ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅನುಕೂಲಕರ ವ್ಯಾಪಾರ ವಾತಾವರಣ ಉತ್ತೇಜಿಸಲು ಮತ್ತು ಉತ್ಪಾದನೆ ಸಂಪರ್ಕಿತ ಉತ್ತೇಜನಾ ವಲಯಗಳಲ್ಲಿ ಬೆಳವಣಿಗೆ ವೇಗಗೊಳಿಸಲು ಸರಕಾರ ಬದ್ಧವಾಗಿದೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್


ಉತ್ಪಾದನೆ ಸಂಪರ್ಕಿತ ಉತೇಜನಾ ಯೋಜನೆಯ ನೀತಿಗಳು, ಕಾರ್ಯವಿಧಾನಗಳು ಮತ್ತು ಪರಿಣಾಮಕಾರಿತ್ವ ರೂಪಿಸಲು ಉದ್ಯಮ ವಲಯದ ಸಹಭಾಗಿತ್ವದ ತೊಡಗಿಸಿಕೊಳ್ಳುವಿಕೆ ಮತ್ತು ಪ್ರತಿಕ್ರಿಯೆಗಳನ್ನು ಪ್ರೋತ್ಸಾಹಿಸಲಾಗುವುದು: ಶ್ರೀ ಗೋಯಲ್

ಉದ್ಯಮದ ಅಗತ್ಯತೆಗಳು ಮತ್ತು ಗ್ರಾಹಕರ ಅಗತ್ಯತೆ ಎರಡನ್ನೂ ಪೂರೈಸುವ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಒತ್ತು: ಗೋಯಲ್

ಪಿಎಲ್ಐ ಫಲಾನುಭವಿಯ  ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಅನುಷ್ಠಾನ ಸಚಿವಾಲಯ, ಇಲಾಖೆಯ ಅಧಿಕಾರಿಗಳು ನಿಯಮಿತ ಸಮಾಲೋಚನೆ ನಡೆಸಲಿದ್ದಾರೆ: ಶ್ರೀ ಗೋಯಲ್

ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ (ಡಿಪಿಐಐಟಿ) ಇಲಾಖೆಯು 'ಪಿಎಲ್‌ಐ ಯೋಜನೆಗಳ' ಕಾರ್ಯಾಗಾರ ಆಯೋಜಿಸುತ್ತದೆ; ಪ್ರಮುಖ 14 ಪ್ರಮುಖ ವಲಯಗಳಲ್ಲಿ ಪಿಎಲ್ಐ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಗೆ ತಂದು, ಅವರಲ್ಲಿ ಮಾಲೀಕತ್ವದ ಪ್ರಜ್ಞೆ ಸೃಷ್ಟಿಸಲಾಗುವುದು.

Posted On: 28 JUN 2023 2:26PM by PIB Bengaluru

ಅನುಕೂಲಕರ ವ್ಯಾಪಾರ ವಾತಾವರಣ ಉತ್ತೇಜಿಸಲು ಮತ್ತು ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ವಲಯಗಳಲ್ಲಿ ಬೆಳವಣಿಗೆ ವೇಗಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಹೇಳಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ(ಡಿಪಿಐಐಟಿ) ನಿನ್ನೆ ಆಯೋಜಿಸಿದ್ದ “ಪಿಎಲ್‌ಐ ಯೋಜನೆಗಳ” ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಸಚಿವರು, ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಯ ನೀತಿಗಳು, ಕಾರ್ಯವಿಧಾನಗಳು ಮತ್ತು ಪರಿಣಾಮಕಾರಿತ್ವ ರೂಪಿಸಲು ಉದ್ಯಮದ ಪ್ರತಿಕ್ರಿಯೆ ಮತ್ತು ಸಹಭಾಗಿತ್ವದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲಾಗುವುದು ಎಂದರು.

ಉದ್ಯಮದ ಅಗತ್ಯತೆಗಳು ಮತ್ತು ಗ್ರಾಹಕರ ಬೇಕು ಬೇಡಗಳನ್ನು ಪೂರೈಸುವ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉದ್ಯಮದ ಏಕಾಗ್ರತೆಯ ಪ್ರಾಮುಖ್ಯತೆ ಮುಖ್ಯ ಎಂದು ಶ್ರೀ ಗೋಯಲ್ ಒತ್ತು ನೀಡಿದರು. ಪಿಎಲ್ಐ ಫಲಾನುಭವಿಗಳ ಯಾವುದೇ ಕಾರ್ಯವಿಧಾನದ ಸವಾಲುಗಳು, ಸಮಸ್ಯೆಗಳನ್ನು ಪರಿಹರಿಸಲು ಆಯಾ ಅನುಷ್ಠಾನ ಸಚಿವಾಲಯ, ಇಲಾಖೆ ಕ್ರಮ ಕೈಗೊಳ್ಳಬೇಕು. ಇದರಿಂದ ಧನಾತ್ಮಕ ಸುಧಾರಣೆಗಳನ್ನು ತರಬಹುದು, ಪಿಎಲ್ಐ ಯೋಜನೆಯನ್ನು ಹೆಚ್ಚು ದಕ್ಷತೆಯಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ಅನುಷ್ಠಾನಗೊಳಿಸುವ ಸಚಿವಾಲಯ, ಇಲಾಖೆಯ ಅಧಿಕಾರಿಗಳು ತಮ್ಮ ಪಿಎಲ್‌ಐ ಫಲಾನುಭವಿಗಳೊಂದಿಗೆ ನಿಯಮಿತ ಸಮಾಲೋಚನೆ ಮತ್ತು ದುಂಡುಮೇಜಿನ ಸಭೆಗಳನ್ನು ನಡೆಸಬೇಕು, ಇದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬಹುದು ಎಂದು ಸಚಿವರು ಹೇಳಿದರು.

ನಮ್ಮ ಕೈಗಾರಿಕೆಗಳಲ್ಲಿ ಬೆಳವಣಿಗೆ, ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆ ಉತ್ತೇಜಿಸುವ ವಾತಾವರಣ ಸೃಷ್ಟಿಸಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು. ಕಾರ್ಯಾಗಾರದ ಉದ್ದೇಶವು ಎಲ್ಲಾ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತಂದು, ಅವರಲ್ಲಿ ಮಾಲೀಕತ್ವದ ಪ್ರಜ್ಞೆ ಮೂಡಿಸುವ ಗುರಿ ಹೊಂದಿದೆ. ಇದರಿಂದಾಗಿ ಅವರು 14 ಪ್ರಮುಖ ವಲಯಗಳಲ್ಲಿ ಪಿಎಲ್ಐ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸಿಕೊಳ್ಳಲು ತಮ್ಮ ಜ್ಞಾನ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಭಾರತವನ್ನು ಉತ್ಪಾದನೆ ಅಥವಾ ತಯಾರಿಕೆಯ ಜಾಗತಿಕ ಕೇಂದ್ರವನ್ನಾಗಿ ಮಾಡಬೇಕು ಎಂಬ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರಕಾರ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೇಂದ್ರದ 10 ಅನುಷ್ಠಾನ ಇಲಾಖೆಗಳು, 14 ಪ್ರಮುಖ ಪಿಎಲ್ಐ ವಲಯಗಳ ಅಡಿ ಬರುವ ಕಂಪನಿಗಳು, ಫಲಾನುಭವಿಗಳು, ವಿವಿಧ ಯೋಜನಾ ನಿರ್ವಹಣಾ ಏಜೆನ್ಸಿಗಳಾದ ಐಎಫ್ ಸಿಐ, ಸಿಡ್ಬಿ, ಮೆಕಾನ್, ಐಆರ್ ಇಡಿಎ ಮತ್ತು ಎಸ್ಇಸಿಐ, ಆಯ್ದ ಕೈಗಾರಿಕಾ ಸಂಘಟನೆಗಳಾದ ಸಿಐಐ, ಫಿಕ್ಕಿ, ಅಸೊಚಾಮ್ ಮತ್ತು ಪಿಎಚ್ ಡಿಸಿಸಿಐ ಮತ್ತು ಸಂಬಂಧಿತ ರಫ್ತು ಉತ್ತೇಜನಾ ಮಂಡಳಿಗಳಾದ ಎಫ್ಐಇಒ, ಇಇಪಿಸಿ ಮತ್ತು ಟಿಇಪಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವು.

ವಿಸ್ಟ್ರೋನ್, ಫಾಕ್ಸ್‌ಕಾನ್, ಸ್ಯಾಮ್‌ಸಂಗ್, ಡೆಲ್, ವಿಪ್ರೋ, ಜಿಇ, ಡಾ. ರೆಡ್ಡೀಸ್, ಟಾಟಾ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ, ನೋಕಿಯಾ ಸಲ್ಯೂಷನ್ಸ್, ಐಟಿಸಿ, ಡಾಬರ್, ಜೆಎಸ್ ಡಬ್ಲ್ಯು ಮತ್ತು ರಿಲಯನ್ಸ್ ಸೇರಿದಂತೆ ಅನೇಕ ಕಂಪನಿಗಳು ಭಾಗವಹಿಸಿದ್ದವು. ಈ ಎಲ್ಲಾ ಕಂಪನಿ ಪ್ರತಿನಿಧಿಗಳ ಉಪಸ್ಥಿತಿಯು ವೈವಿಧ್ಯಮಯ ದೃಷ್ಟಿಕೋನಗಳನ್ನು ಖಾತ್ರಿಪಡಿಸಿತು, ಜ್ಞಾನ ಹಂಚಿಕೆ ಮತ್ತು ನೆಟ್‌ವರ್ಕಿಂಗ್‌ ಪರಿಸರ ಬೆಳೆಸಿತು. ಈ ಕಂಪನಿಗಳ ಪ್ರಮುಖ ಕಾರ್ಯ ನಿರ್ವಾಹಕರು, ಸರ್ಕಾರಿ ಅಧಿಕಾರಿಗಳ ಜತೆ , ಕಾರ್ಯಾಗಾರದ ಉದ್ದಕ್ಕೂ ಸಹಭಾಗಿತ್ವ ಹೊಂದುವ ಕುರಿತಾದ ಮುಕ್ತ ಚರ್ಚೆ, ಸಂವಾದ ಕಲಾಪ ಮತ್ತು ಪ್ರಸ್ತುತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಉದ್ಯಮದ ಮುಖಂಡರು, ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಒಳನೋಟವುಳ್ಳ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪಿಎಲ್ಐ ಯೋಜನೆಗಳ ಪ್ರಭಾವ ಮತ್ತು ಮಹತ್ವ  ಕುರಿತು ಮೌಲ್ಯಯುತ ಒಳನೋಟಗಳನ್ನು ವಿನಿಮಯ ಮಾಡಿಕೊಳ್ಳಲು ಕಾರ್ಯಾಗಾರವು ಅನನ್ಯ ವೇದಿಕೆ ಒದಗಿಸಿದೆ. ಕಾರ್ಯಕ್ರಮದ ಯೋಜನೆಗಳು, ಅವುಗಳ ಉದ್ದೇಶಗಳು ಮತ್ತು ಉತ್ಪಾದನಾ ವಲಯದಲ್ಲಿ ಕ್ರಾಂತಿ ಉಂಟುಮಾಡುವ ಸಾಮರ್ಥ್ಯಗಳ ಸಮಗ್ರ ತಿಳುವಳಿಕೆಯನ್ನು ಸುಲಭಗೊಳಿಸುವ ಗುರಿ ಹೊಂದಿದೆ.

ಕಾರ್ಯಾಗಾರದ ಕಾರ್ಯಸೂಚಿಯು ಪಿಎಲ್ಐ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ, ಅವುಗಳ ವ್ಯಾಪ್ತಿ, ಅರ್ಹತಾ ಮಾನದಂಡಗಳು, ಪ್ರೋತ್ಸಾಹಗಳು ಮತ್ತು ಸಂಬಂಧಿಸಿದ ಕೇಂದ್ರ ಇಲಾಖೆಗಳು ಮತ್ತು ಯೋಜನಾ ನಿರ್ವಹಣಾ ಏಜೆನ್ಸಿಗಳು ಒದಗಿಸಿದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒಳಗೊಂಡಂತೆ ಯಶಸ್ವಿ ಅನುಷ್ಠಾನದ ಮಾರ್ಗಸೂಚಿ ಒಳಗೊಂಡಿದೆ. ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಹೆಚ್ಚಿಸಲು, ಉತ್ಪಾದನೆ ಹೆಚ್ಚಿಸಲು ಮತ್ತು ಆವಿಷ್ಕಾರ ಉತ್ತೇಜಿಸಲು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೇಲೆ ಗಮನ ಕೇಂದ್ರೀಕರಿಸಿದ ಲಪ್ರದ ಚರ್ಚೆಗಳಲ್ಲಿ ಉದ್ಯಮ ದಿಗ್ಗಜರು ತೊಡಗಿಸಿಕೊಂಡಿದ್ದಾರೆ. ಯೋಜನೆಗಳ ಯಶಸ್ಸಿಗೆ ಕಾರಣವಾಗುವ ಪ್ರಮುಖ ವಿಷಯಗಳು, ಅಂಶಗಳು ಮತ್ತು ನೀತಿ ಸೂಕ್ಷ್ಮ ವ್ಯತ್ಯಾಸಗಳು, ದೇಶೀಯ ಮೌಲ್ಯ ಸೇರ್ಪಡೆಯನ್ನು ಹೆಚ್ಚಿಸುವುದು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಬಂಡವಾಳ ಹೆಚ್ಚಳವನ್ನು ಒಳಗೊಂಡಿವೆ.

ಪಿಎಲ್ಐ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಲಭ್ಯವಿರುವ ಪ್ರೋತ್ಸಾಹಕಗಳನ್ನು ಅವರ ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳುವ ಸಾಮೂಹಿಕ ಬದ್ಧತೆಯೊಂದಿಗೆ ಕಾರ್ಯಾಗಾರ ಸಮಾಪಂನಗೊಂಡಿತು.

ಪಿಎಲ್‌ಐ ಯೋಜನೆಗಳ ಒಟ್ಟಾರೆ ಸಾಧನೆ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು. ಪಿಎಲ್ಐ ಯೋಜನೆಗಳಿಗೆ 62,500 ಕೋಟಿ ರೂ. ವಾಸ್ತವಿಕ ಹೂಡಿಕೆ ಹರಿದುಬಂದಿದೆ(2023 ಮಾರ್ಚ್ವರೆಗೆ). ಅದರಿಂದಾಗಿ, ಉತ್ಪಾದನೆ, ಮಾರಾಟ 6.75 ಲಕ್ಷ ಕೋಟಿ ರೂ.ಗೆ ಹೆಚ್ಚಳ ಕಂಡಿದೆ. ಸುಮಾರು 3,25,000 ಉದ್ಯೋಗಗಳು ಸೃಷ್ಟಿಯಾಗಿವೆ. 2022-23 ಆರ್ಥಿಕ ವರ್ಷದಲ್ಲಿ 2.56 ಲಕ್ಷ ಕೋಟಿ ರೂ.ಗೆ ರಫ್ತು ಹೆಚ್ಚಳವಾಗಿದೆ. ಪಿಎಲ್ಐ ಯೋಜನೆಗಳ ಅಡಿ, 2022-23ರಲ್ಲಿ ಸುಮಾರು 2,900 ಕೋಟಿ ರೂ. ಪ್ರೋತ್ಸಾಹಧನದ ಮೊತ್ತ ವಿತರಿಸಲಾಗಿದೆ.

ಪಿಎಲ್ಐ ಯೋಜನೆಗಳು ವಿವಿಧ ಕ್ಷೇತ್ರಗಳಲ್ಲಿ ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ)  ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಮತ್ತು ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಕ್ರಮವಾಗಿ 23% ಮತ್ತು 20% ಮೌಲ್ಯವರ್ಧನೆ ಹೆಚ್ಚಿಸಿದೆ, ಇದು 2014-15ರಲ್ಲಿ ಅತ್ಯಲ್ಪವಾಗಿತ್ತು. ಫಾರ್ಮಾಸ್ಯುಟಿಕಲ್ಸ್ ವಲಯದ ವಿವಿಧ ಉತ್ಪನ್ನಗಳಲ್ಲಿ 80% ದೇಶೀಯ ಮೌಲ್ಯ ಸೇರ್ಪಡೆ ವರದಿಯಾಗಿದೆ. ಟೆಲಿಕಾಂ ವಲಯದಲ್ಲಿ 60% ಆಮದು ಪ್ರಮಾಣ ನಿಯಂತ್ರಣಕ್ಕೆ ತರಲಾಗಿದೆ. ಹಲವಾರು ನೆಟ್‌ವರ್ಕಿಂಗ್ ಉತ್ಪನ್ನಗಳಲ್ಲಿ ಬಹುತೇಕ ಸ್ವಾವಲಂಬಿಯಾಗಿದೆ. ಆಟೋಮೊಬೈಲ್ಸ್ ಮತ್ತು ಆಟೋ ಬಿಡಿಭಾಗಗಳ ಉತ್ಪಾದನಾ ವಲಯದಲ್ಲಿ 50% ವರೆಗೆ ದೇಶೀಯ ಮೌಲ್ಯ ಸೇರ್ಪಡೆ ಆಗಿದೆ.

***

 



(Release ID: 1935916) Visitor Counter : 148