ಕಲ್ಲಿದ್ದಲು ಸಚಿವಾಲಯ
7ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಬಿಡ್ ಪ್ರಕ್ರಿಯೆ ಆರಂಭ
Posted On:
26 JUN 2023 6:09PM by PIB Bengaluru
7 ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅಡಿಯಲ್ಲಿ ಕಲ್ಲಿದ್ದಲು ಮಾರಾಟಕ್ಕಾಗಿ 103 ಕಲ್ಲಿದ್ದಲು/ಲಿಗ್ನೈಟ್ ಗಣಿಗಳ ಹರಾಜು ಪ್ರಕ್ರಿಯೆಯನ್ನು ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರವು ಮಾರ್ಚ್ 29, 2023 ರಂದು ಪ್ರಾರಂಭಿಸಿದೆ. ಎಲ್ಲಾ ಕಲ್ಲಿದ್ದಲುಗಳಿಗೆ ಆನ್ಲೈನ್ ಮೂಲಕ ತಾಂತ್ರಿಕ ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 27 12 ಗಂಟೆಯವರೆಗೆ, ಆಫ್ ಲೈನ್ ಮೂಲಕ ಸಲ್ಲಿಸಲು ಜೂನ್ 27, 2023 ರಂದು 4 ಗಂಟೆಗಳೊಳಗೆ ಸಲ್ಲಿಸಬಹುದು.
ಹರಾಜು ಪ್ರಕ್ರಿಯೆಯ ಭಾಗವಾಗಿ, ಆನ್ಲೈನ್ ಮತ್ತು ಆಫ್ಲೈನ್ ಬಿಡ್ ದಾಖಲೆಗಳನ್ನು ಒಳಗೊಂಡಿರುವ ತಾಂತ್ರಿಕ ಬಿಡ್ಗಳನ್ನು ಜೂನ್ 28, 2023 ರಂದು ಬೆಳಗ್ಗೆ 10:00 ಗಂಟೆಗೆ ನವದೆಹಲಿಯಲ್ಲಿ ಬಿಡ್ ದಾರರ ಸಮ್ಮುಖದಲ್ಲಿ ತೆರೆಯಲಾಗುತ್ತದೆ.
****
(Release ID: 1935557)
Visitor Counter : 135