ, ವಂಚಿತ ಸಮೂಹದ ಸಾಮಾಜಿಕ, ಆರ್ಥಿಕ ಸಮಸ್ಯೆಗಳು, ರಾಷ್ಟ್ರೀಯ ಶ್ರೇಯಾಂಕ ಮಾರ್ಗಸೂಚಿ(ಚೌಕಟ್ಟು) ಸಂಸ್ಥೆ, ಭಾರತೀಯ ಜ್ಞಾನ ವ್ಯವಸ್ಥೆ, ಶಿಕ್ಷಣದ ಅಂತಾರಾಷ್ಟ್ರೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು
****
(Release ID: 1943951)
Visitor Counter : 109
Read this release in:
Telugu
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam