ಗೃಹ ವ್ಯವಹಾರಗಳ ಸಚಿವಾಲಯ

​​​​​​​ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳ ನಿಯೋಜನೆ

Posted On: 07 FEB 2023 4:31PM by PIB Bengaluru

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದಂತೆ, ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್.ಡಿ.ಆರ್.ಎಫ್.)  101 ಸಿಬ್ಬಂದಿಯನ್ನು ಒಳಗೊಂಡ ಎರಡು ತಂಡಗಳು ಮತ್ತು ವಿಶೇಷ ತರಬೇತಿ ಪಡೆದ ಶ್ವಾನ ದಳಗಳು ಮತ್ತು ಅಗತ್ಯವಿರುವ ಎಲ್ಲ ಉಪಕರಣಗಳನ್ನು ವಿಶೇಷ ವಿಮಾನ ಮೂಲಕ ಟರ್ಕಿಗೆ ಕಳುಹಿಸಿಕೊಡಲಾಗಿದೆ. 06.02.2023 ರಂದು ಸಂಭವಿಸಿದ ಭಾರೀ ಭೂಕಂಪಗಳಿಂದ ಧ್ವಂಸಗೊಂಡ ಟರ್ಕಿಯ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಮಾಂಡೆಂಟ್ ಶ್ರೀ ಗುರ್ಮಿಂದರ್ ಸಿಂಗ್ ಅವರ ನೇತೃತ್ವದ ಎನ್‌.ಡಿ.ಆರ್‌.ಎಫ್‌.ನ ತಂಡವು ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ತೆರಳಿವೆ. ತಜ್ಙ ವೈದ್ಯರು ಹಾಗೂ ನುರಿತ ಅರೆವೈದ್ಯರು, ಸಕಾಲಿಕ ಅಗತ್ಯ ಸಹಾಯವನ್ನು ಒದಗಿಸುವ ಎಲ್ಲಾ ರೀತಿಯಲ್ಲೂ ಸ್ವಯಂ-ಒಳಗೊಂಡ ವ್ಯವಸ್ಥೆಗಳು, ಅಗತ್ಯವಿರುವ ಎಲ್ಲ ಅತ್ಯಾಧುನಿಕ ಅನ್ವೇಷಣಾ ಸೌಕರ್ಯಗಳು ಮತ್ತು ಪಾರುಗೊಳಿಸುವ ರಕ್ಷಣಾ ವ್ಯವಸ್ಥೆಗಳು, ಮತ್ತು ವೈಯಕ್ತಿಕ ಸುರಕ್ಷತಾ ಸಾಧನಗಳೊಂದಿಗೆ ತಂಡಗಳು ಸಜ್ಜುಗೊಂಡಿವೆ. ತುರ್ಕಿಯ ಸ್ಥಳೀಯ ಅಧಿಕಾರಿಗಳಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಎನ್‌.ಡಿ.ಆರ್‌.ಎಫ್‌.ನ ತಂಡಗಳು ಸಹಾಯ ಮಾಡುತ್ತವೆ.

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳ ನಿರ್ದೇಶಗಳಂತೆ ಭೂಕಂಪವನ್ನು ನಿಭಾಯಿಸಲು ಟರ್ಕಿಯೆ ಸರ್ಕಾರಕ್ಕೆ ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಭಾರತ ಸರ್ಕಾರವು ಬದ್ಧವಾಗಿದೆ.

*****



(Release ID: 1897144) Visitor Counter : 124