ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಬೇಸಿಗೆ ಕ್ರೀಡಾ ಕೂಟ – ಬರ್ಲಿನ್‌ ನ ವಿಶೇಷ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲು ತೆರಳಿದ 198 ಅಥ್ಲೀಟ್‌ ಗಳು ಸೇರಿ  280 ಸದಸ್ಯರ ಭಾರತ ತಂಡ

Posted On: 14 JUN 2023 11:17AM by PIB Bengaluru

ಜರ್ಮನಿಯ ಬರ್ಲಿನ್‌ ನಲ್ಲಿ ನಡೆಯಲಿರುವ ವಿಶೇಷ ಒಲಿಂಪಿಕ್ಸ್‌ ನ ವಿಶ್ವ ಕ್ರೀಡಾಕೂಟಕ್ಕೆ 198 ಅಥ್ಲೀಟ್‌ ಗಳು ಸೇರಿ  280 ಸದಸ್ಯರ ಭಾರತ ತಂಡ ಜೂನ್‌ 12 ರಂದು ತೆರಳಿತು.

ಇದಕ್ಕೂ ಮುನ್ನ ಜೂನ್‌ 8 ರಂದು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ [ಎಂವೈಎಎಸ್]‌ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು.  

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ 7.7 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದು ಈ ವರೆಗೆ ನೀಡಿರುವ ಅತ್ಯಧಿಕ ಮೊತ್ತವಾಗಿದೆ.

190 ದೇಶಗಳ 7000 ಅಥ್ಲೀಟ್‌ ಗಳು ಭಾಗವಹಿಸುತ್ತಿರುವ ಈ ಕ್ರೀಡಾಕೂಟಕ್ಕೆ ತಯಾರಿ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ [ಎಸ್.ಎ.ಐ] ದೆಹಲಿಯ ಜವಾಹರ್‌ ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಪೂರ್ವ ಸಿದ್ಧತಾ ಶಿಬಿರದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.  

ಈ ಬೃಹತ್‌ ಕ್ರೀಡಾಕೂಟ ಜೂನ್ 17 ರಿಂದ 25 ರ ವರೆಗೆ ನಡೆಯಲಿದ್ದು, ಭಾರತದ ಅಥ್ಲೀಟ್‌ ಗಳು 16 ವಿವಿಧ ಕ್ರೀಡಾ ವಿಭಾಗಗಳಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.  

***


(Release ID: 1932270) Visitor Counter : 145