ಸಂಸ್ಕೃತಿ ಸಚಿವಾಲಯ

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಭಾರತದ 40 ತಾಣಗಳು

Posted On: 24 JUL 2023 4:25PM by PIB Bengaluru

ರಾಷ್ಟ್ರೀಯ ಸಂರಕ್ಷಣಾ ನೀತಿ, 2014ರ ಪ್ರಕಾರ ಕೇಂದ್ರೀಯ ಸಂರಕ್ಷಿತ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ತನ್ನದೇ ಆದ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ 3696 ಕೇಂದ್ರ ಸಂರಕ್ಷಿತ ಸ್ಮಾರಕಗಳು ಅಥವಾ ತಾಣಗಳಿವೆ. ಸ್ಮಾರಕಗಳ ಅಗತ್ಯತೆ ಮತ್ತು ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ ಸ್ಮಾರಕಗಳು ಅಥವಾ ತಾಣಗಳ ಸಂರಕ್ಷಣೆಯನ್ನು ಕೈಗೊಳ್ಳಲಾಗುತ್ತದೆ.

ಪ್ರಸ್ತುತವಾಗಿ, ಭಾರತವು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ 40 ತಾಣಗಳನ್ನು ಹೊಂದಿದೆ. ಯುನೆಸ್ಕೋ ತಾತ್ಕಾಲಿಕ ಪಟ್ಟಿಯು 2022ರಲ್ಲಿ ಸೇರಿಸಲಾದ 6 ತಾಣಗಳು ಸೇರಿದಂತೆ 52 ತಾಣಗಳನ್ನು ಹೊಂದಿದೆ.

ಯಾವುದೇ ರಾಷ್ಟ್ರೀಯ ಆಸ್ತಿಯನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸುವುದು, ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅದನ್ನು ಮುಂದುವರೆಸುವ ಪೂರ್ವಾಪೇಕ್ಷಿತ ಷರತ್ತಾಗಿದೆ. ತಾತ್ಕಾಲಿಕ ಪಟ್ಟಿಯ ಪರಿಷ್ಕರಣೆ ಹಾಗೂ ಅದರ ಹೆಚ್ಚಳವು ನಿರಂತರ ಪ್ರಕ್ರಿಯೆಯಾಗಿದೆ. 2021ರ ಯುನೆಸ್ಕೋ ಕಾರ್ಯಾಚರಣಾ ಮಾರ್ಗಸೂಚಿಗಳ ಪ್ರಕಾರ, ವಾರ್ಷಿಕವಾಗಿ ಕೇವಲ ಒಂದು ಸಾಂಸ್ಕೃತಿಕ ಅಥವಾ ನೈಸರ್ಗಿಕ ಆಸ್ತಿಯನ್ನು ಶಾಸನ ಪ್ರಕ್ರಿಯೆಗೆ ನಾಮನಿರ್ದೇಶನ ಮಾಡಬಹುದು. ಇದರ ಜೊತೆಗೆ, ಯಾವುದೇ ತಾಣದ ಸೇರ್ಪಡೆಗೆ ಆಯಾ ತಾಣದ ಮಾನದಂಡಗಳ ನೆರವೇರಿಕೆ, ಸತ್ಯಾಸತ್ಯತೆ ಮತ್ತು ಸಮಗ್ರತೆಯ ಷರತ್ತುಗಳ ಪೂರೈಕೆ ಮತ್ತು ಅತ್ಯುತ್ತಮ ಸಾರ್ವತ್ರಿಕ ಮೌಲ್ಯದ ಸಮರ್ಥನೆಯನ್ನು ಒದಗಿಸುವುದು ಅಗತ್ಯವಾಗಿರುತ್ತದೆ.

ಈಶಾನ್ಯ ವಲಯದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿಯವರು ಇಂದು ಲೋಕಸಭೆಯಲ್ಲಿ ಈ ಉತ್ತರವನ್ನು ನೀಡಿದರು.

****



(Release ID: 1942123) Visitor Counter : 105