ಸಂಸ್ಕೃತಿ ಸಚಿವಾಲಯ

​​​​​​​ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ(ಐಬಿಸಿ)ದಿಂದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಮ್ಯೂಸಿಯಂನಲ್ಲಿ ನಾಳೆ ಆಷಾಢ ಪೂರ್ಣಿಮಾ ಆಚರಣೆ

Posted On: 02 JUL 2023 2:50PM by PIB Bengaluru

ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ (ಐಬಿಸಿ), ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನವದೆಹಲಿಯ ಜನಪಥ್‌ ನಲ್ಲಿರುವ ರಾಷ್ಟ್ರೀಯ ಮ್ಯೂಸಿಯಂನಲ್ಲಿ 2023ರ ಜುಲೈ 3ರಂದು ಆಷಾಢ ಪೂರ್ಣಿಮೆಯನ್ನು ಧರ್ಮ ಚಕ್ರ ಪರಿವರ್ತನಾ ದಿನವನ್ನಾಗಿ ಆಚರಿಸಲಿದೆ. ಇದು ಐಬಿಸಿಯ ವಾರ್ಷಿಕ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಮತ್ತು ಬೌದ್ಧರಿಗೆ ಬದ್ಧ ಪೂರ್ಣಿಮೆ ಅಥವಾ ವೈಶಾಖ ಪೂರ್ಣಿಮೆ ನಂತರ ಎರಡನೇ ಅತ್ಯಂತ ಪವಿತ್ರ ದಿನವಾಗಿದೆ.

ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ವಿಡಿಯೋ ಭಾಷಣವನ್ನು ಪ್ರಸ್ತುತಪಡಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಐಬಿಸಿ ಲುಂಬಿನಿ (ನೇಪಾಳ) ದಲ್ಲಿ ಕೈಗೊಂಡಿರುವ ವಿಶೇಷ ಯೋಜನೆ “ಭಾರತೀಯ ಬೌದ್ಧರ ಸಂಸ್ಕೃತಿ ಮತ್ತು ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರ’’ ದ ಕುರಿತು ಚಿತ್ರವನ್ನು ಪ್ರದರ್ಶಿಸುವುದು ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ವರ್ಷ ಬುದ್ಧ ಪೂರ್ಣಿಮೆಯಂದು ನೇಪಾಳದ ಲುಂಬಿನಿಯಲ್ಲಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.  

ಕಾರ್ಯಕ್ರಮದಲ್ಲಿ ಆಷಾಢ ಪೂರ್ಣಿಮೆಯ ಮಹತ್ವದ ಬಗ್ಗೆ ಗೌರವಾನ್ವಿತ 12ನೇ ಧರ್ಮಗುರು ಚಾಮ್ಗೋನ್ ಕೆಂಟಿಂಗ್ ತೈ ಸಿತುಪಾ ಅವರಿಂದ ದಮ್ಮ ಉಪನ್ಯಾಸ ಮತ್ತು ಸಂಸ್ಕೃತಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಬೌದ್ಧ ಸಂಘಟನೆಗಳ ಧರ್ಮಗುರುಗಳು, ಹಲವು ಗಣ್ಯರು, ವಿದ್ವಾಂಸರು ಮತ್ತು ನವದೆಹಲಿ ಮೂಲದ ಹಲವು ರಾಜತಾಂತ್ರಿಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಐತಿಹಾಸಿಕ ಪರಂಪರೆ, ಬುದ್ಧನ ಜ್ಞಾನೋದಯದ ಭೂಮಿ, ಅವರ ಧಮ್ಮದ ಚಕ್ರಗಳು ಮತ್ತು ಮಹಾ ಪರಿನಿರ್ವಾಣಕ್ಕೆ ಅನುಗುಣವಾಗಿ, ಐಬಿಸಿ ಆಷಾಢ ಪೂರ್ಣಿಮಾ ಆಚರಣೆಯನ್ನು ಜನಪಥ್‌ ನ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಆಯೋಜಿಸುತ್ತಿದೆ, ಅಲ್ಲಿ ಸಖ್ಯಮುನಿಯ ಪವಿತ್ರ ಸ್ಮಾರಕವನ್ನು ಪ್ರತಿಷ್ಠಾಪಿಸಲಾಗಿದೆ.

ಬುದ್ಧನು ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ್ದರು ಮತ್ತು ಧರ್ಮದ ಚಕ್ರಕ್ಕೆ ಚಾಲನೆ ನೀಡಿದ್ದರು. ಭಾರತೀಯ ಚಂದ್ರನ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಬರುವ ಆಷಾಢ ಪೂರ್ಣಿಮೆಯ ಮಂಗಳಕರ ದಿನವನ್ನು ಶ್ರೀಲಂಕಾದಲ್ಲಿ ಎಸಲಾ ಪೋಯಾ ಮತ್ತು ಥೈಲ್ಯಾಂಡ್‌ನಲ್ಲಿ ಅಸನ್ಹಾ ಬುಚಾ ಎಂದೂ ಕರೆಯಲಾಗುತ್ತದೆ. ಬುದ್ದನು ಜ್ಞಾನೋದಯ ಪಡೆದ ನಂತರ ಆಷಾಢದ ಹುಣ್ಣಿಮೆಯ ದಿನದಂದು ಮೊದಲ ಐದು ತಪಸ್ವಿ ಶಿಷ್ಯರಿಗೆ (ಪಂಚವರ್ಗಿಯ) ಜ್ಞಾನೋದಯದ ಮೊದಲ ಬೋಧನೆಯನ್ನು ಈ ದಿನ ಭಾರತದ ವಾರಣಾಸಿ ಬಳಿಯ ಸಾರನಾಥದಲ್ಲಿರುವ ರಿಷಿಪತನ ಮೃಗದಯಾದಲ್ಲಿ 'ಜಿಂಕೆ ಪಾರ್ಕ್' ನಲ್ಲಿ ನೀಡಿದ್ದರು ಎಂದು ಗುರುತಿಸಲಾಗಿದೆ.

ಬೌದ್ಧ ಧರ್ಮಗುರುಗಳು ಮತ್ತು ಬಿಕ್ಕುಗಳಿಗೆ ಮಳೆಗಾಲದ ರಿಟ್ರೀಟ್ (ವರ್ಷ ವಸ್ಸಾ) ಜುಲೈನಿಂದ ಅಕ್ಟೋಬರ್ ವರೆಗೆ ಮೂರು ಚಂದ್ರನ ತಿಂಗಳ ಕಾಲ ಈ ದಿನದಿಂದ ಆರಂಭವಾಗುತ್ತದೆ. ಈ ಸಮಯದಲ್ಲಿ ಅವರು ಒಂದೇ ಸ್ಥಳದಲ್ಲಿ ಉಳಿಯುತ್ತಾರೆ, ಸಾಮಾನ್ಯವಾಗಿ ತಮ್ಮ ದೇವಾಲಯಗಳಲ್ಲಿ  ಹೆಚ್ಚಿನ ಸಮಯವನ್ನು ಧ್ಯಾನಕ್ಕೆ ಮೀಸಲಿಡಲಾಗುತ್ತದೆ. ಈ ದಿನವನ್ನು ಬೌದ್ಧರು ಮತ್ತು ಹಿಂದೂಗಳು ತಮ್ಮ ಗುರುಗಳಿಗೆ ಗೌರವವನ್ನು ಸೂಚಿಸುವ ದಿನವಾಗಿ ಗುರು ಪೂರ್ಣಿಮೆಯನ್ನಾಗಿ ಆಚರಿಸುತ್ತಾರೆ.

*****

 



(Release ID: 1936928) Visitor Counter : 125