ಪ್ರಧಾನ ಮಂತ್ರಿಯವರ ಕಛೇರಿ
ಭಾರತದ G20 ಪ್ರೆಸಿಡೆನ್ಸಿಯ ಸಮನ್ವಯ ಸಮಿತಿಯ 6 ನೇ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ವಹಿಸಿದ್ದರು
ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ G-20 ಶೃಂಗಸಭೆಯ ಆಡಳಿತಾತ್ಮಕ ವ್ಯವಸ್ಥೆಗಳ ಪರಿಶೀಲನೆ
G20 ಶೃಂಗಸಭೆಯನ್ನು ಯಶಸ್ವಿಗೊಳಿಸಲು ಎಲ್ಲಾ ಏಜೆನ್ಸಿಗಳು "ಸಂಪೂರ್ಣ ಸರ್ಕಾರ" ಮಾದರಿಯಲ್ಲಿ ಕೆಲಸ ಮಾಡಬೇಕು: ಡಾ. ಪಿ.ಕೆ. ಮಿಶ್ರಾ
ವಿವಿಧ ಏಜೆನ್ಸಿಗಳು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಶೃಂಗಸಭೆಯ ಸ್ಥಳದಲ್ಲಿ ವಿವಿಧ ರೀತಿಯ ಕಾರ್ಯಾಚರಣೆ
Posted On:
17 JUL 2023 8:05PM by PIB Bengaluru
ಭಾರತದ G20 ಪ್ರೆಸಿಡೆನ್ಸಿಯ ಸಮನ್ವಯ ಸಮಿತಿಯ 6 ನೇ ಸಭೆಯು ಇಂದು ನವದೆಹಲಿಯ ಪ್ರಗತಿ ಮೈದಾನದ ಇಂಟರ್ ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (IECC) ನಲ್ಲಿ ನಡೆಯಿತು. ಭಾರತದ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 2023ರ ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಸಂಬಂಧಿಸಿದ ಪೂರ್ವಸಿದ್ಧತಾ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ, ಸಮಿತಿಯು ಶೃಂಗಸಭೆಯ ಸ್ಥಳದಲ್ಲಿ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್, ಭದ್ರತೆ, ವಿಮಾನ ನಿಲ್ದಾಣದ ಸಮನ್ವಯ, ಮಾಧ್ಯಮ, ಮೂಲಸೌಕರ್ಯ ನವೀಕರಣಗಳು ಮತ್ತು ದೆಹಲಿ ಮತ್ತು ನೆರೆಯ ರಾಜ್ಯಗಳಲ್ಲಿನ ವ್ಯವಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಎಲ್ಲಾ ಏಜೆನ್ಸಿಗಳು G20 ಶೃಂಗಸಭೆಯನ್ನು ಯಶಸ್ವಿಗೊಳಿಸಲು "ಸಂಪೂರ್ಣ ಸರ್ಕಾರ" ವಿಧಾನದಲ್ಲಿ ಕೆಲಸ ಮಾಡಬೇಕು ಎಂದು ಡಾ. ಮಿಶ್ರಾ ಕರೆ ನೀಡಿದರು.
ಸಮಿತಿಯ ಸದಸ್ಯರು ವಿವಿಧ ಸಭೆಗಳಿಗೆ ಪ್ರಸ್ತಾಪಿಸಿದ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ಸೂಕ್ಷ್ಮ ವಿವರಗಳನ್ನು ಪರಿಶೀಲಿಸಿದರು. ವಿವಿಧ ಏಜೆನ್ಸಿಗಳು ನಾನಾ ಕಾರ್ಯಾಚರಣೆ ನಡೆಸಿತು. ಸಮಿತಿಯು ಮುಂಬರುವ G20 ಶೃಂಗಸಭೆಗೆ ವಿವಿಧ ಪೂರ್ವಸಿದ್ಧತಾ ಅಂಶಗಳ ಕುರಿತು ಮಾರ್ಗದರ್ಶನ ಮತ್ತು ನಿರ್ದೇಶನವನ್ನು ನೀಡಿತು. ಮುಂದಿನ ಎರಡು ವಾರಗಳಲ್ಲಿ ಹೆಚ್ಚಿನ ಪರಿಶೀಲನೆ ನಡೆಸಲು ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಯಿತು.
ಸಮನ್ವಯ ಸಮಿತಿಯ ಸಭೆಯು ಇಲ್ಲಿಯವರೆಗೆ ನಡೆದ G20 ಸಭೆಗಳು ಮತ್ತು ಭಾರತದ G20 ಪ್ರೆಸಿಡೆನ್ಸಿಯ ಅಡಿಯಲ್ಲಿ ನಿಗದಿಪಡಿಸಲಾದ ಉಳಿದ ಸಭೆಗಳ ಪರಿಶೀಲನೆಗೆ ಅವಕಾಶವನ್ನು ಒದಗಿಸಿತು. G20 ಪ್ರೆಸಿಡೆನ್ಸಿ ಅಡಿಯಲ್ಲಿ, ಭಾರತವು ಇಲ್ಲಿಯವರೆಗೆ ದೇಶದ 55 ವಿವಿಧ ಸ್ಥಳಗಳಲ್ಲಿ 170 ಸಭೆಗಳನ್ನು ಆಯೋಜಿಸಿರುವ ಕುರಿತು ಸಭೆಯಲ್ಲಿ ಚರ್ಚೆಸಲಾಯಿತು. ಜುಲೈ ಮತ್ತು ಆಗಸ್ಟ್ 2023 ತಿಂಗಳುಗಳಲ್ಲಿ ಸಚಿವರ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಸಮನ್ವಯ ಸಮಿತಿಯು G 20 ರ ಭಾರತದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಮತ್ತು ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಸಂಪುಟದಿಂದ ಅಧಿಕಾರ ಪಡೆದಿದೆ. ಇಲ್ಲಿಯವರೆಗೆ ಸಮನ್ವಯ ಸಮಿತಿಯ ಐದು ಸಭೆಗಳು ನಡೆದಿವೆ. ಇದರ ಜೊತೆಯಲ್ಲಿ, ಭಾರತದ G20 ಪ್ರೆಸಿಡೆನ್ಸಿಗೆ ಸಂಬಂಧಿಸಿದ ನಿರ್ದಿಷ್ಟ ವಸ್ತುನಿಷ್ಠ ಮತ್ತು ವ್ಯವಸ್ಥಾಪನಾ ಸಮಸ್ಯೆಗಳನ್ನು ಚರ್ಚಿಸಲು ಹಲವಾರು ಸಭೆಗಳನ್ನು ನಡೆಸಲಾಗಿದೆ.
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿ.ಕೆ. ಸಕ್ಸೇನಾ, ಕ್ಯಾಬಿನೆಟ್ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ, ಇತರ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
****
(Release ID: 1940374)
Visitor Counter : 153
Read this release in:
Bengali
,
English
,
Khasi
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam