ಸಹಕಾರ ಸಚಿವಾಲಯ

ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್ ಸಿಎಸ್) ಕಚೇರಿಯ ಗಣಕೀಕರಣದ ಪ್ರಗತಿಯನ್ನು ಪರಾಮರ್ಶಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಂಮೃದ್ಧಿ’ಯ ದೂರದೃಷ್ಟಿಯ ಸಾಕಾರಕ್ಕೆ 2021ರ ಜುಲೈನಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾದಾಗಿನಿಂದ ಸಹಕಾರ ವಲಯದಲ್ಲಿ ವ್ಯಾಪಾರ ಸುಲಭಗೊಳಿಸುವುದನ್ನು ಉತ್ತೇಜಿಸಲು ಹಲವು ಕ್ರಮ

ಈ ಉಪಕ್ರಮಗಳು ಮಾತ್ರವಲ್ಲದೆ, ಹೊಸ ಸಹಕಾರ ಸಂಘಗಳ ನೋಂದಣಿ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ನೆರವಾಗಲು ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್)ಗೆ ಡಿಜಿಟಲ್ ಪೂರಕ ವ್ಯವಸ್ಥೆ ಸೃಷ್ಟಿಸಲು ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಂಪ್ಯೂಟರೀಕರಣ ಕೈಗೆತ್ತಿಕೊಂಡಿದೆ

ಸಾಫ್ಟ್‌ ವೇರ್ ಮತ್ತು ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಅವುಗಳನ್ನು 2023ರ ಜು.26ಕ್ಕೆ ಬಿಡುಗಡೆಯ ಗುರಿ ನಿಗದಿ

ಸಿಆರ್ ಸಿಎಸ್ ಕಚೇರಿಗಳ ಮೂಲಕ ಸ್ಪರ್ಧೆಗಳನ್ನು ಆಯೋಜಿಸಲಾಗುವ ಸ್ಪರ್ಧೆಗಳ ಮೂಲಕ ಪೋರ್ಟಲ್ ನ ಉತ್ತಮ ಬಳಕೆ ಮತ್ತು ಸುಧಾರಿತ ವಿಶ್ಲೇಷಣೆಗಾಗಿ ಯುವಜನತೆಯನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರಿ ಅಮಿತ್ ಶಾ ನಿರ್ದೇಶನ

ಹಾಲಿ ಇರುವ ಎಂಎಸ್ ಸಿಎಸ್ ಗಳ ಕಾರ್ಯನಿರ್ವಹಣೆಗೆ ಮತ್ತು ಹೊಸ ಎಂಎಸ್ ಸಿಎಸ್ ಗಳ ನೋಂದಣಿಗೆ ಕಂಪ್ಯೂಟರೀಕರಣದಿಂದ ಹೆಚ್ಚಿನ ನೆರವು

Posted On: 07 JUN 2023 12:24PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್ ಸಿಎಸ್) ಕಚೇರಿಯ ಗಣಕೀಕರಣದ ಪ್ರಗತಿಯನ್ನು ಪರಿಶೀಲಿಸಿದರು. ಸಹಕಾರ ಸಚಿವಾಲಯದ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ “ಸಹಕಾರದಿಂದ ಸಮೃದ್ಧಿ’ಯ ದೂರದೃಷ್ಟಿಯನ್ನು ಸಾಕಾರಗೊಳಿಸಲು ಜುಲೈ 2021 ರಲ್ಲಿ ಸಹಕಾರ ಸಚಿವಾಲಯವು ಸ್ಥಾಪನೆಯಾದಾಗಿನಿಂದಲೂ ಸಹಕಾರಿ ಕ್ಷೇತ್ರದಲ್ಲಿ ವ್ಯಾಪಾರವನ್ನು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಉಪಕ್ರಮಗಳ ಭಾಗವಾಗಿ, ಬಹು ರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯ್ದೆ 2002 ರ ಆಡಳಿತದ ಹೊಣೆ ಹೊತ್ತಿರುವ ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು . ಹೊಸ ಸೊಸೈಟಿಗಳ ನೋಂದಣಿ ಸೇರಿದಂತೆ ಬಹು ರಾಜ್ಯ ಸಹಕಾರ ಸಂಘಗಳಿಗೆ ತಮ್ಮ ಎಲ್ಲಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಡಿಜಿಟಲ್ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಗಣಕೀಕರಣಗೊಳಿಸಲಾಗುತ್ತಿದೆ. ಸಾಫ್ಟ್‌ವೇರ್ ಮತ್ತು ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದನ್ನು 2023ರ ಜೂನ್ 26 ರೊಳಗೆ ಬಿಡುಗಡೆಯ ಗುರಿ ನಿಗದಿಪಡಿಸಲಾಗಿದೆ.

ಪರಿಶೀಲನಾ ಸಭೆಯಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಿಆರ್‌ಸಿಎಸ್ ಕಚೇರಿಯಿಂದ ಆಯೋಜಿಸಲಾಗುವ ಸ್ಪರ್ಧೆಗಳ ಮೂಲಕ ಪೋರ್ಟಲ್‌ನ ಉತ್ತಮ ಬಳಕೆ ಮತ್ತು ಸುಧಾರಿತ ವಿಶ್ಲೇಷಣೆಗಾಗಿ ಯುವಜನತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಗಣಕೀಕರಣ ಯೋಜನೆಯು ಹೊಸ ಎಂಎಸ್ ಸಿಎಸ್ ನ ನೋಂದಣಿಗೆ ಹೆಚ್ಚು ಸಹಾಯ ಮಾಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ಎಂಎಸ್ ಎಸಿಎಸ್ ಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುತ್ತದೆ.ಕಂಪ್ಯೂಟರೀಕರಣದ ಪ್ರಮುಖ ಉದ್ದೇಶಗಳು ::

  1. ಸಂಪೂರ್ಣ ಕಾಗದರಹಿತ ಪ್ರಕ್ರಿಯೆ ಮತ್ತು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ
  2. ಎಂಎಸ್ ಸಿಎಸ್ ಕಾಯಿದೆ ಮತ್ತು ನಿಯಮ ಸಾಫ್ಟವೇರ್ ಮೂಲಕ ಸ್ವಯಂಚಾಲಿತ ಪಾಲನೆ
  3. ವ್ಯಾಪಾರಕ್ಕೆ ಪೂರಕ ವಾತಾವರಣ
  4. ಡಿಜಿಟಲ್ ಸಂವಹನ
  5. ಪಾರದರ್ಶಕ ಪ್ರಕ್ರಿಯೆ
  6. ಸುಧಾರಿತ ವಿಶ್ಲೇಷಣೆ ಮತ್ತು ಎಂಐಎಸ್

ಈಗಾಗಲೇ ಗಣಕೀಕರಣ ಕಾರ್ಯ ಆರಂಭಿಸಲಾಗಿದೆ. ಸಾಫ್ಟ್‌ವೇರ್‌ನ ಒಂದನೇ ಆವೃತ್ತಿ  ಅಸ್ತಿತ್ವದಲ್ಲಿರುವ ಎಂಎಸ್ ಇಎಸ್  ಕಾಯ್ದೆ ಮತ್ತು ನಿಯಮಗಳನ್ನು ಆಧರಿಸಿದೆ. ಎರಡನೇ ಆವೃತ್ತಿ ಎಂಎಸ್ ಸಿಎಸ್ ಕಾಯ್ದೆ ಮತ್ತು ನಿಯಮಗಳಿಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ಸಂಯೋಜಿಸುತ್ತದೆ ಮತ್ತು ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಯಾವುದೇ ಅಡೆತಡೆ ಅಥವಾ ಕೊರತೆಗಳನ್ನು ಪರಿಹರಿಸುವ ಮೂಲಕ ಆರಂಭಿಕ ಆವೃತ್ತಿಯನ್ನು ಬಲವರ್ಧನೆಗೊಳಿಸುತ್ತದೆ.

ಹೊಸ ಪೋರ್ಟಲ್ ನಲ್ಲಿ ಈ ಕೆಳಗಿನ ಮಾದರಿಗಳು ಒಳಗೊಂಡಿರಲಿವೆ.:

  1. ನೋಂದಣಿ
  2. ಉಪನಿಯಮಕ್ಕೆ ತಿದ್ದುಪಡಿ
  3. ವಾರ್ಷಿಕ ರಿಟರ್ನ್ಸ್ ಫೈಲಿಂಗ್
  4. ಮೇಲ್ಮನವಿ
  5. ಆಡಿಟ್
  6. ತಪಾಸಣೆ/ಪರಿಶೀಲನೆ
  7. ತನಿಖೆ
  8. ರಾಜೀ/ಸಂಧಾನ
  9. ಸಂಘಗಳನ್ನು ಮುಚ್ಚುವುದು ಮತ್ತು ಲಿಕ್ವಿಡೇಷನ್

ಸಾಫ್ಟ್‌ವೇರ್ ಸಿಆರ್‌ಸಿಎಸ್ ಕಚೇರಿಯಲ್ಲಿ ವಿದ್ಯುನ್ಮಾನ ಕಾರ್ಯನಿರ್ವಹಣೆ ಮೂಲಕ ಅಪ್ಲಿಕೇಷನ್/ಸೇವೆಯ ವಿನಂತಿಗಳನ್ನು ಕಾಲಮಿತಿಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಕ್ರಿಯವಾಗಿರುದೆ. ಇದು ಒಟಿಪಿ ಆಧಾರಿತ ಬಳಕೆದಾರರ ನೋಂದಣಿ, ಎಂಎಸ್ ಸಿಎಸ್ ಕಾಯ್ದೆ ಮತ್ತು ನಿಯಮಗಳ ಅನುಸರಣೆಗಾಗಿ ಪ್ರಮಾಣೀಕರಣ ಪರಿಶೀಲನೆಗಳು, ವಿಡಿಯೋ ಕಾನ್ಫರೆನ್ಸ್  ಮೂಲಕ ವಿಚಾರಣೆ, ನೋಂದಣಿ ಪ್ರಮಾಣಪತ್ರದ ವಿತರಣೆ ಮತ್ತು ವಿದ್ಯುನ್ಮಾನ ಸಂವಹನಕ್ಕಾಗಿ ಹಲವು ನಿಯಮಗಳನ್ನು ಹೊಂದಿರುತ್ತದೆ.

*****


 



(Release ID: 1930534) Visitor Counter : 113