ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

​​​​​​​ಬೆಂಗಳೂರಿನಲ್ಲಿ 2ನೇ ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ರೋಡ್‌ಶೋಗೆ ಕೇಂದ್ರ ಸಚಿವ  ರಾಜೀವ್ ಚಂದ್ರಶೇಖರ್ ಚಾಲನೆ 


ಯುವ ಭಾರತೀಯರಿಗೆ ಅವಕಾಶಗಳನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ-ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ಅಂತಹ ಒಂದು ಅವಕಾಶವಾಗಿದೆ: ರಾಜೀವ್ ಚಂದ್ರಶೇಖರ್

ಜಾಗತಿಕ ಪ್ರಮುಖ ಸೆಮಿಕಾನ್  ಉದ್ಯಮಗಳು ಸೆಮಿಕಾನ್‌ಇಂಡಿಯಾ ಫ್ಯೂಚರ್‌ಡಿಸೈನ್ ಸ್ಟಾರ್ಟ್‌ಅಪ್‌ಗಳ ಶಕ್ತಿಯ ಮೂಲಕ ನಾವೀನ್ಯತೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಹುದು

ಇಂದು ಆರಂಭಿಸಲಾದ ಚಿಪ್‌ಐಎನ್ (ChipIN) ಕೇಂದ್ರವು ದೇಶಾದ್ಯಂತ ಚಿಪ್ ವಿನ್ಯಾಸಕಾರರಿಗೆ ಒಂದು ನಿಲುಗಡೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ

ಡಿಎಲ್‌ಐ ಯೋಜನೆಯಡಿ ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳ ಹೆಸರುಗಳು ಪ್ರಕಟ 

Posted On: 24 FEB 2023 5:13PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‌ಸಿ) ದಲ್ಲಿ 2 ನೇ ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ರೋಡ್‌ಶೋಗೆ ಚಾಲನೆ ನೀಡಿದರು, ಇದು ಭಾರತದಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡಲು ಸ್ಟಾರ್ಟ್‌ಅಪ್‌ಗಳು, ಮುಂದಿನ ತಲೆಮಾರಿನ ನಾವೀನ್ಯಕಾರರು ಮತ್ತು ಉದ್ಯಮ ನಾಯಕರನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಜಾಗತಿಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿದೆ ಮತ್ತು ಡಿಜಿಟಲೀಕರಣದ ತ್ವರಿತ ಬೆಳವಣಿಗೆಯೊಂದಿಗೆ ಭಾರತದ ಉನ್ನತ-ಬೆಳವಣಿಗೆಯ ಡಿಜಿಟಲ್ ಮತ್ತು ನಾವೀನ್ಯತೆ ಆರ್ಥಿಕತೆಯ ಜೊತೆಗೆ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್‌ನ ಹೊಸ ಜಾಗತಿಕ ಕ್ರಮಾಂಕದಲ್ಲಿ ಅವಕಾಶಗಳನ್ನು ಸೃಷ್ಟಿಸಿದೆ ಎಂದರು.

ಪ್ರಸ್ತುತ ಗೋಚರಿಸುತ್ತಿರುವ ಮೂರು ಪ್ರವೃತ್ತಿಗಳನ್ನು ಕುರಿತು ಮಾತನಾಡಿದ ಅವರು, ಮೊದಲನೆಯದಾಗಿ, ಡಿಜಿಟಲೀಕರಣದಲ್ಲಿ ವೇಗವರ್ಧನೆ ಕಂಡುಬಂದಿದೆ ಮತ್ತು ಪ್ರಪಂಚದಾದ್ಯಂತ ಸರ್ಕಾರಗಳು ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿವೆ. ಎರಡನೆಯದಾಗಿ, ನಾವು ಬದಲಾವಣೆಯ ಹಂತದಲ್ಲಿದ್ದೇವೆ ಮತ್ತು ಮೂರನೆಯದಾಗಿ, ಪ್ರತಿಭೆ, ಜಾಗತಿಕ ಉತ್ಪನ್ನಗಳು, ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸುವ ವಿಷಯದಲ್ಲಿ ನವ ಭಾರತವು ವಿಶ್ವಾಸಾರ್ಹ ಪಾಲುದಾರನಾಗುತ್ತಿದೆ ಎಂದು ಅವರು ಅವರು ಹೇಳಿದರು.

 

ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಯುವ ಭಾರತೀಯರಿಗೆ ಅವಕಾಶಗಳನ್ನು ವಿಸ್ತರಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಒತ್ತಿ ಹೇಳಿದ ಅವರು, ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ಅಂತಹ ಒಂದು ಅವಕಾಶವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಸೆಮಿಕಂಡಕ್ಟರ್ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸರ್ಕಾರ ಕೈಗೊಂಡಿರುವ ಕೆಲವು ಉಪಕ್ರಮಗಳನ್ನು ವಿವರಿಸಿದ ಶ್ರೀ ರಾಜೀವ್ ಚಂದ್ರಶೇಖರ್, ಖಾಸಗಿ, ಉದ್ಯಮ ನೇತೃತ್ವದ ಸಂಶೋಧನಾ ಕೇಂದ್ರವಾಗಿರುವ ಭಾರತ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರವನ್ನು (ಐ ಎಸ್‌ ಆರ್‌ ಸಿ) ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಮತ್ತು ಸೆಮಿಕಂಡಕ್ಟರ್ ಪ್ರಯೋಗಾಲಯವನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಸಂಶೋಧನೆಗೆ ಅತ್ಯುತ್ತಮವನ್ನಾಗಿಸಲಾಗುವುದು ಮತ್ತು ಇದು ಐ ಎಸ್‌ ಆರ್‌ ಸಿ ಸ್ಥಳದಲ್ಲಿಯೇ ಇರುತ್ತದೆ ಎಂದು ಯೊಂದಿಗೆ ಎಂದು ಹೇಳಿದರು.

 

ಇದರ ಜೊತೆಗೆ, ಭವಿಷ್ಯದ ಕೌಶಲ್ಯ ಕಾರ್ಯಕ್ರಮದ ಭಾಗವಾಗಿ ಶೈಕ್ಷಣಿಕ ಪಠ್ಯಕ್ರಮವನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದರು. ಇದನ್ನು ಉದ್ಯಮ ತಜ್ಞರು ಮತ್ತು ಶಿಕ್ಷಣ ತಜ್ಞರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಕಾಲೇಜುಗಳು ವಿ ಎಲ್‌ ಎಸ್‌ ಐ ನಲ್ಲಿ ಹೊಸ ಪದವಿಗಳು, ಹೊಸ ಆಯ್ಕೆಗಳು ಮತ್ತು ಹೊಸ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಹೊಂದಿರುತ್ತವೆ. ಸೆಮಿಕಂಡಕ್ಟರ್ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ರೀತಿಯ ಇಂಟರ್ನ್‌ಶಿಪ್‌ಗಳನ್ನು ಸೃಷ್ಟಿಸಲು ನಾವು ಫ್ಯಾಬ್ ಕಂಪನಿಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ದೇಶದ ಫ್ಯಾಬ್‌ಲೆಸ್‌ ಚಿಪ್ ಡಿಸೈನರ್‌ಗಳಿಗೆ ಸೆಮಿಕಂಡಕ್ಟರ್ ವಿನ್ಯಾಸ ಪರಿಕರಗಳು, ಫ್ಯಾಬ್ ಪ್ರವೇಶ, ವರ್ಚುವಲ್ ಪ್ರೊಟೊಟೈಪಿಂಗ್ ಎಚ್‌ಡಬ್ಲ್ಯೂ ಲ್ಯಾಬ್ ಪ್ರವೇಶವನ್ನು ಒದಗಿಸಲು ಬೆಂಗಳೂರಿನ ಸಿ-ಡಾಕ್ ಇಂಡಿಯಾದಲ್ಲಿ ಚಿಪ್‌ಐಎನ್ (ChipIN) ಕೇಂದ್ರದ ಆರಂಭವನ್ನು ಸಚಿವರು ಘೋಷಿಸಿದರು. ಭಾರತ ಎಐ ಡೇಟಾಸೆಟ್ಸ್ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಇದು ವಿಶ್ವದ ಅತಿದೊಡ್ಡ ಡೇಟಾಸೆಟ್ ಕಾರ್ಯಕ್ರಮವಾಗಿದ್ದು, ಇದು ಇಂಟೆಲಿಜೆಂಟ್ ಕಂಪ್ಯೂಟ್, ಎಐ ಕಂಪ್ಯೂಟ್, ಸಾಧನ ಮತ್ತು ಸಿಸ್ಟಮ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು.
 

ಭಾರತೀಯ ಸ್ಟಾರ್ಟ್‌ಅಪ್‌ಗಳು ಮತ್ತು ಜಾಗತಿಕ ಪ್ರಮುಖ ಸೆಮಿಕಂಡಕ್ಟರ್ ಉದ್ಯಮಗಳ ನಡುವಿನ ಸಹಯೋಗದ ಸಂಭಾವ್ಯತೆ ಕುರಿತು ಮಾತನಾಡಿದ ಸಚಿವರು, ಸೆಮಿಕಾನ್‌ಇಂಡಿಯಾ ಫ್ಯೂಚರ್‌ಡಿಸೈನ್ ಸ್ಟಾರ್ಟ್‌ಅಪ್‌ಗಳ ಶಕ್ತಿಯ ಮೂಲಕ ಜಾಗತಿಕ ಪ್ರಮುಖ ಸೆಮಿಕಂಡಕ್ಟರ್ ಉದ್ಯಮಗಳು ತಮ್ಮ ನಾವೀನ್ಯತೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.

ಶ್ರೀ ರಾಜೀವ್ ಚಂದ್ರಶೇಖರ್ ಅವರು DIR-V (ಡಿಜಿಟಲ್ ಇಂಡಿಯಾ RISC-V ಮೈಕ್ರೊಪ್ರೊಸೆಸರ್ ಪ್ರೋಗ್ರಾಂ) ಗೆ ಸಂಬಂಧಿಸಿದಂತೆ ಭಾರತದ ಮಹತ್ವಾಕಾಂಕ್ಷೆಗಳನ್ನು ವಿವರಿಸಿದರು. ಇದು ಈ ವರ್ಷ ಶಕ್ತಿ (SHAKTI) ಮತ್ತು ವೇಗಾ (VEGA) RISC-V ಪ್ರೊಸೆಸರ್‌ಗಳು ಮತ್ತು ವಾಣಿಜ್ಯ ದರ್ಜೆಯ ಭಾರತೀಯ ಪ್ರೊಸೆಸರ್‌ಗಳ ಸುತ್ತಲಿನ ಭವಿಷ್ಯಕ್ಕಾಗಿ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು, ಸಿಲಿಕಾನೈಸ್ ಮಾಡಲು ಮತ್ತು ರಚಿಸಲು ಸಹಾಯ ಮಾಡುತ್ತದೆ ಎಂದರು. ನಾವು RISC-V ಗಾಗಿ ಸಮಗ್ರ ಸಂರಚನೆಯನ್ನು ನಿರ್ಮಿಸುತ್ತಿದ್ದೇವೆ ಮತ್ತು ಭಾರತವನ್ನು ವಿಶ್ವಕ್ಕೆ RISC-V (ಪ್ರತಿಭಾ ಕೇಂದ್ರ) ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಶ್ರೀ ರಾಜೀವ್ ಚಂದ್ರಶೇಖರ್ ಅವರು ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ಡಿ ಎಲ್‌ ಐ ಯೋಜನೆಯಡಿ ಆಯ್ಕೆಯಾದ ಮೊದಲ ಹಂತದ ಸ್ಟಾರ್ಟ್ಅಪ್‌ಗಳನ್ನು ಘೋಷಿಸಿದರು. ಆ ಸ್ಟಾರ್ಟಪ್‌ಗಳೆಂದರೆ, ವರ್ವೆಸೆಮಿ ಮೈಕ್ರೋಎಲೆಕ್ಟ್ರಾನಿಕ್ಸ್ ಪ್ರೈ. ಲಿಮಿಟೆಡ್, ಫೆರ್ಮಿಯೋನಿಕ್ ಡಿಸೈನ್ ಪ್ರೈ. ಲಿಮಿಟೆಡ್ ಮತ್ತು DV2JS ಇನ್ನೋವೇಶನ್‌ ಲಿಮಿಟೆಡ್. ಈ ಸ್ಟಾರ್ಟ್‌ಅಪ್‌ಗಳ ಸಿಇಒಗಳು ರೆನೆಸಾಸ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ, ಜಿಎಂ ಮತ್ತು ಮಂಡಳಿಯ ಸದಸ್ಯ ಡಾ. ಶೈಲೇಶ್ ಚಿಟ್ಟಿಪೆಡ್ಡಿ  ಮತ್ತು ಮೈಕ್ರೋನ್ ಟೆಕ್ನಾಲಜಿ ಇಂಡಿಯಾ ಎಂಡಿ ಶ್ರೀ ಆನಂದ್ ರಾಮಮೂರ್ತಿ ಸೇರಿದಂತೆ ಹಲವಾರು ಉದ್ಯಮದ ಪ್ರಮುಖರೊಂದಿಗೆ ಸಂವಾದ ನಡೆಸಿದರು.

ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (ಐಸಿಗಳು), ಚಿಪ್‌ಸೆಟ್‌ಗಳು, ಸಿಸ್ಟಮ್ ಆನ್ ಚಿಪ್‌ಗಳು (ಎಸ್‌ ಒ ಎಸ್‌ ಗಳು), ಸಿಸ್ಟಮ್‌ಗಳು ಮತ್ತು ಐಪಿ ಕೋರ್‌ಗಳು ಮತ್ತು ಸೆಮಿಕಂಡಕ್ಟರ್ ಆಧರಿತ ವಿನ್ಯಾಸಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಅಭಿವೃದ್ಧಿ ಮತ್ತು ನಿಯೋಜನೆಯ ವಿವಿಧ ಹಂತಗಳಲ್ಲಿ ಹಣಕಾಸಿನ ಪ್ರೋತ್ಸಾಹ ಮತ್ತು ವಿನ್ಯಾಸ ಮೂಲಸೌಕರ್ಯ ಬೆಂಬಲವನ್ನು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. 

ಈ ಸರಣಿಯ ಮೊದಲ ಕಾರ್ಯಕ್ರಮ ಕಳೆದ ವರ್ಷ ಗುಜರಾತ್‌ನ ಕರ್ಣಾವತಿ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು.

*****



(Release ID: 1902101) Visitor Counter : 175