ಸಂಪುಟ
azadi ka amrit mahotsav

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 01.01.2023 ರಿಂದ ಜಾರಿಯಾಗುವಂತೆ ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟದ ಅನುಮೋದನೆ

Posted On: 24 MAR 2023 9:12PM by PIB Bengaluru

01.01.2023 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಹೆಚ್ಚುವರಿ ಕಂತಿನ ಬಿಡುಗಡೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಈ ಹೆಚ್ಚುವರಿ ಕಂತು ನೀಡಲಾಗುತ್ತಿದ್ದು, ಈಗಿರುವ ಮೂಲ ವೇತನ/ಪಿಂಚಣಿಯ ಶೇ.38 ಕ್ಕೆ ಶೇ. 4 ಹೆಚ್ಚಳ ಮಾಡಲಾಗಿದೆ.

 ತುಟ್ಟಿಭತ್ಯೆ ಹೆಚ್ಚಳದಿಂದ ಬೊಕ್ಕಸದ ಮೇಲೆ ವಾರ್ಷಿಕ 2,815.60 ಕೋಟಿ ರೂ, ಅಧಿಕ ವೆಚ್ಚ ತಗಲುತ್ತದೆ.

ಇದರಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿದೆ.

*****

 


(Release ID: 1910556) Visitor Counter : 649