ಹಣಕಾಸು ಸಚಿವಾಲಯ

ಯು.ಎಸ್. ಮತ್ತು ಯುರೋಪ್ ದೇಶಗಳಲ್ಲಿ ಉದ್ಭವಿಸಿದ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿನ ಒತ್ತಡದ ಹಿನ್ನೆಲೆಯಲ್ಲಿ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳ ಪೂರ್ವಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು


ಅಪಾಯ ನಿರ್ವಹಣೆ, ಠೇವಣಿಗಳ ವೈವಿಧ್ಯೀಕರಣ ಮತ್ತು ಸ್ವತ್ತುಗಳ ಆಧಾರದ ಮೇಲೆ ನಿಯಂತ್ರಕ ಚೌಕಟ್ಟಿನ ಅನುಸರಣೆಯ ಮೂಲಕ ಪಿ.ಎಸ್.ಬಿ.ಗಳ ಸನ್ನದ್ಧತೆಯ ಮೇಲೆ ಕೇಂದ್ರ ಸರ್ಕಾರ ಗಮನ ಕೇಂದ್ರೀಕರಿಸಿದೆ

Posted On: 25 MAR 2023 4:32PM by PIB Bengaluru

ಅಮೇರಿಕಾ ಮತ್ತು ಯುರೋಪ್ನಲ್ಲಿನ ಕೆಲವು ಅಂತರರಾಷ್ಟ್ರೀಯ ಬ್ಯಾಂಕ್ಗಳ ವೈಫಲ್ಯದಿಂದ ಹೊರಹೊಮ್ಮುತ್ತಿರುವ ಪ್ರಸ್ತುತ ಜಾಗತಿಕ ಆರ್ಥಿಕ ಸನ್ನಿವೇಶದ ಸಂದರ್ಭದಲ್ಲಿ ವಿವಿಧ ಹಣಕಾಸು ಸುಸ್ಥಿತಿಯ ಮಾನದಂಡಗಳು ಮತ್ತು ಸ್ಥಿತಿಸ್ಥಾಪಕತ್ವದ ಕುರಿತು ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿ.ಎಸ್.ಬಿ.ಗಳ) ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಇಲ್ಲಿ ಸಭೆ ನಡೆಸಿದರು. 

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕಿಶನ್ ರಾವ್ ಕರಾಡ್, ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಡಾ. ವಿವೇಕ್ ಜೋಶಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳ ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಸಿ.ಇ.ಒ.ಗಳು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್.ವಿ.ಬಿ.) ಮತ್ತು ಸಿಗ್ನೇಚರ್ ಬ್ಯಾಂಕ್ (ಎಸ್.ಬಿ) ಹಾಗೂ ಕ್ರೆಡಿಟ್ ಸ್ಯುಸ್ಸೆ ವೈಫಲ್ಯದಿಂದಾಗಿ ದಿವಾಳಿಯಾದಾಗ ಸೃಷ್ಟಿಯಾದ ಜಾಗತಿಕ ಆರ್ಥಿಕ ಬಿಕ್ಕಟ್ಟು ಸನ್ನಿವೇಶದ ಕುರಿತು ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿ.ಎಸ್.ಬಿ.ಗಳ) ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಸಿ.ಇ.ಒ.ಗಳೊಂದಿಗೆ ಮುಕ್ತ ಚರ್ಚೆಯನ್ನು ಪರಿಶೀಲನಾ ಸಭೆಯಲ್ಲಿ ನಡೆಸಲಾಯಿತು. ಈ ಅಭಿವೃದ್ಧಿಶೀಲ ದೇಶಗಳ ಮತ್ತು ಬಾಹ್ಯ ಜಾಗತಿಕ ಆರ್ಥಿಕ ಒತ್ತಡಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿ.ಎಸ್.ಬಿ.ಗಳ) ತಕ್ಷಣದ ಒಡ್ಡುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉಪಕ್ರಮಗಳ ಬಗ್ಗೆ ಮತ್ತು ದೀರ್ಘಾವಧಿಯ ದೃಷ್ಟಿಕೋನಗಳನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪರಿಶೀಲಿಸಿದರು.

ಪಿ.ಎಸ್.ಬಿ. ಪರಿಶೀಲನಾ ಸಭೆಯಲ್ಲಿ, ಅಪಾಯ ನಿರ್ವಹಣೆ, ಠೇವಣಿಗಳ ವೈವಿಧ್ಯೀಕರಣ ಮತ್ತು ಆಸ್ತಿಗಳ ಆಧಾರದ ಮೇಲೆ ನಿಯಂತ್ರಕ ಚೌಕಟ್ಟಿನ ಅನುಸರಣೆಯ ಮೂಲಕ ಸನ್ನದ್ಧತೆಯ ಜೊತೆಗೆ ದೀರ್ಘಾವಧಿ ಮುಂಜಾಗರೂಕತೆಗಳಿಗೆ ಕೇಂದ್ರ ಹಣಕಾಸು ಸಚಿವರು ಒತ್ತು ನೀಡಿದರು.

ಕೇಂದ್ರೀಕರಣದ ಅಪಾಯಗಳು ಮತ್ತು ಪ್ರತಿಕೂಲ ಮಾನ್ಯತೆಗಳು ಸೇರಿದಂತೆ ಒತ್ತಡದ ಅಂಶಗಳನ್ನು ಗುರುತಿಸಲು ಪಿ.ಎಸ್.ಬಿ.ಗಳು ವ್ಯವಹಾರ ಮಾದರಿಗಳನ್ನು ನಿಕಟವಾಗಿ ನೋಡಬೇಕು ಮತ್ತು ವಿವರವಾದ ಬಿಕ್ಕಟ್ಟು ನಿರ್ವಹಣೆ ಮತ್ತು ಸಂವಹನ ಕಾರ್ಯತಂತ್ರಗಳನ್ನು ರೂಪಿಸಲು ಈ ಅವಕಾಶವನ್ನು ಬಳಸಿಕೊಳ್ಳುಬೇಕು ಎಂದು ಕೇಂದ್ರ ಹಣಕಾಸು ಸಚಿವರು ಸಲಹೆ ನೀಡಿದರು.

ಈಗಾಗಲೇ ಅತ್ಯುತ್ತಮ ಕಾರ್ಪೊರೇಟ್ ಆಡಳಿತದ ಅಭ್ಯಾಸಗಳನ್ನು ಅನುಸರಿಸುತ್ತಿದ್ದಾರೆ, ನಿಯಂತ್ರಕ ಮಾನದಂಡಗಳಿಗೆ ಬದ್ಧರಾಗಿದ್ದಾರೆ, ವಿವೇಕಯುತ ನಗದು ದ್ರವ್ಯತೆ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಮತ್ತು ದೃಢವಾದ ಆಸ್ತಿ-ಬಾಧ್ಯತೆ ಮತ್ತು ಅಪಾಯ ನಿರ್ವಹಣೆಯನ್ನು ಹೊಂದಲು ಗಮನಹರಿಸುವುದನ್ನು ಮುಂದುವರಿಸುತ್ತಿದ್ದಾರೆ. ಹಾಗೂ ಇದರ ಜೊತೆಗೆ “ಜಾಗತಿಕ ಬ್ಯಾಂಕಿಂಗ್ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಸಂಭಾವ್ಯ ಆರ್ಥಿಕ ಆಘಾತದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಸಾರ್ವಜನಿಕ ವಲಯದ ಬ್ಯಾಂಕ್ ಗಳ ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಸಿ.ಇ.ಒ.ಗಳು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿಸಿದರು.  

ವಿವರವಾದ ಚರ್ಚೆಗಳ ನಂತರ, ಹಣಕಾಸು ಸಚಿವರು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಬಡ್ಡಿದರದ ಅಪಾಯಗಳ ಬಗ್ಗೆ ಜಾಗರೂಕರಾಗಿರಲು ಮತ್ತು ನಿಯಮಿತವಾಗಿ ಒತ್ತಡ ಪರೀಕ್ಷೆಗಳನ್ನು ಕೈಗೊಳ್ಳಲು ಸಲಹೆ ನೀಡಿದರು. ಭಾರತೀಯ ಮೂಲದ ವ್ಯಕ್ತಿಗಳಿಗೆ (ಪಿ.ಐ.ಒ.) ಸಂಬಂಧಿಸಿದ ನಿರೀಕ್ಷೆಗಳನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಅವಕಾಶಗಳನ್ನು ಗುರುತಿಸಲು ಪಿ.ಎಸ್.ಬಿ.ಗಳು ಗುಜರಾತ್ನ ಗಿಫ್ಟ್  ನಗರದಲ್ಲಿರುವ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳಲ್ಲಿ ತೆರೆದಿರುವ ಶಾಖೆಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಾವರು ಹೇಳಿದರು.

ಅಲ್ಲದೆ, ದೇಶದಲ್ಲಿ ಚಾಲ್ತಿಯಲ್ಲಿರುವ ಸಾಮಾನ್ಯ ಬ್ಯಾಂಕಿಂಗ್ ಸನ್ನಿವೇಶದ ಪರಿಸ್ಥಿತಿಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಕೇಂದ್ರ ಹಣಕಾಸು ಸಚಿವರು ಈ ಕೆಳಗಿನ ಸಲಹೆ ನೀಡಿದರು:

ಕೆಲವು ಸಾಲಗಳಲ್ಲಿನ ತೆರಿಗೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತೆಗೆದುಕೊಂಡ ಕ್ರಮಗಳನ್ನು ಬಳಸಿಕೊಂಡು ಠೇವಣಿಗಳನ್ನು ಆಕರ್ಷಿಸಲು ನೂತನ ಉಪಕ್ರಮಗಳನ್ನು ತೆಗೆದುಕೊಳ್ಳಿ;

ಬೆಳೆಯುತ್ತಿರುವ ಆರ್ಥಿಕತೆಯ ಸಾಲದ ಅಗತ್ಯಗಳನ್ನು ಬೆಂಬಲಿಸಲು ಗ್ರಾಹಕರ ವೃದ್ಧಿಸಿದ ಆರ್ಥಿಕ ಸ್ಥಿತಿಯನ್ನು ಪರಿಗಣನೆ ಮಾಡಿ;

ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಕ್ರೆಡಿಟ್ ಆಫ್ಟೇಕ್ ಇರುವ ರಾಜ್ಯಗಳಲ್ಲಿ, ವಿಶೇಷವಾಗಿ ದೇಶದ ಈಶಾನ್ಯ ಮತ್ತು ಪೂರ್ವ ಭಾಗಗಳಲ್ಲಿ ಕ್ರೆಡಿಟ್ ಔಟ್ರೀಚ್ ಮೇಲೆ ಕೇಂದ್ರೀಕರಿಸಿ;

ಒಂದು ಜಿಲ್ಲೆ ಒಂದು ಉತ್ಪನ್ನ (ಒ.ಡಿ.ಒ.ಪಿ), ಇ-ನಾಮ್ ಮತ್ತು ಡ್ರೋನ್ಗಳಂತಹ ಹೊಸ ಮತ್ತು ಉದಯೋನ್ಮುಖ ವ್ಯವಸ್ಥೆಗಳಲ್ಲಿ ವ್ಯಾಪಾರದ ಉಪಸ್ಥಿತಿಯನ್ನು ಹೆಚ್ಚಿಸಿ;

ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಉಪಸ್ಥಿತಿಯನ್ನು ಹೆಚ್ಚಿಸುವ ಗುರಿ;

2023-24 ರ ಬಜೆಟ್ನಲ್ಲಿ ಘೋಷಿಸಲಾದ ಮಹಿಳಾ ಸಮ್ಮಾನ್ ಬಚತ್ ಪತ್ರವನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು ವಿಶೇಷ ಲಕ್ಷ್ಯದೊಂದಿಗೆ ಮತ್ತು ಅಭಿಯಾನಗಳ ಮೂಲಕ ಪ್ರಚಾರ ಮಾಡಬೇಕು.

**



(Release ID: 1910784) Visitor Counter : 123