ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಥಮ ಜನಜಾತೀಯ ಖೇಲ್ ಮಹೋತ್ಸವದ ಉಪಕ್ರಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 JUN 2023 9:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭುವನೇಶ್ವರದ ಕಳಿಂಗ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಪ್ರಥಮ ಜನಜಾತಿ ಖೇಲ್ ಮಹೋತ್ಸವವನ್ನು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ರೀಡಾಕೂಟವನ್ನು ಬೃಹತ್ ಆರಂಭ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ಅವರು, ದೇಶಕ್ಕೆ ಕೀರ್ತಿ ತರುವಲ್ಲಿ ಬುಡಕಟ್ಟು ಕ್ರೀಡಾಪಟುಗಳ  ಪಾತ್ರವನ್ನು ಒಪ್ಪಿಕೊಂಡರು.

ಅಮೃತ ಮಹೋತ್ಸವದ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿ ಅವರು: " ನಮ್ಮ ಕ್ರೀಡಾ ಜಗತ್ತಿನಲ್ಲಿ ಉತ್ತಮ ಆರಂಭ! ಜಾಗತಿಕ ಕಾರ್ಯಕ್ರಮಗಳಲ್ಲಿ ಭಾರತವನ್ನು ಗುರುತಿಸುವಲ್ಲಿ ಬುಡಕಟ್ಟು ಕ್ರೀಡಾಪಟುಗಳು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅಂತಹ ಪ್ರಯತ್ನಗಳು ಈ ಸಮುದಾಯದಿಂದ ದೇಶಕ್ಕೆ ಹೊಸ ಪ್ರತಿಭೆಗಳನ್ನು ನೀಡುತ್ತವೆ." ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1932517) ವಿಸಿಟರ್ ಕೌಂಟರ್ : 157