ರೈಲ್ವೇ ಸಚಿವಾಲಯ

ಗೋರಖ್‌ಪುರ ರೈಲು ನಿಲ್ದಾಣದಿಂದ ಹೊಸ 2 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಚಾಲನೆ 


ವಂದೇ ಭಾರತ್ ರೈಲುಗಳನ್ನು ಅಯೋಧ್ಯೆಯ ಮೂಲಕ ಗೋರಖ್‌ಪುರ-ಲಕ್ನೋ ಮತ್ತು ಜೋಧ್‌ಪುರ-ಅಹಮದಾಬಾದ್ (ಸಾಬರಮತಿ) ನಡುವೆ ಪರಿಚಯಿಸಲಾಗಿದೆ

ಈಗ, ದೇಶದಲ್ಲಿ ಒಟ್ಟು 50 ವಂದೇ ಭಾರತ್ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ
 
ಈ ರೈಲುಗಳು ಪ್ರಸ್ತುತ ಇರುವ ವೇಗದ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಸಮಯ ಉಳಿಸುತ್ತಿವೆ
 
ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವ ಒದಗಿಸುತ್ತಿವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತವೆ

Posted On: 07 JUL 2023 6:32PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್‌ಪುರ ರೈಲ್ವೆ ನಿಲ್ದಾಣದಲ್ಲಿ ‘ಮೇಲ್ದರ್ಜೆಗೇರಿಸಿದ 2 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು’ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದಾಗ, ಭಾರತೀಯ ರೈಲ್ವೆ ಇಂದು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲೆ ಶ್ರೀ ಆನಂದಿಬೆನ್ ಪಟೇಲ್,, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್,  ಗೋರಖ್‌ಪುರ ಸಂಸದ ಶ್ರೀ ರವಿ ಕಿಶನ್ ಶುಕ್ಲಾ, ಸಾರ್ವಜನಿಕ ಪ್ರತಿನಿಧಿಗಳು ಮತ್ತು ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.

ಆರಾಮದಾಯಕ ಮತ್ತು ಹೆಚ್ಚುವರಿ ಸೌಲಭ್ಯಗಳುಳ್ಳ ಹೊಸ ಯುಗದ ರೈಲು ಪ್ರಯಾಣ ಅನುಭವ ಪ್ರಸ್ತಾಪಿಸಿದ ಪ್ರಧಾನಿ, 2 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಯೋಧ್ಯೆ ಮೂಲಕ ಗೋರಖ್‌ಪುರ-ಲಕ್ನೋ ನಡುವೆ ಮತ್ತು ಜೋಧ್‌ಪುರ-ಅಹಮದಾಬಾದ್ (ಸಾಬರಮತಿ) ಮೂಲಕ ಸಂಚರಿಸುತ್ತವೆ. ಇಂದು ಸಂಚಾರ ಆರಂಭಿಸಿರುವ ಈ ವಂದೇ ಭಾರತ್ ರೈಲುಗಳು ರಾಜ್ಯ ರಾಜಧಾನಿಗಳು ಮತ್ತು ಇತರ ನಗರಗಳ ನಡುವೆ ಸಂಪರ್ಕ ಸುಧಾರಿಸುತ್ತದೆ, ಪ್ರಯಾಣದ ಸಮಯ ಕಡಿಮೆ ಮಾಡುತ್ತವೆ ಮತ್ತು ಪ್ರಯಾಣ ಸೌಕರ್ಯ ಹೆಚ್ಚಿಸುತ್ತದೆ. ಈ ವಂದೇ ಭಾರತ್ ರೈಲುಗಳು ನಮ್ಮ ರಾಷ್ಟ್ರದ ಪ್ರತಿಯೊಂದು ಮೂಲೆಗೂ ನವ ಭಾರತ - ವಿಕ್ಷಿತ್ ಭಾರತ್ ಸಂದೇಶವನ್ನು ಕೊಂಡೊಯ್ಯುತ್ತಿವೆ ಎಂದರು.


ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್
ಉತ್ತರ ಪ್ರದೇಶದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗೋರಖ್‌ಪುರದಿಂದ ಹೊರಡಲಿದ್ದು, ಬಸ್ತಿ ಮತ್ತು ಅಯೋಧ್ಯೆಯಲ್ಲಿ ನಿಲುಗಡೆಯೊಂದಿಗೆ ಅದೇ ದಿನ ಲಕ್ನೋ ತಲುಪಲಿದೆ. ವಂದೇ ಭಾರತ್ ರೈಲು ಕಾರ್ಯಾಚರಣೆಯೊಂದಿಗೆ, ಗೋರಖ್‌ಪುರ ಮತ್ತು ಲಕ್ನೋ ಮತ್ತು ಹತ್ತಿರದ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸಂಪರ್ಕ ಹೆಚ್ಚಾಗುತ್ತದೆ. ಜತೆಗೆ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯೂ ಹೆಚ್ಚಾಗುತ್ತದೆ. ಈ ಮಾರ್ಗವು ಧಾರ್ಮಿಕ ಪಟ್ಟಣಗಳ ನಡುವಿನ ಸಂಪರ್ಕದ ಬಹುಕಾಲದ ಬೇಡಿಕೆಯನ್ನು ಸಹ ಈಡೇರಿಸುತ್ತದೆ.
 
ಜೋಧಪುರ- ಅಹಮದಾಬಾದ್ (ಸಾಬರಮತಿ)
ರಾಜಸ್ಥಾನದ ಜೋಧ್‌ಪುರ-ಅಹಮದಾಬಾದ್ (ಸಾಬರಮತಿ) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೋಧ್‌ಪುರ ರೈಲು ನಿಲ್ದಾಣದಿಂದ ಹೊರಟು ಅದೇ ದಿನ ಪಾಲಿ ಮಾರ್ವಾಡ್, ರಣಕ್‌ಪುರ ಅಬು ರಸ್ತೆಯಲ್ಲಿ ನಿಲುಗಡೆ ಮಾಡಿ, ಅಹಮದಾಬಾದ್ (ಸಾಬರಮತಿ) ನಿಲ್ದಾಣ ತಲುಪುತ್ತದೆ. ಇದು ಸುಲಭ, ಸುಗಮ ಮತ್ತು ವೇಗದ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಈ ಪ್ರದೇಶಗಳ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಆಹ್ಲಾದಕರ ಮತ್ತು ಉತ್ತಮ ರೈಲು ಪ್ರಯಾಣದ ಅನುಭವ ನೀಡುತ್ತದೆ.

ಪ್ರಧಾನ ಮಂತ್ರಿ ಅವರು ಗೋರಖ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 498 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಿ, ಮತ್ತು ವಿಶ್ವದರ್ಜೆಯ ಪ್ರಯಾಣಿಕ ಸೌಕರ್ಯಗಳನ್ನು ಒದಗಿಸಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಸಂಖ್ಯಾತ ಉನ್ನತ ಸೌಕರ್ಯಗಳನ್ನು ಒದಗಿಸುತ್ತವೆ, ಇದು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಆರಾಮದಾಯಕ ಪ್ರಯಾಣದ ಅನುಭವ ಮತ್ತು ಕವಾಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಪ್ರತಿ ರೈಲು ತಾಸಿಗೆ 160 ಕಿಲೋ ಮೀಟರ್  ಕಾರ್ಯಾಚರಣೆಯ ವೇಗದಲ್ಲಿ ಸಾಗಲು ‘ಸಸ್ಪೆಂಡೆಡ್ ಟ್ರ್ಯಾಕ್ಷನ್ ಮೋಟಾರ್ಸ್’ ತಂತ್ರಜ್ಞಾನದ ಬೋಗಿಗಳನ್ನು ಒದಗಿಸಲಾಗಿದೆ. ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯು ಪ್ರಯಾಣಿಕರಿಗೆ ಸುಗಮ ಮತ್ತು ಸುರಕ್ಷಿತ ಪ್ರಯಾಣ ಮತ್ತು ಹೆಚ್ಚುವರಿ ಪ್ರಯಾಣ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ.

ಪವರ್ ಕಾರ್‌ಗಳನ್ನು ವಿತರಿಸುವ ಮೂಲಕ ಮತ್ತು ಸುಧಾರಿತ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಸುಮಾರು 30% ವಿದ್ಯುತ್ ಉಳಿಸುವ ಮೂಲಕ ಭಾರತೀಯ ರೈಲ್ವೆಯ ಹಸಿರು ಹೆಜ್ಜೆಗುರುತು ಹೆಚ್ಚಿಸಲು ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ.

****



(Release ID: 1938180) Visitor Counter : 92