ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಭಾರತ ಇಂಧನ ಸಪ್ತಾಹದಲ್ಲಿ ಓ.ಐ.ಎಲ್.ನ ಹೈಡ್ರೋಜನ್ ಬಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
Posted On:
07 FEB 2023 7:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಫೆಬ್ರವರಿ 6 ರಂದು ಬೆಂಗಳೂರಿನಲ್ಲಿ ನಡೆದ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) ದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಕೋಶ ಆಧಾರಿತ ಇ-ಬಸ್ ಗೆ ಹಸಿರು ನಿಶಾನೆ ತೋರಿದರು.
2023ರ ಫೆಬ್ರವರಿ 6 ರಂದು ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಕೋಶ ಆಧಾರಿತ ಇ-ಬಸ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.
ಒಐಎಲ್ ತನ್ನ ನವೋದ್ಯಮ ಕಾರ್ಯಕ್ರಮ (ಎಸ್ಎನ್.ಇ.ಎಚ್) ಅಡಿಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೈಡ್ರೋಜನ್ ಅಭಿಯಾನ ಮತ್ತು ಆತ್ಮನಿರ್ಭರ ಭಾರತ್ ದೃಷ್ಟಿಕೋನದನ್ವಯ ಈ ಹೈಡ್ರೋಜನ್ ಇಂಧನ ಕೋಶ ಆಧಾರಿತ ಬಸ್ ಅನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
ಬಸ್ ಎಲೆಕ್ಟ್ರಿಕ್ ಡ್ರೈವ್ ಮತ್ತು ಇಂಧನ ಕೋಶದ ಹೈಬ್ರಿಡ್ ಆಗಿದೆ, ಇಂಧನ ಕೋಶ ವಿದ್ಯುತ್ ಉತ್ಪಾದಿಸಲು ಹೈಡ್ರೋಜನ್ ಅನ್ನು ಬಳಸುತ್ತದೆ, ಇದು ಎಲೆಕ್ಟ್ರಿಕ್ ಮೋಟರ್ ಅನ್ನು ಓಡಿಸುತ್ತದೆ ಮತ್ತು ವೇಗ ಹೆಚ್ಚಿಸುವಾಗ ಮತ್ತು ಬ್ರೇಕ್ ಹಾಕುವ ಸಮಯದಲ್ಲಿ ಬ್ಯಾಕ್-ಅಪ್ ಶಕ್ತಿಯನ್ನು ಒದಗಿಸುವ ಸಹಾಯಕ ಬ್ಯಾಟರಿಯನ್ನು ಸಹ ಚಾರ್ಜ್ ಮಾಡುತ್ತದೆ. 60 ಕಿಲೋವ್ಯಾಟ್ ಸಾಮರ್ಥ್ಯದ ಇಂಧನ ಕೋಶವು ವಿದ್ಯುತ್ ಉತ್ಪಾದಿಸಲು ಪ್ರೋಟಾನ್ ವಿನಿಮಯ ಮೆಂಬ್ರೇನ್ (ಪಿಇಎಂ) ತಂತ್ರಜ್ಞಾನವನ್ನು ಬಳಸುತ್ತದೆ. ಬಸ್ 350 ಬಾರ್ ಒತ್ತಡದಲ್ಲಿ 21.9 ಕೆಜಿ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.
ಚಾಲಕ ಸೇರಿದಂತೆ 32 ಜನರಿಗೆ ಸ್ಥಳಾವಕಾಶ ಕಲ್ಪಿಸಲು ಈ ಬಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ವ್ಹೀಲ್ ಚೇರ್ ಸೌಲಭ್ಯವನ್ನೂ ಒದಗಿಸಲಾಗಿದೆ.
ಆಯಿಲ್ ಇಂಡಿಯಾ ಲಿಮಿಟೆಡ್ ಬಗ್ಗೆ ಆಯಿಲ್ ಇಂಡಿಯಾ ಲಿಮಿಟೆಡ್ ಭಾರತದ ಅತ್ಯಂತ ಹಳೆಯ ತೈಲ ಅನ್ವೇಷಣೆ ಮತ್ತು ಉತ್ಪಾದನಾ ಸಂಸ್ಥೆಯಾಗಿದ್ದು, ಭಾರತದ ಇಂಧನ ಭದ್ರತೆಗೆ ಬದ್ಧವಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಭಾರತದಲ್ಲಿ ಪೆಟ್ರೋಲಿಯಂ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಓ.ಐ.ಲ್. ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪರಿಶೋಧನೆ ಮತ್ತು ಉತ್ಪಾದನೆ, ದ್ರವೀಕೃತ ಪೆಟ್ರೋಲಿಯಂ ಅನಿಲದ ಉತ್ಪಾದನೆ ಮತ್ತು ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯಲ್ಲಿ ತೊಡಗಿರುವ ಪ್ರಮುಖ ಕಂಪನಿಯಾಗಿದೆ.
*****
(Release ID: 1897158)
Visitor Counter : 141