ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಮೊದಲ ಆವೃತ್ತಿಯ ಮಹಿಳಾ ಸಾಧಕಿಯರ ನೇತೃತ್ವದ ಸ್ವಚ್ಛತಾ ಪ್ರಶಸ್ತಿಗಳು(ವಿನ್ಸ್)-2023 ಅನಾವರಣ

Posted On: 09 MAR 2023 5:04PM by PIB Bengaluru

• ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸಲು 2023 ಮಾರ್ಚ್ 8ರಿಂದ ಏಪ್ರಿಲ್ 5ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

• ರಾಜ್ಯಗಳು ಮತ್ತು ನಗರಗಳು ತಮ್ಮ ವೆಬ್‌ಸೈಟ್, ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ 2023ರ ವಿನ್ಸ್(WINS) ಪ್ರಶಸ್ತಿಗಳ ವಿವರಗಳನ್ನು ಪ್ರಚಾರ ಮಾಡಬಹುದು.

• ಭಾರತವು ಈಗ 'ಮಹಿಳೆಯರಿಂದ ಸ್ವಚ್ಛತೆ'ಯನ್ನು 'ಮಹಿಳೆಯರ ನೇತೃತ್ವದಲ್ಲಿ ಸ್ವಚ್ಛತೆ'ಗೆ ಪರಿವರ್ತನೀಯ ಬದಲಾವಣೆ ತರಲು ಸಿದ್ಧವಾಗಿದೆ.

ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರು ತೋರುತ್ತಿರುವ ಪ್ರಭಾವವನ್ನು ಗುರುತಿಸಿ, ಸಾರುವ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಅಂದರೆ 2023 ಮಾರ್ಚ್ 7ರಂದು 'ಮಹಿಳಾ ಸಾಧಕಿಯರ ನೇತೃತ್ವದ(ವುಮೆನ್ ಐಕಾನ್ಸ್ ಲೀಡಿಂಗ್) ಸ್ವಚ್ಛತಾ' ಪ್ರಶಸ್ತಿಗಳು(WINS)-2023 ಅನ್ನು ಘೋಷಿಸಿದ್ದಾರೆ. ಮಹಿಳಾ ನೇತೃತ್ವದ ಸಂಘ ಸಂಸ್ಥೆಗಳು ಮತ್ತು ವೈಯಕ್ತಿಕ ಮಹಿಳೆಯರು ನಗರ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ತೋರಿರುವ ಸ್ಫೂರ್ತಿದಾಯಕ ಮತ್ತು ಅಸಾಧಾರಣ ಉಪಕ್ರಮಗಳನ್ನು ಗುರುತಿಸಲು, ಅನುಸರಿಸಲು ಮತ್ತು ಪ್ರಚಾರ ಮಾಡುವ ಗುರಿಯನ್ನು ವಿನ್ಸ್ ಅವಾರ್ಡ್ಸ್-2023 ಹೊಂದಿದೆ.

ಅರ್ಜಿ ಸಲ್ಲಿಸಲು 2023 ಮಾರ್ಚ್ 8ರಿಂದ ಏಪ್ರಿಲ್ 5ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಶಸ್ತಿಗಳಿಗಾಗಿ 1. ಸ್ವ-ಸಹಾಯ ಗುಂಪುಗಳು(ಎಸ್ಎಚ್ ಜಿಗಳು), 2. ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು, 3. ಸರ್ಕಾರೇತರ ಸಂಘ ಸಂಸ್ಥೆಗಳು(ಎನ್ ಜಿಒಗಳು), 4. ಸ್ಟಾರ್ಟಪ್‌ಗಳು ಮತ್ತು 5. ವೈಯಕ್ತಿಕ ಮಹಿಳಾ ನಾಯಕಿಯರು, ಸ್ವಚ್ಛತಾ ಚಾಂಪಿಯನ್‌ಗಳು ಅರ್ಜಿ ಸಲ್ಲಿಸಬಹುದು.

1. ಸಮುದಾಯ/ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ 2. ಕೊಳೆ ನೀರಿನ ಟ್ಯಾಂಕ್‌ಗಳ ಸ್ವಚ್ಛತಾ ಸೇವೆಗಳು 3. ಸಂಸ್ಕರಣಾ ಸೌಲಭ್ಯಗಳು (ಬಳಸಿದ ನೀರು/ಕೊಳೆ ನೀರು) 4. ಪುರಸಭೆಯ ನೀರು ಸಂಗ್ರಹಣೆ ಮತ್ತು ಸಾಗಣೆ 5. ವಸ್ತುಗಳ ವಸೂಲು ಕಾರ್ಯಾಚರಣೆ 6. ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯ ಉತ್ಪನ್ನಗಳು 7. ಸಂಸ್ಕರಣಾ ಸೌಲಭ್ಯಗಳು (ಘನ ತ್ಯಾಜ್ಯ ನಿರ್ವಹಣೆ) 8. ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ), ತರಬೇತಿ, ಸಾಮರ್ಥ್ಯ ವೃದ್ಧಿ 9. ತಂತ್ರಜ್ಞಾನ ಮತ್ತು ಮಧ್ಯ ಪ್ರವೇಶ ಮತ್ತು 10. ಇತರೆ ಕಾರ್ಯಾಚರಣೆಯ ವಿಷಯಾಧಾರಿತ ಕ್ಷೇತ್ರಗಳ ಅಡಿ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ಅರ್ಜಿ ನಮೂನೆಯನ್ನು ಎಲ್ಲಾ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು.


 

ಅನುಸರಿಸಬೇಕಾದ ಪ್ರಕ್ರಿಯೆ ಇಂತಿದೆ:
ರಾಜ್ಯಗಳು ಮತ್ತು ನಗರಗಳು ತಮ್ಮ ವೆಬ್‌ಸೈಟ್, ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ 2023ರ WINS ಪ್ರಶಸ್ತಿಗಳ ವಿವರಗಳನ್ನು ಪ್ರಕಟಿಸುತ್ತವೆ. ಅರ್ಜಿ ಸಲ್ಲಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚಿಸಿದ ಅರ್ಜಿ ನಮೂನೆ ಒದಗಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಚತಂ ಪೋರ್ಟಲ್ ಮೂಲಕ ಅರ್ಜಿಗಳನ್ನು ಮೌಲ್ಯಮಾಪನ ಮಾಡುತ್ತವೆ ಮತ್ತು 5 ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನಾಮನಿರ್ದೇಶನ ಮಾಡುತ್ತವೆ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ನಾಮನಿರ್ದೇಶಿತ ನಗರ ವಿಜೇತರನ್ನು ಸಾರ್ವಜನಿಕವಾಗಿ ಸನ್ಮಾನಿಸಬಹುದು. ನಗರ ಸ್ಥಳೀಯ ಸಂಸ್ಥೆವಾರು ನಾಮನಿರ್ದೇಶನಗಳನ್ನು ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ 3 ಅರ್ಜಿಗಳನ್ನು ರಾಜ್ಯವು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ನಾಮನಿರ್ದೇಶನ ಮಾಡುತ್ತದೆ. ರಾಜ್ಯ ವಿಜೇತರಾಗುವ ನಾಮನಿರ್ದೇಶಿತರಿಗೆ ಸಾರ್ವಜನಿಕ ಸನ್ಮಾನ ಆಯೋಜಿಸಬಹುದು. ರಾಜ್ಯ ಮಟ್ಟದ ನಾಮನಿರ್ದೇಶನಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಅವರ ಸಾವೀನ್ಯತೆ ಅಥವಾ ಹೊಸತನ, ಪ್ರಭಾವ, ಅನನ್ಯತೆ, ಸುಸ್ಥಿರತೆ ಮತ್ತು ಪುನರಾವರ್ತನೆಯ ಕಾರ್ಯಗಳು ಅಥವಾ ಸೇವೆಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.

ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಂಡವು ಅರ್ಜಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಪ್ರತಿ ವಿಭಾಗದಲ್ಲಿ ವಿಜೇತರನ್ನು ಆಯ್ಕೆ ಮಾಡಲು ತೀರ್ಪುಗಾರರನ್ನು ನೇಮಿಸುತ್ತದೆ. ತೀರ್ಪುಗಾರರ ತಂಡದಲ್ಲಿ ನಗರಗಳು ಮತ್ತು ರಾಜ್ಯಗಳ ಪಾಲುದಾರರು, ಸ್ವತಂತ್ರ ತಜ್ಞರು, ಬ್ರಾಂಡ್ ರಾಯಭಾರಿಗಳು, ಪ್ರಭಾವಿಗಳು ಮತ್ತು ಉದ್ಯಮ ಪ್ರತಿನಿಧಿಗಳು ಇರುತ್ತಾರೆ. ಅವರು ವಿಜೇತರ ಪಟ್ಟಿಯನ್ನು ಆಯ್ಕೆ ಮಾಡುತ್ತಾರೆ.

ಹಿನ್ನೆಲೆ

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ್ ನಗರ ಮಿಷನ್ ಅನ್ನು ಪ್ರಧಾನ ಮಂತ್ರಿ ಅವರು 2014 ಅಕ್ಟೋಬರ್ ನಲ್ಲಿ ಪ್ರಾರಂಭಿಸಿ, ಇದೀಗ 8 ವರ್ಷಗಳು ಸಂದಿವೆ. ಈ ಮಿಷನ್ ಸುರಕ್ಷಿತ ನೈರ್ಮಲ್ಯ ಮತ್ತು ಮಹಿಳೆಯರ ಘನತೆ ಗೌರವವನ್ನು ಸಕ್ರಿಯಗೊಳಿಸಿದೆ. ಜತೆಗೆ, ಜೀವನೋಪಾಯ ಮತ್ತು ಕೌಶಲ್ಯ ಅವಕಾಶಗಳನ್ನು ತೆರೆಯುತ್ತಿದೆ. ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಮಹಿಳೆಯರಿಗೆ. ದೇಶವು ಈಗ 'ಮಹಿಳೆಯರಿಂದ ಸ್ವಚ್ಛತೆ'ಯು 'ಮಹಿಳೆಯರ ನೇತೃತ್ವದ ಸ್ವಚ್ಛತೆ ಪರಿವರ್ತನೀಯ ಬದಲಾವಣೆ ಮಾಡಲು ಸಜ್ಜಾಗಿದೆ.


****



(Release ID: 1905653) Visitor Counter : 116