ಹಣಕಾಸು ಸಚಿವಾಲಯ
ನಾಳೆಗಳ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವಿಕೆ' ಕುರಿತು ಬಜೆಟ್ ನಂತರ ವೆಬಿನಾರ್ ನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳಿಂದ ಭಾಷಣ
ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ವಿಚಾರಗಳನ್ನು ಪಡೆಯಲು ನಾಳೆಯ 10ನೇ ಬಜೆಟ್ ನಂತರದ ವೆಬಿ ನಾರ್, ಬಜೆಟ್ ನಂತರದ 12 ವೆಬಿ ನಾರ್ ಸರಣಿಯ ಒಂದು ಭಾಗವಾಗಿದೆ
ಬಜೆಟ್ ನ ಘೋಷಣೆಗಳ ಅನುಷ್ಠಾನ ಮತ್ತು ಮುಂದಿನ ಮಾರ್ಗದ ಕುರಿತು ವೆಬಿನಾರ್ ನಲ್ಲಿ ಸಲಹೆಗಳನ್ನು ನೀಡಲಾಗುತ್ತಿದ್ದು, ಹಣಕಾಸು ವಲಯದ ಬಜೆಟ್ ಘೋಷಣೆಗಳನ್ನು ಒಳಗೊಂಡ 6 ಯಶಸ್ವಿ ಸಭೆಗಳಾಗಿವೆ.
Posted On:
06 MAR 2023 7:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ ಸುಮಾರು 10 ಗಂಟೆಗೆ ವೀಡಿಯೊ ಸಂದೇಶ ಮೂಲಕ ನಾಳೆಗಳ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವಿಕೆ' ಕುರಿತು ಬಜೆಟ್ ನಂತರ ವೆಬಿ ನಾರ್ ನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಜೆಟ್ ನಂತರದ ವೆಬಿನಾರ್, ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸುತ್ತಿರುವ ಬಜೆಟ್ ನಂತರದ 12 ವೆಬಿನಾರ್ ಸರಣಿಯ ಒಂದು ಭಾಗವಾಗಿದೆ. ಕೇಂದ್ರ ಬಜೆಟ್ ಏಳು ಆದ್ಯತೆಗಳನ್ನು ಅಳವಡಿಸಿಕೊಂಡಿದ್ದು, ಅದು ಒಂದಕ್ಕೊಂದು ಪೂರಕವಾಗಿದೆ ಮತ್ತು ಅಮೃತ ಕಾಲದ ಮೂಲಕ ನಮಗೆ ಮಾರ್ಗದರ್ಶನ ನೀಡುವ 'ಸಪ್ತಋಷಿ'ಯಂತೆ ಕಾರ್ಯನಿರ್ವಹಿಸುತ್ತದೆ. ಹಣಕಾಸು ವಲಯವು ಸರ್ಕಾರದ ಏಳು ಆದ್ಯತೆಗಳಲ್ಲಿ ಒಂದಾಗಿದೆ.
ವೆಬಿನಾರ್ ಈ ಕೆಳಗಿನ ಧ್ಯೇಯಗಳ ಅಡಿಯಲ್ಲಿ ಆರು ಯಶಸ್ವಿ ಸಭೆಗಳನ್ನು ಹೊಂದಿರುತ್ತದೆ:
1. ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ-GIFT ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವುದು
2. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ-MSMEಗಳಿಗೆ ತಡೆರಹಿತ ಕ್ರೆಡಿಟ್ ಹರಿಯುವಿಕೆ ಕ್ರೆಡಿಟ್ ಖಾತ್ರಿಯನ್ನು ಸುಗಮಗೊಳಿಸುವುದು
3. ಖಾತೆ ತೆರೆಯುವಿಕೆ ಮತ್ತು ಡಿಜಿಟಲ್ ಪಾವತಿಗಳಿಗಾಗಿ ಗ್ರಾಹಕರ ಸುಲಭತೆಯನ್ನು ಹೆಚ್ಚಿಸುವುದು
4. ಕೇಂದ್ರ ದತ್ತಾಂಶ ಸಂಸ್ಕರಣಾ ಕೇಂದ್ರದ ಮೂಲಕ ಸುಲಭವಾಗಿ ವ್ಯಾಪಾರ ಮಾಡುವುದು ಮತ್ತು ಷೇರುಗಳು ಮತ್ತು ಲಾಭಾಂಶಗಳನ್ನು ಮರುಪಡೆಯುವುದು
5. 'ಅಮೃತ ಕಾಲ' ಅಗತ್ಯಗಳಿಗೆ ನಿಯಮಾವಳಿಗಳನ್ನು ಉತ್ತಮಗೊಳಿಸುವುದು
6. ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ-NFIR ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಸಾಮರ್ಥ್ಯ ವೃದ್ಧಿ ಮೂಲಕ ಹಣಕಾಸು ವಲಯದ ದಕ್ಷತೆಯನ್ನು ಹೆಚ್ಚಿಸುವುದು
ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ನಿಯಂತ್ರಕರು, ಮಾರುಕಟ್ಟೆ ಭಾಗಿದಾರರು ಮತ್ತು ಉದ್ಯಮ ಪ್ರತಿನಿಧಿಗಳು ಸೇರಿದಂತೆ ಹಣಕಾಸು ವಲಯದಿಂದ ಪಡೆದ ಪಾಲುದಾರರ ದೊಡ್ಡ ಗುಂಪು ಈ ವೆಬ್ನಾರ್ಗಳಲ್ಲಿ ಭಾಗವಹಿಸುತ್ತಾರೆ. ಮತ್ತು ಬಜೆಟ್ ಘೋಷಣೆಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆಗಳ ಮೂಲಕ ಕೊಡುಗೆ ನೀಡುತ್ತಾರೆ.
****
(Release ID: 1904767)