ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಭೂಮಿ ಸಂವಾದ್ IV: ಭಾರತವನ್ನು ಭೂ-ಆಧಾರ್ (ಯು.ಎಲ್.ಪಿ.ಎನ್.) ನೊಂದಿಗೆ ಡಿಜಿಟೈಸಿಂಗ್ ಮತ್ತು ಜಿಯೋರೆಫರೆನ್ಸಿಂಗ್ ಮಾಡುವ ಕುರಿತು ರಾಷ್ಟ್ರೀಯ ಸಮ್ಮೇಳನ

Posted On: 15 MAR 2023 4:02PM by PIB Bengaluru

ಭಾರತವನ್ನು ಭೂ-ಆಧಾರ್ (ಯು.ಎಲ್.ಪಿ.ಎನ್.) ನೊಂದಿಗೆ ಡಿಜಿಟೈಜ್ ಮಾಡುವುದು ಮತ್ತು ಜಿಯೋರೆಫರೆನ್ಸಿಂಗ್ ಮಾಡುವ ಕುರಿತು ರಾಷ್ಟ್ರೀಯ ಸಮ್ಮೇಳನ - ಭೂಮಿ ಸಂವಾದ್ IV ವನ್ನು ಭೂ ಸಂಪನ್ಮೂಲ ಇಲಾಖೆಯು 17ನೇ ಮಾರ್ಚ್, 2023 ರಂದು ನವದೆಹಲಿಯಲ್ಲಿ ಆಯೋಜಿಸಿದೆ. ಇದು ಭೂಮಿಯ ವಿಶಿಷ್ಟ ಗುರುತಿನ ಸಂಖ್ಯೆ (ಯು.ಎಲ್.ಪಿ.ಎನ್) ಅಥವಾ ಭೂ-ಆಧಾರ್ ಅನ್ನು ಅಳವಡಿಕೆಯ ಕುರಿತು ನಡೆಯುವ ಸಮ್ಮೇಳನವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆ ರಾಜ್ಯ ಸಚಿವರಾದ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಸಾಧ್ವಿ ನಿರಂಜನ ಜ್ಯೋತಿ ಮತ್ತು ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವರಾದ ಶ್ರೀ ಕಪಿಲ್ ಮೊರೇಶ್ವರ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಸಮ್ಮೇಳನವು ಈ ಕೆಳಗಿನ ಮೂರು ವಿಶೇಷ ಅಧಿವೇಶನಗಳನ್ನು ಹೊಂದಿರುತ್ತದೆ:

i) “ಭೂ ದಾಖಲೆಗಳ ದತ್ತಾಂಶ ಮತ್ತು ಮಾತೃಭೂಮಿಯ ಪ್ರಜಾಪ್ರಭುತ್ವೀಕರಣ”;

ii) “ಸುಗಮ ವ್ಯವಹಾರ” (ಈಸ್ ಆಫ್ ಡುಯಿಂಗ್ ಬಿಸಿನೆಸ್ )ಮತ್ತು “ಸುಗಮ ಜೀವನ” (ಈಸ್ ಆಫ್ ಲಿವಿಂಗ್)ಗಳಲ್ಲಿ ಭೂ-ಆಧಾರ್ ನ  ಅನುಷ್ಠಾನ;

iii) “ರಾಷ್ಟ್ರೀಯ ಮತ್ತು ಜಾಗತಿಕ ಜಿಯೋರೆಫರೆನ್ಸಿಂಗ್ ( ಸಮೀಕ್ಷೆ / ಮರು ಸಮೀಕ್ಷೆ )/ ಭೂ-ಆಧಾರ್ ಮತ್ತು ವ್ಯವಸ್ಥೆಗಳ ಮುಂದುವರಿಕೆ (ವೇ ಫಾರ್ವರ್ಡ್ ಬಳಕೆ ) –  ಈ ಕುರಿತು ಅತ್ಯುತ್ತಮ ಅಭ್ಯಾಸಗಳ ಅನುಷ್ಠಾನ".

ಸಮ್ಮೇಳನವು ವಿವಿಧ ಕೇಂದ್ರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಪ್ರಾದೇಶಿಕ ಸಂಸ್ಥೆಗಳು, ವ್ಯಾಪಾರ ಸಮುದಾಯ, ನಾಗರಿಕ ಸಮಾಜ ಮತ್ತು ಭೂ ಆಡಳಿತ ಕೇಂದ್ರಗಳು, ಜಿಯೋಸ್ಪೇಷಿಯಲ್ ವರ್ಲ್ಡ್, ಎರಿಸ್ ಇಂಡಿಯಾ ಟೆಕ್ನಾಲಜೀಸ್, ಮಹಾಲನೋಬಿಸ್ ನ್ಯಾಷನಲ್ ಕ್ರಾಪ್ ಫಾರೆಸ್ಟ್  ಸೆಂಟರ್, ಸರ್ವೆ ಆಫ್ ಇಂಡಿಯಾ, ಐಐಟಿ ರೂರ್ಕಿ, ಮ್ಯಾಪ್ ಮೈ ಇಂಡಿಯa ಇತ್ಯಾದಿ ಸಂಸ್ಥೆಗಳು ಸೇರಿದಂತೆ ಇತರ  ಪಾಲುದಾರರು ಹಾಗೂ ಮಧ್ಯಸ್ಥಗಾರರನ್ನು ಒಳಗೊಂಡಿರುತ್ತದೆ.

ಸಮ್ಮೇಳನದಲ್ಲಿ, ಈ ಕೆಳಗಿನ ಪ್ರಮುಖ ವ್ಯವಹಾರಿಕಾ ಕ್ಷೇತ್ರಗಳನ್ನು ಚರ್ಚಿಸಲಾಗುವುದು:

i)  ಲ್ಯಾಂಡ್ ಪಾರ್ಸೆಲ್ ಗಳು/ಕ್ಯಾಡಾಸ್ಟ್ರಲ್ ನಕ್ಷೆಗಳ ಭೌಗೋಳಿಕ ಉಲ್ಲೇಖದ ಸ್ಥಿತಿಗತಿಗಳು, ಭೂ-ಆಧಾರ್ ನ ಉತ್ಪಾದನೆ ವ್ಯವಸ್ಥೆಗಳು ಮತ್ತು ತ್ವರಿತ ಗತಿಯ ಅನುಷ್ಠಾನಕ್ಕಾಗಿ ವ್ಯೂಹಾತ್ಮಕ ಕಾರ್ಯತಂತ್ರಗಳು    

ii) ವಿವಿಧ ಸೇವೆಗಳು/ ಯೋಜನೆಗಳು/ ವಲಯಗಳಲ್ಲಿ ಭೂ-ಆಧಾರ್ ನ  ಅನುಷ್ಠಾನ ಇದರ ಪ್ರಯೋಜನಗಳು, ಉಪಯೋಗಗಳು, ಹಾಗೂ ಭೂ ಮಾಲೀಕರು / ಮಧ್ಯಸ್ಥಗಾರರಿಂದ ಸ್ವೀಕರಿಸಿದ ಪ್ರತಿಕ್ರಿಯೆ, ಸ್ಪಂದನೆ, ಅಭಿಪ್ರಾಯ ಮತ್ತು ಸಲಹೆಗಳಿಗೆ ಹಾಗೂ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಉತ್ತಮ ಅಭ್ಯಾಸಗಳ ಅಳವಡಿಕೆ.

***


(Release ID: 1907185)