ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
2023ರ ವಾಣಿಜ್ಯ ಮಾತುಕತೆ ನಂತರ ಭಾರತ ಮತ್ತು ಅಮೆರಿಕ ನಡುವೆ ಸೆಮಿಕಂಡಕ್ಟರ್ ಸುಗಮ ಪೂರೈಕೆ ಸರಪಳಿ ಮತ್ತು ನಾವೀನ್ಯತೆ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ
ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಸುಗಮತೆ ಮತ್ತು ವೈವಿಧ್ಯೀಕರಣದ ಮೇಲೆ ಸಹಭಾಗಿತ್ವದ ಕಾರ್ಯವಿಧಾನ ಸ್ಥಾಪಿಸಲು ಈ ಒಪ್ಪಂದ ಸಹಾಯಕ
Posted On:
10 MAR 2023 12:23PM by PIB Bengaluru
ಭಾರತ-ಅಮೆರಿಕ ನಡುವೆ ನವದೆಹಲಿಯಲ್ಲಿಂದು 2023ರ ವಾಣಿಜ್ಯ ಸಮಾಲೋಚನೆ ನಡೆಯಿತು. ಈ ಮಾತುಕತೆಯ ನಂತರ ಉಭಯ ದೇಶಗಳ ನಡುವೆ ಇರುವ ವಾಣಿಜ್ಯ ಸಂವಾದದ ಮಾರ್ಗಸೂಚಿ ಅಡಿ, ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಮತ್ತು ನಾವೀನ್ಯತೆ ಪಾಲುದಾರಿಕೆ ಹೊಂದುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಆಹ್ವಾನದ ಮೇರೆಗೆ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಶ್ರೀಮತಿ ಗಿನಾ ರೈಮೊಂಡೊ ಅವರು ನವದೆಹಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಸಮಯದಲ್ಲಿ, ಉಭಯ ದೇಶಗಳ ನಡುವೆ ಇರುವ ಹೊಸ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಸಹಕಾರ ಹೊಂದಲು ಇಂದು ಭಾರತ-ಅಮೆರಿಕ ವಾಣಿಜ್ಯ ಮಾತುಕತೆಯನ್ನು ಉಭಯ ನಾಯಕರು ಮರು ಆರಂಭಿಸಿದರು.
ಅಮೆರಿಕದ ಸೆಮಿಕಂಡಕ್ಟರ್ ಚಿಪ್ಸ್ ಮತ್ತು ವಿಜ್ಞಾನ ಕಾಯಿದೆ ಮತ್ತು ಭಾರತದ ಸೆಮಿಕಂಡಕ್ಟರ್ ಕಾರ್ಯಕ್ರಮ(ಮಿಷನ್) ದೃಷ್ಟಿಕೋನದಲ್ಲಿ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಮತ್ತು ವೈವಿಧ್ಯೀಕರಣಗೊಳಿಸಲು 2 ಸರ್ಕಾರಗಳ ನಡುವೆ ಸಹಯೋಗದ ಕಾರ್ಯವಿಧಾನ ಸ್ಥಾಪಿಸಲು ತಿಳಿವಳಿಕೆ ಪತ್ರವು ಒತ್ತು ನೀಡಲಿದೆ.
ಅಲ್ಲದೆ, ಈ ಒಪ್ಪಂದವು ಎರಡೂ ದೇಶಗಳ ಪೂರಕ ಸಾಮರ್ಥ್ಯಗಳನ್ನು ಹತೋಟಿಗೆ ತರುವುದು ಮತ್ತು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ವಿವಿಧ ಅಂಶಗಳ ಕುರಿತು ಚರ್ಚೆ ನಡೆಸುವ ಮೂಲಕ ವಾಣಿಜ್ಯ ಅವಕಾಶಗಳು ಮತ್ತು ಸೆಮಿಕಂಡಕ್ಟರ್ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಯನ್ನು ಸುಗಮಗೊಳಿಸುವ ಗುರಿ ಹೊಂದಿದೆ. ತಿಳಿವಳಿಕೆ ಪತ್ರವು ಪರಸ್ಪರ ಲಾಭದಾಯಕ ಸಂಶೋಧನಾ ಮತ್ತು ಅಭಿವೃದ್ಧಿ, ಪ್ರತಿಭೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸಲಿದೆ.
****
(Release ID: 1905641)
Visitor Counter : 176