ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಒಲಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಮತ್ತು ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಅವರು ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ತರಬೇತಿ ಪಡೆಯುವ ಪ್ರಸ್ತಾವನೆಗೆ ಎಂಒಸಿ ಅನುಮೋದನೆ 

Posted On: 13 JUN 2023 5:25PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (MYAS) ಮತ್ತು ಮಿಷನ್ ಒಲಿಂಪಿಕ್ ಕೋಶ(MOC) ಇತ್ತೀಚಿನ ಸಭೆಯಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಅಥ್ಲೀಟ್‌ಗಳಾದ ಮೀರಾಬಾಯಿ ಚಾನು ಮತ್ತು ಬಿಂದ್ಯಾರಾಣಿ ದೇವಿ ಅವರು ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ವಿದೇಶಿ ತರಬೇತಿ ಶಿಬಿರವನ್ನು ಪಡೆಯುವುದಕ್ಕೆ ಅನುಮೋದನೆ ನೀಡಿವೆ.

ಒಲಂಪಿಕ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ಈ ಇಬ್ಬರು ಅಥ್ಲೀಟ್ ಗಳು ಸೇಂಟ್ ಲೂಯಿಸ್ ಸ್ಕ್ವಾಟ್ ವಿಶ್ವವಿದ್ಯಾಲಯದಲ್ಲಿ ಡಾ ಆರನ್ ಹಾರ್ಶಿಗ್ ಅವರ ಅಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕೆ ಮೊದಲು ಅವರ ಪುನರ್ವಸತಿ ಮತ್ತು ಶಕ್ತಿ ತರಬೇತಿ ಪ್ರಕ್ರಿಯೆಯಲ್ಲಿ ಕೆಲಸ ಮಾಡಲಿದ್ದಾರೆ. 

65 ದಿನಗಳ ವಿದೇಶಿ ತರಬೇತಿ ಶಿಬಿರದಲ್ಲಿ, ಇವರಿಬ್ಬರು ಭಾರತೀಯ ಮುಖ್ಯ ಕೋಚ್ ವಿಜಯ್ ಶರ್ಮಾ ಮತ್ತು ಫಿಸಿಯೋಥೆರಪಿಸ್ಟ್ ತೆಸ್ನೀಮ್ ಜಯ್ಯದ್ ಅವರು ಸಹ ಇರಲಿದ್ದಾರೆ.

ಇವರ ವಿಮಾನ ಪ್ರಯಾಣದ ವೆಚ್ಚ, ಊಟ ಮತ್ತು ವಸತಿ ವೆಚ್ಚ, ವೈದ್ಯಕೀಯ ವಿಮೆ, ಸ್ಥಳೀಯ ಸಾರಿಗೆ ವೆಚ್ಚ, ಜಿಮ್ ವೆಚ್ಚಗಳು ಮತ್ತು ವೈದ್ಯರ ಸಮಾಲೋಚನೆ ವೆಚ್ಚವನ್ನು ಇತರ ವೆಚ್ಚಗಳಲ್ಲಿ ಸರ್ಕಾರವು ಭರಿಸಲಿದೆ.

***


(Release ID: 1932139) Visitor Counter : 135