ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇರಳದ ಮಾಜಿ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

प्रविष्टि तिथि: 18 JUL 2023 10:09AM by PIB Bengaluru

ಕೇರಳದ ಮಾಜಿ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಈ ಹಿಂದೆ ಇವರಿಬ್ಬರೂ ತಮ್ಮ ತಮ್ಮ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ, ಶ್ರೀ ಚಾಂಡಿ ಅವರೊಂದಿಗಿನ ನಡೆಸಿದ ವಿವಿಧ ಸಂವಾದಗಳನ್ನು ಶ್ರೀ ಮೋದಿಯವರು ನೆನಪಿಸಿಕೊಂಡರು.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;

“ಶ್ರೀ ಉಮ್ಮನ್ ಚಾಂಡಿ ಜೀ ಅವರ ನಿಧನದೊಂದಿಗೆ, ಸಾರ್ವಜನಿಕ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮತ್ತು ಕೇರಳದ ಪ್ರಗತಿಗೆ ಶ್ರಮಿಸಿದ ವಿನಮ್ರ ಮತ್ತು ಸಮರ್ಪಿತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ವಿಶೇಷವಾಗಿ ನಾವಿಬ್ಬರೂ ನಮ್ಮ ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ ಮತ್ತು ನಂತರ ನಾನು ದೆಹಲಿಗೆ ತೆರಳಿದಾಗ, ನಾನು ಅವರೊಂದಿಗೆ ನಡೆಸಿದ ವಿವಿಧ ಸಂವಾದಗಳನ್ನು ನೆನಪಿಸಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ಇವೆ. ಅವರ ಆತ್ಮಕೆ ಶಾಂತಿ ಸಿಗಲಿ."

***


(रिलीज़ आईडी: 1940497) आगंतुक पटल : 151
इस विज्ञप्ति को इन भाषाओं में पढ़ें: Assamese , Malayalam , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu