ಗಣಿ ಸಚಿವಾಲಯ

ಭಾರತದ ರಾಷ್ಟ್ರಪತಿಗಳು  ನವದೆಹಲಿಯಲ್ಲಿ 2022 ರ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

Posted On: 21 JUL 2023 11:56AM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ - 2022 ಅನ್ನು ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ 24 ಜುಲೈ 2023 ರಂದು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್‌ವಾಹ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಿದ್ದಾರೆ. ಗಣಿ ಸಚಿವಾಲಯವು ಪ್ರತಿ ವರ್ಷ ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ನೀಡುತ್ತದೆ:

i. ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ,

ii ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ

iii ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ.

1966 ರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು (ಎನ್‌ಜಿಎ) ಭೂವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆ, ಸಮರ್ಪಣೆ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಿದ ಸಾಧಕರು ಮತ್ತು ಸಂಸ್ಥೆಗಳನ್ನು ಗುರುತಿಸುವಿಕೆಯ ಮತ್ತು ಮೆಚ್ಚುಗೆಯ ಸಂಕೇತವಾಗಿದೆ.

ಖನಿಜ ಅನ್ವೇಷಣೆ ಮತ್ತು ಪರಿಶೋಧನೆ, ಮೂಲ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ ಮತ್ತು ಗಣಿಗಾರಿಕೆ, ಖನಿಜ ಪ್ರಯೋಜನ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ 2022 ಕ್ಕಾಗಿ ಈ ವರ್ಷ, ವಿವಿಧ ಪ್ರಶಸ್ತಿ ವಿಭಾಗಗಳ ಅಡಿಯಲ್ಲಿ 168 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ ಮತ್ತು ಮೂರು ಹಂತದ ಪರೀಕ್ಷೆಗಳ ಪ್ರಕ್ರಿಯೆಯ ಮೂಲಕ ಪರಿಶೀಲಿಸಲಾಗಿದೆ. ಜೀವಮಾನದ ಸಾಧನೆಗಾಗಿ ಒಂದು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ, ವಿವಿಧ ಕ್ಷೇತ್ರಗಳ ಅಡಿಯಲ್ಲಿ ಎಂಟು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು ಮತ್ತು ಒಂದು ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳ ಅಡಿಯಲ್ಲಿ 10 ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳಿಗೆ ನಾಮನಿರ್ದೇಶಿತರನ್ನು ಆಯ್ಕೆ ಮಾಡಲಾಗಿದೆ. ಈ 10 ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು 22 ಭೂವಿಜ್ಞಾನಿಗಳಿಗೆ ಪ್ರದಾನ ಮಾಡಲಿದ್ದಾರೆ.

ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯನ್ನು ಡಾ. ಓಂ ನರೇನ್ ಭಾರ್ಗವ ಅವರಿಗೆ ನೀಡಲಾಗುವುದು, ಕಳೆದ ನಾಲ್ಕು ದಶಕಗಳಲ್ಲಿ ಹಿಮಾಲಯದಲ್ಲಿ ಅವರ  ಆದ್ಯ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಭಾರತೀಯ ಭೂಬಾಗದ ವಿವಿಧ ಆರ್ಕಿಯನ್ ಕ್ರೇಟಾನ್‌ಗಳ ಕೆಳಗೆ ಸಬ್-ಕಾಂಟಿನೆಂಟಲ್ ಲಿಥೋಸ್ಫೆರಿಕ್ ಮ್ಯಾಂಟಲ್ (ಎಸ್‌ಸಿಎಲ್‌ಎಂ)  ವ್ಯತ್ಯಾಸವನ್ನು ತಿಳಿದಕೊಳ್ಳುವಲ್ಲಿ ಗಮನಾರ್ಹ ಕೊಡುಗೆ ನೀಡಿದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಮಿಯಾ ಕುಮಾರ್ ಸಮಲ್ ಅವರಿಗೆ ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿಯನ್ನು ನೀಡಲಾಗುವುದು.

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ಪ್ರತಿಷ್ಠಿತ ಭೂವಿಜ್ಞಾನಿಗಳು, ವಿದ್ವಾಂಸರು, ನೀತಿ ನಿರೂಪಕರು ಮತ್ತು ಉದ್ಯಮದ ಪ್ರಮುಖರ ಗಣ್ಯ ಉಪಸ್ಥಿತಿಯಲ್ಲಿ ನೀಡಲಾಗುವುದು.

 

ಆಕರ ಪುಸ್ತಕ: sendgb.com/uIHstavdMZe

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳ ಬಗ್ಗೆ: -

 

ಪರಿಚಯ

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯು ಭೂವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಒಂದಾಗಿದೆ, ಇದನ್ನು ಭಾರತ ಸರ್ಕಾರದ ಗಣಿ ಸಚಿವಾಲಯದಿಂದ 1966 ರಲ್ಲಿ ಸ್ಥಾಪಿಸಲಾಗಿದೆ.. 2009 ರ ಮೊದಲು, ಈ ಪ್ರಶಸ್ತಿಗಳನ್ನು ರಾಷ್ಟ್ರೀಯ ಖನಿಜ ಪ್ರಶಸ್ತಿಗಳು ಎಂದು ಕರೆಯಲಾಗುತ್ತಿತ್ತು. ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ  ಮತ್ತು ಅತ್ಯುತ್ತಮ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು ಮತ್ತು ತಂಡಗಳನ್ನು ಗೌರವಿಸುವುದು ಈ ರಾಷ್ಟ್ರ ಮಟ್ಟದ ಪ್ರಶಸ್ತಿಯ ಉದ್ದೇಶವಾಗಿದೆ.

2022 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳು / ಸಲಹೆಗಳ ಪ್ರಕಾರ, ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಒಟ್ಟು ಪ್ರಶಸ್ತಿಗಳ ಸಂಖ್ಯೆಯನ್ನು 21 ಸಂಖ್ಯೆಗಳಿಂದ 12 ಸಂಖ್ಯೆಗಳಿಗೆ ಕಡಿಮೆ ಮಾಡಲಾಗಿದೆ. ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯನ್ನು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್‌  ಆದ www.awards.gov.in  ನಲ್ಲಿ ಸೇರಿಸಲಾಗಿದೆ   ಮತ್ತು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ2022ಕ್ಕಾಗಿ ನಾಮನಿರ್ದೇಶನಗಳನ್ನು ಈ ಕೆಳಗಿನ ಮೂರು ಪ್ರಶಸ್ತಿ ವಿಭಾಗಗಳಿಗೆ ಆನ್‌ಲೈನ್ ನಲ್ಲಿ ಈ ಪ್ರಶಸ್ತಿ ಪೋರ್ಟಲ್ ಮೂಲಕ ಆಹ್ವಾನಿಸಲಾಗಿತ್ತು:-

(i) ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ (ಒಂದು ಪ್ರಶಸ್ತಿ),

(ii) ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ (ಹತ್ತು ಪ್ರಶಸ್ತಿಗಳು) ಮತ್ತು

(iii) ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ (ಒಂದು ಪ್ರಶಸ್ತಿ)

 

ಪ್ರಶಸ್ತಿಗೆ ಆಯ್ಕೆ ವಿಧಾನ

ಪ್ರಶಸ್ತಿ ಪುರಸ್ಕೃತರ ಆಯ್ಕೆ ಪ್ರಕ್ರಿಯೆಯನ್ನು ಉತ್ತಮವಾಗಿ ಗೊತ್ತುಮಾಡಲಾಗಿದೆ ಮತ್ತು ಅಂತಿಮವಾಗಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಮೂರು ಹಂತದ ಸಮಿತಿಗಳನ್ನು ಹೊಂದಿದೆ. ಕಾರ್ಯದರ್ಶಿ, ಗಣಿ ಮತ್ತು ಅಧ್ಯಕ್ಷರು, ಪ್ರಶಸ್ತಿ ರಚನಾ ಪ್ರಾಧಿಕಾರ (Award Making Authority - AMA) 4 ವಿಭಾಗೀಯ ಪರಿಶೀಲನಾ ಸಮಿತಿಗಳನ್ನು (Sectional Scrutiny committees - SSCs) ಮೊದಲ ಹಂತದ ಸಮಿತಿಗಳಾಗಿ ಮತ್ತು ತಜ್ಞರ ಪರಿಶೀಲನಾ ಸಮಿತಿ (Screening Committee of Experts -SCE)ಯನ್ನು ವಿಭಾಗಾವಾರು ಮೌಲ್ಯಮಾಪನ ಮತ್ತು ಪರಿಶೀಲನೆಗಾಗಿ ಎರಡನೇ ಹಂತದ ಸಮಿತಿಯಾಗಿ ರಚಿಸಲಾಗಿದೆ. ವಿಭಾಗೀಯ ಪರಿಶೀಲನಾ ಸಮಿತಿಗಳ ಶಿಫಾರಸುಗಳನ್ನು ತಜ್ಞರ ಪರಿಶೀಲನಾ ಸಮಿತಿಯ ಮುಂದೆ  ಇರಿಸಲಾಗಿತ್ತು. ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ ಮತ್ತು ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ವಿಭಾಗೀಯ ಪರಿಶೀಲನಾ ಸಮಿತಿಯಿಂದ ಮೌಲ್ಯಮಾಪನ ಮಾಡದೆ ನೇರವಾಗಿ ತಜ್ಞರ ಪರಿಶೀಲನಾ ಸಮಿತಿಯ ಮುಂದೆ ಇಡಲಾಗಿತ್ತು. ಶಿಫಾರಸ್ಸುಗಳನ್ನು ಅಂತಿಮವಾಗಿ ಉನ್ನತ ಪ್ರಾಧಿಕಾರ   ಅಂದರೆ ಪ್ರಶಸ್ತಿ ರಚನಾ ಪ್ರಾಧಿಕಾರ (ಎಎಂಎ)ದ ಮೂಲಕ ಮೌಲ್ಯಮಾಪನ ಮಾಡಿ  ಪರಿಗಣಿಸಲಾಗಿದೆ.

 

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022 ಪುರಸ್ಕೃತರು

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು- 2022ಕ್ಕಾಗಿ ಒಟ್ಟು 173 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. ಮೂರು ಪ್ರಶಸ್ತಿ ವಿಭಾಗಗಳ ಅಡಿಯಲ್ಲಿ ಮಾನ್ಯ ನಾಮನಿರ್ದೇಶನಗಳ ಸಂಖ್ಯೆ 168. ಒಟ್ಟು 12 ಪ್ರಶಸ್ತಿಗಳಲ್ಲಿ, ಪ್ರಶಸ್ತಿ ರಚನಾ ಪ್ರಾಧಿಕಾರವು ಅಂತಿಮವಾಗಿ 4 ವೈಯಕ್ತಿಕ ಪ್ರಶಸ್ತಿಗಳು, 3 ತಂಡದ ಪ್ರಶಸ್ತಿಗಳು ಮತ್ತು 3 ಜಂಟಿ ಪ್ರಶಸ್ತಿಗಳನ್ನು ಒಳಗೊಂಡಿರುವ 10 ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ. 4 ವೈಯಕ್ತಿಕ ಪ್ರಶಸ್ತಿಯು ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ ಮತ್ತು ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿಗಾಗಿ ಮತ್ತೊಂದು ಪ್ರಶಸ್ತಿಯನ್ನು ಸಹ ಒಳಗೊಂಡಿದೆ.  ಪ್ರಶಸ್ತಿಗಳ  ವಿವರ ಹೀಗಿವೆ :-

ಕ್ರಮ ಸಂಖ್ಯೆ

ಪ್ರಶಸ್ತಿಗಳ ವಿಭಾಗ

ಪ್ರಶಸ್ತಿಗಳ ಸಂಖ್ಯೆ

1.

ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ

1

2.

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ

8

(3 ತಂಡ ಪ್ರಶಸ್ತಿಗಳು + 3 ಜಂಟಿ ಪ್ರಶಸ್ತಿಗಳು + 2 ವೈಯುಕ್ತಿಕ ಪ್ರಶಸ್ತಿಗಳು = 20 ಪ್ರಶಸ್ತಿ ಪುರಸ್ಕೃತರು) 

3.

ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ

1

 

ಒಟ್ಟು

 

10 ಪ್ರಶಸ್ತಿಗಳು 

(22 ಪ್ರಶಸ್ತಿ ಪುರಸ್ಕೃತರು)

 

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ2022ರ ಪಟ್ಟಿ ಈ ಕೆಳಗಿನಂತಿದೆ :

ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ – 2022

ಡಾ. ಓಂ ನಾರಾಯನ್‌ ಭಾರ್ಗವ

ಗೌರವ ಪ್ರಾಧ್ಯಾಪಕರು

ಭೂವಿಜ್ಞಾನ ವಿಭಾಗ

ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ

ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ  – 2022

ವಿಭಾಗ- I - ಖನಿಜ ಅನ್ವೇಷಣೆ ಮತ್ತು ಪರಿಶೋಧನೆ  

ಕ್ಷೇತ್ರ (i): ಆರ್ಥಿಕ ಮತ್ತು/ಅಥವಾ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ನವೀನ ತಂತ್ರಗಳ ಅನ್ವಯದ ಖನಿಜ ಶೋಧನೆ ಮತ್ತು ಪರಿಶೋಧನೆ (ಪಳೆಯುಳಿಕೆ ಇಂಧನಗಳನ್ನು ಹೊರತುಪಡಿಸಿ)

3. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಂಡ :

i. ಶ್ರೀಮತಿ. ಸೌಭಾಗ್ಯಲಕ್ಷ್ಮಿ ಸಾಹೂ, ಭೂವಿಜ್ಞಾನಿ

ii ಶ್ರೀಮತಿ. ಸ್ವಪ್ನಿತಾ ಬ್ರಹ್ಮ, ಭೂವಿಜ್ಞಾನಿ

iii ಶ್ರೀ ಯೋಗೀಶ ಎಸ್.ಎನ್., ಭೂವಿಜ್ಞಾನಿ

iv. ಶ್ರೀ ಪಿ. ರಾಜೇಶ್ ದುರೈ, ನಿರ್ದೇಶಕರು

 

ತಂಡ ಪ್ರಶಸ್ತಿ

 

 

 

 

4. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಂಡ :

v. ಶ್ರೀ ಜಿತೇಂದ್ರ ಕುಮಾರ್, ಭೂವಿಜ್ಞಾನಿ

vi. ಶ್ರೀ ನ್ಗಾಜಿಪ್ಮಿ ಚಾಹಾಂಗ್, ಭೂವಿಜ್ಞಾನಿ

vii. ಶ್ರೀ ಬಿಕಾಶ್ ಕುಮಾರ್ ಆಚಾರ್ಯ,  ಹಿರಿಯ ಭೂವಿಜ್ಞಾನಿ

viii. ಶ್ರೀ ಅನಿಂದ್ಯ ಭಟ್ಟಾಚಾರ್ಯ, ನಿರ್ದೇಶಕರು

 ತಂಡ ಪ್ರಶಸ್ತಿ

 

4. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಂಡ :

i. ಶ್ರೀಮತಿ. ಸೌಭಾಗ್ಯಲಕ್ಷ್ಮಿ ಸಾಹೂ, ಭೂವಿಜ್ಞಾನಿ

ii ಶ್ರೀಮತಿ. ಸ್ವಪ್ನಿತಾ ಬ್ರಹ್ಮ, ಭೂವಿಜ್ಞಾನಿ

iii ಶ್ರೀ ಯೋಗೀಶ ಎಸ್.ಎನ್., ಭೂವಿಜ್ಞಾನಿ

iv. ಶ್ರೀ ಪಿ. ರಾಜೇಶ್ ದುರೈ, ನಿರ್ದೇಶಕರು

ತಂಡ ಪ್ರಶಸ್ತಿ

 

ಕ್ಷೇತ್ರ (ii): ಕಲ್ಲಿದ್ದಲು, ಲಿಗ್ನೈಟ್ ಮತ್ತು ಕಲ್ಲಿದ್ದಲು ಬೆಡ್ ಮೀಥೇನ್ ಅನ್ವೇಷಣೆ ಮತ್ತು ಆರ್ಥಿಕ ಮತ್ತು/ಅಥವಾ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ನವೀನ ತಂತ್ರಗಳ ಅಳವಡಿಕೆ ಮತ್ತು ತೈಲ, ನೈಸರ್ಗಿಕ ಅನಿಲ, ಶೇಲ್ ಗ್ಯಾಸ್ ಮತ್ತು ಗ್ಯಾಸ್ ಹೈಡ್ರೇಟ್ಗಳ ಅನ್ವೇಷಣೆ ಮತ್ತು ಪರಿಶೋಧನೆ (ಯೋಜನಾ ಅಭಿವೃದ್ಧಿ ಮತ್ತು ಶೋಷಣೆಗೆ ಕಾರಣವಾಗುವ ಯೋಜನೆ ಸೇರಿದಂತೆ ಸಂಪನ್ಮೂಲಗಳು ಮತ್ತು ಜಲಾಶಯ ನಿರ್ವಹಣೆ)

5. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಂಡ :

  1. ಡಾ.ಸತ್ಯ ನಾರಾಯಣ ಸೇಠಿ, ಭೂವಿಜ್ಞಾನಿ
  2. ಶ್ರೀ ನಿತಿನ್ ನರೇಂದ್ರ ರಾವುತ್, ಭೂವಿಜ್ಞಾನಿ
  3. ಶ್ರೀ ರಾಕೇಶ್ ದೀಪಂಕರ್, ಸೀನಿಯರ್ ಭೂವಿಜ್ಞಾನಿ
  4. ಶ್ರೀ ಸುಮಿತ್ ಜೈಸ್ವಾಲ್, ಭೂವಿಜ್ಞಾನಿ

 

 

 

ತಂಡ ಪ್ರಶಸ್ತಿ

 

 

 

ವಿಭಾಗ- II - ಗಣಿಗಾರಿಕೆ, ಖನಿಜ ಲಾಭ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ

ಕ್ಷೇತ್ರ (iv) ಖನಿಜ ಸಂಸ್ಕರಣೆ (ಖನಿಜ ಸಂಸ್ಕರಣೆ, ಕಡಿಮೆ ದರ್ಜೆಯ ಅದಿರುಗಳ ಬಳಕೆಗಾಗಿ ಯೋಜನಾ ಅಭಿವೃದ್ಧಿ ಮತ್ತು ಮೌಲ್ಯವರ್ಧಿತ ಖನಿಜ ಉತ್ಪನ್ನಗಳ ಉತ್ಪಾದನೆ ಮತ್ತು ಖನಿಜ ಅರ್ಥಶಾಸ್ತ್ರ) ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ (ಗಣಿ ಮುಚ್ಚುವಿಕೆ, ಯೋಜನೆಯ ಅಭಿವೃದ್ಧಿ, ಸಾಂಸ್ಥಿಕ ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ)

ಶ್ರೀ ಪಂಕಜ್ ಕುಮಾರ್ ಸತೀಜ

ವ್ಯವಸ್ಥಾಪಕ ನಿರ್ದೇಶಕರು,

ಟಾಟಾ ಸ್ಟೀಲ್ ಮೈನಿಂಗ್ ಲಿಮಿಟೆಡ್

ನಯಾಪಲ್ಲಿ, ಭುವನೇಶ್ವರ, ಒಡಿಶಾ

 

ವೈಯುಕ್ತಿಕ ಪ್ರಶಸ್ತಿ

 

 

 

 

  ವಿಭಾಗ- III - ಮೂಲ ಭೂವಿಜ್ಞಾನ

ಕ್ಷೇತ್ರ (v): ಮೂಲಭೂತ ಭೂವಿಜ್ಞಾನಗಳು -  ಸ್ಟ್ರಾಟಿಗ್ರಫಿ, ಸ್ಟ್ರಕ್ಚರಲ್ ಜಿಯಾಲಜಿ, ಪ್ಯಾಲಿಯಂಟಾಲಜಿ, ಜಿಯೋಡೈನಾಮಿಕ್ಸ್, ಜಿಯೋಕೆಮಿಸ್ಟ್ರಿ, ಜಿಯೋಕ್ರೊನಾಲಜಿ ಮತ್ತು ಐಸೊಟೋಪ್ ಜಿಯಾಲಜಿ, ಓಷನ್ ಡೆವಲಪ್‌ಮೆಂಟ್ (ಸಾಗರಶಾಸ್ತ್ರ ಮತ್ತು ಸಾಗರ ಭೂವಿಜ್ಞಾನ), ಗ್ಲೇಶಿಯಾಲಜಿ ಮತ್ತು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಸಂಶೋಧನೆ, ಜಿಯೋ-ಸೈಂಟಿಫಿಕ್ ಎಕ್ಸ್‌ಪೆಡಿಶನ್ಸ್;  ಹಾಗು ಭೂವೈಜ್ಞಾನಿಕ ಮತ್ತು ಭೂರಾಸಾಯನಿಕ ದಾಖಲೆ ಮತ್ತು ಸಮೀಕ್ಷೆ, ಮತ್ತು ವ್ಯವಸ್ಥಿತ ವಿಷಯಾಧಾರಿತ ದಾಖಲೆ ಸೇರಿದಂತೆ ವಿಜ್ಞಾನ ಸಮೀಕ್ಷೆಗಳು/ಬೇಸ್‌ಲೈನ್ ಜಿಯೋಸೈನ್ಸ್ ದತ್ತಾಂಶ ಸಂಗ್ರಹಣೆ

1. ಪ್ರೊ. ಸೈಬಲ್ ಗುಪ್ತಾ,

ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರ ವಿಭಾಗ

ಐಐಟಿ ಖರಗ್‌ಪುರ, ಪಶ್ಚಿಮ ಬಂಗಾಳ

 

ಜಂಟಿ ಪ್ರಶಸ್ತಿ

 

 i. ಡಾ. ವಲಿಯೂರ್ ರೆಹಮಾನ್,

  ವಿಜ್ಞಾನಿ ಇ,

  ಧ್ರುವ ಮತ್ತು ಸಾಗರ ಸಂಶೋಧನೆಗಾಗಿ ರಾಷ್ಟ್ರೀಯ ಕೇಂದ್ರ, ಭೂ ವಿಜ್ಞಾನ ಸಚಿವಾಲಯ, ಗೋವಾ

  

                             ಮತ್ತು

 

ii. ಪ್ರೊ. ದೀಪಕ್ ಚಂದ್ರ ಪಾಲ್,

ಭೂವೈಜ್ಞಾನಿಕ ವಿಜ್ಞಾನ ಇಲಾಖೆ,

ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ

 

 

ವೈಯುಕ್ತಿಕ ಪ್ರಶಸ್ತಿ

 


ವೈಯುಕ್ತಿಕ ಪ್ರಶಸ್ತಿ

 

 

ಜಂಟಿ ಪ್ರಶಸ್ತಿ

  ವಿಭಾಗ- IV - ಅನ್ವಯಿಕ ಭೂವಿಜ್ಞಾನ

ಕ್ಷೇತ್ರ (vi): ಅನ್ವಯಿಕ ಭೂವಿಜ್ಞಾನ: ಎಂಜಿನಿಯರಿಂಗ್ ಭೂವಿಜ್ಞಾನ, ಭೂಶಾಖದ ಶಕ್ತಿ, ಸೀಸ್ಮೋಟೆಕ್ಟೋನಿಕ್ಸ್, ಜಿಯೋಸ್ಟಾಟಿಸ್ಟಿಕ್ಸ್, ರಿಮೋಟ್ ಸೆನ್ಸಿಂಗ್ ಮತ್ತು ಜಿಯೋ-ಮಾಹಿತಿ ವ್ಯವಸ್ಥೆ (ಪ್ರಾದೇಶಿಕ ದತ್ತಾಂಶ ನಿರ್ವಹಣೆ ಅಪ್ಲಿಕೇಶನ್‌ಗಳು ಮತ್ತು ದತ್ತಾಂಶ ಏಕೀಕರಣ ಸೇರಿದಂತೆ); ಅಂತರ್ಜಲ ಪರಿಶೋಧನೆ (ಯೋಜನಾ ಅಭಿವೃದ್ಧಿ, ಹೈಡ್ರೋಜಿಯೋಲಾಜಿಕಲ್ ಅಧ್ಯಯನಗಳು ಮತ್ತು ಅಂತರ್ಜಲ ಸಂಪನ್ಮೂಲಗಳ ನಿರ್ವಹಣೆ ಸೇರಿದಂತೆ; ಗಣಿಗಾರಿಕೆ, ನಗರ, ಕೈಗಾರಿಕಾ, ಕರಾವಳಿ ಮತ್ತು ಮರುಭೂಮಿ ನಿರ್ವಹಣೆ, ಪ್ಯಾಲಿಯೋಕ್ಲೈಮೇಟ್, ಪ್ಯಾಲಿಯೋ ಎನ್ವಿರಾನ್ಮೆಂಟ್, ವೈದ್ಯಕೀಯ ಭೂವಿಜ್ಞಾನ, ಹವಾಮಾನ ಬದಲಾವಣೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಅವುಗಳ ಪ್ರಭಾವಕ್ಕೆ ಸಂಬಂಧಿಸಿದ ಅಧ್ಯಯನಗಳಿಗೆ ಸಂಬಂಧಿಸಿದ ಭೂ-ಪರಿಸರ ಅಧ್ಯಯನಗಳು.

 

ಜಂಟಿ ಪ್ರಶಸ್ತಿ-

 

ii ಡಾ.ಎ.ಎಸ್. ಹರೀಶ್ ಬಹುಗುಣ

ನಿರ್ದೇಶಕ,

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಜಮ್ಮು

 

                     ಮತ್ತು

 

iii ಡಾ.ಎ.ಎಸ್. ಕೀಸರಿ ತಿರುಮಲೇಶ್

ವೈಜ್ಞಾನಿಕ ಅಧಿಕಾರಿ,

ಭಾಭಾ ಪರಮಾಣು ಸಂಶೋಧನಾ ಕೇಂದ್ರ, ಮುಂಬೈ 

 

 

 

 

ಜಂಟಿ ಪ್ರಶಸ್ತಿ

 

 

ಕ್ಷೇತ್ರ (viii): ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು ಮತ್ತು ಸುನಾಮಿಯಂತಹ ನೈಸರ್ಗಿಕ ಅಪಾಯಗಳಿಗೆ ಸಂಬಂಧಿಸಿದ ವೈಜ್ಞಾನಿಕ ಅಧ್ಯಯನಗಳನ್ನು ಒಳಗೊಂಡಂತೆ ನೈಸರ್ಗಿಕ ಅಪಾಯದ ತನಿಖೆಗಳು.

 ಜಂಟಿ ಪ್ರಶಸ್ತಿ:

i. ಡಾ. ಸೈಬಲ್ ಘೋಷ್

ಉಪ ಮಹಾನಿರ್ದೇಶಕರು,

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಕೋಲ್ಕತ್ತಾ

 

                     ಮತ್ತು

 

ii ಡಾ.ವಿಕ್ರಂ ಗುಪ್ತಾ

ವಿಜ್ಞಾನಿ - ಎಫ್,

ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ, ಡೆಹ್ರಾಡೂನ್

 

 

ಜಂಟಿ ಪ್ರಶಸ್ತಿ

 

 

 

ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ– 2022

ಡಾ. ಅಮಿಯಾ ಕುಮಾರ್ ಸಮಲ್

ಸಹಾಯಕ ಪ್ರಾಧ್ಯಾಪಕ

ಭೂವಿಜ್ಞಾನ ವಿಭಾಗ

ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ

 

****



(Release ID: 1941565) Visitor Counter : 106