ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
"100 ಸ್ಮಾರ್ಟ್ ಸಿಟಿಗಳು- ನವ ನಗರ ಭಾರತದ ನಿಜವಾದ ಇನ್ಕ್ಯುಬೇಟರ್ ಗಳು" - ಶ್ರೀ ಹರ್ದೀಪ್ ಎಸ್ ಪುರಿ
~ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದು ಒಂದು ಪಯಣ, ಗಮ್ಯಸ್ಥಾನವಲ್ಲ ~
~ಸಂಸದೀಯ ಸಮಾಲೋಚನಾ ಸಮಿತಿಯ ಸಭೆ ~
Posted On:
23 MAY 2023 12:46PM by PIB Bengaluru
ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಿಗೆ ಸ್ಮಾರ್ಟ್ ಸಿಟಿ ಅಭಿಯಾನದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ನಗರ ಮಟ್ಟದಲ್ಲಿ ಅಭಿಯಾನ ಅನುಷ್ಠಾನವನ್ನು ವಿಶೇಷ ಉದ್ದೇಶದ ವಾಹಕ (ಸ್ಪೆಷಲ್ ಪರ್ಪಸ್ ವೆಹಿಕಲ್ -ಎಸ್.ಪಿವಿ) ಮಾಡಲಿದ್ದು, ಈ ಅದ್ಭುತ ಕಾರ್ಯಾಚರಣೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಈ 100 ಸ್ಮಾರ್ಟ್ ಸಿಟಿಗಳಲ್ಲಿ ಪೋಷಿಸಲಾಗುತ್ತಿರುವ ಆವಿಷ್ಕಾರಗಳಿಂದ ಭಾರತದ ನಗರ ಭವಿಷ್ಯವು ಹೆಚ್ಚು ಪಡೆಯುತ್ತದೆ ಎಂದು ಸಚಿವರು ಹೇಳಿದರು.
2015ರ ಜೂನ್ 25, ರಂದು ಪ್ರಾರಂಭಿಸಲಾದ ಸ್ಮಾರ್ಟ್ ಸಿಟಿ ಅಭಿಯಾನ, 'ಸ್ಮಾರ್ಟ್ ಪರಿಹಾರಗಳ' ಅನ್ವಯದ ಮೂಲಕ ತಮ್ಮ ನಾಗರಿಕರಿಗೆ ಪ್ರಮುಖ ಮೂಲಸೌಕರ್ಯ, ಸ್ವಚ್ಛ ಮತ್ತು ಸುಸ್ಥಿರ ಪರಿಸರ ಮತ್ತು ಯೋಗ್ಯ ಗುಣಮಟ್ಟದ ಜೀವನವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ಎರಡು ಹಂತದ ಸ್ಪರ್ಧೆಯ ಮೂಲಕ ಆಯ್ಕೆಯಾದ 100 ನಗರಗಳು ತೃಪ್ತಿದಾಯಕ ಪ್ರಗತಿಯನ್ನು ತೋರಿಸುತ್ತಿವೆ.
ಚಿತ್ರಶೀರ್ಷಿಕೆ: 2015 ಜೂನ್ 25ರಂದು ಮಾನ್ಯ ಪ್ರಧಾನಮಂತ್ರಿಗಳಿಂದ ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಚಾಲನೆ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿಯ ಮೇಲ್ವಿಚಾರಣೆಯಲ್ಲಿರುವ ಸ್ಮಾರ್ಟ್ ಸಿಟಿ ಅಭಿಯಾನ, ಸಕಾಲಿಕ ಭೌಗೋಳಿಕ ನಿರ್ವಹಣಾ ಮಾಹಿತಿ ವ್ಯವಸ್ಥೆ (ಜಿಎಂಐಎಸ್) ಮೂಲಕ ಯೋಜನೆಗಳ ಅನುಷ್ಠಾನದ ಸ್ಥಿತಿಯನ್ನು ನಿಯಮಿತವಾಗಿ ವರದಿ ಮಾಡಲಾಗುತ್ತದೆ. ಎಸ್.ಸಿ.ಎಂ ಸ್ಟೇಟ್ಮೆಂಟ್ ಮತ್ತು ಮಾರ್ಗಸೂಚಿಗಳ ಪ್ರಕಾರ, ವಿವಿಧ ಬಾಧ್ಯಸ್ಥರ ನಡುವೆ ಸಲಹೆ ನೀಡಲು ಮತ್ತು ಸಹಯೋಗವನ್ನು ಸಕ್ರಿಯಗೊಳಿಸಲು ನಗರ ಮಟ್ಟದಲ್ಲಿ ಸ್ಮಾರ್ಟ್ ಸಿಟಿ ಸಲಹಾ ವೇದಿಕೆಯನ್ನು (ಎಸ್.ಸಿ.ಎಎಫ್) ಸ್ಥಾಪಿಸಲಾಗಿದೆ. ಇದು ಸಂಸತ್ ಸದಸ್ಯ(ರು), ವಿಧಾನಸಭೆಯ ಸದಸ್ಯ(ರು), ಮೇಯರ್, ಜಿಲ್ಲಾಧಿಕಾರಿ, ಸ್ಥಳೀಯ ಯುವಕರು, ತಾಂತ್ರಿಕ ತಜ್ಞರು, ಇತರ ಬಾಧ್ಯಸ್ಥರನ್ನು ಒಳಗೊಂಡಿರುತ್ತದೆ. ಎಲ್ಲಾ 100 ಸ್ಮಾರ್ಟ್ ಸಿಟಿಗಳು ತಮ್ಮ ಎಸ್.ಸಿ.ಎ.ಎಫ್.ಗಳನ್ನು ಸ್ಥಾಪಿಸಿವೆ. ಇಲ್ಲಿಯವರೆಗೆ, ಸ್ಮಾರ್ಟ್ ಸಿಟಿಗಳು ಎಸ್.ಸಿ.ಎಎಫ್.ನ 756 ಕ್ಕೂ ಹೆಚ್ಚು ಸಭೆಗಳನ್ನು ಕರೆದಿವೆ.
Smart Cities Mission Strategy
ಇದಲ್ಲದೆ, ರಾಜ್ಯ ಮಟ್ಟದಲ್ಲಿ, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರದ ಸ್ಟೀರಿಂಗ್ ಕಮಿಟಿ (ಎಚ್.ಪಿ.ಎಸ್.ಸಿ.) ಅನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವಿಶೇಷ ಉದ್ದೇಶದ ವಾಹಕ (ಎಸ್.ಪಿವಿ) ಮಂಡಳಿಗಳಲ್ಲಿನ ನಾಮನಿರ್ದೇಶಿತ ನಿರ್ದೇಶಕರು ಆಯಾ ನಗರಗಳಲ್ಲಿನ ಪ್ರಗತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಇದಲ್ಲದೆ, ವಿವಿಧ ಹಂತಗಳಲ್ಲಿ ನಗರಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮತ್ತು ಸುಧಾರಣೆಗಾಗಿ ಅವುಗಳನ್ನು ಹಿಡಿದಿಟ್ಟುಕೊಳ್ಳಲು ಸಚಿವಾಲಯವು ನಿಯಮಿತವಾಗಿ ರಾಜ್ಯಗಳು / ಸ್ಮಾರ್ಟ್ ನಗರಗಳೊಂದಿಗೆ ವೀಡಿಯೊ ಕಾನ್ಫರೆನ್ಸ್, ಪರಿಶೀಲನಾ ಸಭೆಗಳು, ಕ್ಷೇತ್ರ ಭೇಟಿಗಳು, ಪ್ರಾದೇಶಿಕ ಕಾರ್ಯಾಗಾರಗಳು ಇತ್ಯಾದಿಗಳ ಮೂಲಕ ಸಂವಹನ ನಡೆಸುತ್ತದೆ.
ಸ್ಮಾರ್ಟ್ ಸಿಟಿ ಅಭಿಯಾನದ ಕಾರ್ಯತಂತ್ರ
ಇದಲ್ಲದೆ, ಸಮಿತಿಯು 'ಮಾಂಡೋವಿ ರಿವರ್ ಫ್ರಂಟ್ ವಾಯುವಿಹಾರ', 'ಪ್ರವಾಹ ತಗ್ಗಿಸುವ ಕಾರ್ಯಗಳು' ಮತ್ತು ಗೋವಾದ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸೇರಿದಂತೆ ವಿವಿಧ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ, 2023ರ ಮೇ 1 ರವರೆಗೆ ಪ್ರಸ್ತುತ ಸ್ಥಿತಿ ಮತ್ತು ಪ್ರಗತಿಯ ಬಗ್ಗೆ ಚರ್ಚಿಸಿತು, ಇದರಲ್ಲಿ ಅಭಿಯಾನದ 1.8 ಲಕ್ಷ ಕೋಟಿ ರೂ.ಗಳ ಮೌಲ್ಯದ ಸುಮಾರು 7,800 ಯೋಜನೆಗಳನ್ನು ಒಳಗೊಂಡಿದೆ, ಈ ಪೈಕಿ 1.1ಲಕ್ಷ ಕೋಟಿ (ಶೇಕಡ 60ರಷ್ಟು ಮೌಲ್ಯದ) 5,700+ ಯೋಜನೆಗಳು (ಶೇ.73ರಷ್ಟು ಸಂಖ್ಯೆ) ಪೂರ್ಣಗೊಂಡಿವೆ ಎಂದು ಎತ್ತಿ ತೋರಿಸಲಾಯಿತು. ಉಳಿದ ಎಲ್ಲಾ ಯೋಜನೆಗಳು 2024 ರ ಜೂನ್ 30 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ 2023 ರ ಮೇ 1 ರವರೆಗೆ 38,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಅದರಲ್ಲಿ 35,261 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ಸಭೆಗೆ ವಿವರಿಸಲಾಯಿತು.
ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್; ರಾಜ್ಯಾದ್ಯಂತದ ಸಂಸತ್ ಸದಸ್ಯರಾದ ಶ್ರೀ /ಶ್ರೀಮತಿ ಎಂ.ವಿ.ವಿ ಸತ್ಯನಾರಾಯಣ, ಎಕೆಪಿ ಚಿನ್ ರಾಜ್, ರಮೇಶ್ ಬಿಧುರಿ, ಸಂಜಯ್ ಕಾಕಾ ಪಾಟೀಲ್, ಅಬೀರ್ ರಂಜನ್ ಬಿಸ್ವಾಸ್, ಕಲ್ಪನಾ ಸೈನಿ, ವಂದನಾ ಚೌಹಾಣ್ ಮತ್ತು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ನಿನ್ನೆ ಸಂಜೆ ನಡೆದ ಸಂಸದೀಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ಶಾಲಿನಿ ಅಗರ್ವಾಲ್, ಆಯುಕ್ತರು, ಸೂರತ್; ಶ್ರೀ ದಿವ್ಯಾಂಕ್ ಸಿಂಗ್, ಸಿಇಒ, ಇಂದೋರ್ ಸ್ಮಾರ್ಟ್ ಸಿಟಿ; ಶ್ರೀ ಎಂ. ಪ್ರತಾಪ್, ಸಿಇಒ, ಕೊಯಮತ್ತೂರು ಸ್ಮಾರ್ಟ್ ಸಿಟಿ; ಆಗ್ರಾ ಸ್ಮಾರ್ಟ್ ಸಿಟಿಯ ಸಿಇಓ ಶ್ರೀ ಅಂಕಿತ್ ಖಂಡೇಲ್ವಾಲ್ ಅವರು ತಮ್ಮ ತಮ್ಮ ನಗರಗಳಲ್ಲಿ ಅಳವಡಿಸಿಕೊಂಡ ಅತ್ಯುತ್ತಮ ರೂಢಿಗಳ ಒಳನೋಟದ ಬಗ್ಗೆ ಬೆಳಕು ಚೆಲ್ಲಿದರು.
ಎಲ್ಲಾ 100 ಸ್ಮಾರ್ಟ್ ಸಿಟಿಗಳಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳನ್ನು (ಐಸಿಸಿಸಿ) ಯಶಸ್ವಿಯಾಗಿ ನಿಯೋಜಿಸುವಲ್ಲಿ ಅಭಿಯಾನದ ಪ್ರವರ್ತಕ ಪ್ರಯತ್ನವನ್ನು ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್ ಶ್ಲಾಘಿಸಿದರು. "ಐಸಿಸಿಸಿಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಉತ್ತಮ ಸನ್ನಿವೇಶದ ಜಾಗೃತಿಯನ್ನು ನಿರ್ಮಿಸುತ್ತವೆ ಮತ್ತು ವಿವರವಾದ ಎಸ್ಒಪಿಗಳ ಮೂಲಕ ದೈನಂದಿನ ಕೆಲಸ / ಸಮಸ್ಯೆಗಳು / ಅಗತ್ಯಗಳನ್ನು ನಿರ್ವಹಿಸಲು ನಗರ ಕಾರ್ಯಗಳಾದ್ಯಂತ ನಾಗರಿಕ ಅಧಿಕಾರಿಗಳಿಗೆ ಏಕೀಕೃತ ಚಿತ್ರಣವನ್ನು ಒದಗಿಸುತ್ತವೆ" ಎಂದು ಅವರು ಹೇಳಿದರು. ಐಸಿಸಿಸಿಗಳು ಈ ಸ್ಮಾರ್ಟ್ ಸಿಟಿಗಳ ನರ ಕೇಂದ್ರಗಳಾಗಿ ಮಾರ್ಪಟ್ಟಿವೆ ಮತ್ತು ನಗರ ನಿರ್ವಹಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಒಳಗೊಂಡಿವೆ ಎಂದು ಅವರು ಹೇಳಿದರು.
ಇದಲ್ಲದೆ, ಶ್ರೀಮತಿ ಕಲ್ಪನಾ ಸೈನಿ ಅವರು ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಹೆಚ್ಚಿನ ಸೇರ್ಪಡೆಯ ಅಗತ್ಯವನ್ನು ಒತ್ತಿ ಹೇಳಿದರು; ಶ್ರೀಮತಿ ವಂದನಾ ಚೌಹಾಣ್ ಅವರು ಕೋವಿಡ್-19 ಮತ್ತು ಇತರ ಬಿಕ್ಕಟ್ಟಿನ ಸಮಯದಲ್ಲಿ ಸಾಂಕ್ರಾಮಿಕ ರೋಗದ ಪರಿಣಾಮಕಾರಿ ನಿರ್ವಹಣೆಗಾಗಿ ಐಸಿಸಿಸಿ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು; ಈ ನಗರಗಳಲ್ಲಿ ಚಲನಶೀಲತೆ, ನೀರು ಮತ್ತು ತ್ಯಾಜ್ಯ ನಿರ್ವಹಣೆ ಮುಂತಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಪರಿಣತಿಯನ್ನು ರಚಿಸುವ ಅಗತ್ಯವನ್ನು ಶ್ರೀ ಎಕೆಪಿ ಚಿನ್ ರಾಜ್ ಒತ್ತಿ ಹೇಳಿದರು.; ಶ್ರೀ ರಮೇಶ್ ಬಿಧುರಿ ಅವರು ಸುಗಮ ಜೀವನ ಸೂಚ್ಯಂಕ ಮತ್ತು ಹವಾಮಾನ ಸ್ಮಾರ್ಟ್ ಸಿಟಿಗಳಂತಹ ಚೌಕಟ್ಟುಗಳನ್ನು ಪ್ರವರ್ತಕಗೊಳಿಸುವ ಸ್ಮಾರ್ಟ್ ಸಿಟಿ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಶ್ಲಾಘಿಸಿದರು. ಇದಲ್ಲದೆ, ಫಲಿತಾಂಶ-ಚಾಲಿತ ಕಾಮಗಾರಿಗಳನ್ನು ಉತ್ತೇಜಿಸುವ ಸಲುವಾಗಿ, ಈ ಅಭಿಯಾನದ ಅನುಕರಣೀಯ ಪ್ರಮುಖ ಉಪಕ್ರಮಗಳನ್ನು ವರ್ಧಿಸಲು ವ್ಯಾಪಕ ಪ್ರಚಾರ ಪ್ರಯತ್ನಗಳ ಅಗತ್ಯವನ್ನು ಅವರು ವಿವರಿಸಿದರು.
ಸ್ಮಾರ್ಟ್ ಸಿಟಿಗಳ ಅಭಿಯಾನದ ಜಾರಿಯು ನಗರಾಭಿವೃದ್ಧಿ ವಲಯದಲ್ಲಿ ಹೊಸ ಯುಗದ ಆರಂಭವನ್ನು ಗುರುತಿಸಿದ್ದು, ವಲಯವನ್ನು ಸುಧಾರಿಸುವತ್ತ ಹೆಜ್ಜೆಯಾಗಿ, ಸುಧಾರಿತ ಆರ್ಥಿಕ ಗುಣಮಟ್ಟ, ಸ್ಮಾರ್ಟ್ ಆಡಳಿತ, ಹವಾಮಾನ-ಸೂಕ್ಷ್ಮ ಸುಸ್ಥಿರ ಪರಿಸರ, ರೋಮಾಂಚಕ ಸಾರ್ವಜನಿಕ ಸ್ಥಳಗಳು, ಡಿಜಿಟಲ್ ಪ್ರವೇಶ ಮತ್ತು ಆರೋಗ್ಯ ಮತ್ತು ನೈರ್ಮಲ್ಯ, ಹೀಗೆ ನಗರಗಳ ಚೌಕಟ್ಟನ್ನು ಸಶಕ್ತಗೊಳಿಸುತ್ತದೆ. ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನಾಗರಿಕರ ಸೇವೆಯಲ್ಲಿ ಸುಗಮ ಜೀವನ ಸೂಚ್ಯಂಕವನ್ನು ಹೆಚ್ಚಿಸಲು ಬದ್ಧವಾಗಿದೆ.
*******
(Release ID: 1926632)
Visitor Counter : 439