ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಹೊಸದಿಲ್ಲಿಯಲ್ಲಿ ಇಂದು ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿಒ) ಯುವ ಮಂಡಳಿಯ 16 ನೇ ಸಭೆಗೆ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಚಾಲನೆ
Posted On:
14 MAR 2023 7:16PM by PIB Bengaluru
ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಒ) ಯುವ ಮಂಡಳಿಯ 16 ನೇ ಸಭೆ ಇಂದು ಹೊಸದಿಲ್ಲಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾರತ ಗಣರಾಜ್ಯದ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್. ಸಿ.ಒ.ಯುವ ಮಂಡಳಿಯ (ಯೂತ್ ಕೌನ್ಸಿಲ್ ) ಸಭೆಯನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಉದ್ಘಾಟಿಸಿದರು. ಯುವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಮೀಟಾ ರಾಜೀವಲೋಚನ್ ಅವರು ಮುಖ್ಯ ಅತಿಥಿ ಮತ್ತು ಎಸ್.ಸಿ.ಒ. ಸದಸ್ಯ ರಾಷ್ಟ್ರಗಳ ಎಲ್ಲ ಪ್ರತಿನಿಧಿಗಳನ್ನು ಸ್ವಾಗತಿಸಿದರು.
.
ಸಭೆಯ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಯುವಜನ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ನಿತೇಶ್ ಕುಮಾರ್ ಮಿಶ್ರಾ ವಹಿಸಿದ್ದರು. ಸಭೆಯಲ್ಲಿ ಭಾಗೀದಾರರು 2022-2023 ರಲ್ಲಿ ಎಸ್.ಸಿ.ಒ. ಯುವ ಮಂಡಳಿಯ ಚಟುವಟಿಕೆಗಳ ರಾಷ್ಟ್ರೀಯ ಭಾಗಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡವು. "ಪರಿಣಾಮಕಾರಿ ಸಮುದಾಯ ಅಭಿವೃದ್ಧಿ ಚಟುವಟಿಕೆಗಳು" ಎಂಬ ವಿಷಯದ ಮೇಲೆ 2023 ರ ಮಾರ್ಚ್ 13 ರಂದು ವರ್ಚುವಲ್ ಮಾದರಿಯಲ್ಲಿ ನಡೆದ ಎಸ್.ಸಿ.ಒ. ಯುವ ಸಮ್ಮೇಳನದ ವರದಿಯನ್ನು ಎಲ್ಲಾ ಎಸ್.ಸಿ.ಒ. ಸದಸ್ಯ ರಾಷ್ಟ್ರಗಳಿಗೆ ಮಾಹಿತಿಗಾಗಿ ವಿತರಿಸಲಾಯಿತು.
ಸಮ್ಮೇಳನದಲ್ಲಿ ನಡೆದ ಚರ್ಚೆಯಲ್ಲಿ ಎಸ್. ಸಿ.ಒ ಸದಸ್ಯ ರಾಷ್ಟ್ರಗಳ ಯುವ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ಮತ್ತು ಆಸಕ್ತಿಯನ್ನು ತೋರಿಸಿದ್ದನ್ನು ಭಾಗೀದಾರರು ಗಮನಿಸಿದರು. ಸಮಾಜದ ಸುಧಾರಣೆಗಾಗಿ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವ ಪ್ರತಿನಿಧಿಗಳು ತೋರಿಸಿದ ಭರವಸೆಯ ಉತ್ಸಾಹವನ್ನು ಸರ್ವರೂ ಗಮನಿಸಿದರು.
ಈ ಅವಧಿಯಲ್ಲಿ ಭಾರತ ಗಣರಾಜ್ಯದ ಎಸ್ ಸಿಒ ಯುವ ಮಂಡಳಿಯ (ಯೂತ್ ಕೌನ್ಸಿಲ್) ರಾಷ್ಟ್ರೀಯ ಭಾಗದ ಕಾರ್ಯವನ್ನು ಸಭೆಯಲ್ಲಿ ಭಾಗವಹಿಸಿದ್ದವರು ಶ್ಲಾಘಿಸಿದರು ಮತ್ತು ಹೊಸದಿಲ್ಲಿಯಲ್ಲಿ ನಡೆದ ಎಸ್ ಸಿಒ ಯೂತ್ ಕಾನ್ಫರೆನ್ಸ್ ಹಾಗು ಎಸ್ ಸಿಒ ಯೂತ್ ಕೌನ್ಸಿಲ್ ಸಭೆಯ ಆತಿಥ್ಯ ಮತ್ತು ಉನ್ನತ ಮಟ್ಟದ ಸಂಘಟನೆಗಾಗಿ ಭಾರತದ ಕಡೆಯವರಿಗೆ ಕೃತಜ್ಞತೆಯನ್ನು ಭಾಗೀದಾರರು ವ್ಯಕ್ತಪಡಿಸಿದರು.
2023 ರ ಮಾರ್ಚ್ 14 ರಂದು ಹೊಸದಿಲ್ಲಿಯಲ್ಲಿ ಶಿಷ್ಟಾಚಾರಕ್ಕೆ ಸಂಬಂಧಿಸಿ ರಷ್ಯನ್ ಮತ್ತು ಚೀನೀ ಭಾಷೆಗಳಲ್ಲಿ ಎಂಟು ಪ್ರತಿಗಳಿಗೆ ಅಂಕಿತ ಹಾಕಲಾಯಿತು.
ಎಸ್.ಸಿ.ಒ. ಒಂದು ಖಾಯಂ ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಇದನ್ನು 2001 ರಲ್ಲಿ ಸ್ಥಾಪಿಸಲಾಯಿತು. ಭಾರತ, ಕಜಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ –ಈ ಎಂಟು ಸದಸ್ಯ ರಾಷ್ಟ್ರಗಳನ್ನು ಎಸ್.ಸಿ.ಒ. ಹೊಂದಿದೆ. 2017ರ ಜೂನ್ 9 ರಂದು ಭಾರತವು ಎಸ್ ಸಿಒದ ಪೂರ್ಣ ಸದಸ್ಯ ರಾಷ್ಟ್ರವಾಯಿತು. ಅಲ್ಲಿ ಅಫ್ಘಾನಿಸ್ತಾನ, ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ ಎಂಬ ನಾಲ್ಕು ವೀಕ್ಷಕ ರಾಷ್ಟ್ರಗಳಿವೆ. ಶಾಂಘೈ ಸಹಕಾರ ಸಂಘಟನೆಯು ಕಾರ್ಯನಿರ್ವಹಣೆಯಲ್ಲಿ ಅಧಿಕೃತ ಭಾಷೆಗಳಾಗಿ ಚೀನಿ ಮತ್ತು ರಷ್ಯನ್ ಭಾಷೆಗಳನ್ನು ಬಳಸಲಾಗುತ್ತದೆ.
****
(Release ID: 1906973)
Visitor Counter : 149