ಉಪರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ಉಪಾಧ್ಯಕ್ಷರು ಹಾಗೂ ರಾಜ್ಯಸಭೆಯ ಸಭಾಧ್ಯಕ್ಷರು “ಕಾರ್ಗಿಲ್ ವಿಜಯ್ ದಿವಸ್” ಕುರಿತು ಸದನದಲ್ಲಿ ನೀಡಿದ ಹೇಳಿಕೆಯ ಪಠ್ಯ
Posted On:
26 JUL 2023 12:11PM by PIB Bengaluru
ಮಾನ್ಯ ಸದಸ್ಯರೇ, ಇಂದು “ಕಾರ್ಗಿಲ್ ವಿಜಯ್ ದಿವಸ್”ನ ಇಪ್ಪತ್ನಾಲ್ಕನೇ ವಾರ್ಷಿಕೋತ್ಸವ. 1999 ರ ಈ ದಿನದಂದು, ನಮ್ಮ ಕೆಚ್ಚೆದೆಯ ಸೈನಿಕರು ತಮ್ಮ ಅದಮ್ಯ ಧೈರ್ಯ ಮತ್ತು ದೃಢಸಂಕಲ್ಪದಿಂದ ಕಾರ್ಗಿಲ್ ನಲ್ಲಿನ ನಮ್ಮ ಭೂಪ್ರದೇಶದಿಂದ ನುಸುಳುಕೋರರನ್ನು ಹಿಮ್ಮೆಟ್ಟಿಸಿ ಓಡಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗೆ ತಲೆಬಾಗಿ ನಮಿಸೋಣ. ನಮ್ಮ ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಲು ಸಿದ್ಧರಾಗಿರುವ ನಮ್ಮ ದೇಶ ರಕ್ಷಣಾ ಪಡೆಗಳು ಮತ್ತು ಸಿಬ್ಬಂದಿಗೆ ನಮಸ್ಕಾರಗಳು.
ನಮ್ಮ ವೀರ ಸೈನಿಕರು ಸದಾ ಅನುಕರಣೀಯ ಧೈರ್ಯವನ್ನು ಪ್ರದರ್ಶಿಸುತ್ತಾ, ಅತಿ ಕ್ಲಿಷ್ಟಕರ ಭೂಪ್ರದೇಶ ಮತ್ತು ಅತ್ಯಂತ ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳನ್ನು ಜಯಿಸಿದರು ಹಾಗೂ ಅತಿಕ್ರಮಿಸಿದ ಶತ್ರುಗಳನ್ನು ಸೋಲಿಸಿದರು. ಅವರ ಶೌರ್ಯದ ಸಾಹಸಗಾಥೆಯು ರಾಷ್ಟ್ರದ ಸೇವೆಯಲ್ಲಿರಲು ಪ್ರತಿದಿನ ನಮ್ಮನ್ನು ಪ್ರೇರೇಪಿಸುತ್ತದೆ ಮತ್ತು ನಮಗೆ ಸದಾ ಸ್ಪೂರ್ತಿಯಾಗಿರುತ್ತದೆ.
ಗೌರವಾನ್ವಿತ ಸದಸ್ಯರೇ, “ಕಾರ್ಗಿಲ್ ವಿಜಯ್ ದಿವಸ್” ಅನ್ನು ಆಚರಿಸುವಾಗ ನಾವು ನಮ್ಮ ವೀರ ಸೈನಿಕರ ಅತ್ಯುನ್ನತ ತ್ಯಾಗವನ್ನು ಸ್ಮರಿಸೋಣ. ಭಾರತವನ್ನು ಎಂದೆಂದಿಗೂ ಮೊದಲ ಸ್ಥಾನದಲ್ಲಿಡಲು ನಮ್ಮನ್ನು ನಾವು ಪುನಃ ಸಮರ್ಪಿಸಿಕೊಳ್ಳಲು ಇದು ಒಂದು ಸುಸಂದರ್ಭವಾಗಿದೆ.
ಈ ಸದನದ ಪರವಾಗಿ ಮತ್ತು ವೈಯಕ್ತಿಕವಾಗಿ, ನಾನು ನಮ್ಮೆಲ್ಲರ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ನಮ್ಮ ಸೈನಿಕರಿಗೆ ಪ್ರಜ್ವಲಿಸುವ ಗೌರವ ನಮನವನ್ನು ಸಲ್ಲಿಸುತ್ತೇನೆ. ನಮ್ಮ ವೀರ ಸೈನಿಕರ ಸ್ಮರಣಾರ್ಥ ಗೌರವ ಸೂಚಕವಾಗಿ ಸದಸ್ಯರು ತಮ್ಮ ಸ್ಥಳಗಳಲ್ಲಿ ಎದ್ದು ನಿಂತು ಮೌನವನ್ನು ಆಚರಿಸಬೇಕೆಂದು ನಾನು ವಿನಂತಿಸುತ್ತೇನೆ.
ಸಂದೇಶದ ಹಿಂದಿ ಅನುವಾದ ಹೀಗಿದೆ:
माननीय सदस्यगण, आज कारगिल विजय दिवस की चौबीसवीं वर्षगांठ है। वर्ष 1999 में आज ही के दिन हमारे वीर जवानों ने अपने अदम्य साहस और दृढ़ संकल्प से कारगिल में घुसपैठियों को हमारी सीमा से खदेड़ दिया था।
आइए हम कारगिल युद्ध में शहीद हुए लोगों के प्रति कृतज्ञतापूर्वक नमन करें, साथ ही हमारी सेनाओं और सैनिकों को भी सलाम करें जो हमारे राष्ट्र के लिए सर्वोच्च बलिदान देने के लिए हमेशा तैयार रहते हैं।
हमारे बहादुर सैनिकों ने अनुकरणीय व अपने अदम्य साहस से दुर्गम इलाकों और बेहद प्रतिकूल मौसम का सामना करते हुए दुश्मन को परास्त किया। उनकी बहादुरी की गाथा हमें हर दिन देश की सेवा के लिए प्रेरित करती रहती है।
माननीय सदस्यों, आइए कारगिल विजय दिवस मनाते हुए अपने बहादुर सैनिकों के सर्वोच्च बलिदान को याद करें।
यह हमारे लिए भारत को सर्वोपरि रखने के लिए स्वयं को पुनः समर्पित करने का भी एक अवसर है।
इस प्रतिष्ठित सदन की ओर से और अपनी ओर से मैं हार्दिक आभार व्यक्त करता हूं और हमारे सैनिकों को भावभीनी श्रद्धांजलि देता हूं।
मैं माननीय सदस्यों से अनुरोध करता हूं कि वे अपने स्थान पर खड़े होकर हमारे बहादुर सैनिकों की स्मृति में सम्मान स्वरूप मौन रखते हुए श्रद्धांजलि अर्पित करें।
****
(Release ID: 1942788)
Visitor Counter : 145