ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಾಂಬಾದಲ್ಲಿ ʻಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯʼಕ್ಕೆ(ಸಿಎಫ್ಎಸ್ಎಲ್) ಶಂಕುಸ್ಥಾಪನೆ ನೆರವೇರಿಸಿದರು, ಜೊತೆಗೆ ಜಮ್ಮುವಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.


ಶ್ರೀ ಅಮಿತ್ ಶಾ ಅವರು ತ್ರಿಕೂಟ್‌ ನಗರದಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತ್ಯಾಗ, ಧೈರ್ಯ ಮತ್ತು ದೃಢನಿಶ್ಚಯದಿಂದಾಗಿ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ಒಂದುಗೂಡಿದೆ ಮತ್ತು 370ನೇ ವಿಧಿಯನ್ನು ರದ್ದುಪಡಿಸಲಾಗಿದೆ


ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಮಾತೆಯ ಕಿರೀಟವನ್ನಾಗಿ ಮಾಡಿದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಡಾ.ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಅವರ ಕೊಡುಗೆಗೆ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇಡೀ ದೇಶವು ಆಭಾರಿಯಾಗಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ; ಹೊಸ ಜಮ್ಮು ಮತ್ತು ಕಾಶ್ಮೀರ ರೂಪುಗೊಳ್ಳುತ್ತಿದೆ

ಈ ಹಿಂದೆ, ಕಣಿವೆಯ ರಾಜ್ಯದ ಯುವಕರ ಕೈಯಲ್ಲಿ ಕಲ್ಲುಗಳು ಇದ್ದವು, ಆದರೆ ಈಗ ಅವರ ಬಳಿ ಲ್ಯಾಪ್‌ಟಾಪ್‌ಗಳಿವೆ. ಈ ವಿದ್ಯಾವಂತ ಯುವಕರು ಜಮ್ಮು ಮತ್ತು ಕಾಶ್ಮೀರ ಹಾಗೂ ಇಡೀ ದೇಶದ ಭವಿಷ್ಯವನ್ನು ರೂಪಿಸಲಿದ್ದಾರೆ


370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ, ಪ್ರಧಾನಿ  ಮೋದಿ ಗುಡ್ಡಗಾಡು ಸಮುದಾಯಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಾತಿಯ ಹಕ್ಕುಗಳನ್ನು ನೀಡಿದ್ದಾರೆ, ಈ ನ್ಯಾಯವನ್ನು ಖಾತರಿತಪಡಿಸಲು ಶ್ರೀ ಮೋದಿ ಅವರೇ ಬರಬೇಕಾಯಿತು


ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೋದಿ ಸರ್ಕಾರ ವಿವಿಧ ಕೈಗಾರಿಕಾ ನೀತಿಗಳ ಜೊತೆಗೆ ಹೊಸ ಸಿನಿಮಾ, ಹೋಮ್ ಸ್ಟೇ ಮತ್ತು ಹೌಸ್ ಬೋಟ್ ನೀತಿಗಳನ್ನು ರೂಪಿಸಿದೆ. ಇದರ ಪರಿಣಾಮವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಹೆಚ್ಚುತ್ತಿದೆ ಮತ್ತು ಪ್ರವಾಸಿಗರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ


ಅಮೆರಿಕವು ಭಾರತದ ಪ್ರಧಾನಿಗೆ ದೇಶದ ಅತಿಥಿ ಗೌರವವನ್ನು ನೀಡಿದೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ನೀಡಿದ ಗೌರವವನ್ನು ಇಲ್ಲಿಯವರೆಗೆ ಯಾರಿಗೂ ನೀಡಲಾಗಿಲ್ಲ


ಬಾಹ್ಯಾಕಾಶ, ರಕ್ಷಣೆ, ಅರೆವಾಹಕ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ, ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ

Posted On: 23 JUN 2023 5:19PM by PIB Bengaluru

ಕೇಂದ್ರ ಗೃಹ ವ್ಯವಹಾರಗಳು ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ʻಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯʼಕ್ಕೆ(ಸಿಎಫ್ಎಸ್ಎಲ್) ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ, ಜಮ್ಮುವಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಶ್ರೀ ಅಮಿತ್ ಶಾ ಅವರು ತ್ರಿಕೂಟ ನಗರದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಸಾಂಬಾದ ಸಿಎಫ್‌ಎಸ್‌ಎಲ್‌ಗೆ ಶಂಕುಸ್ಥಾಪನೆ ಹಾಗೂ ಇತರೆ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ/ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001DYWV.jpg

 

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪದಿಂದಾಗಿ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ಒಂದುಗೂಡಿದೆ ಮತ್ತು 370ನೇ ವಿಧಿಯನ್ನು ರದ್ದುಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. 370ನೇ ವಿಧಿಯನ್ನು ಸೇರ್ಪಡೆ ಪ್ರಸ್ತಾಪವನ್ನು ವಿರೋಧಿಸಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು 1953ರಲ್ಲಿ ಕೈಗಾರಿಕಾ ಮತ್ತು ಸರಬರಾಜು ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ದೇಶದಲ್ಲಿ
ʻದೋ ವಿಧಾನ್, ದೋ ನಿಶಾನ್, ದೋ ಪ್ರಧಾನ್ʼ ಕೆಲಸ ಮಾಡುವುದಿಲ್ಲ ಎಂದು ಡಾ. ಮುಖರ್ಜಿ ಅವರು ಹೇಳಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಆಗಸ್ಟ್ 5 ರಂದು 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸನ್ನು ನನಸು ಮಾಡಿದರು ಎಂದು ಶ್ರೀ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಮಾತೆಯ ಕಿರೀಟವನ್ನಾಗಿ ಮಾಡಿದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಅವರ ಕೊಡುಗೆಗೆ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇಡೀ ದೇಶವು ಋಣಿಯಾಗಿದೆ ಎಂದು ಅವರು ಸ್ಮರಿಸಿದರು.

 

https://static.pib.gov.in/WriteReadData/userfiles/image/image0022HYW.jpg

ಇಂದು ಜಮ್ಮುವಿನಲ್ಲಿ ಸುಮಾರು 309 ಕೋಟಿ ರೂ.ಗಳ ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಮಾಹಿತಿ ನೀಡಿದರು. 100 ಕೋಟಿ ರೂ.  ವೆಚ್ಚದಲ್ಲಿ ʻಸಿಎಫ್ಎಸ್ಎಲ್ʼ, 157.47 ಕೋಟಿ ರೂ.ಗಳ ವೆಚ್ಚದಲ್ಲಿ ರಂಬನ್ ಮತ್ತು ಕಿಶ್ತ್ವಾರ್‌ನಲ್ಲಿ ʻಜಲ ಜೀವನ್ ಮಿಷನ್ʼ ಅಡಿಯಲ್ಲಿ 41 ನೀರು ಸರಬರಾಜು ಯೋಜನೆಗಳು, 32.46 ಕೋಟಿ ರೂ.ಗಳ ವೆಚ್ಚದಲ್ಲಿ ದೋಡಾ ಬಸ್ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ಯೋಜನೆಗಳು ಇದರಲ್ಲಿ ಸೇರಿವೆ. ಇದೇ ವೇಳೆ, ಬಕ್ಷಿ ನಗರದಲ್ಲಿ 40.86 ಕೋಟಿ ರೂ.ಗಳ ವೆಚ್ಚದಲ್ಲಿ ಮೂಳೆ ಮತ್ತು ಕೀಲು ಆಸ್ಪತ್ರೆ, 17.77 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಿಡ್ ಸ್ಟೇಷನ್ ಮತ್ತು 25 ಕೋಟಿ ರೂ.ಗಳ ವೆಚ್ಚದಲ್ಲಿ ಡೋಗ್ರಾ ಚೌಕ್ ನಿಂದ ಕೆ.ಸಿ.ಚೌಕ್ ವರೆಗಿನ ರಸ್ತೆಯ  ಉನ್ನತೀಕರಣ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

 

https://static.pib.gov.in/WriteReadData/userfiles/image/image0035QJC.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ʻಗೋಲ್ಡನ್ ಹೆಲ್ತ್ ಕಾರ್ಡ್ʼ ಗಳ ವಿತರಣಾ ಕಾರ್ಯಕ್ರಮವೂ ಇಂದು ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಸುಮಾರು 97 ಲಕ್ಷ ಜನರು ಈ ʻಗೋಲ್ಡನ್ ಹೆಲ್ತ್ ಕಾರ್ಡ್ʼನ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ದೇಶಾದ್ಯಂತ ʻಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ʼ ಯೋಜನೆ ಅಡಿಯಲ್ಲಿ ಬಡವರು ಮಾತ್ರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ನಾಗರಿಕರಿಗೆ 5 ಲಕ್ಷ ರೂ.ಗಳವರೆಗಿನ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಈ ಯೋಜನೆಯಡಿ ಪ್ರತಿದಿನ 2 ಕೋಟಿ ರೂ.ಗಳನ್ನು ಪಾವತಿಸುತ್ತಿದೆ.

 

https://static.pib.gov.in/WriteReadData/userfiles/image/image004K4Y5.jpg

ಇತ್ತೀಚೆಗೆ ಶ್ರೀನಗರದಲ್ಲಿ ʻಜಿ-20ʼ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಮ್ಮೇಳನದಲ್ಲಿ ಭಾಗವಹಿಸಿದ ಅನೇಕ ದೇಶಗಳ ನಾಯಕರು ಕಾಶ್ಮೀರದ ಉತ್ತಮ ಪ್ರವಾಸೋದ್ಯಮದ ಸಂದೇಶವನ್ನು  ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುರವ ಸಂದೇಶವನ್ನು ಇಡೀ ಜಗತ್ತಿಗೆ ತಲುಪಿಸಿದರು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ ಎಂದು ಶ್ರೀ ಶಾ ಹೇಳಿದರು. ಪ್ರಸ್ತುತ, ಹೊಸದಾಗಿ 32,000 ಪಂಚ್‌, ಸರಪಂಚ್ ಮತ್ತು ತಹಸಿಲ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಆಯ್ಕೆಯಾಗಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಕಳೆದ 70 ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ 4 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ 9 ವರ್ಷಗಳಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳು ಮತ್ತು 15 ನರ್ಸಿಂಗ್ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಕೇವಲ 500 ವೈದ್ಯಕೀಯ ಸೀಟುಗಳಿದ್ದವು, ಈಗ 600 ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಪದವಿ ಕಾಲೇಜುಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನು 96 ರಿಂದ 147ಕ್ಕೆ ಹೆಚ್ಚಿಸಲಾಗಿದೆ. ಐಐಟಿ ಮತ್ತು ಐಐಎಂ ಅನ್ನು ಜಮ್ಮುವಿಗೆ ಒದಗಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ತಿರುಮಲ ತಿರುಪತಿ ದೇವಸ್ಥಾನ ಮಂದಿರವನ್ನು ಉದ್ಘಾಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

https://static.pib.gov.in/WriteReadData/userfiles/image/image0053N3P.jpg

 

ಜಮ್ಮು ಮತ್ತು ಕಾಶ್ಮೀರವನ್ನು ಹಲವು ವರ್ಷಗಳಿಂದ ಮೂರು ಕುಟುಂಬಗಳು ಆಳುತ್ತಿದ್ದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 370ನೇ ವಿಧಿಯಿಂದಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಜೊತೆಗೆ, ಇದರಿಂದ ರಾಜ್ಯದಲ್ಲಿ ಹೆಚ್ಚಿದ ಭಯೋತ್ಪಾದನೆಗೆ 42,000 ಜನರು ಬಲಿಯಾದರು. ಆದರೆ ಇನ್ನೂ ಈ ಜನರು ನಾವು 370ನೇ ವಿಧಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಿದೆ ಎಂದು ಶ್ರೀ ಶಾ ಹೇಳಿದರು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಶ್ರೀ ಮೋದಿ ಅವರು ಗುಡ್ಡಗಾಡು ಸಮುದಾಯಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮೀಸಲಾತಿ ಹಕ್ಕುಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು. ಶ್ರೀ ಮೋದಿ ಮಾತ್ರ ಈ ನ್ಯಾಯವನ್ನು ಮಾಡಲು ಸಾಧ್ಯವಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ 10 ವರ್ಷಗಳಲ್ಲಿ 7,327 ಭಯೋತ್ಪಾದಕ ಕೃತ್ಯಗಳು ನಡೆದಿದ್ದು, ಇವುಗಳಲ್ಲಿ 2,056 ನಾಗರಿಕರು ಮೃತಪಟ್ಟಿದ್ದರು. ಆದರೆ ಕಳೆದ 9 ವರ್ಷಗಳಲ್ಲಿ ಉಗ್ರ ಕೃತ್ಯಗಳ ಸಂಖ್ಯೆ ಸುಮಾರು 70%ರಷ್ಟು ಇಳಿಕೆಯಾಗಿದ್ದು, 2,350  ಭಯೋತ್ಪಾದಕ ಕೃತ್ಯಗಳು ನಡೆದಿವೆ, ಇವುಗಳಲ್ಲಿ 377 ನಾಗರಿಕರು ಮೃತಪಟ್ಟಿದ್ದಾರೆ ಎಂದು ಶ್ರೀ ಶಾ ಮಾಹಿತಿ ನೀಡಿದರು. 370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕೇವಲ 32 ಮುಷ್ಕರ ಮತ್ತು ಬಂದ್‌ ಕರೆಗಳು ವರದಿಯಾಗಿವೆ. ಆದರೆ ಕಲ್ಲು ತೂರಾಟದ ಘಟನೆಗಳು ಕಳೆದ 47 ತಿಂಗಳಲ್ಲಿ ಶೇಕಡಾ 90 ರಷ್ಟು ಕಡಿಮೆಯಾಗಿವೆ ಎಂದು ಅವರು ಹೇಳಿದರು.

 

ಕಳೆದ 9ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೈಗಾರಿಕಾ ನೀತಿ, ಕೈಗಾರಿಕಾ ಭೂಮಿ ಹಂಚಿಕೆ ನೀತಿ, ಖಾಸಗಿ ಕೈಗಾರಿಕಾ ಎಸ್ಟೇಟ್ ಅಭಿವೃದ್ಧಿ ನೀತಿ, ಉಣ್ಣೆ ಸಂಸ್ಕರಣೆ, ಕರಕುಶಲ ಮತ್ತು ಕೈಮಗ್ಗ ನೀತಿ, 2021ರಲ್ಲಿ ಹೊಸ ಚಲನಚಿತ್ರ ನೀತಿ, ಪ್ರವಾಸೋದ್ಯಮಕ್ಕಾಗಿ ಹೋಮ್ ಸ್ಟೇ ಮತ್ತು ಹೌಸ್ ಬೋಟ್ ನೀತಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಭಾರತ ಸರ್ಕಾರ ವಿವಿಧ ನೀತಿಗಳನ್ನು ರೂಪಿಸಿದೆ. ಈ ನೀತಿಗಳಿಂದಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಹೆಚ್ಚುತ್ತಿದೆ ಮತ್ತು ಪ್ರವಾಸಿಗರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. 2022ರಲ್ಲಿ ದಾಖಲೆಯ 1.88 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. 1947 ರಿಂದ 2014 ರವರೆಗೆ ಈ ಪ್ರದೇಶದಲ್ಲಿ ಉದ್ಯೋಗಗಳ ಭಾರಿ ಕೊರತೆ ಇತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಸರ್ಕಾರವು ಯುವಕರಿಗೆ 28,000 ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ, 51,000 ಸ್ವಯಂ ಉದ್ಯೋಗ ಘಟಕಗಳನ್ನು ಸ್ಥಾಪಿಸಿದೆ, ʻಮಿಷನ್ ಯೂತ್ʼ ಅಡಿಯಲ್ಲಿ 70,000 ಯುವಕರಿಗೆ ಜೀವನೋಪಾಯವನ್ನು ಒದಗಿಸಿದೆ. ಸಂಪೂರ್ಣ ಪಾರದರ್ಶಕತೆಯೊಂದಿಗೆ 28,400 ಕೋಟಿ ರೂ.ಗಳ ಕೈಗಾರಿಕಾ ಪ್ಯಾಕೇಜ್ ಅನ್ನು ಹಂಚಿಕೆ ಮಾಡಿದೆ ಎಂದು ಅವರು ಹೇಳಿದರು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹೊಸ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ, ಕಣಿವೆಯ ಯುವಕರ ಕೈಯಲ್ಲಿ ಕಲ್ಲುಗಳು ಇದ್ದವು, ಆದರೆ ಈಗ ಅವರ ಬಳಿ ಲ್ಯಾಪ್‌ಟಾಪ್‌ಗಳಿವೆ. ಈ ವಿದ್ಯಾವಂತ ಯುವಕರು ಜಮ್ಮು ಮತ್ತು ಕಾಶ್ಮೀರದ ಜೊತೆಗೆ ದೇಶದ ಭವಿಷ್ಯವನ್ನೂ ರೂಪಿಸಲಿದ್ದಾರೆ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಮಾತ್ರ ಈ ಬದಲಾವಣೆ ಸಾಧ್ಯವಾಗಿದೆ ಎಂದು ಗೃಹ ಸಚಿವರು ಹೇಳಿದರು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಅಮೆರಿಕವು ಭಾರತದ ಪ್ರಧಾನ ಮಂತ್ರಿಗೆ ದೇಶದ ಅತಿಥಿಯ ಗೌರವವನ್ನು ನೀಡಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಿದ ಗೌರವವನ್ನು ಇಲ್ಲಿಯವರೆಗೆ ಯಾರಿಗೂ ನೀಡಲಾಗಿಲ್ಲ. ಬಾಹ್ಯಾಕಾಶ, ರಕ್ಷಣೆ, ಅರೆವಾಹಕ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ. ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತ ಸರ್ಕಾರವು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರಾರಂಭಿಸಿದೆ, ಆ ಮೂಲಕ  ದೇಶದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ವಿರೋಧದ ಹೊರತಾಗಿಯೂ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 370ನೇ ವಿಧಿಯನ್ನು ರದ್ದುಗೊಳಿಸುವುದು, ರಾಮ ಮಂದಿರ ನಿರ್ಮಾಣ ಮತ್ತು ತ್ರಿವಳಿ ತಲಾಖ್ ರದ್ದು ಮುಂತಾದ ಪ್ರಗತಿಪರ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ 70 ವರ್ಷಗಳಿಂದ ಕಾಯುತ್ತಿದ್ದ ದೇಶದ 60 ಕೋಟಿ ಬಡ ಜನರಿಗೆ ಪ್ರಧಾನಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಅಮಿತ್‌ ಶಾ ಅವರು ಮಾಹಿತಿ ನೀಡಿದರು.

***

 


(Release ID: 1934883) Visitor Counter : 148