ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿ ಮುರ್ಮು ಅವರು ತಮ್ಮ ಅಧಿಕಾರಾವಧಿಯ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ / ಉದ್ಘಾಟನೆ ನೆರವೇರಿಸಿದರು, ರಾಷ್ಟ್ರಪತಿಯಾಗಿ ಒಂದು ವರ್ಷದ ಕಾರ್ಯಚಟುವಟಿಕೆಗಳ ಸಂಕಲನ ಇ-ಪುಸ್ತಕ ಬಿಡುಗಡೆ ಮಾಡಿದರು.

Posted On: 25 JUL 2023 1:40PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 25, 2023) ತಮ್ಮ ಅಧಿಕಾರಾವಧಿಯಲ್ಲಿ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ.

ತಂತ್ರಜ್ಞಾನದ ಮೂಲಕ ರಾಷ್ಟ್ರಪತಿ ಭವನವು ಕಳೆದ ಒಂದು ವರ್ಷದಲ್ಲಿ ಹೆಚ್ಚು ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ರಾಷ್ಟ್ರಪತಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಬಳಸಿಕೊಂಡು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ರಾಷ್ಟ್ರಪತಿ ಭವನದ ಅಧಿಕಾರಿಗಳು ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ  ಮುರ್ಮು ಅವರು ತಮ್ಮ ರಾಷ್ಟ್ರಪತಿ ಅವಧಿಯ ಒಂದು ವರ್ಷವನ್ನು ಪೂರ್ಣಗೊಳಿಸಿದ ಸಂಕೇತವಾಗಿ, ಹಲವಾರು ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅವುಗಳಲ್ಲಿ ಈ ಕೆಳಗಿನವು  ಸೇರಿವೆ:

  1. ರಾಷ್ಟ್ರಪತಿಗಳ ಎಸ್ಟೇಟ್ ನಲ್ಲಿರುವ ಶಿವ ದೇವಾಲಯದ ಮರುಅಭಿವೃದ್ಧಿಗೆ ಶಂಕುಸ್ಥಾಪನೆ.
  2. ರಾಷ್ಟ್ರಪತಿಗಳ ಎಸ್ಟೇಟ್ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಕ್ರಿಕೆಟ್ ಪೆವಿಲಿಯನ್ ನಿರ್ಮಾಣಕ್ಕೆ ಶಂಕುಸ್ಥಾಪನೆ.
  3. ನವಚರ ಉದ್ಘಾಟನೆ-ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ ರಾಷ್ಟ್ರಪತಿ ಭವನವು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಸಕ್ರಿಯಗೊಳಿಸಿದ ಗ್ಯಾಲರಿಯಾದ ನವಚರವನ್ನು ಉದ್ಘಾಟಿಸಲಾಯಿತು. ಈ ಗ್ಯಾಲರಿ ವಿದ್ಯಾರ್ಥಿಗಳು ಮತ್ತು ಎಐ ತರಬೇತುದಾರರು ರೂಪಿಸಿದ  ತಲ್ಲೀನಗೊಳಿಸುವ ಚಮತ್ಕಾರಯುಕ್ತ  ಆವಿಷ್ಕಾರಗಳು ಮತ್ತು ದೇಶೀಯ ಎಐ ಪರಿಹಾರಗಳನ್ನು ಪ್ರದರ್ಶಿಸುತ್ತದೆ. ಇದು ರಾಷ್ಟ್ರಪತಿ ಭವನದ ಭವ್ಯತೆಯ ಬಗ್ಗೆ ಒಳನೋಟಗಳನ್ನು ಒದಗಿಸುವ ಮತ್ತು ಎಐ ಕೌಶಲ್ಯಗಳನ್ನು ಪ್ರಜಾಪ್ರಭುತ್ವೀಕರಣಗೊಳಿಸುವ  ಸ್ಫೂರ್ತಿಯ ಪ್ರಜ್ಞೆಯನ್ನು ಬೆಳಗಿಸುವ ಆರು ಸಂವಾದಾತ್ಮಕ ಪ್ರದರ್ಶನಗಳ ಸಲಕರಣೆಗಳನ್ನು ಹೊಂದಿದೆ.
  4. ಸೂತ್ರ-ಕಲಾ ದರ್ಪಣ ಉದ್ಘಾಟನೆ-ಇದು ರಾಷ್ಟ್ರಪತಿ ಭವನದ ಜವಳಿ ಸಂಗ್ರಹ.  ಸೂತ್ರ-ಕಲಾ ದರ್ಪಣ್ ಗ್ಯಾಲರಿಯು ರಾಷ್ಟ್ರಪತಿ ಭವನದ ಶ್ರೇಷ್ಠ ಪರಂಪರೆಯನ್ನು ದಾಖಲಿಸುವ ಪ್ರಾಚೀನ ಜವಳಿಗಳ ಗಮನಾರ್ಹ ಸಂಗ್ರಹವನ್ನು ಹೊಂದಿದ್ದು, ಅದನ್ನು ಪ್ರದರ್ಶಿಸುತ್ತದೆ. ರಾಷ್ಟ್ರಪತಿ ಭವನವು ಜರ್ದೋಜಿ ಮತ್ತು ಚಿನ್ನದ ಕಸೂತಿ ಮಾಡಿದ ವೆಲ್ವೆಟ್ ಗಳಿಂದ ಹಿಡಿದು ಅದರ ಕಾರ್ಪೆಟ್ ಗಳು, ಹಾಸಿಗೆ ಮತ್ತು ಮೇಜಿನ ಹೊದಿಕೆಗಳನ್ನು ಒಳಗೊಂಡಂತೆ ಉತ್ತಮ ಮಸ್ಲಿನ್ ಮತ್ತು ರೇಷ್ಮೆ ಪರದೆಗಳವರೆಗೆ ವಿಭಿನ್ನ ಜವಳಿ ಸಂಪ್ರದಾಯಗಳ ಭಂಡಾರವಾಗಿದೆ. ಪ್ರತಿಯೊಂದು ಮೇರುಕೃತಿಯು ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸುವುದಲ್ಲದೆ, ಈ ಅಪ್ರತಿಮ ಕಟ್ಟಡದ ನಿರಂತರ  ಪರಂಪರೆಯ ಅಮೂಲ್ಯ ದಾಖಲೆಯಾಗಿಯೂ ಕಾರ್ಯನಿರ್ವಹಿಸುತ್ತದೆ.
  5. ಜನಜಾತೀಯ ದರ್ಪಣ ಉದ್ಘಾಟನೆ-ವಿವಿಧ ಬುಡಕಟ್ಟು ಸಮುದಾಯಗಳ ಸಾಮಾನ್ಯ ಮತ್ತು ಪರಸ್ಪರ ಜೋಡಿಸುವ/ಸಂಪರ್ಕಿಸುವ ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪ್ರದರ್ಶಿಸುವ ಗ್ಯಾಲರಿ ಇದು. ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ  ಬುಡಕಟ್ಟು ಸಮುದಾಯಗಳ ಕೊಡುಗೆಗಳ ಒಂದು ನೋಟವನ್ನು ಒದಗಿಸುವುದು ಗ್ಯಾಲರಿಯ ಉದ್ದೇಶವಾಗಿದೆ. ಈ ಗ್ಯಾಲರಿಯು ಬೆಳಕಿಗೆ ಬಾರದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು, ಸಾಂಪ್ರದಾಯಿಕ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಪದ್ಧತಿಗಳಾದ ಹಲ್ಮಾ, ಡೋಕ್ರಾ ಕಲೆ, ಸಂಗೀತ ವಾದ್ಯಗಳು, ಗುಂಜಲ ಗೊಂಡಿ ಲಿಪಿ, ಕೃಷಿ ಮತ್ತು ಗೃಹೋಪಯೋಗಿ ಉಪಕರಣಗಳು, ಬಿದಿರಿನ ಬುಟ್ಟಿಗಳು, ಜವಳಿ, ವಾರ್ಲಿ ಕಲೆ, ಗೊಂಡಿ ಮತ್ತು ಮಣ್ಣಿನ ಕಲೆ, ಸುರುಳಿಯಾಕಾರದ ಗ್ರಂಥಗಳು (ಸ್ಕ್ರಾಲ್,) ಮುಖವಾಡಗಳು ಮತ್ತು ಆಭರಣಗಳು, ಲೋಹದ ಕೆಲಸ, ಶಸ್ತ್ರಾಸ್ತ್ರಗಳು, ಹಚ್ಚೆಗಳನ್ನು ಚಿತ್ರಿಸುವ ಸಮಕಾಲೀನ ಛಾಯಾಚಿತ್ರಗಳು, ಪರಿಸರ ಸನ್ನಿವೇಶ ಮತ್ತು ರಾಜದಂಡಗಳನ್ನು ಚಿತ್ರಿಸುವ ಮಿನಿಯೇಚರ್ ಮಾದರಿಗಳು (ಡಿಯೋರಮಾ) ಮುಂತಾದ ವಿವಿಧ ವಿಷಯಗಳನ್ನು ಒಳಗೊಂಡಿದೆ. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ (ಐ.ಜಿ.ಎನ್.ಸಿ.ಎ) ಸಹಯೋಗದೊಂದಿಗೆ ರಾಷ್ಟ್ರಪತಿ ಭವನವು ಗ್ಯಾಲರಿಯನ್ನು ಸ್ಥಾಪಿಸಿದೆ.
  1. ರಾಷ್ಟ್ರಪತಿಗಳ ಕಾರ್ಯದರ್ಶಿ ಶ್ರೀ ರಾಜೇಶ್ ವರ್ಮಾ, ಎನ್ಐಸಿ ಮಹಾನಿರ್ದೇಶಕ ಶ್ರೀ ರಾಜೇಶ್ ಗೆರಾ ಮತ್ತು ರಾಷ್ಟ್ರಪತಿ ಭವನದ ಹಾಗು ಎನ್ಐಸಿಯ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಭಾರತದ ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಭವನದ ಮರುಅಭಿವೃದ್ಧಿ ಮಾಡಿದ ಜಾಲತಾಣವನ್ನು  ಕಾರ್ಯಾರಂಭ ಮಾಡಲಾಯಿತು. ಕಳೆದ ಒಂದು ವರ್ಷದ ರಾಷ್ಟ್ರಪತಿ ಅವಧಿಯ  ಇಣುಕುನೋಟಗಳ ಸಂಕಲನವನ್ನು ಇ-ಪುಸ್ತಕದ ಮಾದರಿಯಲ್ಲಿ ರೂಪಿಸಲಾಗಿದ್ದು ಅದನ್ನು ರಾಷ್ಟ್ರಪತಿ ಅವರು ಬಿಡುಗಡೆ ಮಾಡಿದರು (ಕೊಂಡಿ: https://rb.nic.in/rbebook.htm).
  2. ರಾಷ್ಟ್ರಪತಿಗಳ ಎಸ್ಟೇಟಿನ  ಆಯುಷ್ ಸ್ವಾಸ್ಥ್ಯ ಕೇಂದ್ರದ 'ಆರೋಗ್ಯವನ್ನು ಕಾಪಾಡುವುದು, ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವುದು' ಎಂಬ ಶೀರ್ಷಿಕೆಯ ಪುಸ್ತಕದ ಮೊದಲ ಪ್ರತಿಯನ್ನು ಅವರು ಪಡೆದರು.

ಜಾಲತಾಣ (ವೆಬ್ ಸೈಟ್)  ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳ ಕಾರ್ಯದರ್ಶಿ, ರಾಷ್ಟ್ರಪತಿ ಭವನವು ಕಳೆದ ಒಂದು ವರ್ಷದಲ್ಲಿ ರಾಷ್ಟ್ರಪತಿ ನಿವಾಸ್, ಮಶೋಬ್ರಾ ಮತ್ತು ರಾಷ್ಟ್ರಪತಿ ನಿಲಯಂ ಗಳನ್ನು ವರ್ಷವಿಡೀ  ಸಾರ್ವಜನಿಕರಿಗೆ ತೆರೆದಿಡುವುದು, ಅಮೃತ್ ಉದ್ಯಾನ್ ತೆರೆದಿಡುವ ಅವಧಿಯನ್ನು ಹೆಚ್ಚಿಸುವುದು ಮತ್ತು ಸಂದರ್ಶಕರ ಸ್ಲಾಟ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು ಮುಂತಾದ ಹಲವಾರು ನಾಗರಿಕ ಕೇಂದ್ರಿತ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ರಾಷ್ಟ್ರಪತಿಗಳ  ಎಸ್ಟೇಟಿನಲ್ಲಿ  ಒಟ್ಟಾರೆ ಕೆಲಸ ಮಾಡುವ ಮತ್ತು ಜೀವಿಸುವ  ಪರಿಸರವನ್ನು  ಸುಧಾರಿಸಲು ಮತ್ತು ಚೌಕಟ್ಟಿನಾಚೆಗಿನ  ಚಿಂತನೆಯನ್ನು ಉತ್ತೇಜಿಸಲು  ಚಿಂತನ ಶಿವಿರ್ ಕೂಡಾ ಆಯೋಜಿಸಲಾಗಿತ್ತು. ಈ ಉಪಕ್ರಮಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದಕ್ಕಾಗಿ ಅವರು ರಾಷ್ಟ್ರಪತಿಗಳಿಗೆ  ಧನ್ಯವಾದ ಅರ್ಪಿಸಿದರು.

****



(Release ID: 1942435) Visitor Counter : 109