ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ದೆಹಲಿಯಲ್ಲಿ 8ನೇ ಅಖಿಲ ಭಾರತ ಪಿಂಚಣಿ ಅದಾಲತ್ ಉದ್ಘಾಟಿಸಲಿದ್ದಾರೆ, ಅದಾಲತ್‌ನಲ್ಲಿ ದೀರ್ಘಕಾಲದ ಪ್ರಕರಣಗಳನ್ನು ಕೈಗೆತ್ತಿಕೊಂಡು ಪರಿಹರಿಸಲಾಗುವುದು
ಇಲಾಖೆಯಿಂದ ಇದುವರೆಗೆ 7 ಅಖಿಲ ಭಾರತ ಪಿಂಚಣಿ ಅದಾಲತ್ ಆಯೋಜಿಸಲಾಗಿದ್ದು, 24218 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು 17235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಎಲ್ಲಾ ಸಚಿವಾಲಯಗಳು/ಇಲಾಖೆಗಳ ಮುಂದಿನ 6 ತಿಂಗಳಲ್ಲಿ ನಿವೃತ್ತರಾಗಲಿರುವ 1200 ಅಧಿಕಾರಿಗಳಿಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ನಡೆಸುವ 50 ನೇ ಪಿಆರ್‌ಸಿ (ನಿವೃತ್ತಿ ಪೂರ್ವ ಕೌನ್ಸೆಲಿಂಗ್) ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಚಿವರು ವಹಿಸಲಿದ್ದಾರೆ.
प्रविष्टि तिथि:
16 MAY 2023 12:47PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ದೆಹಲಿಯಲ್ಲಿ 8 ನೇ ಅಖಿಲ ಭಾರತ ಪಿಂಚಣಿ ಅದಾಲತ್ ಅನ್ನು ಉದ್ಘಾಟಿಸಲಿದ್ದಾರೆ, ಅದಾಲತ್‌ನಲ್ಲಿ ದೀರ್ಘಕಾಲದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಮತ್ತು ಇತ್ಯರ್ಥಪಡಿಸಲಾಗುತ್ತದೆ.
ಸಂಕೀರ್ಣವಾದ ಪ್ರಕರಣಗಳನ್ನು ಪರಿಹರಿಸಲು ಭಾರತದಾದ್ಯಂತ ಸಚಿವಾಲಯಗಳು/ಇಲಾಖೆಗಳು ಪಿಂಚಣಿ ಅದಾಲತ್‌ಗಳನ್ನು ಆಯೋಜಿಸುತ್ತಿರುವ ವಿವಿಧ ಸ್ಥಳಗಳಲ್ಲಿ ಪಿಂಚಣಿ ಅದಾಲತ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಲಿಂಕ್ ಮಾಡಲಾಗುತ್ತದೆ. ಇಲಾಖೆಯಿಂದ ಇದುವರೆಗೆ 7 ಅಖಿಲ ಭಾರತ ಪಿಂಚಣಿ ಅದಾಲತ್ ಆಯೋಜಿಸಲಾಗಿದ್ದು, 24218 ಪ್ರಕರಣಗಳನ್ನು ಕೈಗೆತ್ತಿಕೊಂಡು 17235 ಪ್ರಕರಣಗಳನ್ನು ಪರಿಹರಿಸಲಾಗಿದೆ.
ಸಚಿವರು ನಾಳೆ ನವದೆಹಲಿಯಲ್ಲಿ 50 ನೇ ಪಿಆರ್‌ಸಿ (ನಿವೃತ್ತಿ ಪೂರ್ವ ಕೌನ್ಸೆಲಿಂಗ್) ಕಾರ್ಯಾಗಾರದ ಅಧ್ಯಕ್ಷತೆಯನ್ನೂ ವಹಿಸಲಿದ್ದಾರೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ನಡೆಸಲಾಗುವ ಈ ನಿವೃತ್ತಿ ಪೂರ್ವ ಕೌನ್ಸೆಲಿಂಗ್ ಅನ್ನು ಮುಂದಿನ 6 ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಎಲ್ಲಾ ಸಚಿವಾಲಯಗಳು/ಇಲಾಖೆಗಳ 1200 ಅಧಿಕಾರಿಗಳಿಗೆ ಆಯೋಜಿಸಲಾಗಿದೆ.
ಈ ಕಾರ್ಯಾಗಾರಗಳು ನಿವೃತ್ತಿ ಹೊಂದುತ್ತಿರುವ ಕೇಂದ್ರ ಸರ್ಕಾರಿ ಸಿವಿಲ್ ನೌಕರರು ಮತ್ತು ಪಿಂಚಣಿಯ ಬಗ್ಗೆ ವ್ಯವಹರಿಸುವ ಅಧಿಕಾರಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಸಕಾಲಿಕವಾಗಿ ಪಾವತಿಸಲು ಅಗತ್ಯವಾದ ಔಪಚಾರಿಕತೆಗಳು, ಭವಿಷ್ಯ ಪೋರ್ಟಲ್‌ನಲ್ಲಿ ಪಿಂಚಣಿ ನಮೂನೆಗಳನ್ನು ಹೇಗೆ ಭರ್ತಿ ಮಾಡುವುದು, ಸಮಗ್ರ ಪಿಂಚಣಿದಾರರ ಪೋರ್ಟಲ್ ಮತ್ತು ಭವಿಷ್ಯ, ಸಿಜಿಎಚ್‌ಎಸ್/ಸ್ಥಿರ ವೈದ್ಯಕೀಯ ಭತ್ಯೆಗಳ ಕುರಿತು ಸಂಕ್ಷಿಪ್ತವಾಗಿ ನಿವೃತ್ತಿ, ಹಿರಿಯ ನಾಗರಿಕರಿಗೆ/ಪಿಂಚಣಿದಾರರಿಗೆ ಆದಾಯ ತೆರಿಗೆ ಪ್ರೋತ್ಸಾಹ, ಡಿ ಎಲ್ ಸಿ, ಮುಖದ ದೃಢೀಕರಣ, ಪಿಂಚಣಿದಾರರ ಸಂಘಗಳು ಮತ್ತು ಸೇವೆಯ ಸಮಯದಲ್ಲಿ ಮಾಡಿದ ಅತ್ಯುತ್ತಮ ಕೆಲಸವನ್ನು ಪ್ರದರ್ಶಿಸುವ ವೇದಿಕೆಯಾದ ಅನುಭವ್ ಕುರಿತು ಸಲಹೆ ನೀಡುತ್ತವೆ.
ಇಲಾಖೆಯಿಂದ ಇಲ್ಲಿಯವರೆಗೆ 49 ಪಿಆರ್‌ಸಿ ಗಳನ್ನು ನಡೆಸಲಾಗಿದೆ - ದೆಹಲಿಯಲ್ಲಿ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ 29 ಮತ್ತು ಸಿಎಪಿಎಫ್ ಗಳಿಗೆ ಅಂದರೆ, ನವದೆಹಲಿ, ಜಲಂಧರ್, ಶಿಲ್ಲಾಂಗ್, ಕೋಲ್ಕತ್ತಾ, ಟೇಕನ್‌ಪುರ, ಜಮ್ಮು, ಜೋಧ್‌ಪುರ ಮತ್ತು ಗುವಾಹಟಿಯಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ಗಳಿಗೆ 20 ಪಿಆರ್‌ಸಿ ನಡೆಸಲಾಗಿದೆ. ಎಲ್ಲಾ 6972 ನಿವೃತ್ತ ಸಿಬ್ಬಂದಿ ಈ ಪಿಆರ್‌ಸಿ ಗಳಿಗೆ ಹಾಜರಾಗಿದ್ದರು.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈಗ ಪೋರ್ಟಲ್‌ಗಳನ್ನು ಸಂಯೋಜಿಸುವ ತಾರ್ಕಿಕತೆಯನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿದಾರರಿಗೆ ಜೀವನ ಸುಲಭಗೊಳಿಸಲು, ಪಿಂಚಣಿ ವಿತರಣಾ ಬ್ಯಾಂಕ್ ಪೋರ್ಟಲ್‌ಗಳು, ಅನುಭವ್, ಸಿಪಿಇಎನ್‌ಗ್ರಾಮ್ಸ್, ಸಿಜಿಎಚ್‌ಎಸ್ ಮುಂತಾದ ಎಲ್ಲಾ ಪೋರ್ಟಲ್‌ಗಳನ್ನು ಹೊಸದಾಗಿ ರಚಿಸಲಾದ "ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್" (https://ipension.nic.in) ನಲ್ಲಿ ಸಂಯೋಜಿಸಲು ನಿರ್ಧರಿಸಿದೆ. ಭವಿಷ್ಯ ಪೋರ್ಟಲ್‌ನೊಂದಿಗೆ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ನ ಪಿಂಚಣಿ ಸೇವಾ ಪೋರ್ಟಲ್‌ನ ಸಂಯೋಜನೆ ಕಾರ್ಯ ಪೂರ್ಣಗೊಂಡಿದೆ. ಈ ಸಂಯೋಜನೆಯೊಂದಿಗೆ, ಪಿಂಚಣಿದಾರರು ಈಗ ತಮ್ಮ ಪಿಂಚಣಿ ಚೀಟಿ, ಜೀವನ ಪ್ರಮಾಣಪತ್ರದ ಸಲ್ಲಿಕೆಯ ಸ್ಥಿತಿಗತಿ ಮತ್ತು ಫಾರ್ಮ್-16 ಅನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್ ಮೂಲಕ ಪಡೆಯಬಹುದು. ಎಲ್ಲಾ 18 ಪಿಂಚಣಿ ವಿತರಿಸುವ ಬ್ಯಾಂಕ್‌ಗಳನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್‌ನಲ್ಲಿ ಸಂಯೋಜಿಸಲಾಗುತ್ತದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ 2017 ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪಿಂಚಣಿ ಅದಾಲತ್ ಉಪಕ್ರಮವನ್ನು ಪ್ರಾರಂಭಿಸಲಾಯಿತು. 2018 ರಲ್ಲಿ ರಾಷ್ಟ್ರೀಯ ಪಿಂಚಣಿ ಅದಾಲತ್ ಅನ್ನು ಪಿಂಚಣಿದಾರರ ಕುಂದುಕೊರತೆಗಳ ತ್ವರಿತ ಪರಿಹಾರಕ್ಕಾಗಿ ತಂತ್ರಜ್ಞಾನದ ಮೂಲಕ ನಡೆಸಲಾಯಿತು. ಒಂದು ನಿರ್ದಿಷ್ಟ ಕುಂದುಕೊರತೆಯ ಎಲ್ಲಾ ಮಧ್ಯಸ್ಥಗಾರರನ್ನು ಸಾಮಾನ್ಯ ವೇದಿಕೆಯಲ್ಲಿ ಆಹ್ವಾನಿಸಲಾಗುತ್ತದೆ ಮತ್ತು ಪಿಂಚಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರತಿ ಪಾಲುದಾರರ ಪ್ರಕಾರ ಪ್ರಕರಣವನ್ನು ಪರಿಹರಿಸಲಾಗುತ್ತದೆ, ಇದರಿಂದಾಗಿ ಪಿಂಚಣಿ ನೀಡಿಕೆ ಸಮಯಕ್ಕೆ ಸರಿಯಾಗಿ ಆರಂಭವಾಗುತ್ತದೆ.
ಪಾರದರ್ಶಕತೆ, ಡಿಜಿಟಲೀಕರಣ ಮತ್ತು ಸೇವಾ ವಿತರಣೆಯ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ, ಈ ಇಲಾಖೆ ಪರಿಚಯಿಸಿದ ಭವಿಷ್ಯ ಪೋರ್ಟಲ್ ಪಿಂಚಣಿ ಪ್ರಕ್ರಿಯೆ ಮತ್ತು ಪಾವತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. NeSDA ಮೌಲ್ಯಮಾಪನ 2021 ರ ಪ್ರಕಾರ ಭವಿಷ್ಯ ಪೋರ್ಟಲ್ ವ್ಯವಸ್ಥೆಯು ಎಲ್ಲಾ ಕೇಂದ್ರ ಸರ್ಕಾರದ ಇ-ಆಡಳಿತ ಸೇವಾ ವಿತರಣಾ ಪೋರ್ಟಲ್‌ಗಳ ಪೈಕಿ 3 ನೇ ಶ್ರೇಣಿಯನ್ನು ಪಡೆದುಕೊಂಡಿದೆ.
*****
(रिलीज़ आईडी: 1924475)
आगंतुक पटल : 166