ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸೋಮವಾರ ನವದೆಹಲಿಯಲ್ಲಿ ಶಾಸನ ಕರಡು ರಚನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಸಂಸತ್ತು, ರಾಜ್ಯ ಶಾಸಕಾಂಗಗಳು, ವಿವಿಧ ಸಚಿವಾಲಯಗಳು, ಶಾಸನಬದ್ಧ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಡುವೆ ಶಾಸನ ಕರಡು ರಚನೆಯ ತತ್ವಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುವುದು ಕಾರ್ಯಕ್ರಮದ ಗುರಿಯಾಗಿದೆ.

Posted On: 14 MAY 2023 12:58PM by PIB Bengaluru

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮೇ 15, 2023 ಸೋಮವಾರದಂದು ನವದೆಹಲಿಯಲ್ಲಿ ಶಾಸನ ಕರಡು ರಚನೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಸಂವಿಧಾನಾತ್ಮಕ ಮತ್ತು ಸಂಸದೀಯ ಅಧ್ಯಯನಗಳ ಸಂಸ್ಥೆಯು (ಐಸಿಪಿಎಸ್) ಸಂಸದೀಯ ಸಂಶೋಧನೆ ಮತ್ತು ಪ್ರಜಾಪ್ರಭುತ್ವದ ತರಬೇತಿ ಸಂಸ್ಥೆ (ಪಿ ಆರ್‌ ಐ ಡಿ ಇ) ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಸಂಸತ್ತು, ರಾಜ್ಯ ಶಾಸಕಾಂಗಗಳು, ವಿವಿಧ ಸಚಿವಾಲಯಗಳು, ಶಾಸನಬದ್ಧ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಡುವೆ ಶಾಸನ ಕರಡು ರಚನೆಯ ತತ್ವಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.

ಸಮಾಜ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಜಾರಿಗೊಳಿಸಲಾದ ನೀತಿಗಳು ಮತ್ತು ನಿಯಮಗಳ ವ್ಯಾಖ್ಯಾನದ ಮೇಲೆ ಶಾಸಕಾಂಗ ಕರಡು ಪ್ರಮುಖ ಪ್ರಭಾವವನ್ನು ಹೊಂದಿದೆ. ಪ್ರಜಾಸತ್ತಾತ್ಮಕ ಆಡಳಿತವನ್ನು ಉತ್ತೇಜಿಸುವ ಮತ್ತು ಕಾನೂನನ್ನು ಜಾರಿಗೊಳಿಸುವ ಶಾಸನವನ್ನು ರಚಿಸುವ ಜವಾಬ್ದಾರಿಯನ್ನು ಶಾಸಕಾಂಗ ಕರಡುದಾರರು ಹೊಂದಿರುವುದರಿಂದ, ಅವರ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಕಾಲಕಾಲಕ್ಕೆ ತರಬೇತಿಯನ್ನು ನೀಡುವುದು ಅವಶ್ಯಕವಾಗಿದೆ. ತರಬೇತಿ ಕಾರ್ಯಕ್ರಮವು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*****(Release ID: 1924180) Visitor Counter : 95