ವಾರ್ತಾ ಮತ್ತು ಪ್ರಸಾರ ಸಚಿವಾಲಯ

'ಬಹತ್ತರ್ ಹೂರೇನ್' ಚಿತ್ರದ ಟ್ರೈಲರ್ ವಿವಾದ ಕುರಿತು ಸಿಬಿಎಫ್ ಸಿ ಹೇಳಿಕೆ

Posted On: 29 JUN 2023 5:23PM by PIB Bengaluru

'ಬಹತ್ತರ್ ಹೂರೇನ್' ಚಿತ್ರದ ಟ್ರೈಲರ್ ವಿವಾದ ಕುರಿತು ಚಲನಚಿತ್ರ ಪ್ರಮಾಣೀಕರಣ ಕೇಂದ್ರ ಮಂಡಳಿ(Central Board for Film Certification) ಇಂದು ಹೇಳಿಕೆ ಬಿಡುಗಡೆ ಮಾಡಿದೆ. 'ಬಹತ್ತರ್ ಹೂರೇನ್' (72 ಹೂರೇನ್) ಶೀರ್ಷಿಕೆಯ ಸಿನಿಮಾ ಮತ್ತು ಅದರ ಟ್ರೈಲರ್ ಗೆ ಚಲನಚಿತ್ರ ಪ್ರಮಾಣೀಕರಣ ಕೇಂದ್ರ ಮಂಡಳಿ(CBFC) ಪ್ರಮಾಣೀಕರಣ ನೀಡಲು ನಿರಾಕರಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುಳ್ಳು ವರದಿಗಳು ಹರಡುತ್ತಿವೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದೆ. 

ಮಾಧ್ಯಮಗಳ ವರದಿಗೆ ವ್ಯತಿರಿಕ್ತವಾಗಿ, 'ಬಹತ್ತರ್ ಹೂರೇನ್ (72 ಹೂರೇನ್)' ಚಿತ್ರಕ್ಕೆ 'ಎ' ಪ್ರಮಾಣೀಕರಣವನ್ನು ನೀಡಿ 4-10-2019 ರಂದು ಪ್ರಮಾಣಪತ್ರವನ್ನು ಹೊರಡಿಸಲಾಗಿತ್ತು. ಚಿತ್ರದ ಟ್ರೈಲರ್ ಬಿಡುಗಡೆಗೆ ಅನುಮತಿ ಕೋರಿ 19-6-2023ರಂದು ಸಿಬಿಎಫ್ ಸಿಗೆ ಚಿತ್ರತಂಡ ಮನವಿ ಸಲ್ಲಿಸಿದ್ದು ಸಿನಿಮಾಟೊಗ್ರಾಫ್ ಕಾಯ್ದೆ 1952ರ ಸೆಕ್ಷನ್ 5ಬಿ(2)ಅಡಿಯಲ್ಲಿ ಹೊರಡಿಸಿರುವ ಮಾರ್ಗಸೂಚಿಯಂತೆ ಪರಿಶೀಲಿಸಲಾಗಿದೆ. ಈಗ, ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿದೆ. 

"ಅರ್ಜಿದಾರರಿಗೆ ಮಾಹಿತಿಯ ಅಡಿಯಲ್ಲಿ ಅಗತ್ಯ ಸಾಕ್ಷ್ಯಚಿತ್ರ ಸಲ್ಲಿಕೆಗಳನ್ನು ಕೇಳಿ ಅದನ್ನು ಸ್ವೀಕರಿಸಿದ ನಂತರ, ಮಾರ್ಪಾಡುಗಳಿಗೆ ಒಳಪಟ್ಟು ಪ್ರಮಾಣೀಕರಣವನ್ನು ನೀಡಲಾಗಿದೆ. ಮಾರ್ಪಾಡುಗಳ ಬಗ್ಗೆ ಶೋಕಾಸ್ ನೋಟಿಸ್ ನ್ನು 27-6-2023 ರಂದು ಅರ್ಜಿದಾರರಿಗೆ ಅಂದರೆ ಚಲನಚಿತ್ರ ನಿರ್ಮಾಪಕರಿಗೆ ನೀಡಲಾಗಿದೆ. ಅರ್ಜಿದಾರರಿಂದ ಪ್ರತಿಕ್ರಿಯೆ/ಅನುಸರಣೆ ಸಿಗಲು ಬಾಕಿಯಿದೆ" ಎಂದು ಸಿಬಿಎಫ್ ಸಿ ಹೇಳಿದೆ. 

ವಿಷಯ ಪ್ರಕ್ರಿಯೆ ಹಂತದಲ್ಲಿರುವುದರಿಂದ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ತಪ್ಪು ಸುಳ್ಳು ವರದಿಗಳನ್ನು ಸಿಬಿಎಫ್ ಸಿ ಒಪ್ಪುವುದಿಲ್ಲ ಮತ್ತು ಇನ್ನು ಮುಂದೆ ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ಮಂಡಳಿಯು ಒತ್ತಾಯಿಸುತ್ತದೆ. 

ಸೌರಭ್ ಸಿಂಗ್

****



(Release ID: 1936272) Visitor Counter : 204