ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2023-24 ಕಾಲಾವಧಿಗಾಗಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ(ಎಂ.ಸಿ.ಪಿ.) ಸಂಪುಟ ಅನುಮೋದನೆ.
प्रविष्टि तिथि:
24 MAR 2023 9:16PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2023-24 ರ ಋತುವಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ (ಎಂ.ಸಿ.ಪಿ.) ತನ್ನ ಅನುಮೋದನೆಯನ್ನು ನೀಡಿದೆ. ಅನುಮೋದನೆಯು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಶಿಫಾರಸುಗಳನ್ನು ಆಧರಿಸಿದೆ.
2023-24 ಋತುವಿನಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ ಗೆ ರೂ.5050/- (ಹಿಂದಿನ ಟಿ.ಡಿ.-5 ದರ್ಜೆಗೆ ಈಗಿನ ಟಿ.ಡಿ-3 ಸಮನಾಗಿರುತ್ತದೆ) ಎಂದು ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 63.20 ಪ್ರತಿಶತದಷ್ಟು ಹೆಚ್ಚು ಲಾಭವನ್ನು ಖಚಿತಪಡಿಸುತ್ತದೆ. 2023-24ರ ಋತುವಿನ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆ ಯನ್ನು (ಎಂ.ಸಿ.ಪಿ.) ಕೇಂದ್ರ ಸರ್ಕಾರವು 2018-19ರ ಬಜೆಟ್ನಲ್ಲಿ ಘೋಷಿಸಿದಂತೆ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಮಟ್ಟಕ್ಕಿಂತ ಕನಿಷ್ಠ 1.5 ಪಟ್ಟು ಹೆಚ್ಚು ನಿಗದಿಪಡಿಸುವ ತನ್ನ ತತ್ವಕ್ಕೆ ಅನುಗುಣವಾಗಿದೆ.
ಇದು ಸೆಣಬು ಬೆಳೆಗಾರರಿಗೆ ಲಾಭದ ಅಂಶವಾಗಿ(ಮಾರ್ಜಿನ್ ಹಣ) ಕನಿಷ್ಠ 50 ಪ್ರತಿಶತ ಮೊತ್ತವನ್ನು ಖಾತರಿಪಡಿಸುತ್ತದೆ. ಸೆಣಬು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಾತ್ರಿಪಡಿಸುವ ಮತ್ತು ಗುಣಮಟ್ಟದ ಸೆಣಬಿನ ನಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಪ್ರಮುಖ ಮತ್ತು ಪ್ರಗತಿಪರ ಹಂತಗಳಲ್ಲಿ ಇದೂ ಕೂಡಾ ಒಂದಾಗಿದೆ.
ಬೆಂಬಲ ಬೆಲೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಭಾರತೀಯ ಸೆಣಬು ನಿಗಮ (ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ – ಜೆಸಿಐ) ಸಂಸ್ಥೆಯು ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಸಂಸ್ಥೆಗೆ ಉಂಟಾಗುವ ನಷ್ಟವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿ ಮಾಡುತ್ತದೆ.
***
(रिलीज़ आईडी: 1910553)
आगंतुक पटल : 252
इस विज्ञप्ति को इन भाषाओं में पढ़ें:
Tamil
,
Telugu
,
Malayalam
,
Bengali
,
Assamese
,
Odia
,
English
,
Urdu
,
Marathi
,
हिन्दी
,
Manipuri
,
Punjabi
,
Gujarati