ರಕ್ಷಣಾ ಸಚಿವಾಲಯ

ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮೂಲಕ ಪೂರೈಕೆ ಸರಪಳಿ ಸಂಯೋಜಿಸಲು ಮತ್ತು ಬಲಪಡಿಸಲು, ಜಂಟಿ ಉದ್ಯಮಗಳನ್ನು ರೂಪಿಸಲು, ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮತ್ತು ಜಗತ್ತಿಗಾಗಿ ಉತ್ಪಾದಿಸಲು ಒಇಎಂಗಳಿಗೆ ರಕ್ಷಣಾ ಸಚಿವರ ಆಹ್ವಾನ


ಏರೋ ಇಂಡಿಯಾ-2023 ರ ನೇಪಥ್ಯದಲ್ಲಿ ಒಇಎಂಗಳ ಸಿಇಒಗಳನ್ನು  ಭೇಟಿ ಮಾಡಿದ ಶ್ರೀ ರಾಜನಾಥ್‌ ಸಿಂಗ್‌

ಸ್ಪರ್ಧಾತ್ಮಕ ಭೂ ವೆಚ್ಚ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಪೂರಕ ನವೋದ್ಯಮ  ವ್ಯವಸ್ಥೆ ಮತ್ತು ಬೃಹತ್‌ ರಕ್ಷ ಣಾ ಮಾರುಕಟ್ಟೆಯಂತಹ ಅನುಕೂಲಗಳನ್ನು ಜಾಗತಿಕ ರಕ್ಷ ಣಾ ಉದ್ಯಮಕ್ಕೆ ಭಾರತವು ನೀಡುತ್ತದೆ: ರಕ್ಷಣಾ ಮಂತ್ರಿ   

Posted On: 14 FEB 2023 11:24AM by PIB Bengaluru

ರಕ್ಷಣಾ ಸಚಿವ  ಶ್ರೀ ರಾಜನಾಥ್‌ ಸಿಂಗ್‌ ಅವರು ಫೆಬ್ರವರಿ 14, 2023ರಂದು 14ನೇ ಏರೋ ಇಂಡಿಯಾದ ನೇಪಥ್ಯದಲ್ಲಿ ಓರಿಜಿನಲ್‌ ಎಕ್ವಿಪ್‌ ಮೆಂಟ್‌ ಮ್ಯಾನ್ಯುಫ್ಯಾಕ್ಚರರ್ಸ್‌ -ಮೂಲ ಸಾಮಗ್ರಿಗಳ ಉತ್ಪಾದಕರು (ಒಇಎಂಗಳು) ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಗಳನ್ನು ಭೇಟಿ ಮಾಡಿದರು. ಸಂವಾದದ ಸಮಯದಲ್ಲಿ ಅವರು, ಭಾರತವು ಸ್ಪರ್ಧಾತ್ಮಕ ಭೂ ವೆಚ್ಚ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಸಕ್ರಿಯ ನವೋದ್ಯಮ ವ್ಯವಸ್ಥೆಯಂತಹ ಮಹತ್ವದ ಅನುಕೂಲಗಳನ್ನು ಮತ್ತು ಜಾಗತಿಕ ರಕ್ಷ ಣಾ ಉದ್ಯಮಕ್ಕೆ ಬೃಹತ್‌ ದೇಶೀಯ ರಕ್ಷಣಾ ಮಾರುಕಟ್ಟೆ ಒದಗಿಸುತ್ತದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಜಗತ್ತಿನಾದ್ಯಂತದ ರಕ್ಷಣಾ ಉತ್ಪಾದನಾ ಕಂಪನಿಗಳು ಭಾರತದ ಪ್ರಗತಿಗಾಥೆಯ ಭಾಗವಾಗಬಹುದಾದ ಇಬ್ಬರೂ ಗೆಲ್ಲುವ (ವಿನ್‌ ವಿನ್‌) ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದರು.

‘‘ರಕ್ಷಣಾ ಉತ್ಪಾದನೆಯು ನಿರ್ಣಾಯಕ ವಲಯದಲ್ಲಿ ಸ್ವಾವಲಂಬಿಯಾಗುವುದರ ಜೊತೆಗೆ ನಮ್ಮ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಅವಳಿ ಗುರಿಗಳನ್ನು ಈಡೇರಿಸುತ್ತದೆ’’ ಎಂದು ರಾಜನಾಥ್‌ ಸಿಂಗ್‌ ಅವರು ಭಾರತ ರಕ್ಷ ಣಾ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು,  ರಕ್ಷಣಾ ಕೈಗಾರಿಕಾ ಕಾರಿಡಾರ್‌ ಗಳಲ್ಲಿ ಹೂಡಿಕೆಗಾಗಿ ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ನೀಡುತ್ತಿರುವ ಪ್ರೋತ್ಸಾಹ ಕ್ರಮಗಳು, ಭಾರತದಲ್ಲಿ ಎಫ್‌ಡಿಐ ಮತ್ತು ರಕ್ಷ ಣಾ ಉತ್ಪಾದನೆಯನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ನೀತಿಗಳು, ಬಾಧ್ಯಸ್ಥಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಬಲವಾದ ಕಾನೂನು ವ್ಯವಸ್ಥೆ ಮತ್ತು ವ್ಯಾಪಾರ ಮಾಡಲು ಸುಲಭ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಶ್ರೀ ರಾಜನಾಥ್‌ ಸಿಂಗ್‌ ಸುಧಾರಣೆಗಳನ್ನು ಅವರು ಪ್ರಸ್ತಾಪಿಸಿದರು.

‘ಜಾಯಿಂಟ್‌ ವೆಂಚರ್‌ ಗಳಿಂದ ಸಹ-ಅಭಿವೃದ್ಧಿ, ಸಹ-ಉತ್ಪಾದನೆ, ಏಕೀಕರಣ ಮತ್ತು ಪೂರೈಕೆ ಸರಪಳಿ ಬಲವರ್ಧನೆ ಮೂಲಕ ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಜಗತ್ತಿಗಾಗಿ ಉತ್ಪಾದನೆ ಮಾಡಲು ಅವಕಾಶಗಳಿವೆ‘ ಎಂದು ಅವರು ಹೇಳಿದರು. ಭಾರತೀಯ ರಕ್ಷಣಾ ಉತ್ಪಾದನೆಯಲ್ಲಿ ಜಾಗತಿಕ ಹೂಡಿಕೆಗೆ ಅನುಕೂಲವಾಗುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಸಲಹೆಗಳನ್ನು ನೀಡಿದರು ಮತ್ತು ಖಾಸಗಿ ಉದ್ಯಮಕ್ಕೆ ನಿಯಂತ್ರಣ ಅಡೆತಡೆಗಳನ್ನು ತೆಗೆದುಹಾಕಲು ಸರ್ಕಾರದ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ರಕ್ಷಣಾ ಸಚಿವರು ಅವರಿಗೆ ಭರವಸೆ ನೀಡಿದರು. ಜನರಲ್‌ ಅಟಾಮಿಕ್ಸ್‌, ಸಫ್ರಾನ್‌, ಬೋಯಿಂಗ್‌, ಎಂಬ್ರೇರ್‌ಮತ್ತು ರಾಫೆಲ್‌ ಅಡ್ವಾನ್ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ನ  ಮುಖ್ಯ ಕಾರ್ಯನಿರ್ವಹಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು  ಸಂವಾದದಲ್ಲಿ ಭಾಗವಹಿಸಿದ್ದರು. ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್‌ ಅರ್ಮನೆ, ವ್ಯವಸ್ಥಾಪಕ ನಿರ್ದೇಶಕರು (ಖರೀದಿ) ಶ್ರೀ ಪಂಕಜ್‌ ಅಗರವಾಲ್‌, ರಕ್ಷ ಣಾ ಉತ್ಪಾದನೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಟಿ.ನಟರಾಜನ್‌ ಮತ್ತು ರಕ್ಷ ಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*****



(Release ID: 1899306) Visitor Counter : 117