ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕಿರ್ಗಿಸ್ತಾನ್ ಮತ್ತು ಹಂಗೇರಿಯಲ್ಲಿ ತರಬೇತಿ ಪಡೆಯಲು ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾಗೆ ʻಟಾಪ್ಸ್’ ಅನುಮತಿ
Posted On:
29 JUN 2023 6:48PM by PIB Bengaluru
ʻಭಾರತೀಯ ಕುಸ್ತಿಪಟುಗಳು ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ʼ(ಟಾಪ್ಸ್) ಅಥ್ಲೀಟ್‌ಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅಂತರರಾಷ್ಟ್ರೀಯ ತರಬೇತಿ ಶಿಬಿರಗಳಿಗಾಗಿ ಕಿರ್ಗಿಸ್ತಾನ್ ಮತ್ತು ಹಂಗೇರಿಗೆ ತೆರಳಲು ಸಜ್ಜಾಗಿದ್ದಾರೆ.
ಇವರಿಬ್ಬರು ತಮ್ಮ ಪ್ರಸ್ತಾಪಗಳನ್ನು ʻಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯʼದ(ಎಂವೈಎಎಸ್) ʻಟಾಪ್ಸ್ʼ ತಂಡಕ್ಕೆ ಕಳುಹಿಸಿದ್ದರು. ಉಭಯರ ಪ್ರಸ್ತಾಪಗಳನ್ನು 24 ಗಂಟೆಗಳ ಒಳಗೆ ಇತ್ಯರ್ಥಗೊಳಿಸಲಾಗಿದೆ.
ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ 36 ದಿನಗಳ ತರಬೇತಿ ಶಿಬಿರಕ್ಕಾಗಿ ಕಿರ್ಗಿಸ್ತಾನದ ʻಇಸ್ಸಿಕ್-ಕುಲ್ʼಗೆ ತೆರಳಿದರೆ, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಒಂದು ವಾರದ ತರಬೇತಿಗಾಗಿ ಮೊದಲು ಕಿರ್ಗಿಸ್ತಾನದ ʻಬಿಷ್ಕೆಕ್ʼಗೆ ತೆರಳಲಿದ್ದಾರೆ.
ವಿನೇಶ್ ಫೋಗಟ್ ಅವರ ಜೊತೆಗೆ ಫಿಸಿಯೋಥೆರಪಿಸ್ಟ್ ಅಶ್ವಿನಿ ಜೀವನ್ ಪಾಟೀಲ್, ಸ್ಪಾರಿಂಗ್ ಪಾಲುದಾರರಾದ ಸಂಗೀತಾ ಫೋಗಟ್ ಮತ್ತು ತರಬೇತುದಾರ ಸುದೇಶ್ ತೆರಳಲಿದ್ದಾರೆ. ಬಜರಂಗ್ ಅವರೊಂದಿಗೆ ಕೋಚ್ ಸುಜೀತ್ ಮಾನ್, ಫಿಸಿಯೋಥೆರಪಿಸ್ಟ್ ಅನುಜ್ ಗುಪ್ತಾ, ಸ್ಪಾರಿಂಗ್ ಪಾಲುದಾರ ಜಿತೇಂದರ್ ಮತ್ತು ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ತಜ್ಞ ಕಾಜಿ ಹಸನ್ ಇರಲಿದ್ದಾರೆ.
ವಿನೇಶ್, ಬಜರಂಗ್ ಹಾಗೂ ಅವರ ಪಾಲುದಾರರಾದ ಸಂಗೀತಾ ಫೋಗಟ್ ಮತ್ತು ಜಿತೇಂದರ್, ತರಬೇತುದಾರರಾದ ಸುದೇಶ್ ಮತ್ತು ಸುಜೀತ್ ಮಾನ್ ಅವರ ವಿಮಾನ ಟಿಕೆಟ್, ಬೋರ್ಡಿಂಗ್ ಮತ್ತು ವಸತಿ ವೆಚ್ಚ, ಶಿಬಿರದ ವೆಚ್ಚಗಳು, ವಿಮಾನ ನಿಲ್ದಾಣ ವರ್ಗಾವಣೆ ವೆಚ್ಚಗಳು, ಒಪಿಎ ಮತ್ತು ಇತರ ವಿವಿಧ ವೆಚ್ಚಗಳನ್ನು ಸರಕಾರ ಭರಿಸಲಿದೆ.
ಕುಸ್ತಿಪಟುಗಳೊಂದಿಗೆ ಹೆಚ್ಚುವರಿಯಾಗಿ ತೆರಳುವ ಇತರ ಸಹಾಯಕ ಸಿಬ್ಬಂದಿಯ ವೆಚ್ಚವನ್ನು ʻಒಲಿಂಪಿಕ್ ಗೋಲ್ಡ್ ಕ್ವೆಸ್ಟ್ʼ(ಒಜಿಕ್ಯೂ) ಭರಿಸಲಿದೆ.
ವಿನೇಶ್ ಮತ್ತು ಬಜರಂಗ್ ಇಬ್ಬರೂ ಜುಲೈ ಮೊದಲ ವಾರದಲ್ಲಿ ಹೊರಡಲಿದ್ದಾರೆ.
****
(Release ID: 1936292)
Visitor Counter : 125