ರಕ್ಷಣಾ ಸಚಿವಾಲಯ
azadi ka amrit mahotsav

ಬೆಂಗಳೂರಿನ ಏರೋ ಇಂಡಿಯಾ 2023ರ ನೇಪಥ್ಯದಲ್ಲಿ ರಕ್ಷಣಾ ಸಚಿವರ ಸಮಾವೇಶ ನಡೆಸಿದ ರಕ್ಷಣಾ ಮಂತ್ರಿ; ಹೆಚ್ಚು ಸಂಕೀರ್ಣಮಯ, ಜಾಗತಿಕ ಸುರಕ್ಷತೆಯ ಸನ್ನಿವೇಶದಲ್ಲಿ ತ್ವರಿತ ಬದಲಾವಣೆಗಳನ್ನು ಹತ್ತಿಕ್ಕಲು ಹೆಚ್ಚಿನ ಸಹಕಾರಕ್ಕೆ ಕರೆ


ಭಾರತವು ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧ; ಅದರಲ್ಲಿ ತಮ್ಮದೇ ಸರಿ ಎನ್ನುವ ಬದಲಿಗೆ ನ್ಯಾಯೋಚಿತತೆ, ಸಹಕಾರ ಮತ್ತು ಸಮಾನತೆ ಎಂದು ಬದಲಾಗಬೇಕು - ಶ್ರೀ ರಾಜನಾಥ್‌ ಸಿಂಗ್‌ ಹೇಳಿಕೆ

‘ಸಾಮೂಹಿಕ ಭದ್ರತೆಯು ಏಳಿಗೆಗೆ ಅಲ್ಲ, ಭಯೋತ್ಪಾದನೆಯಂತಹ ಬೆದರಿಕೆಗಳನ್ನು ಹತ್ತಿಕ್ಕಲು ಹೊಸ ತಂತ್ರಗಳನ್ನು ರೂಪಿಸುವ ಅಗತ್ಯವಿದೆ‘

ಭಾರತವು ಮಿತ್ರ ರಾಷ್ಟ್ರಗಳ  ರಕ್ಷಣಾ ಸಹಭಾಗಿತ್ವ ವೃದ್ಧಿ ಬಯಸುತ್ತದೆ ಹಾಗೂ ರಾಷ್ಟ್ರೀಯ ಆದ್ಯತೆಗಳು ಮತ್ತು ಸಾಮರ್ಥ್ಯಗಳಿಗೆ ಪೂರಕ; ರಕ್ಷಣಾ ಸಚಿವರು

Posted On: 14 FEB 2023 12:58PM by PIB Bengaluru

ರಕ್ಷಣಾ ಸಚಿವ ಶ್ರೀ ರಾಜನಾಥ್‌ ಸಿಂಗ್‌ ಅವರು ಫೆಬ್ರವರಿ 14, 2023 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023ರ ನೇಪೃಥ್ಯದಲ್ಲಿ 27 ರಾಷ್ಟ್ರಗಳ ರಕ್ಷಣಾ ಸಚಿವರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶದ ವಿಸ್ತೃತ ಧ್ಯೇಯ “ರಕ್ಷಣಾ ವಲಯದಲ್ಲಿ ಹೆಚ್ಚಿನ ಸಹಭಾಗಿತ್ವದ ಮೂಲಕ ಸಮಾನ ಸಮೃದ್ಧಿ(ಎಸ್ ಪಿ ಇಇಡಿ)ದಡಿ ನಡೆಸಲಾಯಿತು. ಸಾಮರ್ಥ್ಯ ವೃದ್ಧಿಗಾಗಿ (ಹೂಡಿಕೆಗಳು,  ಸಂಶೋಧನೆ ಮತ್ತು ಅಭಿವೃದ್ಧಿ, ಜಂಟಿ ಉದ್ಯಮಗಳು, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ರಕ್ಷಣಾ ಉಪಕರಣಗಳ ಒದಗಿಸುವುದು), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ದಿಮತ್ತೆ ಮತ್ತು ಸಾಗರ ಭದ್ರತೆ ಸೇರಿದಂತೆ ಇನ್ನಿತರ ವಲಯಗಳಲ್ಲಿ ಆಳವಾದ ಸಹಕಾರಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಹರಿಸಲು ಇದು ಪ್ರಯತ್ನಿಸಿದೆ.

ತಮ್ಮ ಉದ್ಘಾಟನಾ ಭಾಷಣದಲ್ಲಿ ರಕ್ಷಣಾ ಸಚಿವರು, ಹೆಚ್ಚು ಸಂಕೀರ್ಣವಾದ ಜಾಗತಿಕ ಸುರಕ್ಷತಾ ಸನ್ನಿವೇಶದಲ್ಲಿ ಹೆಚ್ಚಿನ ಸಹಕಾರದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಕಾರ್ಯಕ್ರಮದ ಧೇಯ ’ಸ್ಪೀಡ್‌’ ಸದ್ಯದ ಯುಗವನ್ನು ನಿರೂಪಿಸುತ್ತದೆ, ಇದರಲ್ಲಿ ಭೌಗೋಳಿಕ ರಾಜಕೀಯ ಮತ್ತು ಭದ್ರತಾ ವಾಸ್ತವಗಳು ಈವರೆಗೆ ಗುರುತಿಸಲಾಗದ ವೇಗದಲ್ಲಿ ಬದಲಾಗುತ್ತಿವೆ ಎಂದು ಅವರು ಹೇಳಿದರು. ಅಂತಹ ವೇಗದ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಅವರು ಸೂಕ್ತ ಸಮಯದಲ್ಲಿ  ಸಹಯೋಗಕ್ಕೆ ಕರೆ ನೀಡಿದರು.

ಆರ್ಥಿಕತೆ, ಭದ್ರತೆ, ಆರೋಗ್ಯ ಅಥವಾ ಹವಾಮಾನ ವಲಯಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಯಾದರೂ ಅದು ಜಾಗತಿಕವಾಗಿ ಪ್ರತಿಧ್ವನಿಸುತ್ತದೆ ಮತ್ತು ಯಾವುದೇ ಪ್ರದೇಶದ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ಉಂಟಾದಾಗ, ಇಡೀ ವಿಶ್ವವು ಅದರ ಪರಿಣಾಮವನ್ನು ಹಲವುವಿಧಗಳಲ್ಲಿ ಅನುಭವಿಸುತ್ತದೆ ಎಂದು ಶ್ರೀ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟರು. ಅಂತರ ಸಂಪರ್ಕಿತ ಮತ್ತು ಜಾಲವಿರುವ ಜಗತ್ತಿನಲ್ಲಿ, ಆಘಾತಗಳು ಮತ್ತು ಅಡಚಣೆಗಳ ಕ್ಷಿಪ್ರ ಪ್ರಸರಣವು ಇತರ ದೇಶಗಳ ಸಮಸ್ಯೆಗಳಿಂದ ವ್ಯಕ್ತಿಯ ಸ್ವಂತ ದೇಶವನ್ನು ಬೇರ್ಪಡಿಸಲು ಅಸಾಧ್ಯವಾಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದರು. ಸಾಮಾನ್ಯ, ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಎಲ್ಲರ ಕಾಳಜಿ ವಹಿಸುವುದು ಸೂಕ್ತವಾಗಿ ತಿಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಶೃಂಗಸಭೆಗಳು, ಸಮ್ಮೇಳನಗಳು ಮತ್ತು ಸಮಾವೇಶಗಳ ಸಮಯದಲ್ಲಿ ನಿಯಮಿತ ಸಂವಾದಗಳಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

ನಿಯಮ ಆಧಾರಿತ ಅಂತಾರಾಷ್ಟ್ರೀಯ  ವ್ಯವಸ್ಥೆಗಾಗಿ ಭಾರತದ ನಿಲುವನ್ನು  ಪುನರುಚ್ಚರಿಸಿದ ಅವರು, ಇದರಲ್ಲಿ ಮೈಟ್ ಈಟ್ ಇಸ್ ರೈಟ್ ಅನ್ನು  ಎಲ್ಲಾ ಸಾರ್ವಭೌಮ ರಾಷ್ಟ್ರಗಳ ನಡುವೆ ನ್ಯಾಯೋಚಿತತೆ, ಸಹಕಾರ, ಗೌರವ ಮತ್ತು ಸಮಾನತೆಯ ನಾಗರಿಕತೆಯ ಪರಿಕಲ್ಪನೆಯಿಂದ ಬದಲಾಯಿಸಬೇಕಿದೆ ಎಂದರು. ಒಂದು ಗುಂಪಿನ ವಿರುದ್ಧ ರಾಷ್ಟ್ರಗಳ ಯಾವುದೇ ಬಣ ಅಥವಾ ಮೈತ್ರಿಗೆ ಸಂಬಂಧಿಸದಂತೆ, ಭಾರತವು ಎಲ್ಲಾ ರಾಷ್ಟ್ರಗಳ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

“ಭಾರತವು ವಿಶ್ವದಾದ್ಯಂತದ ಹೊಸ ಆಲೋಚನೆಗಳಿಗೆ ಸದಾ ಮುಕ್ತವಾಗಿರುತ್ತದೆ, ವಿವಿಧ ಆಲೋಚನೆಗಳ ಸಂಯೋಜನೆ ಮತ್ತು ಸ್ಪರ್ಧೆಯು ನಮ್ಮನ್ನು ಜಾಗತಿಕ ಕಲ್ಪನೆಯ ತಾಣವನ್ನಾಗಿ ಮಾಡಿದೆ. ನಮ್ಮ ಪುರಾತನ ನೀತಿಯು ಪರಸ್ಪರ ಪ್ರಯೋಜನಕ್ಕಾಗಿ ಸಹಕಾರದ ಕಡೆಗೆ ಕೆಲಸ ಮಾಡಲು ನಮಗೆ ಮಾರ್ಗದರ್ಶನ ನೀಡುತ್ತದೆ, ಆದರೆ ಕೇವಲ ವಹಿವಾಟಿನ ವಿಧಾನದಿಂದ ಅಲ್ಲ, ಮಾನವೀಯತೆಯನ್ನು ಒಂದೇ ಕುಟುಂಬವಾಗಿ ಗುರುತಿಸುವತ್ತ ಸ್ವಾಗತಾರ್ಹ ಹೆಜ್ಜೆಯನ್ನು ಮುಂದಿಡುತ್ತದೆ,  ಎಂದು ಶ್ರೀ ರಾಜನಾಥ್‌ ಸಿಂಗ್‌ ಹೇಳಿದರು. ಅವರು ಕೋವಿಡ್-19 ಅನ್ನು ಎದುರಿಸಲು ಜಾಗತಿಕ ಪ್ರಯತ್ನಗಳನ್ನು ಉಲ್ಲೇಖಿಸಿದರು ಮತ್ತು ಸಾಂಕ್ರಾಮಿಕವು ಜಾಗತಿಕ ಸಮೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಎಲ್ಲಾ ರಾಷ್ಟ್ರಗಳ ನಡುವೆ ಹೆಚ್ಚಿನ ಸಮನ್ವಯವನ್ನು ಬಯಸುತ್ತದೆ ಎಂಬ ಅಂಶವನ್ನು ಒತ್ತಿಹೇಳುತ್ತದೆ, ಅದರಲ್ಲಿ ರಕ್ಷಣೆ ಮತ್ತು ಭದ್ರತೆ ಅತ್ಯಂತ ಪ್ರಮುಖವಾಗಿದೆ ಎಂದರು. 

ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಸಾಮೂಹಿಕ ಭದ್ರತೆಯನ್ನು ಅಗತ್ಯ ಸ್ಥಿತಿ ಎಂದು ವಿವರಿಸಿದೆ. ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ  ಮತ್ತಿತರವು ಜಗತ್ತಿಗೆ ಮಹತ್ವದ ಭದ್ರತಾ ಬೆದರಿಕೆಗಳನ್ನು ಒಡ್ಡುತ್ತಿವೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ಬೆದರಿಕೆಗಳನ್ನು ಎದುರಿಸಲು ಹೊಸ ತಂತ್ರಗಳನ್ನು ರೂಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. “ಭಾರತವು ಹಳೆಯ ಪಿತೃತ್ವ ಅಥವಾ ನವ-ವಸಾಹತುಶಾಹಿ ಮಾದರಿಗಳಲ್ಲಿ ಇಂತಹ ಭದ್ರತಾ ಸಮಸ್ಯೆಗಳನ್ನು ಎದುರಿಸಲು ನಂಬುವುದಿಲ್ಲ. ನಾವು ಎಲ್ಲಾ ರಾಷ್ಟ್ರಗಳನ್ನು ಸಮಾನ ಪಾಲುದಾರರೆಂದು ಪರಿಗಣಿಸುತ್ತೇವೆ. ಆದ್ದರಿಂದಲೇ, ದೇಶದ ಆಂತರಿಕ ಸಮಸ್ಯೆಗಳಿಗೆ ಬಾಹ್ಯ ಅಥವಾ ಅತಿಯಾದ ರಾಷ್ಟ್ರೀಯ ಪರಿಹಾರಗಳನ್ನು ಹೇರುವುದನ್ನು ನಾವು ನಂಬುವುದಿಲ್ಲ. ಸಹಾಯದ ಅಗತ್ಯವಿರುವ ದೇಶಗಳ ರಾಷ್ಟ್ರೀಯ ಮೌಲ್ಯಗಳು ಮತ್ತು ನಿರ್ಬಂಧಗಳನ್ನು ಗೌರವಿಸದ ಧರ್ಮೋಪದೇಶಗಳು ಅಥವಾ ಒಣ ಪರಿಹಾರಗಳನ್ನು ನೀಡುವುದನ್ನು ನಾವು ನಂಬುವುದಿಲ್ಲ. ಬದಲಿಗೆ, ನಾವು ನಮ್ಮ ಪಾಲುದಾರ ರಾಷ್ಟ್ರಗಳ ಸಾಮರ್ಥ್ಯದ ನಿರ್ಮಾಣವನ್ನು ಬೆಂಬಲಿಸುತ್ತೇವೆ, ಇದರಿಂದಾಗಿ ಅವರು ತಮ್ಮದೇ ಆದ ಪ್ರತಿಭೆಗೆ ಅನುಗುಣವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’’ ಎಂದು ಅವರು ಹೇಳಿದರು.

ಇತರರಿಗಿಂತ ಶ್ರೀಮಂತ, ಮಿಲಿಟರಿ ಅಥವಾ ತಾಂತ್ರಿಕವಾಗಿ ಹೆಚ್ಚು ಮುಂದುವರಿದ ರಾಷ್ಟ್ರಗಳಿವೆ, ಆದರೆ ಬೆಂಬಲದ ಅಗತ್ಯವಿರುವ ರಾಷ್ಟ್ರಗಳಿಗೆ ತಮ್ಮ ಪರಿಹಾರಗಳನ್ನು ನಿರ್ದೇಶಿಸುವ ಹಕ್ಕನ್ನು ಅದು ಅವರಿಗೆ ನೀಡುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಶ್ರೇಣಿಕೃತ ವಿಧಾನವು ದೀರ್ಘಾವಧಿಯಲ್ಲಿ ಎಂದಿಗೂ ಸಮರ್ಥನೀಯವಾಗಿಲ್ಲ ಮತ್ತು ಇದು ಸಾಮಾನ್ಯವಾಗಿ ಸಾಲದ ಸುಳಿ, ಸ್ಥಳೀಯ ಜನಸಂಖ್ಯೆಯ ಪ್ರತಿಕ್ರಿಯೆ, ಸಂಘರ್ಷ ಮತ್ತು ಮುಂತಾದವುಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಸಂಸ್ಥೆಗಳು ಮತ್ತು ಸಾಮರ್ಥ್ಯಗಳ ನಿರ್ಮಾಣದ ವಿಷಯದಲ್ಲಿ ಸಹಾಯವನ್ನು ಒದಗಿಸುವುದರ ಮೇಲೆ ಗಮನಹರಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಇದರಿಂದಾಗಿ ನೆರವು ಪಡೆಯುತ್ತಿರುವ ರಾಷ್ಟ್ರಗಳ ನೀತಿಗೆ ಅನುಗುಣವಾಗಿ ಶ್ರೇಣಿಕೃತ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದರು. 

ಭಾರತವು ತನ್ನ ಮಿತ್ರ ರಾಷ್ಟ್ರಗಳಿಗೆ ತ್ವರಿತ ರಕ್ಷಣಾ ಪಾಲುದಾರಿಕೆಯನ್ನು ನೀಡುವ ಮೂಲಕ ಈ ತತ್ವದೊಂದಿಗೆ ಕೆಲಸ ಮಾಡಲು ಮುಂದುವರಿಯುತ್ತಿದೆ ಎಂದು ರಾಜನಾಥ್ ಸಿಂಗ್ ರಕ್ಷಣಾ ಸಚಿವರಿಗೆ ತಿಳಿಸಿದರು. “ನಾವು ರಾಷ್ಟ್ರೀಯ ಆದ್ಯತೆಗಳು ಮತ್ತು ಸಾಮರ್ಥ್ಯಗಳಿಗೆ ಹೊಂದಿಕೊಳ್ಳುವ ಪಾಲುದಾರಿಕೆಯನ್ನು ನೀಡುತ್ತೇವೆ. ನಾವು ನಿಮ್ಮೊಂದಿಗೆ ನಿರ್ಮಿಸಲು ಬಯಸುತ್ತೇವೆ, ನಾವು ನಿಮ್ಮೊಂದಿಗೆ ಆರಂಭಿಸಲು ಬಯಸುತ್ತೇವೆ, ನಾವು ನಿಮ್ಮೊಂದಿಗೆ ಸೃಷ್ಟಿಸಲು ಬಯಸುತ್ತೇವೆ ಮತ್ತು ನಾವು ನಿಮ್ಮೊಂದಿಗೆ ಅಭಿವೃದ್ಧಿ ಹೊಂದಲು ಬಯಸುತ್ತೇವೆ. ನಾವು ಸಹಜೀವನದ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ, ಅಲ್ಲಿ ನಾವು ಪರಸ್ಪರ ಕಲಿಯಬಹುದು, ಒಟ್ಟಿಗೆ ಬೆಳೆಯಬಹುದು ಮತ್ತು ಎಲ್ಲರಿಗೂ ಗೆಲುವು-ಗೆಲುವಿನ (ವಿನ್ ವಿನ್) ಪರಿಸ್ಥಿತಿಯನ್ನು ಸೃಷ್ಟಿಬಹುದು’’ ಎಂದು ಅವರು ಹೇಳಿದರು. ಖರೀದಿದಾರ ಮತ್ತು ಮಾರಾಟಗಾರರ ಶ್ರೇಣೀಕೃತ ಸಂಬಂಧವನ್ನು ಸಹ ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಮೀರಿದ ಸರ್ಕಾರದ ಪ್ರಯತ್ನವನ್ನು ಪುನರುಚ್ಚರಿಸಿದರು. 

ಏರೋ ಇಂಡಿಯಾದ ಮೂಲಕ ರಕ್ಷಣಾ  ಸಚಿವರು, ಭಾರತದಲ್ಲಿ ಸೃಷ್ಟಿಸಲಾಗುತ್ತಿರುವ ಸದೃಢ ರಕ್ಷಣಾ ಉತ್ಪಾದನಾ ಪೂರಕ ವ್ಯವಸ್ಥೆಯ ಬಗ್ಗೆ ಜ್ಞಾನವನ್ನು ಪಡೆಯಬಹುದೆಂದು ಶ್ರೀ ರಾಜನಾಥ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು. ವಿಚಾರಣೆ, ವಿಶ್ಲೇಷಣೆಗಳು ಮತ್ತು ಪ್ರತಿಕ್ರಿಯೆಗಳ ಮೂಲಕ ತಮ್ಮ ಅವಶ್ಯಕತೆಗಳು ಮತ್ತು ನಿರೀಕ್ಷೆಗಳನ್ನು ಹಂಚಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಇದು ಉದ್ಯಮಕ್ಕೆ ಗಮನಾರ್ಹ ಕಲಿಕೆಯ ಅವಕಾಶ ಒದಗಿಸುತ್ತದೆ ಎಂದರು.

27 ದೇಶಗಳ ರಕ್ಷಣಾ ಮತ್ತು ಉಪ ರಕ್ಷಣಾ  ಸಚಿವರು, 15 ರಕ್ಷಣಾ ಮತ್ತು ಸೇವಾ ಮುಖ್ಯಸ್ಥರು ಮತ್ತು 80 ದೇಶಗಳ 12 ಕಾಯಂ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ದೇಶಗಳ 160 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಇದು ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಭಾರತದ ಅದ್ಭುತ ಬೆಳವಣಿಗೆ ಮತ್ತು ಪಾಲುದಾರಿಕೆಯನ್ನು ದೃಢೀಕರಿಸುತ್ತದೆ.

*****

 

 


(Release ID: 1899302) Visitor Counter : 284