ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಾರಿ ಶಕ್ತಿ ಹೊರಹೊಮ್ಮುತ್ತಿದೆ: ಡಾ.ಎಲ್.ಮುರುಗನ್


ಮಹಿಳೆಯರು ಈಗಾಗಲೇ ಮಿಂಚುತ್ತಿದ್ದಾರೆ , ಮುಂದೆಯೂ ಸಾಧನೆ ಮಾಡಲಿದ್ದಾರೆ: ಡಾ.ಎಲ್.ಮುರುಗನ್

Posted On: 19 MAY 2023 5:30PM by PIB Bengaluru

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತ ಪೆವಿಲಿಯನ್‌ನಲ್ಲಿ 4 ನೇ ದಿನ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಕುರಿತು ಅಧಿವೇಶನದಲ್ಲಿ ಸುದೀರ್ಘ ಗಹನ ಚರ್ಚೆ ನಡೆಯಿತು. ಚರ್ಚಾ ವಿಷಯ 'ಅವಳು ಹೊಳೆಯುತ್ತಿದ್ದಾಳೆ' ಎಂಬುದಾಗಿತ್ತು. ನಟಿ ನಿರ್ಮಾಪಕಿ ಖುಷ್ಬೂ ಸುಂದರ್ ಕಾರ್ಯಕ್ರಮ ನಡೆಸಿಕೊಟ್ಟರೆ, ನಟಿ ಇಶಾ ಗುಪ್ತಾ, ಗ್ರೀಕ್-ಅಮೆರಿಕನ್ ನಿರ್ದೇಶಕಿ ಡಾಫ್ನೆ ಶ್ಮೊನ್ ಮತ್ತು ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಮತ್ತು ಸ್ತ್ರೀ ಕೇಂದ್ರಿತ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಸುಧೀರ್ ಮಿಶ್ರ ಭಾಗವಹಿಸಿದ್ದರು. 

ಸಂವಾದ ಪ್ರಾರಂಭದಲ್ಲಿ ಮಾತನಾಡಿದ ಹಿರಿಯ ನಟಿ ಖುಷ್ಬೂ ಸುಂದರ್, ಭಾರತೀಯ ಚಿತ್ರರಂಗ ಇಂದು ಸುಂದರ ಘಟ್ಟವನ್ನು ಕಾಣುತ್ತಿದ್ದು, ಇಲ್ಲಿ ಮಹಿಳೆಯರು ಕೇವಲ ನಟರಾಗಿ ಮಾತ್ರವಲ್ಲದೆ ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರಾಗಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

 

ಮಹಿಳಾ ಶಕ್ತಿಯೊಂದಿಗೆ ಸೃಜನಾತ್ಮಕ ಆರ್ಥಿಕತೆಯ ಕುರಿತು ಮಾತನಾಡಿದ ಮಧುರ್ ಭಂಡಾರ್ಕರ್, 'ಚಿತ್ರದಲ್ಲಿ ನಾಯಕಿಯಾಗಿ ಮಹಿಳಾ ಕೇಂದ್ರಿತ ಸಿನಿಮಾವಿದ್ದಾಗ ಹಣ ಸಂಗ್ರಹಿಸುವುದು ಕಷ್ಟ, ಆದರೆ ಮಹಿಳಾ ಕೇಂದ್ರಿತ ಚಿತ್ರಗಳನ್ನು ನಾನು ಮಾಡಿದಾಗ ಅವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಪ್ರಶಸ್ತಿ ಪಡೆದವು. ಮಹಿಳಾ ಆಧಾರಿತ ಚಲನಚಿತ್ರದಿಂದ ನೀವು ಹಣ ಗಳಿಸಲು ಸಾಧ್ಯವಾಗುವುದಿಲ್ಲ, ಪ್ರಪಂಚದಾದ್ಯಂತ ಈ ಸಮಸ್ಯೆಯಿದೆ.'ಹಾಗಾದರೆ ರಿಸ್ಕ್ ಯಾಕೆ ತೆಗೆದುಕೊಳ್ಳುತ್ತೀರಿ ಎಂದು ಕೇಳಿದಾಗ, ಮಹಿಳೆಯರ ದೃಷ್ಟಿಕೋನದಿಂದ ನಾನು ಸುಲಭವಾಗಿ ಚಿತ್ರ ನಿರ್ಮಿಸುತ್ತೇನೆ. ಇದು ಕಥೆಗಳಿಗೆ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ.

ಚಾಂದಿನಿ ಬಾರ್‌ ಸಿನಿಮಾ ತಯಾರಿಸಲು ಹೊರಟಾಗ ನಿರ್ಮಾಣಕ್ಕೆ ಯಾರೂ ಮುಂದೆ ಬರಲಿಲ್ಲ. ಆಗ ನಾನು ಹಲವು ಹೀರೋಗಳನ್ನು ಹಾಕಿಕೊಂಡು ತ್ರಿಶಕ್ತಿ ಎಂಬ ಸಿನಿಮಾ ಮಾಡಿದೆ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ. ನಂತರ ನಾನು ಚಾಂದಿನಿ ಬಾರ್ ಚಿತ್ರ ತಯಾರಿಸಲು ನಿರ್ಧರಿಸಿದೆ. ಕೊನೆಗೂ ನಿರ್ಮಾಪಕರು ಸಿಕ್ಕರು. ಅದೃಷ್ಟವಶಾತ್ ಚಾಂದಿನಿ ಬಾರ್ ಕಮರ್ಷಿಯಲ್ ಆಗಿ ಹಿಟ್ ಆಯಿತು, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತು. ಆಗ, ಮಹಿಳೆಯರನ್ನು ನನ್ನ ಕೇಂದ್ರ ಪಾತ್ರವಾಗಿಟ್ಟುಕೊಂಡು ಹೆಚ್ಚಿನ ಸಿನಿಮಾಗಳನ್ನು ಮಾಡಲು ನನಗೆ ಧೈರ್ಯ ಬಂತು. ನಾನು ಹೀರೋ ಜೊತೆ ಸಿನಿಮಾ ಮಾಡಿದರೆ ಸಿನಿಮಾದ ಬಜೆಟ್ ಹೆಚ್ಚುತ್ತದೆ ಎಂದು ಜನರು ಹೇಳಿದರೂ ಕೂಡ, ನಾನು ಮಾಡುವ ಸಿನಿಮಾಗಳು ನನ್ನ ಮನಸ್ಸಿಗೆ ಖುಷಿ ನೀಡುತ್ತವೆ. ಇತ್ತೀಚೆಗೆ ಒಟಿಟಿ ಪ್ಲಾಟ್ ಫಾರ್ಮ್ ಗಳು ಬಂದ ಮೇಲೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತಿದೆ ಜತೆಗೆ ಅಪಾಯಗಳನ್ನು ಸ್ವೀಕರಿಸುವ ಅವಕಾಶವನ್ನು ಎಲ್ಲರಿಗೂ ನೀಡುತ್ತದೆ. 

ಇಶಾ ಗುಪ್ತಾ ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, ಚಿತ್ರೋದ್ಯಮ ವೃತ್ತಿಗೆ ನಾನು ಕಾಲಿಟ್ಟು ಈ ವರ್ಷಕ್ಕೆ ದಶಕವಾಗುತ್ತಿದ್ದು, 2019ರವರೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪಡೆಯುವುದು ನನಗೆ ಕನಸಾಗಿತ್ತು. ಅನುಪಮ್ ಖೇರ್ ಮತ್ತು ಕುಮುದ್ ಮಿಶ್ರಾ ಅವರೊಂದಿಗೆ ನಾನು ಮಹಿಳಾ ಪೊಲೀಸ್ ಪಾತ್ರ ಮಾಡಲು ಪ್ರಯತ್ನಿಸುತ್ತಿದ್ದೆವು. ಆದರೆ ಚಿತ್ರಕ್ಕೆ ಹಣ ಹೂಡಿಕೆ ಮಾಡುವುದು ಸವಾಲಾಗಿತ್ತು. ಚಿತ್ರ ಥಿಯೇಟರ್‌ ನಲ್ಲಿ ತೆರೆ ಕಂಡಾಗ, ಪ್ರೇಕ್ಷಕರನ್ನು ಸೆಳೆಯಲಿಲ್ಲ. ಆದರೆ ನೆಟ್‌ಫ್ಲಿಕ್ಸ್‌ನಲ್ಲಿ ಬಂದಾಗ, ಸಾಕಷ್ಟು ವೀಕ್ಷಣೆ ಕಂಡಿತು. ಪ್ರೇಕ್ಷಕರು ಮಹಿಳಾ ಆಧಾರಿತ ಕಥೆಗಳನ್ನು ವೀಕ್ಷಿಸಲು ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಇಂದು ಸಿನಿಮಾ ಇಷ್ಟಪಡುವ ವೀಕ್ಷಕರ ಅಭಿರುಚಿ, ಚಿತ್ರೋದ್ಯಮ ಪರಿಸ್ಥಿತಿ ಬದಲಾಗುತ್ತಿವೆ. ಆದರೆ ನಮ್ಮ ಕಥೆಗಳಲ್ಲಿ ನಂಬಿಕೆ ಇಡುವ ನಿರ್ದೇಶಕರು ಹೆಚ್ಚು ಸಿಗಬೇಕಿದೆ. 

ಚಿತ್ರನಟಿ ಶ್ರುತಿ ಹಾಸನ್ ಅವರೊಂದಿಗೆ 'ದಿ ಐ' ಚಿತ್ರವನ್ನು ನಿರ್ದೇಶಿಸಿದ ಡ್ಯಾಫ್ನೆ ಶ್ಮೊನ್, ಸಿನಿಮಾ ನೋಡುವ ಪ್ರೇಕ್ಷಕರಲ್ಲಿ ಶೇಕಡಾ 51ರಷ್ಟು ಮಂದಿ ಮಹಿಳೆಯರು ಎಂಬುದು ಸತ್ಯ. ನಮ್ಮ ಕಥೆಗಳನ್ನು ತೆರೆಯ ಮೇಲೆ ನೋಡಬೇಕು. ಮಹಿಳಾ ಕಥೆಗಳನ್ನು ನೋಡಲು ಇಷ್ಟಪಡುವಾಗ ಮಹಿಳಾ ನಿರ್ದೇಶಕರು ಮತ್ತು ನಟಿಯರು  ಮುಂಚೂಣಿಯಲ್ಲಿರುವುದರ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ನಾವು ಪ್ರತಿ ವರ್ಷ ಸುಮಾರು 10 ಮಹಿಳೆಯರನ್ನು ಆಯ್ಕೆ ಮಾಡಿ ಅವರು ಚಿತ್ರ ತಯಾರಿಸಲು ಹಣಕಾಸು ಪಡೆಯಲು ಸಹಾಯ ಮಾಡುತ್ತೇವೆ. ಕಲಾವಿದರಾಗಿ ಪುರುಷರಿಗೆ ಸಮನಾಗಿ ಮಹಿಳೆಯರು ಬೆಳೆಯಬೇಕೆಂದು ನಾವು ನೋಡುತ್ತೇವೆ. 

'ವಂಡರ್ ವುಮನ್‌' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದಾಗ ಒಂದು ಚಿತ್ರವನ್ನು ಉತ್ತಮವಾಗಿ ತಯಾರಿಸಿದರೆ ಅದು ಮಹಿಳೆಯನ್ನು ಮುಖ್ಯ ಪಾತ್ರವನ್ನಾಗಿ ಇಟ್ಟುಕೊಂಡು ಮಾಡಿದರೂ ಚೆನ್ನಾಗಿ ಆಗುತ್ತದೆ ಎಂದು ಗೊತ್ತಾಗುತ್ತದೆ. ಇಂತಹ ಚಿತ್ರಗಳನ್ನು ನಾವು ಉತ್ತಮವಾಗಿ ಪ್ರಚಾರ ಮಾಡಬೇಕು, ಅವುಗಳಿಗೆ ಮಾರುಕಟ್ಟೆ ಒದಗಿಸಬೇಕು ಎನ್ನುತ್ತಾರೆ ಶ್ಮೊನ್.
ಚಿತ್ರಕ್ಕೆ ನಾಯಕನನ್ನು ಆಯ್ಕೆ ಮಾಡುವಾಗ ಮಾರುಕಟ್ಟೆಯಲ್ಲಿ ಭರ್ಜರಿ ಓಪನಿಂಗ್ ಪಡೆಯುವ ಚಿತ್ರ ಮತ್ತು ನಾಯಕ ಬೇಕು ಎಂದು ನಿರ್ದೇಶಕರು, ನಿರ್ಮಾಪಕರು ನೋಡುತ್ತಾರೆ ಎಂದು ಮಧುರ್ ಭಂಡಾರ್ಕರ್ ಹೇಳಿದರೆ, ಫ್ರೆಂಚ್ ರಿವೇರಾದಲ್ಲಿ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವ ಚಿತ್ರ ನಿರ್ಮಾಪಕ ಸುಧೀರ್ ಮಿಶ್ರಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ  ನಾಯಕನಿಂದಾಗಿ ಚಿತ್ರ ಭರ್ಜರಿ ಓಪನಿಂಗ್ ಕಾಣುವ ಪರಿಸ್ಥಿತಿಯಿಲ್ಲ ಎಂದರು.

 

“ಪ್ರೇಕ್ಷಕರು ಬದಲಾಗುತ್ತಿದ್ದಾರೆ. ಒಟಿಟಿಯಲ್ಲಿ ಚಿತ್ರ ಬಿಡುಗಡೆಗೆ ಕಾಯುತ್ತಾರೆ. ಚಿತ್ರೋದ್ಯಮದ ವಾತಾವರಣ ಬದಲಾಗುತ್ತಿದೆ. ಸಿನಿಮಾ ಸೆಟ್‌ಗೆ ಹೋದರೆ ಶೇಕಡ 50ರಷ್ಟು ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಹೆಚ್ಚೆಚ್ಚು ಮಹಿಳಾ ನಿರ್ಮಾಪಕರು ಮತ್ತು ನಿರ್ದೇಶಕರು ಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ನಮ್ಮ ಪುರುಷರ ದೃಷ್ಟಿಕೋನದ ಬಗ್ಗೆ ಕೂಡ ಮಾತನಾಡುತ್ತಾರೆ ಎಂದು ಭಾವಿಸುತ್ತೇನೆ.


"ಫ್ರಾನ್ಸ್ ದೇಶದಲ್ಲಿ, ಪುರುಷರಿಗಿಂತ ಹೆಚ್ಚು ಮಹಿಳಾ ಯುವ ನಿರ್ದೇಶಕರಿದ್ದಾರೆ ಎಂದು ಭಾವಿಸಿದ್ದೇನೆ. ನಿಧಾನವಾಗಿ ಪರಿಸ್ಥಿತಿಗಳು ಬದಲಾಗುತ್ತಿವೆ, ನಮ್ಮಲ್ಲಿ ಜೋಯಾ ಮತ್ತು ರೀಮಾ ಮತ್ತು ದಕ್ಷಿಣದಲ್ಲಿ ಇನ್ನೂ ಅನೇಕರು ಇದ್ದಾರೆ. ನಾವು ಕ್ರಮಿಸಬೇಕಾದ ದಾರಿ ಇನ್ನೂ ದೂರವಿದ್ದು ಪ್ರಗತಿ ಹೊಂದುತ್ತಿದ್ದೇವೆ. ”

ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೇಗೆ ಕೊಡುಗೆ ನೀಡುತ್ತಿದೆ ಎಂಬುದರ ಕುರಿತು ಮಾತನಾಡಿದ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಡಾ. ಎಲ್. ಮುರುಗನ್, “ಮಹಿಳೆಯರು ನಿಜವಾಗಿಯೂ ಮಿಂಚುತ್ತಿದ್ದಾರೆ ಮತ್ತು ಚಿತ್ರರಂಗದಲ್ಲಿ ಕೂಡ ಸಾಧನೆ ಮಾಡುತ್ತಿದ್ದಾರೆ. ನಾನು ಸಿನಿಮಾವನ್ನು ಹೆಣ್ಣು ಅಥವಾ ಪುರುಷ ಕೇಂದ್ರಿತ ಸಿನಿಮಾ ಎಂದು ನೋಡುವುದಿಲ್ಲ. ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ತಮಿಳಿನಲ್ಲಿ ಮಗಲಿರ್ ಮಟ್ಟುಂ (ಮಹಿಳೆಯರಿಗೆ ಮಾತ್ರ) ಎಂಬ ಸಿನಿಮಾ ಬಂದಿತ್ತು. ಚಿತ್ರ ಚೆನ್ನಾಗಿ ಗಳಿಕೆ ಕಂಡಿತ್ತು. ವಿದ್ಯಾ ಬಾಲನ್ ಹಲವು ಉತ್ತಮ ಮಹಿಳಾ ಕೇಂದ್ರಿತ ಕಥೆಗಳ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ಯಾಡ್‌ಮ್ಯಾನ್‌ನಂತಹ ಚಿತ್ರಗಳು ಮಹಿಳಾ ಸಮಸ್ಯೆಗಳನ್ನು ಕೇಂದ್ರೀಕರಿಸುತ್ತವೆ. ಮಹಿಳಾ ವಿಷಯಗಳಿಗೆ ಮೀಸಲಾಗಿರುವ 'ಶೀ ಶಾರ್ಟ್ ಫಿಲ್ಮ್ ಫೆಸ್ಟಿವಲ್' ಎಂಬ ಚಿತ್ರವಿದೆ. ಐಶ್ವರ್ಯಾ ಸುಂದರ್ ಅವರು ಅನಿಮೇಷನ್ ಚಿತ್ರವನ್ನು ನಿರ್ಮಿಸಿದ್ದು, ಅದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಗುಣೀತ್ ಅವರು ಇತ್ತೀಚೆಗಷ್ಟೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಹಿಳೆಯರು ಈಗಾಗಲೇ ಚಿತ್ರರಂಗದಲ್ಲಿ ಸುಂದರವಾದ ವಾತಾವರಣ, ಸ್ಥಾನವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ.


ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾರಿ ಶಕ್ತಿ ಹೊರಹೊಮ್ಮುತ್ತಿದೆ.
ಚಲನಚಿತ್ರೋದ್ಯಮದಲ್ಲಿ 100ಕ್ಕೂ ಹೆಚ್ಚು ಮಹಿಳಾ ಚಿತ್ರ ತಯಾರಕರು ಮತ್ತು ತಂತ್ರಜ್ಞರಿಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ-NFDC ಹೇಗೆ ತರಬೇತಿ ನೀಡಿದೆ ಮತ್ತು 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಎಂಬ ಕಾರ್ಯಕ್ರಮವು ಈ ವರ್ಷ ಶೇಕಡಾ 70ಕ್ಕಿಂತ ಹೆಚ್ಚು ಮಹಿಳೆಯರನ್ನು ಹೊಂದಿದೆ ಎಂಬ ಬಗ್ಗೆ ಡಾ ಮುರುಗನ್ ಮಾತನಾಡಿದರು. 

"ಸರ್ಕಾರವು ಮಹಿಳಾ ಶಕ್ತಿಗೆ ಮೀಸಲಾಗಿರುವ ಹಲವಾರು ಯೋಜನೆಗಳನ್ನು ಹೊಂದಿದೆ." ಎಂದು ಹೇಳಿ ಡಾ ಮುರುಗನ್ ತಮ್ಮ ಮಾತು ಮುಗಿಸಿದರು. 

 

*****



(Release ID: 1925675) Visitor Counter : 101