ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​21 ವರ್ಷದೊಳಗಿನ 2ನೇ ಖೇಲೋ ಇಂಡಿಯಾ ಮಹಿಳಾ ಹಾಕಿ ಲೀಗ್ ಪಂದ್ಯಾವಳಿಯ ಆರಂಭಿಕ ದಿನ ಎಸ್ಎಐ ಹಾಗೂ ಪ್ರೀತಂ ಸಿವಾಚ್ ತಂಡಕ್ಕೆ ದೊಡ್ಡ ಗೆಲುವು

Posted On: 19 FEB 2023 2:43PM by PIB Bengaluru

21 ವರ್ಷದೊಳಗಿನವರ 2ನೇ ಖೇಲೋ ಇಂಡಿಯಾ ಮಹಿಳಾ ಲೀಗ್ ಪಂದ್ಯಾವಳಿ ನವದೆಹಲಿಯ ಮೇಜರ್ ಧ್ಯಾನ್ ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾಯಿತು. 1964ರಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ (ಮೂರು ಬಾರಿ ಭಾಗವಹಿಸಿದ್ದ) ವಿಜೇತ, ಅರ್ಜುನ ಪ್ರಶಸ್ತಿ ಪುರಸ್ಕೃತ ಶ್ರೀ ಹರ್ಬಿಂದರ್ ಸಿಂಗ್  ಮತ್ತು ಶ್ರೀ ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಶ್ರೀ ದೇವೇಶ್ ಚೌವ್ಹಾಣ್ ಅವರು ಟ್ರೋಫಿಗಳ ಅನಾವರಣದೊಂದಿಗೆ ಪಂದ್ಯಾವಳಿಗೆ ಚಾಲನೆ ದೊರಕಿತು.

ಇಂದು ಒಟ್ಟು ಎರಡು  ಪಂದ್ಯಗಳು ನಡೆದವು, ಅದರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಎ ತಂಡ  ಸೆಲ್ಯೂಟ್ ಹಾಕಿ ಅಕಾಡೆಮಿಯನ್ನು 13-0ಯಿಂದ ಮಣಿಸಿತು ಮತ್ತು ಪ್ರೀತಂ ಸಿವಾಚ್ ಹಾಕಿ ಅಕಾಡೆಮಿ, ಎಚ್ ಐಎಂ ಹಾಕಿ ಅಕಾಡೆಮಿಯನ್ನು 11-0ಯಿಂದ ಸೋಲಿಸಿತು.

ಒಲಿಂಪಿಕ್ಸ್ ನಲ್ಲಿ ಮೂರು ಭಾರಿ ಭಾರತವನ್ನು ಪ್ರತಿನಿಧಿಸಿದ್ದ ಮತ್ತು ಹಾಕಿ ಇಂಡಿಯಾದ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ಹರ್ಬಿಂದರ್‌ ಸಿಂಗ್, 2ನೇ ಖೇಲೋ ಇಂಡಿಯಾ ವುಮೆನ್ ಹಾಕಿ ಲೀಗ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತ ಸರ್ಕಾರ ಮಹಿಳಾ ಹಾಕಿ ಲೀಗ್ ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು. “ಈ ಖೇಲೋ ಇಂಡಿಯಾ ಲೀಗ್ ಪಂದ್ಯಾವಳಿಗಳಿಂದಾಗಿ ಮುಂದಿನ ದಿನಗಳಲ್ಲಿ ದೇಶದ ಪರವಾಗಿ ಆಡುವ ಭರವಸೆಯ ಆಟಗಾರರು ದೊರಕಲಿದ್ದಾರೆ ಮತ್ತು ಅವರು ಒಲಿಂಪಿಕ್ಸ್ ಗಳಲ್ಲಿ ಪದಕಗಳನ್ನೂ ಗೆಲ್ಲಲಿದ್ದಾರೆ’’ ಎಂದು ಅವರು ತಿಳಿಸಿದರು.

“21 ವರ್ಷದೊಳಗಿನ ಮತ್ತು 16 ವರ್ಷದೊಳಗಿನ ವಿಭಾಗದಲ್ಲಿ ಈ ವರ್ಷ ಮತ್ತು ಕಳೆದ ವರ್ಷ ಎರಡು ಮಹಿಳಾ ಖೇಲೋ ಇಂಡಿಯಾ ಲೀಗ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಾನು ಖೇಲೋ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರವನ್ನು ಅಭಿನಂದಿಸುತ್ತೇನೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳು ಮತ್ತು ಆಟಗಾರರಿಗೆ ಶುಭ ಕೋರುತ್ತೇನೆ’’ ಎಂದು ಅವರು ಹೇಳಿದರು.

ಎರಡು ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದೇವೇಶ್ ಚೌವ್ಹಾಣ್ ಅವರು ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ, ಖೇಲೋ ಇಂಡಿಯಾ ಲೀಗ್ ಗಳ ಮೂಲಕ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಧನೆ ಪ್ರದರ್ಶಿಸಲು ಭಾರತ ಸರ್ಕಾರ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ. ಇದೀಗ ಪ್ರತಿಯೊಬ್ಬ ಆಟಗಾರರು ಕಠಿಣ ಪರಿಶ್ರಮವಹಿಸಬೇಕು ಮತ್ತು ಭಾರತದ ಪರ ಆಡುವ ತನ್ನ ಕನಸು ಸಾಕಾರ ಪ್ರಯತ್ನಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ತಿಳಿಸಿದರು.

ಇದೇ ವೇಳೆ, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡದ ಕೋಚ್ ಪಿಯೂಷ್ ದುಬೆ (ಹಾಕಿ ಕುರಿತ ಹೈ ಫರ್ ಫಾರ್ಮೆನ್ಸ್ ಮ್ಯಾನೇಜರ್ ಆಫ್ ಇಂಡಿಯಾ), ರಾಷ್ಟ್ರೀಯ ಕ್ರೀಡಾಂಗಣದ ಆಡಳಿತಾಧಿಕಾರಿ ಶ್ರೀ ದಿಲೀಪ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.

***



(Release ID: 1900594) Visitor Counter : 120