ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​2023 ರ ಮಾರ್ಚ್ 2 ರಂದು 4ನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿರುವ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ


ಸಮಾರಂಭ ಉದ್ದೇಶಿಸಿ ಮಾತನಾಡಲಿರುವ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್

“ಉತ್ತಮ ನಾಳೆಗಾಗಿ ಆಲೋಚನೆಗಳು: ಜಗತ್ತಿಗಾಗಿ ಭಾರತ” ಎಂಬುದು 4 ನೇ ಆವೃತ್ತಿಯ ರಾಷ್ಟ್ರಿಯ ಯುವ ಸಂಸತ್ ಉತ್ಸವ 2023ರ ವಿಷಯ

Posted On: 28 FEB 2023 5:25PM by PIB Bengaluru

ನವದೆಹಲಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ 2023 ರ ಮಾರ್ಚ್ 2 ರಂದು ಬೆಳಿಗ್ಗೆ 10:30 ಕ್ಕೆ ನಡೆಯಲಿರುವ 4 ನೇ ಆವೃತ್ತಿ ರಾಷ್ಟ್ರೀಯ ಯುವ ಸಂಸತ್ ಉತ್ಸವವನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಈಗಾಗಲೇ ಮೂರು ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯಲ್ಲಿ ಗೆದ್ದಿರುವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ರಾಷ್ಟ್ರೀಯ ಯುವ ಸಂಸತ್ ಉತ್ಸವ

ರಾಷ್ಟ್ರೀಯ ಯುವ ಸಂಸತ್ ಉತ್ಸವ [ಎನ್.ವೈ.ಪಿ.ಎಫ್] ಯುವ ಸಮೂಹದ ಧ್ವನಿಯನ್ನು ಆಲಿಸುವ, ಮುಂಬರುವ ವರ್ಷಗಳಲ್ಲಿ ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ವೃತ್ತಿಗಳಿಗೆ ಸೇರ್ಪಡೆಯಾಗಲು ನೆರವಾಗಲಿದೆ. ಪ್ರಧಾನಮಂತ್ರಿ ಅವರು 2017 ರ ಡಿಸೆಂಬರ್ 31 ರ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ ಆಲೋಚನೆಗಳ ಆಧಾರದ ಮೇಲೆ ಎನ್.ವೈ.ಪಿ.ಎಫ್ ಜಾರಿಗೊಳಿಸಲಾಗಿದೆ. ಇದರಿಂದ ಸ್ಪೂರ್ತಿ ಪಡೆದ ಮೊದಲ ಆವೃತ್ತಿಯ ಎನ್.ವೈ.ಪಿ.ಎಫ್ ಅನ್ನು 2019 ರಲ್ಲಿ ಆರಂಭಿಸಲಾಗಿದ್ದು, “ನವ ಭಾರತದ ಧ್ವನಿಯಾಗಿ ಮತ್ತು ಪರಿಹಾರಗಳನ್ನು ಹುಡುಕಿ ಹಾಗೂ ನೀತಿಗೆ ಕೊಡುಗೆ ನೀಡಿ” ಎಂಬ ಎಂಬ ವಿಷಯದ ಬಗ್ಗೆ ಯುವ ಸಂಸತ್ ಆಯೋಜಿಸಲಾಗಿತ್ತು. ಇದರಲ್ಲಿ 88,000 ಯುವ ಜನರು ಭೌತಿಕವಾಗಿ ಭಾಗವಹಿಸಿದ್ದರು. ಎರಡನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವವನ್ನು 2021 ರಲ್ಲಿ “ಯುವಾಹ್ – ಉತ್ಸವ್ ನಯೆ ಭಾರತ್ ಕಾ” ಎಂಬ ವಿಷಯದ ಮೇಲೆ ಆಯೋಜಿಸಿದ್ದು, 23 ಲಕ್ಷಕ್ಕೂ ಹೆಚ್ಚು ಯುವ ಸಮೂಹ ಮತ್ತು ಪಾಲುದಾರರು ದೇಶಾದ್ಯಂತ ವರ್ಚುವಲ್ ಮಾದರಿ ಮೂಲಕ ಭಾಗಿಯಾಗಿದ್ದರು. ಮೂರನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವವನ್ನು 2022 ರಲ್ಲಿ ಆಯೋಜಿಸಿದ್ದು, “ನವ ಭಾರತದ ಧ್ವನಿಯಾಗಿ ಮತ್ತು ಪರಿಹಾರಗಳನ್ನು ಹುಡುಕಿ ಹಾಗೂ ನೀತಿಗೆ ಕೊಡುಗೆ ನೀಡಿ” ಎಂಬ ವಿಷಯದ ಮೇಲೆ ನಡೆದಿದ್ದು. 2.44 ಲಕ್ಷ ಕ್ಕೂ ಅಧಿಕ ಯುವ ಸಮೂಹ ಪಾಲ್ಗೊಂಡಿತ್ತು.

“ಉತ್ತಮ ನಾಳೆಗಾಗಿ ಆಲೋಚನೆಗಳು: ಜಗತ್ತಿಗಾಗಿ ಭಾರತ” ಎಂಬ ವಿಷಯದಡಿ 2023 ರಲ್ಲಿ ನಾಲ್ಕನೇ ಯುವ ಉತ್ಸವವನ್ನು ಉದ್ಘಾಟಿಸಲಾಯಿತು. 2023 ರ ಜನವರಿ 25 ರಿಂದ 29 ರ ವರೆಗೆ ಜಿಲ್ಲಾ ಮಟ್ಟದ ಯುವ ಸಂಸತ್ ನಡೆಯಿತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 748 ಜಿಲ್ಲೆಗಳಿಂದ 2.01 ಲಕ್ಷಕ್ಕೂ ಅಧಿಕ ಯುವ ಸಮೂಹ ಇದರಲ್ಲಿ ಭಾಗಿಯಾಗಿದ್ದು, ದೇಶಾದ್ಯಂತ 150 ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಯುವ ಸಂಸತ್ [ಡಿಐಪಿ] ನಲ್ಲಿ ವಿಜೇತರಾದವರಿಗಾಗಿ 2023 ರ ಫೆಬ್ರವರಿ 3 ರಿಂದ 7 ರ ವರೆಗೆ ರಾಜ್ಯ ಯುವ ಸಂಸತ್ ಉತ್ಸವ ಆಯೋಜಿಸಲಾಗಿತ್ತು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಯುವ ಸಂಸತ್ ನಲ್ಲಿ ನಿರ್ದಿಷ್ಟವಾಗಿ ನೀಡಲಾದ ವಿಷಯಗಳ ಕುರಿತು ವಿಜೇತರಾದವರು ಮಾತನಾಡಿದರು. ರಾಜ್ಯ ಯುವ ಸಂಸತ್ ನಲ್ಲಿ [ಎಸ್ಐಪಿ] ಅಂತಿಮವಾಗಿ ಗೆದ್ದ[29]ವರು ಲೋಕಸಭಾ ಸದಸ್ಯರಾದ ಶ್ರೀ ಅನುರಾಗ್ ಶರ್ಮಾ, ಸಂಸತ್ ಸದಸ್ಯರಾದ ಶ್ರೀ ಮನೋಜ್ ತಿವಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರರಾದ ಶ್ರೀ ಕಾಂಚನ್ ಗುಪ್ತಾ ಅವರನ್ನೊಳಗೊಂಡ ತೀರ್ಪುಗಾರರ ಸಮ್ಮುಖದಲ್ಲಿ 2023 ರ ಮಾರ್ಚ್ 1 ರಂದು ಮಾತನಾಡಲು ಅವಕಾಶ ಪಡೆದಿದ್ದಾರೆ. ಮೊದಲ ಪ್ರಶಸ್ತಿ ಪಡೆದವರಿಗೆ 2023 ರ ಮಾರ್ಚ್ 2 ರಂದು ಲೋಕಸಭಾ ಸ್ಪೀಕರ್ ಅವರ ಸಮ್ಮುಖದಲ್ಲಿ ಮಾತನಾಡಲು ಅವಕಾಶ ದೊರೆಯಲಿದ್ದು, ಇದೇ ಸಂದರ್ಭದಲ್ಲಿ ಸ್ಪೀಕರ್ ಅವರು ಯುವ ಸಮೂಹದೊಂದಿಗೆ ಸಂವಾದ ನಡೆಸಲಿದ್ದಾರೆ.

****


(Release ID: 1903283) Visitor Counter : 147


Read this release in: Telugu , Tamil , English , Urdu , Hindi