ಪ್ರವಾಸೋದ್ಯಮ ಸಚಿವಾಲಯ

ಗೌರವಾನ್ವಿತ ಪ್ರಧಾನ ಮಂತ್ರಿಯವರು 2023ರ ಮಾರ್ಚ್ 3ರಂದು ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ "ಮಿಷನ್ ಮೋಡ್‌ನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ" ಕುರಿತು ಮಾತನಾಡಲಿದ್ದಾರೆ 

Posted On: 02 MAR 2023 7:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮಾರ್ಚ್ 3ರಂದು ಬೆಳಿಗ್ಗೆ 10 ಗಂಟೆಗೆ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ 'ಮಿಷನ್ ಮೋಡ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತು ಮಾತನಾಡಲಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರಕಾಋ ಆಯೋಜಿಸುತ್ತಿರುವ 12 ಬಜೆಟ್ ನಂತರದ ವೆಬಿನಾರ್‌ಗಳ ಗಳ ಸರಣಿಯ ಒಂದು ಭಾಗ ಇದಾಗಿದೆ. ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮದ ಉತ್ತೇಜನವನ್ನು ʻಮಿಷನ್ ಮೋಡ್‌ʼನಲ್ಲಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ʻಚಾಲೆಂಜ್ ಮೋಡ್ʼ ಮೂಲಕ 50 ತಾಣಗಳನ್ನು ಆಯ್ಕೆ ಮಾಡಲಾಗುವುದು. ʻದೇಖೋ ಅಪ್ನಾ ದೇಶ್‌ʼ  ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ವಲಯ ನಿರ್ದಿಷ್ಟ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. 
  
ಪ್ರವಾಸೋದ್ಯಮ ಸಚಿವಾಲಯವು ಆಯೋಜಿಸುತ್ತಿರುವ ಬಜೆಟ್ ನಂತರದ ವೆಬಿನಾರ್, ಕೇಂದ್ರ ಬಜೆಟ್‌ನಲ್ಲಿ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡ ಆರು ಅಧಿವೇಶನಗಳನ್ನು ಹೊಂದಿರುತ್ತದೆ. ಸಂಬಂಧಪಟ್ಟ ಕೇಂದ್ರ ಸರಕಾರದ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ಪ್ರವಾಸ ಕ್ಷೇತ್ರಗಳ ಮಧ್ಯಸ್ಥಗಾರರು, ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು, ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳು, ಎಫ್ಐಸಿಸಿಐ ಮತ್ತು ಸಿಐಐನಂತಹ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಸಂಘಗಳ ಮುಖ್ಯಸ್ಥರು ಈ ವೆಬಿನಾರ್‌ಗಳಲ್ಲಿ ಭಾಗವಹಿಸುತ್ತಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಜೆಟ್ನಲ್ಲಿ ಪ್ರಕಟಿಸಿದ ಪ್ರಸ್ತಾವಗಳ ಉತ್ತಮ ಅನುಷ್ಠಾನಕ್ಕಾಗಿ ತಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ಕೊಡುಗೆ ನೀಡಲಿದ್ದಾರೆ.  
  
ʻಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗಮ್ಯಸ್ಥಾನ ಕೇಂದ್ರಿತ ವಿಧಾನʼ, ʻಒಗ್ಗೂಡಿಸುವಿಕೆ - ಸಹಯೋಗದ ಶಕ್ತಿʼ, ʻಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಬಲವರ್ಧನೆʼ, ʻಪ್ರವಾಸೋದ್ಯಮ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಡಿಜಿಟಲೀಕರಣದ ಉತ್ತೇಜನʼ, ʻಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಕ ತಳಮಟ್ಟದ ಜೀವನದ ಮೇಲೆ ಪರಿಣಾಮ ಬೀರುವುದುʼ - ಈ ವಿಷಯಾಧಾರಿತವಾಗಿ ಈ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿವೆ.
  
ವೆಬಿನಾರ್ ಅನ್ನು ನೇರ ಪ್ರಸಾರ ಮಾಡಲಾಗುವುದು ಮತ್ತು ಕಾರ್ಯಕ್ರಮವನ್ನು ಕೆಳಗಿನ ಲಿಂಕ್‌ ಮೂಲಕ ವೀಕ್ಷಿಸಬಹುದು :https://youtube.com/live/cOYm5okQjp0?feature=share 

****
  



(Release ID: 1903834) Visitor Counter : 100