ಉಪರಾಷ್ಟ್ರಪತಿಗಳ ಕಾರ್ಯಾಲಯ

ಜನರ ಜೀವನವನ್ನು ಬದಲಾಯಿಸಲು ಉತ್ಸಾಹ, ಧ್ಯೇಯ ಮತ್ತು ಸಹಾನುಭೂತಿ ತೋರಿಸಿ: ಯುವ ಅಧಿಕಾರಿಗಳಿಗೆ ಉಪ ರಾಷ್ಟ್ರಪತಿ ಕರೆ


​​​​​​​ಭರವಸೆ ಕಳೆದುಕೊಂಡವರಿಗೆ ಸಂತೋಷ ನೀಡುವುದಕ್ಕಿಂತ ಹೆಚ್ಚು ಉತ್ಸಾಹದಾಯಕ ಕೆಲಸ ಮತ್ತೊಂದಿಲ್ಲ: ಉಪರಾಷ್ಟ್ರಪತಿ

ಉಪರಾಷ್ಟ್ರಪತಿಯನ್ನು ಭೇಟಿ ಮಾಡಿದ ಭಾರತೀಯ ಅಂಚೆ ಸೇವೆಯ ಅಧಿಕಾರಿಗಳು

Posted On: 14 JUL 2023 7:12PM by PIB Bengaluru

ಜನರ ಜೀವನವನ್ನು ಬದಲಾಯಿಸಲು ಉತ್ಸಾಹ, ಧ್ಯೇಯ ಮತ್ತು ಸಹಾನುಭೂತಿಯನ್ನು ತೋರಿಸಬೇಕು ಎಂದು ಯುವ ಅಧಿಕಾರಿಗಳಿಗೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಕರೆ ನೀಡಿದರು. ಇಂದು ಉಪ-ರಾಷ್ಟ್ರಪತಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ 2021 ಮತ್ತು 2022 ರ ಬ್ಯಾಚ್ನ ಭಾರತೀಯ ಅಂಚೆ ಸೇವೆಯ ಪ್ರೊಬೇಷನರ್ಸ್ ಜೊತೆ ಸಂವಾದ ನಡೆಸಿದ ಜಗದೀಪ್ ಧನಕರ್ ಅವರು "ಭರವಸೆಯನ್ನು ಕಳೆದುಕೊಂಡವರಿಗೆ ಸಂತೋಷವನ್ನು ನೀಡುವುದಕ್ಕಿಂತ ಹೆಚ್ಚು ಉತ್ಸಾಹದಾಯಕ ಮತ್ತು ತೃಪ್ತಿಕರ ಕೆಲಸ ಮತ್ತೊಂದಿಲ್ಲ" ಎಂದು ಹೇಳಿದರು.

ಭಾರತವು ಹಿಂದೆಂದೂ ಕಾಣದ ರೀತಿಯಲ್ಲಿಅಭಿವೃದ್ಧಿ ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳ ಕೊಡುಗೆ ಮತ್ತು ನಮ್ಮ ಕಠಿಣ ಪರಿಶ್ರಮಿ ರೈತರು ಮತ್ತು ಕಾರ್ಮಿಕರ ಪ್ರಯತ್ನಗಳಿಂದ ಭಾರತದ ಉದಯವು ಸುಸ್ಥಿರವಾಗಿದೆ. ಭಾರತದ ಜಾಗತಿಕ ಏರಿಕೆಯನ್ನು ತಡೆಯಲಾಗದು. "ಕೇವಲ ಒಂದು ದಶಕದ ಹಿಂದೆ, ನಾವು ಜಾಗತಿಕ ಆರ್ಥಿಕತೆಯಲ್ಲಿ 10 ನೇ ಸ್ಥಾನದಲ್ಲಿದ್ದೆವು ಮತ್ತು ಈಗ ನಾವು ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿದ್ದೇವೆ" ಎಂದು ತಿಳಿಸಿದರು.

ಯುವ ಆಫೀಸರ್ ಟ್ರೈನಿಗಳು 'ಬೆಳವಣಿಗೆಯ ರಾಯಭಾರಿಗಳು' ಮತ್ತು 'ಅಮೃತ್ ಕಾಲದ ಯೋಧರು' ಎಂದ ಉಪರಾಷ್ಟ್ರಪತಿಗಳು, ತಮ್ಮ ನಾವೀನ್ಯತೆಗಳು ಮತ್ತು ಕೌಶಲ್ಯಗಳೊಂದಿಗೆ ಭಾರತದ ಬೆಳವಣಿಗೆಯನ್ನು ವೇಗವಾಗಿ ಮಾಡಬೇಕಾಗಿದೆ. ದೇಶವು ಪರಿವರ್ತನೆಯ ನಿರ್ಣಾಯಕ ಕ್ಷಣದಲ್ಲಿದೆ. ನಾಗರಿಕ ಸೇವಕರು ಅಂತರ್ಗತ ಬೆಳವಣಿಗೆ, ಆರ್ಥಿಕ ಸೇರ್ಪಡೆ ಮತ್ತು ಸೇವಾ ವಿತರಣೆಯನ್ನು ಸುಲಭಗೊಳಿಸಬೇಕು ಎಂದು ಜಗದೀಪ್ ಧನಕರ್ ತಿಳಿಸಿದರು.

ಜನರಲ್ಲಿ ಶಿಸ್ತು ಮತ್ತು ರಾಷ್ಟ್ರೀಯತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಅಂಚೆ ಕಚೇರಿಯು ಮೂಲ ಕರ್ತವ್ಯಗಳನ್ನು ಪ್ರದರ್ಶಿಸಬೇಕು ಮತ್ತು ಪ್ರಚಾರ ಮಾಡಬೇಕು. ಇದು ನಾಗರಿಕರಲ್ಲಿ ವರ್ತನೆಯ ಬದಲಾವಣೆಯನ್ನು ತರುತ್ತದೆ ಎಂದು ಸಲಹೆ ನೀಡಿದರು. 

ಡಾಕಿಯಾ (ಪೋಸ್ಟ್ಮ್ಯಾನ್) ಅತ್ಯಂತ ಮಹತ್ವದ ವ್ಯಕ್ತಿ ಮತ್ತು ಭೂಮಿಯ ಪ್ರತಿಯೊಂದು ಭಾಗವನ್ನು ತಿಳಿದಿರುವ ವ್ಯಕ್ತಿ. ವಿವಿಧ ಮೂಲೆಗಳಿಗೂ ತೆರಳಿ ಪರಿಣಾಮಕಾರಿ ಸೇವೆಯನ್ನು ತಲುಪಿಸಲು ಅಂಚೆ ಇಲಾಖೆಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ಚಿತ್ತೋಢ್ ಗಢದ ಸೈನಿಕ ಶಾಲೆಯಲ್ಲಿದ್ದಾಗ ತಮ್ಮ ತಾಯಿಗೆ ಪ್ರತಿದಿನ ಪೋಸ್ಟ್ಕಾರ್ಡ್ ಬರೆಯುತ್ತಿದ್ದ ದಿನಗಳನ್ನು ಜಗದೀಪ್ ಧನಕರ್ ನೆನಪಿಸಿಕೊಂಡರು.

ಶ್ರೀಮತಿ ಡಾ. ಸುದೇಶ್ ಧನಕರ್, ಉಪರಾಷ್ಟ್ರಪತಿಗಳ ಕಾರ್ಯದರ್ಶಿ ಶ್ರೀ ಸುನೀಲ್ ಕುಮಾರ್ ಗುಪ್ತಾ, ಮಹಾ ನಿರ್ದೇಶಕ (ಪೋಸ್ಟಲ್ ಸೇವೆಗಳು) ಶ್ರೀ ಅಲೋಕ್ ಶರ್ಮಾ, ರಫಿ ಅಹ್ಮದ್ ಕಿದ್ವಾಯಿ ನ್ಯಾಷನಲ್ ಪೋಸ್ಟಲ್ ಅಕಾಡೆಮಿ (RAKNPA), RAKNPA ಯ ನಿರ್ದೇಶಕ ಶ್ರೀ ಅಂಬೇಷ್ ಉಪಮನ್ಯು,  ಅಧ್ಯಾಪಕರು ಮತ್ತು ಇತರರು ಸಂವಾದದಲ್ಲಿ ಉಪಸ್ಥಿತರಿದ್ದರು.

ಸಂಪೂರ್ಣ ಭಾಷಣ ಓದಲು ಇಲ್ಲಿ ಕ್ಲಿಕ್ ಮಾಡಿ (https://pib.gov.in/PressReleseDetail.aspx?PRID=1939601)



(Release ID: 1939840) Visitor Counter : 120