ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದ ಮಹತ್ವದ ನಿರ್ಧಾರ; ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಕ್ಲೇಮುಗಳನ್ನು ಸಲ್ಲಿಸಲು ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಿದ ಸಚಿವರು


ಸಹಾರಾ ಸಹಕಾರಿ ಸೊಸೈಟಿಗಳ ಸಮೂಹದ ಠೇವಣಿದಾರರು ಸಿಆರ್ ಸಿಎಸ್-ಸಹಾರಾ ಮರುಪಾವತಿ ಪೋರ್ಟಲ್ https://mocrefund.crcs.gov.in ನಲ್ಲಿ ತಮ್ಮ ಕ್ಲೇಮುಗಳನ್ನು ಸಲ್ಲಿಸಲು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ ಸಿಗಳು) ಸಹಾಯ ಮಾಡುತ್ತವೆ.

Posted On: 19 JUL 2023 3:32PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಕ್ಲೇಮುಗಳನ್ನು ಸಲ್ಲಿಸಲು ಸಿಆರ್ ಸಿಎಸ್-ಸಹಾರಾ ಮರುಪಾವತಿ ಪೋರ್ಟಲ್‌ನಲ್ಲಿ ಅನುಕೂಲ ಕಲ್ಪಿಸಿದ್ದಾರೆ. ಸಹಾರಾ ಸಹಕಾರಿ ಸಂಘಗಳ ಸಮೂಹದ ನೈಜ ಠೇವಣಿದಾರರಿಗೆ ಮರುಪಾವತಿ ಒದಗಿಸುವ ಪ್ರಕ್ರಿಯೆಗೆ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ ಸಿಗಳು) ಸಹಾಯ ಮಾಡುತ್ತದೆ ಸಿಆರ್ ಸಿಎಸ್-ಸಹಾರಾ ಮರುಪಾವತಿ ಪೋರ್ಟಲ್‌ನಲ್ಲಿ ಈ ಜನರು ತಮ್ಮ ಕ್ಲೇಮುಗಳನ್ನು ಸಲ್ಲಿಸಬಹುದು. ಸಚಿವ ಅಮಿತ್ ಶಾ ಅವರು 2023 ಜುಲೈ 18ರಂದು ನವದೆಹಲಿಯಲ್ಲಿ ಕೇಂದ್ರೀಯ ರಿಜಿಸ್ಟ್ರಾರ್ ಆಫ್ ಕೋಆಪರೇಟಿವ್ ಸೊಸೈಟೀಸ್ (ಸಿಆರ್ ಸಿಎಸ್)-ಸಹಾರಾ ಮರುಪಾವತಿ ಪೋರ್ಟಲ್ https://mocrefund.crcs.gov.in ಅನ್ನು ಅನಾವರಣಗೊಳಿಸಿದರು.

ದೇಶಾದ್ಯಂತ ಹರಡಿರುವ 5.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು ತಮ್ಮ ಕೇಂದ್ರಗಳಲ್ಲಿ ಅಂತರ್ಜಾಲ ಸಂಪರ್ಕ, ಕಂಪ್ಯೂಟರ್, ಪ್ರಿಂಟರ್ ಮತ್ತು ಸ್ಕ್ಯಾನರ್ ಇತ್ಯಾದಿ ಅಗತ್ಯ ಸೌಲಭ್ಯಗಳೊಂದಿಗೆ 300ಕ್ಕಿಂತ ಹೆಚ್ಚಿನ ವಿದ್ಯುನ್ಮಾನ-ಸೇವೆಗಳನ್ನು ಒದಗಿಸುತ್ತಿವೆ. ಸಿಆರ್ ಸಿಎಸ್-ಸಹಾರಾ ಮರುಪಾವತಿ ಪೋರ್ಟಲ್‌ನಲ್ಲಿ ತಮ್ಮ ಕ್ಲೇಮುಗಳನ್ನು ಸಲ್ಲಿಸಲು ನೈಜ ಠೇವಣಿದಾರರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಿಂದ ಸಹಾಯ ಪಡೆಯಬಹುದು.

ಸಹಾರಾದ ನೈಜ ಠೇವಣಿದಾರರಿಗೆ ಸಹಾಯ ಮಾಡಲು ತನ್ನ ಎಲ್ಲಾ ಗ್ರಾಮ ಮಟ್ಟದ ಉದ್ಯಮಶೀಲರಿಗೆ ಸಿಎಸ್ಸಿ-ಎಸ್ಪಿವಿ ಮಾಹಿತಿ ನೀಡಿದೆ. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ವ್ಯಕ್ತಿಗಳು ಕ್ಲೇಮುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ತನ್ನ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.

ಸಹಾರಾ  ಸಹಕಾರಿ ಸಂಘಗಳ ಸಮೂಹದ ನೈಜ ಠೇವಣಿದಾರರಿಂದ ಕ್ಲೇಮ್‌ಗಳನ್ನು ಸಲ್ಲಿಸಲು ಸಿಆರ್ ಸಿಎಸ್-ಸಹಾರಾ ರೀಫಂಡ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ - ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್, ಸಹಾರಾಯನ್ ಯುನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್, ಹಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಇವು ಸಹಾರಾ  ಸಹಕಾರಿ ಸಂಘಗಳ ಸಮೂಹಕ್ಕೆ ಸೇರಿವೆ.

 

****

 



(Release ID: 1940756) Visitor Counter : 124