ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆಯು ಕೋಟ್ಯಂತರ ಭಾರತೀಯರ ವೈದ್ಯಕೀಯ ವೆಚ್ಚದ ಚಿಂತೆಯನ್ನು ದೂರ ಮಾಡಿದೆ: ಪ್ರಧಾನಮಂತ್ರಿ

प्रविष्टि तिथि: 07 MAR 2023 2:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ದ ಸಾಧನೆಗಳು ಸಾಕಷ್ಟು ತೃಪ್ತಿಕರವಾಗಿವೆ ಎಂದು ಹೇಳಿದ್ದಾರೆ. ಈ ಯೋಜನೆಯು ದೇಶದ ಕೋಟ್ಯಂತರ ಜನರ ಚಿಕಿತ್ಸಾ ವೆಚ್ಚದ ಚಿಂತೆಯನ್ನು ಹೋಗಲಾಡಿಸಿದೆ ಮಾತ್ರವಲ್ಲದೆ ಅವರ ಜೀವನವನ್ನು ಸುಗಮಗೊಳಿಸಿದೆ ಎಂದು ಶ್ರೀ ಮೋದಿ ಹೇಳಿದರು.

ಟ್ವೀಟ್ ಸರಣಿಯಲ್ಲಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ಇಂದು 5 ನೇ ಜನೌಷಧಿ ದಿವಸವನ್ನು ದೇಶದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಯು ಭಾರತದ ಜನ ಸಾಮಾನ್ಯರ ಜೀವನದ ಮೇಲೆ ನೇರ ಧನಾತ್ಮಕ ಪರಿಣಾಮ ಬೀರಿದೆ. ದೇಶದ 12 ಲಕ್ಷಕ್ಕೂ ಹೆಚ್ಚು ನಾಗರಿಕರು ಜನೌಷಧಿ ಕೇಂದ್ರಗಳಿಂದ ಪ್ರತಿದಿನ ಔಷಧಿಗಳನ್ನು ಖರೀದಿಸುತ್ತಿದ್ದಾರೆ. ಇಲ್ಲಿ ಸಿಗುವ ಔಷಧಿಗಳು ಮಾರುಕಟ್ಟೆ ದರಕ್ಕಿಂತ ಶೇ.50ರಿಂದ ಶೇ.90ರಷ್ಟು ಅಗ್ಗವಾಗಿವೆ.

ಕೇಂದ್ರ ಸಚಿವರ ಟ್ವೀಟ್ ಸರಣಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು  ಟ್ವೀಟ್ ಹೀಗಿದೆ:

“ಭಾರತೀಯ ಜನೌಷಧಿ ಯೋಜನೆಯ ಸಾಧನೆಗಳು ಸಾಕಷ್ಟು ತೃಪ್ತಿಕರವಾಗಿವೆ. ಇದು ದೇಶದ ಕೋಟ್ಯಂತರ ಜನರ ಚಿಕಿತ್ಸಾ ವೆಚ್ಚದ ಚಿಂತೆಯನ್ನು ಹೋಗಲಾಡಿಸಿದೆ ಅಲ್ಲದೆ ಅವರ ಜೀವನವನ್ನು ಸುಗಮಗೊಳಿಸಿದೆ.”

******


(रिलीज़ आईडी: 1904862) आगंतुक पटल : 206
इस विज्ञप्ति को इन भाषाओं में पढ़ें: Urdu , English , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam