ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನವಭಾರತ್ ಟೈಮ್ಸ್ ಆಯೋಜಿಸಿದ್ದ ಎಲ್ಲಾ ಮಹಿಳಾ ಬೈಕ್ ಜಾಥಾಗೆ ಭಾರತದ ರಾಷ್ಟ್ರಪತಿ ವಿಡಿಯೋ ಸಂದೇಶದ ಮೂಲಕ ಚಾಲನೆ

Posted On: 12 MAR 2023 1:59PM by PIB Bengaluru

ನವಭಾರತ್ ಟೈಮ್ಸ್ ಇಂದು (2023 ರ ಮಾರ್ಚ್ 12) ಆಯೋಜಿಸಿದ್ದ ಅಖಿಲ ಮಹಿಳಾ ಬೈಕ್ ಜಾಥಾಗೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಡಿಯೋ ಸಂದೇಶದ ಮೂಲಕ ಹಸಿರು ನಿಶಾನೆ ತೋರಿದರು.

ಮಹಿಳೆಯರು ಸುರಕ್ಷಿತವಾಗಿದ್ದರೆ ಕುಟುಂಬ ಸುರಕ್ಷಿತವಾಗಿರುತ್ತದೆ ಎಂದು ರಾಷ್ಟ್ರಪತಿ ಅವರು  ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಕುಟುಂಬವು ಸುರಕ್ಷಿತವಾಗಿದ್ದರೆ ಸಮಾಜವು ಸುರಕ್ಷಿತವಾಗಿರುತ್ತದೆ; ಸಮಾಜ ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತವಾಗಿರುತ್ತದೆ.

ನಮ್ಮ ಸಂವಿಧಾನದ ಪ್ರಕಾರ, ಮಹಿಳೆಯರ ಘನತೆಗೆ ವಿರುದ್ಧವಾದ ಆಚರಣೆಗಳನ್ನು ಕೈಬಿಡುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಈ ಮೂಲಭೂತ ಕರ್ತವ್ಯವನ್ನು ನಿರ್ವಹಿಸಲು, ಪ್ರತಿಯೊಬ್ಬ ನಾಗರಿಕನ ಚಿಂತನೆಯು ಮಹಿಳೆಯರ ಬಗ್ಗೆ ಗೌರವಯುತವಾಗಿರಬೇಕು. ಮಹಿಳೆಯರ ಬಗ್ಗೆ ಗೌರವಯುತ ನಡವಳಿಕೆಯ ಅಡಿಪಾಯವನ್ನು ಕುಟುಂಬದಲ್ಲಿಯೇ ಹಾಕಬಹುದು. ಎಲ್ಲಾ ಮಹಿಳೆಯರಿಗೆ ಗೌರವ ನೀಡುವ ಮೌಲ್ಯಗಳನ್ನು ತಮ್ಮ ಮಗ ಮತ್ತು ಸಹೋದರರಲ್ಲಿ ಬೆಳೆಸುವಂತೆ ಅವರು ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ಒತ್ತಾಯಿಸಿದರು. ವಿದ್ಯಾರ್ಥಿಗಳಲ್ಲಿ ಮಹಿಳೆಯರ ಬಗ್ಗೆ ಗೌರವ ಮತ್ತು ಸಂವೇದನಾಶೀಲತೆಯ ಸಂಸ್ಕೃತಿಯನ್ನು ಬಲಪಡಿಸುವುದು ಕುಟುಂಬದ ಜೊತೆಗೆ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಪ್ರಕೃತಿಯು ಮಹಿಳೆಯರಿಗೆ ತಾಯಂದಿರಾಗುವ ಸಾಮರ್ಥ್ಯವನ್ನು ನೀಡಿದೆ ಎಂದು ರಾಷ್ಟ್ರಪತಿ ಅವರು ಹುಡುಗಿಯರಿಗೆ ಕಿವಿ ಮಾತು ಹೇಳಿದರು; ಮತ್ತು ತಾಯ್ತನದ ಸಾಮರ್ಥ್ಯವನ್ನು ಹೊಂದಿರುವವಳು, ನಾಯಕತ್ವದ ಸಾಮರ್ಥ್ಯವು ಅವಳಲ್ಲಿ ಸ್ವಾಭಾವಿಕವಾಗಿ ಅಸ್ತಿತ್ವದಲ್ಲಿದೆ. ಎಲ್ಲಾ ಮಿತಿಗಳು ಮತ್ತು ಸವಾಲುಗಳ ಹೊರತಾಗಿಯೂ, ಮಹಿಳೆಯರು ತಮ್ಮ ಅದಮ್ಯ ಧೈರ್ಯ ಮತ್ತು ಕೌಶಲ್ಯದ ಬಲದಿಂದ ಯಶಸ್ಸಿನ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಜಾಹೀರಾತುಗಳು, ಸುದ್ದಿಗಳು ಮತ್ತು ಕಾರ್ಯಕ್ರಮಗಳಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಯ ಬಗ್ಗೆ ಸಂಪೂರ್ಣ ಸಂವೇದನಾಶೀಲತೆಯನ್ನು ಹೊಂದಿರುತ್ತಾರೆ ಎಂದು ಮಾಧ್ಯಮಗಳಿಂದ ನಿರೀಕ್ಷಿಸಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

ನಮ್ಮ ಹೆಣ್ಣುಮಕ್ಕಳು ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಪ್ರಜ್ಞೆಯೊಂದಿಗೆ ಮುನ್ನಡೆದಾಗ ಮಾತ್ರ 'ಸ್ವಾವಲಂಬಿ ಭಾರತ' ಮತ್ತು 'ನವ ಭಾರತ'ವನ್ನು ನಿರ್ಮಿಸುವ ಗುರಿ ಈಡೇರುತ್ತದೆ ಎಂದು ರಾಷ್ಟ್ರಪತಿ ಹೇಳಿದರು.

ರಾಷ್ಟ್ರಪತಿ ಅವರ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ - 

****


(Release ID: 1906172) Visitor Counter : 175