ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಜಂಟಿ ಫಲಿತಾಂಶ ಹೇಳಿಕೆ: ಭಾರತ-ಯುಕೆ ಹತ್ತನೇ ಸುತ್ತಿನ ಎಫ್.ಟಿ.ಎ. ಮಾತುಕತೆಗಳು
Posted On:
19 JUN 2023 4:34PM by PIB Bengaluru
ಭಾರತ ಗಣರಾಜ್ಯ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಹತ್ತನೇ ಸುತ್ತಿನ ಮಾತುಕತೆಗಳು
2023ರ ಜೂನ್ 09 ರಂದು, ಭಾರತ ಗಣರಾಜ್ಯ ಮತ್ತು ಯುನೈಟೆಡ್ ಕಿಂಗ್ಡಮ್ ಗಳು ಭಾರತ-ಯುಕೆ ಎಫ್.ಟಿ.ಎ.ಗಾಗಿ ಹತ್ತನೇ ಸುತ್ತಿನ ಮಾತುಕತೆಯನ್ನು ಸಮಾಪನಗೊಳಿಸಿದವು
ಹಿಂದಿನ ಸುತ್ತುಗಳಂತೆ, ಇದನ್ನು ಹೈಬ್ರಿಡ್ ಶೈಲಿಯಲ್ಲಿ ನಡೆಸಲಾಯಿತು - ಹಲವಾರು ಯುಕೆ ಅಧಿಕಾರಿಗಳು ಮಾತುಕತೆಗಳಿಗಾಗಿ ಹೊಸದಿಲ್ಲಿಗೆ ಪ್ರಯಾಣಿಸಿದ್ದರು ಮತ್ತು ಇತರರು ವರ್ಚುವಲ್ ಆಗಿ ಭಾಗವಹಿಸಿದ್ದರು.
50 ಪ್ರತ್ಯೇಕ ಅಧಿವೇಶನಗಳಲ್ಲಿ 10 ನೀತಿ ಕ್ಷೇತ್ರಗಳಿಗೆ ಸಂಬಂಧಿಸಿ ತಾಂತ್ರಿಕ ಚರ್ಚೆಗಳು ನಡೆದವು. ಈ ನೀತಿ ಕ್ಷೇತ್ರಗಳಲ್ಲಿ ವಿವರವಾದ ಕರಡು ಒಪ್ಪಂದದ ಪಠ್ಯ ಚರ್ಚೆಗಳೂ ಒಳಗೊಂಡಿದ್ದವು.
ಹನ್ನೊಂದನೇ ಸುತ್ತಿನ ಮಾತುಕತೆಗಳು ಮುಂಬರುವ ತಿಂಗಳಲ್ಲಿ ನಡೆಯಲಿವೆ.
****
(Release ID: 1933467)
Visitor Counter : 110