ಆಯುಷ್
azadi ka amrit mahotsav g20-india-2023

ನಾಳೆ ಮೆಗಾ ‘ಯೋಗ ಮಹೋತ್ಸವ’ಕ್ಕೆ ಹೈದರಾಬಾದ್‌ ಸಜ್ಜು


2023ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ 25 ದಿನಗಳ ದಿನಗಣನೆ (ಇಳಿ ಎಣಿಕೆ) ನೆನಪಿಗಾಗಿ ‘ಯೋಗ ಮಹೋತ್ಸವ’

ತೆಲಂಗಾಣದ ಗೌರವಾನ್ವಿತ ರಾಜ್ಯಪಾಲ ಡಾ.ತಮಿಳಿಸೈ ಸೌಂದರರಾಜನ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ

‘‘ಸಿಕಂದರಾಬಾದ್‌ನಲ್ಲಿ ಯೋಗ ಮಹೋತ್ಸವವು ಮಧ್ಯಪ್ರದೇಶದ ಜಬಲ್ಪುರದಲ್ಲಿಆಚರಿಸಲಾಗುವ ಭವ್ಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವೇದಿಕೆಯನ್ನು ಸಜ್ಜುಗೊಳಿಸುತ್ತದೆ’’: ಸರ್ಬಾನಂದ ಸೋನೊವಾಲ್‌

‘‘ಯಶಸ್ವಿ ಯೋಗ ಮಹೋತ್ಸವವು ಹೈದರಾಬಾದ್‌ ಈ ಪ್ರದೇಶದಲ್ಲಿಯೋಗ ಕೇಂದ್ರಿತ ಪ್ರವಾಸೋದ್ಯಮದ ಪ್ರಮುಖ ತಾಣವಾಗಲು ವೇದಿಕೆ ಕಲ್ಪಿಸುತ್ತದೆ’’: ಕಿಶನ್‌ ರೆಡ್ಡಿ

‘‘ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಭಾರತ್‌ ಮಾಲಾದಲ್ಲಿ ಭಾರತೀಯ ಸೇನೆ, ಭಾರತೀಯ ವಾಯುಪಡೆ, ಕರಾವಳಿ ಪಡೆ ಮತ್ತು ಗಡಿ ರಸ್ತೆಗಳ ಸಂಘಟನೆ ಭಾಗವಹಿಸಲಿವೆ’’: ಡಾ. ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ

ಈ ವರ್ಷದ ಘೋಷವಾಕ್ಯ ‘ ವಸುಧೖವ ಕುಟುಂಬಕಂಗೆ ಯೋಗ’ ಎಂಬುದಾಗಿದೆ

Posted On: 26 MAY 2023 4:53PM by PIB Bengaluru

ಆಯುಷ್‌ ಸಚಿವಾಲಯದ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಯೋಗ (ಎಂಡಿಎನ್‌ಐವೈ) ನಾಳೆ ಇಲ್ಲಿನ ಎನ್‌ಸಿಸಿ ಪರೇಡ್‌ ಮೈದಾನದಲ್ಲಿ ಮೆಗಾ ‘ಯೋಗ ಮಹೋತ್ಸವ’ ಆಯೋಜಿಸಿದೆ. ಅಂದರೆ, 2023 ರ ಮೇ 27ರಂದು ನಡೆಯಲಿದೆ.  2023 ರ ಜೂನ್‌ 21 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 25 ದಿನಗಳ ದಿನಗಣನೆ(ಇಳಿ ಎಣಿಕೆ) ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್‌ ಸಚಿವ ಸರ್ಬಾನಂದ ಸೋನೊವಾಲ್‌ ಅವರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸರ್ಬಾನಂದ ಸೋನೊವಾಲ್‌ ಅವರು,  ಈ ವರ್ಷದ ಐಡಿವೈಯ ಥೀಮ್‌ ‘ ವಸುಧೈವ ಕುಟುಂಬಕಂಗಾಗಿ ಯೋಗ’ ಎಂದು ಘೋಷಿಸಿದರು. ಶ್ರೀ ಸೋನೊವಾಲ್‌ ಅವರು ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಹೇಗೆ ವಿಸ್ತಾರವಾದ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ರೂಪಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು. ‘‘ಜೂನ್‌ 21 ರಂದು ರಕ್ಷ ಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ನೆರವಿನೊಂದಿಗೆ ಅನೇಕ ಬಂದರುಗಳಲ್ಲಿ ಪ್ರಮುಖ ಯೋಗ ಪ್ರದರ್ಶನಗಳು ನಡೆಯಲಿದ್ದು, ಅನೇಕ ದೇಶಗಳು ಈ ಕಾರ್ಯಕ್ರಮಕ್ಕೆ ಸೇರುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು. ಆಕ್ರ್ಟಿಕ್‌ ನಿಂದ ಅಂಟಾರ್ಟಿಕಾದವರೆಗೆ ಯೋಗ ಪ್ರದರ್ಶನಗಳು ಸಹ ನಡೆಯಲಿವೆ - ಪ್ರಧಾನ ಮೆರಿಡಿಯನ್‌ ರೇಖೆಯ ಮೇಲೆ ಅಥವಾ ಹತ್ತಿರದಲ್ಲಿ ಬರುವ ದೇಶಗಳು ಯೋಗ ಪ್ರದರ್ಶನಕ್ಕೆ ಸೇರುತ್ತವೆ ಎಂದು ಸಚಿವರು ಹೇಳಿದರು. ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿಯೂ ಯೋಗ ನಡೆಯಲಿದೆ. ಆಕ್ರ್ಟಿಕ್‌ನ ಸ್ವಾಲ್ಬರ್ಡ್‌ನಲ್ಲಿರುವ ಭಾರತೀಯ ಸಂಶೋಧನಾ ನೆಲೆ ಹಿಮಾದ್ರಿ ಮತ್ತು ಅಂಟಾರ್ಟಿಕಾದ ಮೂರನೇ ಭಾರತೀಯ ಸಂಶೋಧನಾ ನೆಲೆಯಾದ ಭಾರತಿ ವಿಶ್ವದಾದ್ಯಂತ ಲಕ್ಷಾಂತರ ಜನರೊಂದಿಗೆ ಉತ್ಸವದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಐಎನ್‌ಎಸ್‌ ವಿಕ್ರಾಂತ್‌ ಮತ್ತು ಐಎನ್‌ಎಸ್‌ ವಿಕ್ರಮಾದಿತ್ಯದ ಫ್ಲೈಟ್‌ ಡೆಕ್‌ಗಳು ಸಹ ಒಡಂಬಡಿಕೆಯಲ್ಲಿ ಯೋಗ ಪ್ರದರ್ಶನವನ್ನು ಪ್ರದರ್ಶಿಸಲಿವೆ,’’ ಎಂದು ಅವರು ಹೇಳಿದರು.

‘‘ಯೋಗವು ಎಲ್ಲರನ್ನೂ ಬಂಧಿಸುತ್ತದೆ ಮತ್ತು ಇದು ಎಲ್ಲಾ ರೀತಿಯ ಅಡೆತಡೆಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಯೋಗದ ಈ ಅಂತರ್ಗತ ಗುಣ ಮತ್ತು ನಮ್ಮ ವರ್ಚಸ್ವಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಅವಿರತ ಪ್ರಯತ್ನಗಳ ಪರಿಣಾಮವಾಗಿ ಯೋಗದ ಪ್ರಭಾವ ಹೆಚ್ಚುತ್ತಿದೆ ಮತ್ತು ವಿಶ್ವ ಸಮುದಾಯವು ಅದನ್ನು ಅಂಗೀಕರಿಸಿದೆ. ಇಂದು, ಇಡೀ ಜಗತ್ತು ಯೋಗವನ್ನು ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮದ ಅವಿಶ್ರಾಂತ ವಾಹನವೆಂದು ಸ್ವೀಕರಿಸುತ್ತಿದೆ. ನಾಳೆ ಮುಂಜಾನೆ, ಸಾವಿರಾರು ಜನರು ಆರೋಗ್ಯಕರ ಮನಸ್ಸು ಮತ್ತು ದೇಹದ ಈ ಆಂದೋಲನಕ್ಕೆ ಸೇರುತ್ತಾರೆ, ಅಲ್ಲಿಅವರು ಸಾಮಾನ್ಯ ಯೋಗ ಪ್ರೋಟೋಕಾಲ್‌ (ಸಿವೈಪಿ) ಅನ್ನು ಪ್ರದರ್ಶಿಸುತ್ತಾರೆ ಮತ್ತು ಮಾನವೀಯತೆಯ ಯೋಗಕ್ಷೇಮಕ್ಕಾಗಿ ಸಂದೇಶವನ್ನು ಕಳುಹಿಸುತ್ತಾರೆ. ವಸುಧೈವ ಕುಟುಂಬಕಂಗಾಗಿ ಯೋಗ ಎಂಬ ಈ ವರ್ಷದ ಧ್ಯೇಯವಾಕ್ಯದ ಸ್ಪಷ್ಟ ಪ್ರತಿಬಿಂಬವನ್ನು ಹೈದರಾಬಾದ್‌ ಜನರು ಪ್ರದರ್ಶಿಸಲಿದ್ದಾರೆ, ಏಕೆಂದರೆ ಅವರ ವಿಶಿಷ್ಟ ವ್ಯಕ್ತಿತ್ವಗಳನ್ನು ಲೆಕ್ಕಿಸದೆ ಸಾರ್ವತ್ರಿಕ ಸಹೋದರತ್ವ ಮತ್ತು ಸೌಹಾರ್ದತೆಯ ಪ್ರಜ್ಞೆಯನ್ನು ಸಾಧಿಸಲು ನಾವೆಲ್ಲರೂ ಹೇಗೆ ಕೈಜೋಡಿಸಬಹುದು ಎಂಬುದನ್ನು ಅವರು ತೋರಿಸುತ್ತಾರೆ. ಹೈದರಾಬಾದ್‌ನ ಜನರಿಂದ ದೊರೆತ ಅದ್ಭುತ ಪ್ರತಿಕ್ರಿಯೆಯು 2023 ರ ಜೂನ್‌ 21 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವೇದಿಕೆಯನ್ನು ಸಜ್ಜುಗೊಳಿಸಿದೆ,’’ ಎಂದು ಸರ್ಬಾನಂದ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ.ಕಿಶನ್‌ ರೆಡ್ಡಿ, ‘‘ಯೋಗವು ಉತ್ತಮ ಮನಸ್ಸು ಮತ್ತು ದೇಹದ ಅಮೃತವಾಗಿದೆ. ನಾವು ಸಾವಿರಾರು ಇತರ ಯೋಗ ಉತ್ಸಾಹಿಗಳೊಂದಿಗೆ ಸೇರುತ್ತಿದ್ದಂತೆ, ಸಾವಿರಾರು ಜನರು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವ ಯುಗಕ್ಕೆ ನಾವು ಪ್ರವೇಶಿಸುತ್ತೇವೆ ಮತ್ತು ಹೊಸ, ದೃಢವಾದ ಮತ್ತು ಸಕಾರಾತ್ಮಕ ಭಾರತವನ್ನು ನಿರ್ಮಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಪ್ರಮುಖ ದೃಷ್ಟಿಕೋನಗಳಲ್ಲಿಒಂದನ್ನು ಪೂರೈಸುತ್ತೇವೆ. ದೇಶಾದ್ಯಂತ ಯೋಗ ಮಹೋತ್ಸವಗಳು ನಡೆಯುವ ಈ ವಿಶಿಷ್ಟ ಅಭಿಯಾನದ ಭಾಗವಾಗಲು ಹೈದರಾಬಾದ್‌ ಅದೃಷ್ಟಶಾಲಿಯಾಗಿದೆ. ಈ ಮಹೋತ್ಸವವು ಸಾಮಾನ್ಯ ಜನರಲ್ಲಿಯೋಗದ ಬಗ್ಗೆ ಆಸಕ್ತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ, ಆದರೆ ಈ ಉತ್ಸವವು ಹೈದರಾಬಾದ್‌ ಅನ್ನು ಈ ಪ್ರದೇಶದಲ್ಲಿಯೋಗ ಚಾಲಿತ ಪ್ರವಾಸೋದ್ಯಮದ ಕೇಂದ್ರವಾಗಲು ಅನುವು ಮಾಡಿಕೊಡುತ್ತದೆ,’’ ಎಂದರು.

‘‘ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಭಾರತ್‌ ಮಾಲಾದಲ್ಲಿಭಾರತೀಯ ಸೇನೆ, ಭಾರತೀಯ ವಾಯುಪಡೆ, ಕರಾವಳಿ ಪಡೆ ಮತ್ತು ಗಡಿ ರಸ್ತೆಗಳ ಸಂಘಟನೆ ಭಾಗವಹಿಸಲಿವೆ. ಭಾರತದ 2 ಲಕ್ಷ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲ್‌ (ಸಿವೈಪಿ) ನಲ್ಲಿಜನರಿಗೆ ತರಬೇತಿ ನೀಡಲು ನಿಬಂಧನೆಗಳನ್ನು ಮಾಡಲಾಗಿದೆ,’’  ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್‌ ರಾಜ್ಯ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ ತಿಳಿಸಿದರು.

ಯೋಗ ಮಹೋತ್ಸವದಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ ಕಿಶನ್‌ ರೆಡ್ಡಿ; ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್‌ ಖಾತೆ ರಾಜ್ಯ ಸಚಿವ ಡಾ. ಡಾ. ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ; ಆಯುಷ್‌ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್‌ ಕೊಟೆಚಾ ಮತ್ತು ಇತರರು ಪಾಲ್ಗೊಳ್ಳಲಿದ್ದಾರೆ. ಎಂಡಿಎನ್‌ಐವೈ ನಿರ್ದೇಶಕ ಡಾ.ಈಶ್ವರ ಬಸವರಡ್ಡಿ ಯೋಗ ಮಹೋತ್ಸವವನ್ನು ನಡೆಸಿಕೊಡಲಿದ್ದಾರೆ.

****(Release ID: 1927585) Visitor Counter : 80