ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಮ್ಯಾಸ್ಕಾಟ್, ಥೀಮ್ ಸಾಂಗ್ ಮತ್ತು ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭಾಗವಹಿಸಲಿದ್ದಾರೆ
प्रविष्टि तिथि:
03 FEB 2023 4:51PM by PIB Bengaluru

ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ 3 ನೇ ಆವೃತ್ತಿಯ ಮ್ಯಾಸ್ಕಾಟ್, ಥೀಮ್ ಸಾಂಗ್ ಮತ್ತು ಜೆರ್ಸಿ ಬಿಡುಗಡೆ ಸಮಾರಂಭವು ನಾಳೆ ಫೆಬ್ರವರಿ 4 , 2023 ರಂದು ಜಮ್ಮುವಿನ ಲೆಫ್ಟಿನೆಂಟ್ ಗವರ್ನರ್ ಹೌಸ್ ರಾಜಭವನದಲ್ಲಿ ನಡೆಯಲಿದೆ. ಈ ತಿಂಗಳ 10 ರಿಂದ 14 ರವರೆಗೆ ಚಳಿಗಾಲದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಮತ್ತು ಇತರ ಗಣ್ಯರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿರುವರು. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬೆಂಬಲಿಸುತ್ತದೆ ಮತ್ತು ಇದನ್ನು ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಮತ್ತು ಜಮ್ಮು ಮತ್ತು ಕಾಶ್ಮೀರ ವಿಂಟರ್ ಗೇಮ್ಸ್ ಅಸೋಸಿಯೇಷನ್ ಗಳು ಸಂಯುಕ್ತವಾಗಿ ಆಯೋಜಿಸುತ್ತಿವೆ.

ದೇಶದಾದ್ಯಂತ ಸುಮಾರು 1500 ಕ್ರೀಡಾಪಟುಗಳು ಗುಲ್ಮಾರ್ಗ್‌ನಲ್ಲಿ ನಡೆಯಲಿರುವ ವಿವಿಧ 9 ಕ್ರೀಡಾಕೂಟಗಳ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ 1 ನೇ ಆವೃತ್ತಿಯು 2020 ರಲ್ಲಿ ನಡೆಯಿತು. ಆತಿಥೇಯ ಜಮ್ಮು ಮತ್ತು ಕಾಶ್ಮೀರ ಇದುವರೆಗಿನ ಎರಡೂ ಆವೃತ್ತಿಗಳಲ್ಲಿಯೂ ಅಗ್ರಸ್ಥಾನದಲ್ಲಿರುವುದು ಅತ್ಯಂತ ವಿಶೇಷವಾಗಿದೆ..
****
(रिलीज़ आईडी: 1896081)
आगंतुक पटल : 145