ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

​​​​​​​ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಭಾರತ: 2022ರ ಅಕ್ಟೋಬರ್ ನಲ್ಲಿ ಮಾನಸ ಸಹಾಯವಾಣಿ ಆರಂಭವಾದ ನಂತರ ಈವರೆಗೆ ಸುಮಾರು 2,00,000 ಕರೆಗಳ ಸ್ವೀಕಾರ


ದೇಶಾದ್ಯಂತ ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣಾ ಸೇವೆ ಒದಗಿಸಲು ಸರ್ಕಾರ ಬದ್ಧ

31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 42 ಟೆಲಿ ಮಾನಸ್ ಕೋಶಗಳ ಕಾರ್ಯಾಚರಣೆ; 20 ಭಾಷೆಗಳಲ್ಲಿ ಪ್ರತಿದಿನ 1300ಕ್ಕೂ ಅಧಿಕ ಕರೆಗಳಿಗೆ ಸೇವೆ ಲಭ್ಯ

ಸುಮಾರು 1900 ತರಬೇತಿ ಪಡೆದ ಸಮಾಲೋಚಕರಿಂದ ಮೊದಲ ಹಂತದ ಸೇವೆ

ಪರೀಕ್ಷಾ ಖುತುವಿನಲ್ಲಿ ಪರೀಕ್ಷಾ ಸಂಬಂಧಿ ಒತ್ತಡ ಕುರಿತಂತೆ ಹೆಚ್ಚಿನ ಕರೆಗಳ ಸ್ವೀಕಾರ

Posted On: 22 JUL 2023 9:11AM by PIB Bengaluru

ದೇಶಾದ್ಯಂತ ಮಾನಸಿಕ ಆರೋಗ್ಯ ಸೇವೆಗಳನ್ನು ಬಲವರ್ಧನೆಗೊಳಿಸಲು ಭಾರತ ಸರ್ಕಾರ 2022ರ ಅಕ್ಟೋಬರ್ ನಲ್ಲಿ ಆರಂಭಿಸಿದ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ (ಟೆಲಿ ಮಾನಸಿಕ ಆರೋಗ್ಯ ನೆರವು ಮತ್ತು ರಾಜ್ಯಗಳ ನಡುವಿನ ಜಾಲ: ಟೆಲಿ ಮಾನಸ್, “ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ’ ದ ಡಿಜಿಟಲ್ ವಿಧಾನ) ಮಹತ್ವದ ಮೈಲಿಗಲ್ಲು ತಲುಪಿದೆ. ಈ ಟೋಲ್-ಫ್ರೀ ಸೇವೆಯು ಆರಂಭವಾದಾಗಿನಿಂದ ಈವರೆಗೆ ದೇಶದ ವಿವಿಧ ಮೂಲೆಗಳಿಂದ 2,00,000ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದೆ, ಇದು ಸ್ಥಿರವಾದ ಪ್ರಗತಿಶೀಲ ಪ್ರವೃತ್ತಿಯ ಚಿತ್ರಣ ನೀಡುತ್ತದೆ. ಸ್ವೀಕರಿಸುತ್ತಿರುವ ಕರೆಗಳ ಸಂಖ್ಯೆ ಭಾರಿ ಹೆಚ್ಚಳವಾಗಿದ್ದು, ಕೇವಲ 3 ತಿಂಗಳ ಅಂತರದಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆಯು 1 ಲಕ್ಷ ಕರೆಗಳಿಂದ (ಏಪ್ರಿಲ್ 2023 ರಲ್ಲಿ) 2 ಲಕ್ಷ ಕರೆಗಳಿಗೆ ತಲುಪಿದೆ.

ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರು ತಮ್ಮ ಟ್ವೀಟ್ ನಲ್ಲಿ ಈ ಸಾಧನೆಗಾಗಿ ದೇಶವಾಸಿಗಳನ್ನು ಅಭಿನಂದಿಸಿದ್ದಾರೆ.

31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 42 ಟೆಲಿ ಮಾನಸ್ ಕೋಶಗಳ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿದಿನ 20 ಭಾಷೆಗಳಲ್ಲಿ 1300ಕ್ಕೂ ಅಧಿಕ ಕರೆಗಳಿಗೆ ಸೇವೆ ನೀಡಲಾಗುತ್ತಿದೆ. ಸುಮಾರು 1900 ತರಬೇತಿ ಪಡೆದ ಸಮಾಲೋಚಕರಿಂದ ಮೊದಲ ಹಂತದ ಸೇವೆ ನೀಡುತ್ತಿದ್ದಾರೆ.  ಬಹುತೇಕ ಸಾಮಾನ್ಯವಾಗಿ ಎದುರಾಗುವ ಆತಂಕಗಳೆಂದರೆ ಮನಸ್ಥಿತಿಯ ದುಃಖ, ನಿದ್ರಾ ಭಂಗ, ಒತ್ತಡ ಮತ್ತು ಆತಂಕ. ಸುಮಾರು 7000 ಕರೆಗಳನ್ನು ಸಲಹೆಗಾರರು ಪುನಃ ಕರೆಗಳ ಮೂಲಕ ನಿಗಾ ಇರಿಸಿದ್ದು, ಅಲ್ಲಿ ಅವರು ಆರೈಕೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಜ್ಞರ ಆರೈಕೆಯ ಅಗತ್ಯವಿರುವ ಕರೆದಾರರನ್ನು ಡಿಎಂಎಚ್ ಪಿ ಮತ್ತು ಇತರ ಹತ್ತಿರದ ಆರೋಗ್ಯ ಸೌಲಭ್ಯಗಳಂತಹ ಸೂಕ್ತ ಸೇವೆಗಳಿಗೆ ಯಶಸ್ವಿಯಾಗಿ ಸಂಯೋಜನೆ ಮಾಡಲಾಗುತ್ತಿದೆ.

ಪರೀಕ್ಷೆಯ ಸಮಯದಲ್ಲಿ ಪರೀಕ್ಷೆಯ ಒತ್ತಡಕ್ಕೆ ಸಂಬಂಧಿಸಿದ ಕರೆಗಳ ಹೆಚ್ಚಳ ಕಂಡುಬಂದಿವೆ. ಈ ಕರೆದಾರರಿಗೆ ಸಮಾಲೋಚಕರು ಅಗತ್ಯ ನೆರವು ಸಲಹೆ ಮತ್ತು ಸ್ವ-ಸಹಾಯ ಕಾರ್ಯತಂತ್ರಗಳೊಂದಿಗೆ ಸಹಾಯ ಮಾಡಿದರು. ಇದು ಅವರಿಗೆ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಲು ಸಹಾಯ ಮಾಡಿತು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು/ ಹದಿಹರೆಯದವರನ್ನು ತಲುಪಲೂ ಸಹ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ.

ಮುದ್ರಣ ಮಾಧ್ಯಮ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿ ನಾನಾ ಮಾಧ್ಯಮ ವೇದಿಕೆಗಳಲ್ಲಿ ಟೆಲಿ ಮಾನಸ್ ಸೇವೆಗಳನ್ನು ಉತ್ತೇಜಿಸಲಾಗುತ್ತಿದೆ. ಟೆಲಿ ಮಾನಸ್  ಕರೆ ಮಾಡುವವರಿಗೆ ಅಗತ್ಯ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ, ಮುಂಬರುವ ದಿನಗಳಲ್ಲಿ ಇ-ಸಂಜೀವಿನಿಯೊಂದಿಗೆ ಏಕೀಕರಣ ಸೇರಿದಂತೆ ಅಸ್ತಿತ್ವದಲ್ಲಿರುವ ಪ್ರಮುಖ ಸೇವೆಗಳು ಮತ್ತು ಸಂಪನ್ಮೂಲಗಳಿಗೆ ಸಂಪರ್ಕವನ್ನು ನೀಡುತ್ತದೆ. ಟೆಲಿ ಮಾನಸ್ 9 ತಿಂಗಳಲ್ಲಿ 2 ಲಕ್ಷ ಕರೆಗಳ ಗಡಿಯನ್ನು ತಲುಪುವುದರೊಂದಿದೆ, ಭಾರತದಾದ್ಯಂತ ಸಮಗ್ರ ಡಿಜಿಟಲ್ ಮಾನಸಿಕ ಆರೋಗ್ಯ ಜಾಲವನ್ನು ನಿರ್ಮಿಸುವ ಮತ್ತು ಸೇವೆ ಲಭ್ಯವಿರದ ಜನರನ್ನು ತಲುಪುವ ತನ್ನ ಅಂತಿಮ ಗುರಿ ಸಾಧಿಸುವ ನಿಟ್ಟಿನಲ್ಲಿ ಸಾಗಿದೆ.

ದೇಶದಲ್ಲಿ ಮಾನಸಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿರುವುದನ್ನು ಮನಗಂಡು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಟೆಲಿ ಮಾನಸ್ ಉಪಕ್ರಮವನ್ನು ಪ್ರಕಟಿಸಿತ್ತು. ಇದು ಕರೆದಾರರ ವಿವರಗಳನ್ನು ಅನಾಮದೇಯವಾಗಿರಿಸಿಕೊಂಡು ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಜನರಿಗೆ ನೆರವು ನೀಡಲು ವಿನೂತನ ಉಪಕ್ರಮವಾಗಿದ್ದು, ಆ ಮೂಲಕ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಸುತ್ತಲಿನ ಮಿಥೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ.

ಭಾರತದ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಾಮರ್ಥ ವರ್ಧನೆಯ ಉಪಕ್ರಮಗಳ ಮೂಲಕ ರಾಷ್ಟ್ರದ ಮಾನಸಿಕ ಆರೋಗ್ಯ ಕಾರ್ಯಪಡೆಯನ್ನು ನಿರ್ಮಿಸುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ ಮತ್ತು ಏಕಕಾಲದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಪ್ರತಿ ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿ, ಸಮಾಜದ ಅತ್ಯಂತ ದುರ್ಬಲ ಮತ್ತು ಈವರೆಗೂ ಅಂತಹ ಸೇವೆಗಳನ್ನು ತಲುಪದ ವರ್ಗಗಳನ್ನು ಗುರಿಯಾಗಿಟ್ಟುಕೊಂಡು ಉಚಿತ ಸೇವೆ ನೀಡಬಹುದು  ಎಂಬುದನ್ನು ಖಾತ್ರಿಪಡಿಸುತ್ತದೆ. ಟೆಲಿ ಮಾನಸ್ 6 ತಿಂಗಳಲ್ಲಿ 1 ಲಕ್ಷದ ಗಡಿಯನ್ನು ತಲುಪುವುದರೊಂದಿಗೆ, ಭಾರತದಾದ್ಯಂತ ದೃಢವಾದ ಡಿಜಿಟಲ್ ಮಾನಸಿಕ ಆರೋಗ್ಯ ಜಾಲವನ್ನು  ಸೃಷ್ಟಿಸುವ ತನ್ನ ಅಂತಿಮ ಗುರಿ ಸಾಧಿಸುವಲ್ಲಿ ಇದು ಹೊಸ ಗರಿಯಾಗಿದೆ.

ಟ್ರೋಲ್ ಫ್ರೀ ಸಹಾಯವಾಣಿ ಸಂಖ್ಯೆ:  14416 ಅಥವಾ 1-800-891-4416 , ಈ ಬಹು ಭಾಷಾ ಸೇವೆಗಳಲ್ಲಿ ಕರೆದಾರರು ತಮ್ಮ ಆಯ್ಕೆಯ ಭಾಷೆಯನ್ನು ಆಯ್ದುಕೊಳ್ಳಲು ಅವಕಾಶವಿದೆ.

******

 

MV

HFW/Tele-MANAS Achievement/21stJuly2023/2


 


(Release ID: 1941752) Visitor Counter : 169