ಸಂಪುಟ
ಹುಡಾ (ಎಚ್.ಯು.ಡಿ.ಎ) ಸಿಟಿ ಸೆಂಟರ್ ನಿಂದ ಗುರುಗ್ರಾಮ್ ಸೈಬರ್ ಸಿಟಿ, ಮತ್ತು ಕವಲು ಮಾರ್ಗದಿಂದ ದ್ವಾರಕಾ ಎಕ್ಸ್ ಪ್ರೆಸ್ ವೇವರೆಗೆ ಮೆಟ್ರೋ ಸಂಪರ್ಕಕ್ಕೆ ಸಂಪುಟದ ಅನುಮೋದನೆ
Posted On:
07 JUN 2023 3:02PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹುಡಾ ಸಿಟಿ ಸೆಂಟರ್ ನಿಂದ ಸೈಬರ್ ಸಿಟಿವರೆಗೆ ಕವಲು ಮಾರ್ಗದಿಂದ ಗುರುಗ್ರಾಮದ ದ್ವಾರಕಾ ಎಕ್ಸ್ ಪ್ರೆಸ್ ವೇವರೆಗೆ 28.50 ಕಿ.ಮೀ ಉದ್ದದ ಮಾರ್ಗದಲ್ಲಿ 27 ನಿಲ್ದಾಣಗಳನ್ನು ಒಳಗೊಂಡ ಮೆಟ್ರೋ ಸಂಪರ್ಕಕ್ಕೆ ತನ್ನ ಅನುಮೋದನೆ ನೀಡಿದೆ.
ಯೋಜನೆಯ ಸಂಪೂರ್ಣ ವೆಚ್ಚ 5,452 ಕೋಟಿ ರೂ. ಆಗಿರುತ್ತದೆ. ಇದು 1435 ಎಂಎಂ (5 ಅಡಿ 8.5 ಇಂಚು) ಸ್ಟ್ಯಾಂಡರ್ಡ್ ಗೇಜ್ ಲೈನ್ ಆಗಿರುತ್ತದೆ. ಇಡೀ ಯೋಜನೆಯನ್ನು ಎತ್ತರಿಸಲಾಗುವುದು. ಬಸಾಯಿ ಗ್ರಾಮದಿಂದ ಡಿಪೋಗೆ ಸಂಪರ್ಕ ಕಲ್ಪಿಸಲು ಕವಲು ಮಾರ್ಗವನ್ನು ಒದಗಿಸಲಾಗಿದೆ.
ಯೋಜನೆ ಮಂಜೂರಾದ ದಿನಾಂಕದಿಂದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಮತ್ತು ಇದನ್ನು ಮಂಜೂರಾತಿ ಆದೇಶ ಹೊರಡಿಸಿದ ಬಳಿಕ ಭಾರತ ಸರ್ಕಾರ ಹಾಗು ಹರ್ಯಾಣಾ ಸರಕಾರದ 50:50 ಅನುಪಾತಕ್ಕೆ ಅನುಗುಣವಾಗಿ ಸ್ಥಾಪಿಸಲಾಗುವ ವಿಶೇಷ ಉದ್ದೇಶದ ವಾಹಕ (ಎಸ್ ಪಿವಿ)ವಾದ ಹರಿಯಾಣ ಮಾಸ್ ರಾಪಿಡ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಎಂಆರ್ ಟಿಸಿ) ಮೂಲಕ ಅನುಷ್ಟಾನಕ್ಕೆ ತರಲಾಗುವುದು.
ಕಾರಿಡಾರಿನ ಹೆಸರು
|
ಉದ್ದ
(ಕಿ.ಮೀ.ಗಳಲ್ಲಿ )
|
ನಿಲ್ದಾಣಗಳ ಸಂಖ್ಯೆ
|
ಎತ್ತರಿಸಲ್ಪಟ್ಟ/ ಭೂಗತ
|
ಹೂಡಾ ಸಿಟಿ ಸೆಂಟರಿನಿಂದ ಸೈಬರ್ ಸಿಟಿಗೆ-ಮುಖ್ಯ ಕಾರಿಡಾರ್
|
26.65
|
26
|
ಎತ್ತರಿಸಲ್ಪಟ್ಟ ನಿಲ್ದಾಣ
|
ಬಸಾಯಿ ಗ್ರಾಮದಿಂದ ದ್ವಾರಕಾ ಎಕ್ಸ್ ಪ್ರೆಸ್ ವೇ -ಕವಲು
|
1.85
|
01
|
ಎತ್ತರಿಸಲ್ಪಟ್ಟ ನಿಲ್ದಾಣ
|
ಒಟ್ಟು
|
28.50
|
|
|
ಪ್ರಯೋಜನಗಳು:
ಈಗಿನಂತೆ ಹಳೆಯ ಗುರುಗ್ರಾಮದಲ್ಲಿ ಯಾವುದೇ ಮೆಟ್ರೋ ಮಾರ್ಗವಿಲ್ಲ. ಈ ಸಾಲಿನ ಮುಖ್ಯ ಲಕ್ಷಣವೆಂದರೆ ಹೊಸ ಗುರುಗ್ರಾಮ್ ಅನ್ನು ಹಳೆಯ ಗುರುಗ್ರಾಮ್ ನೊಂದಿಗೆ ಸಂಪರ್ಕಿಸುವುದು. ಈ ಜಾಲವು ಭಾರತೀಯ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮುಂದಿನ ಹಂತದಲ್ಲಿ, ಇದು ಐಜಿಐ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಒದಗಿಸುತ್ತದೆ. ಇದು ಆ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಸಹ ಮಾಡುತ್ತದೆ.
ಅನುಮೋದಿತ ಕಾರಿಡಾರ್ ನ ವಿವರ ಈ ಕೆಳಗಿನಂತಿದೆ:
ವಿವರಗಳು
|
ಹೂಡಾ ಸಿಟಿ ಸೆಂಟರಿನಿಂದ ಗುರುಗ್ರಾಮದ ಸೈಬರ್ ಸಿಟಿವರೆಗೆ
|
ಉದ್ದ
|
28.50 ಕಿ.ಮೀ.
|
ನಿಲ್ದಾಣಗಳ ಸಂಖ್ಯೆ
|
27 ನಿಲ್ದಾಣಗಳು
(ಎಲ್ಲವೂ ಎತ್ತರಿಸಲ್ಪಟ್ಟಂತಹವು.)
|
ಜೋಡಣೆ
ಹೊಸ ಗುರುಗ್ರಾಮ ಪ್ರದೇಶ
ಹಳೆ ಗುರುಗ್ರಾಮ ಪ್ರದೇಶ
|
ಹೂಡಾ ಸಿಟಿ ಸೆಂಟರ್-ಸೆಕ್ಟರ್ 45-ಸೈಬರ್ ಪಾರ್ಕ್-ಸೆಕ್ಟರ್ 47-ಸುಭಾಶ್ ಚೌಕ-ಸೆಕ್ಟರ್ 48-ಸೆಕ್ಟರ್ 72A-ಹೀರೋ ಹೊಂಡಾ ಚೌಕ-ಉದ್ಯೋಗ ವಿಹಾರ ಹಂತ 6-ಸೆಕ್ಟರ್ 10 –ಸೆಕ್ಟರ್ 37 ಬಸಾಯಿ ಗ್ರಾಮ –ಸೆಕ್ಟರ್ 9 –ಸೆಕ್ಟರ್ 7-ಸೆಕ್ಟರ್ 4- ಸೆಕ್ಟರ್ 5-ಅಶೋಕ ವಿಹಾರ-ಸೆಕ್ಟರ್ 3- ಬಜ್ ಗೇರಾ ರೋಡ್-ಪಾಲಂ ವಿಹಾರ ವಿಸ್ತರಣೆ-ಪಾಲಂ ವಿಹಾರ –ಸೆಕ್ಟರ್ 23 A- ಸೆಕ್ಟರ್ 22 –ಉದ್ಯೋಗ ವಿಹಾರ ಹಂತ 4-ಉದ್ಯೋಗ ವಿಹಾರ ಹಂತ 5-ಸೈಬರ್ ಸಿಟಿ
ದ್ವಾರಕಾ ಎಕ್ಸ್ ಪ್ರೆಸ್ ವೇ ಗೆ ಕವಲು ಮಾರ್ಗ (ಸೆಕ್ಟರ್ 101)
|
ವಿನ್ಯಾಸ ವೇಗ
|
80 ಕಿ.ಮೀ/ಗಂಟೆಗೆ
|
ಸರಾಸರಿ ವೇಗ
|
34 ಕಿ.ಮೀ./ಗಂಟೆಗೆ
|
ಪೂರ್ಣಗೊಳಿಸುವಾಗ ಉದ್ದೇಶಿತ ವೆಚ್ಚ
|
ರೂ.. 5,452.72 ಕೋಟಿ
|
ಭಾರತ ಸರಕಾರದ ಪಾಲು
|
ರೂ. 896.19 ಕೋಟಿ
|
ಹರ್ಯಾಣಾ ಸರಕಾರದ ಪಾಲು
|
ರೂ. 1,432.49 ಕೋಟಿ
|
ಸ್ಥಳೀಯ ಸಂಸ್ಥೆಗಳ ಪಾಲು (ಹೂಡಾ)
|
ರೂ. 300 ಛ್
|
ಪಿ.ಟಿ.ಎ.( ಸಾಲ ಸಹಾಯ ಘಟಕದ ಮೂಲಕ ವರ್ಗಾವಣೆ)
|
ರೂ.. 2,688.57 ಕೋಟಿ
|
ಪಿ.ಪಿ.ಪಿ. (ಲಿಫ್ಟ್ ಮತ್ತು ಎಸ್ಕಲೇಟರ್)
|
ರೂ. 135.47 ಕೋಟಿ
|
ಪೂರ್ಣಗೊಳಿಸಲು ಕಾಲಾವಕಾಶ
|
ಯೋಜನೆ ಮಂಜೂರಾದ ದಿನಾಂಕದಿಂದ ನಾಲ್ಕು ವರ್ಷಗಳು.
|
ಅನುಷ್ಠಾನ ಏಜೆನ್ಸಿ
|
ಹರ್ಯಾಣಾ ಮಾಸ್ ರಾಪಿಡ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಲಿಮಿಟೆಡ್ ( ಎಚ್.ಎಂ.ಆರ್.ಟಿ.ಸಿ.))
|
ಹಣಕಾಸು ಹೂಡಿಕೆಯ ಮೇಲಿನ ಅಂತರಿಕ ರಿಟರ್ನ್ ದರ (ಎಫ್.ಐ.ಆರ್.ಆರ್.)
|
14.07%
|
ಆರ್ಥಿಕ ಆಂತರಿಕ ರಿಟರ್ನ್ ದರ (ಇ.ಐ.ಆರ್.ಅರ್.)
|
21.79%
|
ಗುರುಗ್ರಾಮದ ಅಂದಾಜು ಜನಸಂಖ್ಯೆ
|
ಸುಮಾರು 25ಲಕ್ಷ
|
ಅಂದಾಜು ದೈನಿಕ ಪ್ರಯಾಣಿಕರು
|
5.34 ಲಕ್ಷ –ವರ್ಷ 2026
7.26 ಲಕ್ಷ – ವರ್ಷ 2031
8.81 ಲಕ್ಷ – ವರ್ಷ 2041
10.70 ಲಕ್ಷ – ವರ್ಷ 2051
|
ಅನುಬಂಧ-1 ರ ಪ್ರಕಾರ ಪ್ರಸ್ತಾವಿತ ಕಾರಿಡಾರ್ ನ ಮಾರ್ಗ ನಕ್ಷೆ
ಸಾಲವನ್ನು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬೋರ್ಡ್ (ಇಐಬಿ) ಮತ್ತು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ಯೊಂದಿಗೆ ಮಾಡಲಾಗುತ್ತದೆ. .
ಹಿನ್ನೆಲೆ:
ಗುರುಗ್ರಾಮದ ಇತರ ಮೆಟ್ರೋ ಮಾರ್ಗಗಳು:
a) ಡಿ.ಎಂ.ಆರ್.ಸಿ. ಯ ಹಳದಿ ರೇಖೆ (ಲೈನ್-2)- ಅನುಬಂಧ-1 ರಲ್ಲಿ ಹಳದಿ ಬಣ್ಣದಲ್ಲಿ ತೋರಿಸಲಾಗಿದೆ
i) ಮಾರ್ಗದ ಉದ್ದ- 49.019 ಕಿ.ಮೀ (ಸಮಯ್ಪುರ್ ಬದ್ಲಿ- ಹುಡಾ ಸಿಟಿ ಸೆಂಟರ್; 37 ನಿಲ್ದಾಣಗಳು)
ii) ದೆಹಲಿ ಭಾಗ- 41.969 ಕಿ.ಮೀ (ಸಮಯ್ಪುರ್ ಬದ್ಲಿ- ಅರ್ಜನ್ಗಢ; 32 ನಿಲ್ದಾಣಗಳು)
iii) ಹರಿಯಾಣ ಭಾಗ- 7.05 ಕಿ.ಮೀ (ಗುರು ದ್ರೋಣಾಚಾರ್ಯ - ಹುಡಾ ಸಿಟಿ ಸೆಂಟರ್; 5 ನಿಲ್ದಾಣಗಳು)
iv) ದೈನಂದಿನ ಪ್ರಯಾಣಿಕರ ಸಂಖ್ಯೆ - 12.56 ಲಕ್ಷ
v) ಹುಡಾ ಸಿಟಿ ಸೆಂಟರ್ ನಲ್ಲಿ ಲೈನ್ -2 ನೊಂದಿಗೆ ಪ್ರಸ್ತಾವಿತ ಮಾರ್ಗದ ಸಂಪರ್ಕ
vi) ವಿವಿಧ ವಿಸ್ತರಣೆಗಳಲ್ಲಿ ಕಾರ್ಯಾಚರಣೆಯ ದಿನಾಂಕ
iv) ದೈನಂದಿನ ಪ್ರಯಾಣಿಕರ ಸಂಖ್ಯೆ - 12.56 ಲಕ್ಷ
v) ಹುಡಾ ಸಿಟಿ ಸೆಂಟರ್ ನಲ್ಲಿ ಲೈನ್ -2 ನೊಂದಿಗೆ ಪ್ರಸ್ತಾವಿತ ಮಾರ್ಗದ ಸಂಪರ್ಕ
vi) ವಿವಿಧ ವಿಸ್ತರಣೆಗಳಲ್ಲಿ ಕಾರ್ಯಾಚರಣೆಯ ದಿನಾಂಕ
ವಿಶ್ವವಿದ್ಯಾಲಯದಿಂದ ಕಾಶ್ಮೀರ ಗೇಟ್
|
ಡಿಸೆಂಬರ್ 2004
|
ಕಾಶ್ಮೀರ ಗೇಟ್ ನಿಂದ ಸೆಂಟ್ರಲ್ ಸೆಕ್ರೆಟರಿಯೇಟ್
|
ಜುಲೈ 2005
|
ವಿಶ್ವವಿದ್ಯಾಲಯದಿಂದ ಜಹಾಂಗೀರ್ ಪುರಿ
|
ಫೆಬ್ರವರಿ 2009
|
ಕುತುಬ್ ಮಿನಾರ್ ನಿಂದ ಹೂಡಾ ಸಿಟಿ
|
ಜೂನ್ 2010
|
ಕುತುಬ್ ಮಿನಾರ್ ನಿಂದ ಸೆಂಟ್ರಲ್ ಸೆಕ್ರೆಟರಿಯೇಟ್
|
ಸೆಪ್ಟೆಂಬರ್ 2010
|
ಜಹಾಂಗೀರ್ ಪುರಿಯಿಂದ ಸಮಯಪುರ್ ಬದ್ಲಿ
|
ನವೆಂಬರ್ 2015
|
ಈ ಮಾರ್ಗವು ಬ್ರಾಡ್ ಗೇಜ್ 1676 ಮಿ.ಮಿ. (5 ಅಡಿ 6 ಇಂಚುಗಳ ಗೇಜ್ ).
ಬಿ) ರಾಪಿಡ್ ಮೆಟ್ರೋ ಗುರುಗ್ರಾಮ್ (ಅನುಬಂಧ-1 ರಲ್ಲಿ ಹಸಿರು ಬಣ್ಣದಲ್ಲಿ ತೋರಿಸಲಾಗಿದೆ)
i) ಮಾರ್ಗದ ಉದ್ದ- 11.6 ಕಿ.ಮೀ.
ii) ಸ್ಟ್ಯಾಂಡರ್ಡ್ ಗೇಜ್ - 1435 ಮಿಮೀ (4 ಅಡಿ 8.5 ಇಂಚುಗಳು)
ii) ಎರಡು ಹಂತಗಳಲ್ಲಿ ನಿರ್ಮಿಸಲಾದ ಮಾರ್ಗ.
- ಮೊದಲ ಹಂತವು ಸಿಕಂದರ್ ಪುರ್ ನಿಂದ ಸೈಬರ್ ಹಬ್ ವರೆಗೆ ಒಟ್ಟು 5.1 ಕಿ.ಮೀ ಉದ್ದದ ಮಾರ್ಗವನ್ನು (ಲೂಪ್) ಹೊಂದಿದೆ, ಇದನ್ನು ಆರಂಭದಲ್ಲಿ ಡಿಎಲ್ ಎಫ್ ಒಕ್ಕೂಟ ಮತ್ತು ಐಎಲ್ ಅಂಡ್ ಎಫ್ ಎಸ್ ಗ್ರೂಪ್ ನ ಎರಡು ಕಂಪನಿಗಳಾದ ಐ.ಇ.ಆರ್. ಎಸ್ (ಐಎಲ್ & ಎಫ್ ಎಸ್ ಎನ್ಸೊ ರೈಲು ವ್ಯವಸ್ಥೆ) ಮತ್ತು ಐಟಿಎನ್ ಎಲ್ (ಐಎಲ್ & ಎಫ್ ಎಸ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ಲಿಮಿಟೆಡ್) ನಿರ್ಮಿಸಿದೆ. ಮೊದಲ ಹಂತವನ್ನು 14.11.2013 ರಿಂದ ರಾಪಿಡ್ ಮೆಟ್ರೋ ಗುರ್ಗಾಂವ್ ಲಿಮಿಟೆಡ್ ಎಂಬ ಹೆಸರಿನ ಎಸ್ ಪಿವಿ ನಿಭಾಯಿಸಿತ್ತು.
- ಎರಡನೇ ಹಂತವು ಸಿಕಂದರ್ಪುರದಿಂದ ಸೆಕ್ಟರ್ -56 ರವರೆಗೆ 6.5 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದೆ, ಇದನ್ನು ಆರಂಭದಲ್ಲಿ ಐಎಲ್ & ಎಫ್ಎಸ್. ನ ಎರಡು ಕಂಪನಿಗಳ ಒಕ್ಕೂಟ ಅಂದರೆ ಐಟಿಎನ್ಎಲ್ (ಐಎಲ್ & ಎಫ್ಎಸ್ ಟ್ರಾನ್ಸ್ಪೋರ್ಟ್ ನೆಟ್ವರ್ಕ್ ಲಿಮಿಟೆಡ್) ಮತ್ತು ಐಆರ್ಎಲ್ (ಐಎಲ್ & ಎಫ್ಎಸ್ ರೈಲ್ ಲಿಮಿಟೆಡ್) ನಿರ್ಮಿಸಿದೆ. ಈ ಹಂತವನ್ನು 31.03.2017 ರಿಂದ ರಾಪಿಡ್ ಮೆಟ್ರೋ ಗುರ್ಗಾಂವ್ ಸೌತ್ ಲಿಮಿಟೆಡ್ ಎಂಬ ಎಸ್ ಪಿವಿ ನಿಭಾಯಿಸಿತ್ತು.
• ಈ ವ್ಯವಸ್ಥೆಯನ್ನು ನಡೆಸಲು ಗುತ್ತಿಗೆದಾರರು/ರಿಯಾಯಿತಿದಾರರು ಹಿಂದೆ ಸರಿದಾಗ ಹೈಕೋರ್ಟ್ ಆದೇಶದ ಪ್ರಕಾರ 22.10.2019 ರಿಂದ ಹರಿಯಾಣ ಮಾಸ್ ರಾಪಿಡ್ ಟ್ರಾನ್ಸಿಟ್ ಕಂಪನಿ (ಎಚ್ಎಂಆರ್ಟಿಸಿ) ಈ ಕಾರ್ಯಾಚರಣೆಯನ್ನು ವಹಿಸಿಕೊಂಡಿದೆ.
• ಈ ಮಾರ್ಗದ ಕಾರ್ಯಾಚರಣೆಯನ್ನು ಎಚ್.ಎಂ.ಆರ್.ಟಿ.ಸಿ.ಯು ಡಿ.ಎಂ.ಆರ್.ಸಿ. ಗೆ ವಹಿಸಲಾಗಿದೆ. ಇದಕ್ಕೂ ಮೊದಲು ಡಿಎಂಆರ್ ಸಿ 16.09.2019 ರಿಂದ ತ್ವರಿತ ಮೆಟ್ರೋ ಮಾರ್ಗವನ್ನು ನಿರ್ವಹಿಸಿತ್ತು.
• ರಾಪಿಡ್ ಮೆಟ್ರೋ ಗುರುಗ್ರಾಮದ ಸರಾಸರಿ ಪ್ರಯಾಣಿಕರ ಸಂಖ್ಯೆ ಸುಮಾರು 30,000. ವಾರದ ದಿನಗಳಲ್ಲಿ ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆ ಸುಮಾರು 48,000
• ರಾಪಿಡ್ ಮೆಟ್ರೋ ಮಾರ್ಗದೊಂದಿಗೆ ಪ್ರಸ್ತಾವಿತ ಮಾರ್ಗದ ಸಂಪರ್ಕವು ಸೈಬರ್ ಹಬ್ ನಲ್ಲಿದೆ
ಬಹು ಮಾದರಿ ಸಂಪರ್ಕ:
• ಸೆಕ್ಟರ್-5- 900 ಮೀಟರ್ ಬಳಿ ರೈಲ್ವೆ ನಿಲ್ದಾಣದೊಂದಿಗೆ
• ಸೆಕ್ಟರ್ -22 ರಲ್ಲಿ ಆರ್ ಆರ್ ಟಿಎಸ್ ನೊಂದಿಗೆ
• ಹುಡಾ ಸಿಟಿ ಸೆಂಟರ್ ನಲ್ಲಿ ಹಳದಿ ಲೈನ್ ಸ್ಟೇಷನ್
ಗುರುಗ್ರಾಮದ ವಲಯವಾರು ನಕ್ಷೆಯನ್ನು ಅನುಬಂಧ -2 ರಲ್ಲಿ ಲಗತ್ತಿಸಲಾಗಿದೆ.
ಯೋಜನೆಯ ಸಿದ್ಧತೆ:
• 90% ಭೂಮಿ ಸರ್ಕಾರಿ ಭೂಮಿ ಮತ್ತು 10% ಖಾಸಗಿ ಭೂಮಿ
• ಸೌಲಭ್ಯಗಳ ಸ್ಥಳಾಂತರ ಆರಂಭ
• ವಿಶ್ವಬ್ಯಾಂಕ್ ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಗಳನ್ನು ಸಂಪರ್ಕಿಸಲಾಗಿದೆ
• ಜಿಸಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
Annexure-1
Annexure-2
*****
(Release ID: 1930683)
Visitor Counter : 156
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam