ಕಲ್ಲಿದ್ದಲು ಸಚಿವಾಲಯ

ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆ: ಕಲ್ಲಿದ್ದಲು ಸಚಿವಾಲಯ


ವಿದ್ಯುತ್ ಸ್ಥಾವರಗಳೊಂದಿಗೆ ಕಲ್ಲಿದ್ದಲು ದಾಸ್ತಾನು 33.46 ಮಿಲಿಯನ್ ಟನ್ ತಲುಪಿದೆ, 28% ರಷ್ಟು ಹೆಚ್ಚಳ

ಭಾರತೀಯ ರೈಲ್ವೆಯಿಂದ ಸಾಕಷ್ಟು ರೇಕ್ಗಳು ಲಭ್ಯವಿವೆ

Posted On: 18 JUL 2023 3:48PM by PIB Bengaluru

ದೇಶದ ಉಷ್ಣ ವಿದ್ಯುತ್ ಸ್ಥಾವರಗಳಿಗೆ (ಟಿಪಿಪಿ) ಸಾಕಷ್ಟು ಕಲ್ಲಿದ್ದಲು ಲಭ್ಯತೆ ಇದೆ ಎಂದು ಕಲ್ಲಿದ್ದಲು ಸಚಿವಾಲಯ ಸ್ಪಷ್ಟಪಡಿಸಿದೆ. 16ನೇ ಜುಲೈ 2023 ರಂತೆ, ಥರ್ಮಲ್ ಪವರ್ ಪ್ಲಾಂಟ್ ಅಂಡ್ ಕಲ್ಲಿದ್ದಲು ದಾಸ್ತಾನು 33.46 ಮಿಲಿಯನ್ ಟನ್ (MT) ತಲುಪಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡ 28ರಷ್ಟು ಹೆಚ್ಚಾಗಿದೆ. ಗಣಿ ತುದಿಯಲ್ಲಿರುವ ಪಿಟ್ಹೆಡ್ ಕಲ್ಲಿದ್ದಲು ದಾಸ್ತಾನು ಮತ್ತು TPP ಗಳು ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಕಲ್ಲಿದ್ದಲು ಲಭ್ಯತೆ ಕಳೆದ ವರ್ಷ 76.85 MT ಇತ್ತು, ಈ ಬಾರಿ ಅದು 103 MT ಆಗಿದೆ. ಇದು ಶೇಕಡ 34ರಷ್ಟು ಹೆಚ್ಚಾಗಿದೆ. ಸಚಿವಾಲಯವು ಎಲ್ಲಾ ಸೆಂಟ್ರಲ್ ಜೆನ್ಕೋಸ್ ಮತ್ತು ಸ್ಟೇಟ್ ಜೆನ್ಕೋಸ್ನೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಿದೆ. ವಿದ್ಯುತ್ ವಲಯಕ್ಕೆ ಕಲ್ಲಿದ್ದಲಿನ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜುಲೈ 2023 ರಲ್ಲಿ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ಕಲ್ಲಿದ್ದಲು ಸಚಿವಾಲಯವು ಹೇಳಿದೆ. ವಾಸ್ತವವಾಗಿ, ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆಯು ಬಹಳ ಕಡಿಮೆಯಾಗಿದೆ. ಮುಂಗಾರು ಹಂಗಾಮಿಗೆ ಗಣಿವಾರು ಮುಂಗಡ ಯೋಜನೆ ಮೂಲಕ ಇದು ಸಾಧ್ಯವಾಗಿದೆ. ಕಲ್ಲಿದ್ದಲು ಕಂಪನಿಗಳು ದೊಡ್ಡ ಗಣಿಗಳಿಂದ ಅಡೆತಡೆಯಿಲ್ಲದೆ ಸ್ಥಳಾಂತರಿಸಲು ಸಿಮೆಂಟ್ ರಸ್ತೆಗಳ ನಿರ್ಮಾಣವನ್ನು ಕೈಗೊಂಡಿವೆ. ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ಘಟಕಗಳ ಮೂಲಕ ಒಂಬತ್ತು ಕಲ್ಲಿದ್ದಲು ಗಣಿಗಳಿಂದ ರೈಲ್ವೆ ಸೈಡಿಂಗ್ಗಳಿಗೆ ಸಾಗಣೆಯನ್ನು ಪ್ರಾರಂಭಿಸಲಾಗಿದೆ. ಕಲ್ಲಿದ್ದಲು ಕಂಪನಿಗಳು ಮೇಲಿನ ಸ್ತರಗಳಿಂದ ಕಲ್ಲಿದ್ದಲನ್ನು ಹೊರತೆಗೆಯಲು ಯೋಜಿಸಿವೆ, ಇದರ ಪರಿಣಾಮವಾಗಿ 2023 ರ ಏಪ್ರಿಲ್ 1 ರಿಂದ ಜುಲೈ 16 ರವರೆಗೆ ಕಲ್ಲಿದ್ದಲು ಉತ್ಪಾದನೆಯು 258.57 ಮಿಲಿಯನ್ ಟನ್ (MT) ಆಗಿದೆ. ಕಳೆದ ವರ್ಷ 236.69 MT ಇತ್ತು.

ಅದೇ ಸಮಯದಲ್ಲಿ, ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಯು 233 MT ಆಗಿದೆ ಕಳೆದ ವರ್ಷ ಇದು 224 MT ಇತ್ತು. ವಾಸ್ತವವಾಗಿ, ಗಣನೀಯ ಲಭ್ಯತೆಯಿಂದಾಗಿ, ಕಲ್ಲಿದ್ದಲು ಕಂಪನಿಗಳು ಈ ಅವಧಿಯಲ್ಲಿ ಅನಿಯಂತ್ರಿತ ವಲಯಕ್ಕೆ ಭಾರಿ ಹೆಚ್ಚುವರಿ ಪ್ರಮಾಣವನ್ನು ಪೂರೈಸಿವೆ. ಈ ವರ್ಷ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಲ್ಲಿನ ಬೆಳವಣಿಗೆಯು ಕೇವಲ 2.04 % ಆಗಿದ್ದರೆ ಕಲ್ಲಿದ್ದಲು ಉತ್ಪಾದನೆಯಲ್ಲಿ 9% ಕ್ಕಿಂತ ಹೆಚ್ಚಿನ ಬೆಳವಣಿಗೆಯಾಗಿದೆ ಎಂಬುದನ್ನು ಗಮನಿಸಬಹುದು.

ರೈಲ್ವೇ ರೇಕ್ಗಳ ಲಭ್ಯತೆಗೆ ಸಂಬಂಧಿಸಿದಂತೆ, ರೈಲ್ವೇ ಸಚಿವಾಲಯವು ಎಲ್ಲಾ ಅಂಗಸಂಸ್ಥೆಗಳಿಗೆ ಸಾಕಷ್ಟು ರೇಕ್ಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ, ಇದು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನುಗಳ ಲಭ್ಯತೆಗೆ ಅವಕಾಶ ಮಾಡಿಕೊಟ್ಟಿದೆ. ಕಲ್ಲಿದ್ದಲು, ರೈಲ್ವೆ ಮತ್ತು ವಿದ್ಯುತ್ ಸಚಿವಾಲಯಗಳು ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿಕಟ ಸಮನ್ವಯ ಕಾರ್ಯನಿರ್ವಹಿಸುತ್ತಿವೆ.

ಕಲ್ಲಿದ್ದಲು ಲಭ್ಯತೆಯಿಲ್ಲದ ಕಾರಣ ಯಾವುದೇ ವಿದ್ಯುತ್ ಸ್ಥಾವರವನ್ನು ಮುಚ್ಚಲಾಗಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಸ್ಪಷ್ಟಪಡಿಸಿದೆ. ಮುಚ್ಚಲ್ಪಟ್ಟಿರುವ ಆ ಸ್ಥಾವರಗಳು ಬೇರೆ ಕೆಲವು ಕಾರಣಗಳಿಂದ ಮುಚ್ಚಿವೆ. ಕಲ್ಲಿದ್ದಲು ಕೊರತೆಯಿಂದ ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

****



(Release ID: 1940494) Visitor Counter : 106