ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜಲ ಸಂರಕ್ಷಣೆಯನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಿ, ಜನ ಆಂದೋಲನ ಮೂಲಕ ಜಲ ಆಂದೋಲನಕ್ಕೆ ಶಕ್ತಿ ನೀಡಲು ಉಪರಾಷ್ಟ್ರಪತಿ ಮನವಿ 


3ಆರ್ ಅಂದರೆ ಕಡಿಮೆಗೊಳಿಸು, ಮರು ಬಳಕೆ ಮತ್ತು ಪುನರ್ ಉಪಯೋಗಿ ಮೂಲಕ ಸಾಂಪ್ರದಾಯಿಕ ನೀರು ಕೊಯ್ಲು ವ್ಯವಸ್ಥೆ ಪುನಶ್ಚೇತನಗೊಳಿಸಲು ಉಪ ರಾಷ್ಟ್ರಪತಿ ಕರೆ

ಜಲಸಂರಕ್ಷಣೆಗೆ ಆದ್ಯತೆ ನೀಡಿ ಮುನ್ನಡೆಯುವ ಮೂಲಕ ಮಾದರಿಯಾಗಲು  ಜನ ಪ್ರತಿನಿಧಿಗಳಿಗೆ ಉಪ ರಾಷ್ಟ್ರಪತಿ ಮನವಿ

ಪ್ರಕೃತಿಯ ಸಂರಕ್ಷಣೆಯು ಭಾರತದ ನಾಗರಿಕತೆ ನೀತಿಯ ಅವಿನಾಭಾವ ಅಂಶವಾಗಿದೆ: ಉಪರಾಷ್ಟ್ರಪತಿ

4 ನೇ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಮಾಡಿದ ಉಪರಾಷ್ಟ್ರಪತಿ

Posted On: 17 JUN 2023 3:06PM by PIB Bengaluru

ಎಲ್ಲಾ ನಾಗರಿಕರು ನೀರಿನ ಸಂರಕ್ಷಣೆಯನ್ನು ತಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಶವನ್ನಾಗಿ ಮಾಡಿಕೊಳ್ಳುವಂತೆ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಮನವಿ ಮಾಡಿದರು, ಇದರಿಂದಾಗಿ ಜನ ಆಂದೋಲನವನ್ನು ಉತ್ಸಾಹದಿಂದ ನಡೆಸುವ ಮೂಲಕ ಜಲ ಆಂದೋಲನ ವೇಗ ಪಡೆದುಕೊಳ್ಳುತ್ತದೆ ಎಂದರು. 

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 4 ನೇ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಷಣ ಮಾಡಿದ ಉಪರಾಷ್ಟ್ರಪತಿಗಳು, ನಮ್ಮ ಸಾಂಪ್ರದಾಯಿಕ ನೀರು ಕೊಯ್ಲು ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸಲು 3ಆರ್ ಅಂದರೆ ಕಡಿಮೆಗೊಳಿಸು, ಮರು ಬಳಕೆ ಮತ್ತು ಪುನರ್ ಉಪಯೋಗಿ ಮೂಲಕ ಮುಂದಾಗಲು ಬದ್ಧತೆ ತೋರಬೇಕು ಎಂದು ಕರೆ ನೀಡಿದರು.

ಜಲಸಂಪನ್ಮೂಲ ನಿರ್ವಹಣೆಯಲ್ಲಿ ಅನುಕರಣೀಯ ಕೆಲಸ ಮಾಡಿದ ವಿಜೇತರನ್ನು ಸನ್ಮಾನಿಸಿದ  ಉಪರಾಷ್ಟ್ರಪತಿಗಳು, ಜಲಸಂರಕ್ಷಣೆಗೆ ಆದ್ಯತೆ ನೀಡಿ ಮತ್ತು ಮಾದರಿಯಾಗಿ ಮುನ್ನಡೆಯಲು ಪಂಚಾಯತ್, ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಜನಪ್ರತಿನಿಧಿಗಳಿಗೆ ಕರೆ ನೀಡಿದರು.

ಸಾಂವಿಧಾನಿಕ ನಿಬಂಧನೆಗಳ ಮೂಲಭೂತ ಕರ್ತವ್ಯವಾದ ನೀರು ಮತ್ತು ಪರಿಸರದ ಸಂರಕ್ಷಣೆಗೆ ನೀತಿ ನಿದೇಶನಗಳ ಗಮನ ಸೆಳೆದ ಉಪರಾಷ್ಟ್ರಪತಿಗಳು, ಜಲ ಜೀವನ್ ಮಿಷನ್ನಂತಹ ಸರ್ಕಾರದ ಉಪಕ್ರಮಗಳು ಸಾಮಾನ್ಯ ಜನರ ಜೀವನದ ಮೇಲೆ ಬೀರುತ್ತಿರುವ ಪರಿವರ್ತನೆಯ ಪರಿಣಾಮದ ಬಗ್ಗೆ ವಿವರಿಸಿದರು.

ನೀರಿನ ಸಂರಕ್ಷಣೆಯು ಯಾವಾಗಲೂ ಭಾರತದ ನಾಗರಿಕತೆಯ ನೀತಿಯ ಒಂದು ಅವಿನಾಭಾವ ಅಂಶವಾಗಿದೆ. ಪ್ರಕೃತಿಯ ಕೊಡುಗೆಗಳ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆಯು ನಮ್ಮ ಅತ್ಯುತ್ತಮ ಅವಶ್ಯಕತೆಗೆ ಅನುಗುಣವಾಗಿರಬೇಕು ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.

ಸಾಂಕೇತಿಕ ಕಲಶಕ್ಕೆ ನೀರು ತುಂಬಿಸುವ ಮೂಲಕ ಸಮಾರಂಭ  ಉದ್ಘಾಟಿಸಿದ ಉಪರಾಷ್ಟ್ರಪತಿಗಳು,  4 ನೇ ರಾಷ್ಟ್ರೀಯ ಜಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 11 ವಿಭಾಗಗಳಲ್ಲಿ 41 ವಿಜೇತರನ್ನು ಸನ್ಮಾನಿಸಿದರು.

ಜಲ ಸಂರಕ್ಷಣೆಯ ಸಂದೇಶವನ್ನು ವಿಸ್ತರಿಸಲು ದೂರದರ್ಶನದಲ್ಲಿ ಪ್ರಸಾರವಾಗಲಿರುವ ರಾಷ್ಟ್ರೀಯ ಜಲ ಮಿಷನ್ನ ಮ್ಯಾಸ್ಕಾಟ್ (ಲಾಂಛನ) ಆಗಿರುವ ಪಿಕು ಎಂಬ ಅನಿಮೇಟೆಡ್ ಪಾತ್ರವನ್ನು ಒಳಗೊಂಡ ಕಿರುಚಿತ್ರವನ್ನು ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಉದ್ಘಾಟಿಸಿದರು.

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, , ಜಲಶಕ್ತಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ಬಿಶ್ವೇಶ್ವರ ತುಡು, ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ, ಜಲಶಕ್ತಿ ಇಲಾಖೆ  ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್, , ಜಲಶಕ್ತಿ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

****


(Release ID: 1933102) Visitor Counter : 137